ಬೊಜ್ಜು ಕಡಿಮೆ ಮಾಡಿಕೊಳ್ಳಲು ಭಾರತ್‌ ಜೋಡೋ ಯಾತ್ರೆ ಮಾಡಿದಂತಲ್ಲ; ಕಾಂಗ್ರೆಸ್‌ ವಿರುದ್ದ ತೇಜಸ್ವಿ ಸೂರ್ಯ ಕಿಡಿ

ಶಿವಮೊಗ್ಗ, ಮಾರ್ಚ್11:‌ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಕಾಂಗ್ರೆಸ್‌ ಕುರಿತು ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಅಭಿವೃದ್ಧಿ ಅಂದ್ರೆ ಬೊಜ್ಜು ಕಡಿಮೆ ಮಾಡಿಕೊಳ್ಳಲು ಭಾರತ್ ಜೋಡೋ ಹೆಸರಲ್ಲಿ ವಾಕಿಂಗ್ ಮಾಡಿದಂತಲ್ಲ ಎಂದು ರಾಹುಲ್‌ ಗಾಂಧಿ ವಿರುದ್ದ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಶಂಕುಸ್ಥಾಪನೆ ಮಾಡಿದ ಒಂದೇ ಒಂದು ಯೋಜನೆಗಳನ್ನು ಅವರು ಈವರೆಗೂ ಉದ್ಘಾಟಿಸಿಲ್ಲ. ಅಭಿವೃದ್ದಿಯನ್ನ ಪ್ರಧಾನಿ ಮೋದಿ ಅವರು ಮಾಡುತ್ತಿದ್ದಾರೆ ಎಂದು ಹೇಳಿದರು.

Tejasvi Ssurya Outrage On MP Rahul Gandhi

ನಮ್ಮ ಅನೇಕ ಕಾರ್ಯಕರ್ತರ ಹತ್ಯೆ ಹಾಗೂ ಅವರ ಮೇಲೆ ಹಲ್ಲೆಗಳು ನಡೆದಿವೆ. ಹರ್ಷ ಹತ್ಯೆ ಮಾಡಿದವರು ಜೈಲಿನಿಂದ ಹೊರಗೆ ಬರಬಾರದೆಂದು ಕೆಲಸ ಮಾಡಿದ್ದೇವೆ. ಅದೇ ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ ಹರ್ಷ ಹತ್ಯೆ ಮಾಡಿದವರು ಈವರೆಗೆ ಹೊರಗೆ ಬರುತ್ತಿದ್ದರು. ಇವಿಎಂ ಯಂತ್ರ ಸರಿಯಿಲ್ಲ ಎಂದು ಈಗ ಕಾಂಗ್ರೆಸ್‍ನವರು ಆರೋಪ ಶುರು ಮಾಡಿಕೊಂಡಿದ್ದಾರೆ. ಆದರೆ ಅವರ ಸೋಲಾಗುತ್ತಿರುವುದು ಇವಿಎಂ ಮಿಷನ್ ನಿಂದಲ್ಲ ಅವರ ಕಾರ್ಯಕರ್ತರಿಂದಾಗಿ ಅವರ ಸೋಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇವತ್ತು ಎಲ್ಲ ಪತ್ರಿಕೆಗಳಲ್ಲಿ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇ ನಮ್ಮ ಕನಸು ಅಂತಾ ಎರಡು ಪಕ್ಷಗಳು ಜಾಹೀರಾತು ಕೊಟ್ಟಿವೆ. ಹೌದು, ಅದು ಅವರ ಕನಸಿನ ಯೋಜನೆ.. ಆದರೆ, ಅದು ನಮ್ಮ ನನಸಿನ ಯೋಜನೆ. ಅವರ ಕನಸಿನ ಯೋಜನೆ ಕನಸಾಗಿಯೇ ಉಳಿತು. ನಾವು ನನಸು ಮಾಡಿದೇವು. ಒಂದು ಯೋಜನೆಗೆ ಶಂಕುಸ್ಥಾಪನೆನೂ ನಾವೇ ಮಾಡ್ತೀವಿ. ಲೋಕಾರ್ಪಣೆನೂ ಮಾಡ್ತೀವಿ. ಆ ವೇಗದಲ್ಲಿ ನಮ್ಮ ಬಿಜೆಪಿಯ ಡಬಲ್‌ ಇಂಜಿನ್‌ ಸರ್ಕಾರ ಕೆಲಸ ಮಾಡ್ತೀದೆ ಎಂದು ಹೇಳಿದರು.

Tejasvi Ssurya Outrage On MP Rahul Gandhi

ಶಿವಮೊಗ್ಗ ಬಿಜೆಪಿಯ ಸಂಘಟನಾತ್ಮಕ ಶಕ್ತಿ ಆಗಿರುವುದರಿಂದ ಇಲ್ಲಿ ಹಿಂದೂ ಯುವಕರ, ನಮ್ಮ ಕಾರ್ಯಕರ್ತರ ಹತ್ಯೆ ಹೆಚ್ಚು ಆಗುತ್ತದೆ. ಐದಾರು ತಿಂಗಳ ಹಿಂದೆ ಹರ್ಷನ ಹತ್ಯೆಯಾದ ಸಂದರ್ಭದಲ್ಲಿ ನಾವೆಲ್ಲರೂ ಬಂದಿದ್ದೇವು. ಹರ್ಷನ ಹತ್ಯೆಯಾದ ಎರಡು ಮೂರು ದಿನಗಳ ಒಳಗೆ ಆರೋಪಿಗಳನ್ನು ಬಂಧಿಸಲಾಯಿತು. ಆ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರ ಮಾಡಲಾಯಿತು. 730 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿ ಆರೋಪಿಗಳ್ಯಾರು ಜೈಲಿನಿಂದ ಹೊರಬರದಂತೆ ಮಾಡಲಾಯಿತು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+