ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ತಮಿಳುನಾಡು ಪ್ರೇಮಿಗಳು

By ಮೈಸೂರು ಪ್ರತಿನಿಧಿ
|
Google Oneindia Kannada News

ಮಂಡ್ಯ,ಫೆಬ್ರವರಿ,20: ತಮಿಳುನಾಡಿನಿಂದ ಬಂದ ಪ್ರೇಮಿಗಳು ನಾಗಮಂಗಲದ ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯದ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿರುವ ಘಟನೆ ಶುಕ್ರವಾರ ನಡೆದಿದೆ.

ತಮಿಳುನಾಡಿನ ನಾಚಮ್ ಪೆಟ್ಟಿ ಗ್ರಾಮದ ಕಲ್ಪನಾ (19), ರಮ್ಯಾ (20) ಹಾಗೂ ನಾಗಮಂಗಲ ತಾಲೂಕಿನ ಹೊಸಮನೆ ಗ್ರಾಮದ ರಘು (23), ರಮೇಶ್ (22) ಎಂಬವರೇ ಆತ್ಮಹತ್ಯೆಗೆ ಯತ್ನಿಸಿ ಬದುಕಿ ಉಳಿದ ಯುವ ಪ್ರೇಮಿಗಳು.[ವೈದ್ಯರ ನಿರ್ಲಕ್ಷ್ಯದಿಂದ ಮಂಡ್ಯದಲ್ಲಿ ನವಜಾತ ಶಿಶು ಸಾವು]

Mandya

ಹೊಸಮನೆ ಗ್ರಾಮದ ರಘು ಅವರ ಅತ್ತೆ ತಮಿಳುನಾಡಿನ ನಾಚಮ್ ಪೆಟ್ಟಿ ಗ್ರಾಮದಲ್ಲಿ ವಾಸವಾಗಿದ್ದರು. ಆಗಾಗ ಅತ್ತೆ ಮನೆಗೆ ತೆರಳುತ್ತಿದ್ದ ರಘು, ಅವರ ಮಗಳು ಕಲ್ಪನಾಳನ್ನು ಪ್ರೇಮಿಸಿದನು. ರಘು ಜೊತೆ ಆತನ ಸ್ನೇಹಿತ ರಮೇಶನು ಬರುತ್ತಿದ್ದನು. ಈ ಸಂದರ್ಭ ಕಲ್ಪನಾ ಅವರ ಪಕ್ಕದ ಮನೆಯ ರಮ್ಯಾಳನ್ನು ಪ್ರೀತಿಸಿದ್ದನು. ಒಟ್ಟಾರೆ ತಮಿಳುನಾಡಿನ ಹುಡುಗಿಯರನ್ನು ಪ್ರೀತಿಸಿದ ಹುಡುಗರು ಮದುವೆ ವಿಚಾರವನ್ನು ಮನೆಯಲ್ಲಿ ತಿಳಿಸಿರಲಿಲ್ಲ.[ನನ್ನ ನಿರ್ಲಿಪ್ತ ಪ್ರೇಮಿಗೆ, ನಮ್ಮ ನಿರಂತರ ಪ್ರೇಮಕ್ಕೊಂದು ಪತ್ರ!]

ಆದರೆ ತಮಿಳುನಾಡಿನ ಕಲ್ಪನಾ ಮತ್ತು ರಮ್ಯಾನ ಮನೆಯವರು ಅವರಿಗೆ ಬೇರೆ ವರ ಹುಡುಕಿ ವಿವಾಹ ನಿಶ್ಚಿತಾರ್ಥ ಮಾಡಲು ಮುಂದಾಗಿದ್ದರು. ಇದರಿಂದ ಬೇಸತ್ತ ಕಲ್ಪನಾ ಮತ್ತು ರಮ್ಯಾ ತಮಿಳುನಾಡಿನಿಂದ ರಮೇಶ್ ಮತ್ತು ರಘುವನ್ನು ಹುಡುಕಿಕೊಂಡು ನಾಗಮಂಗಲಕ್ಕೆ ಬಂದಿದ್ದಾರೆ. ಈ ವಿಚಾರ ತಿಳಿದ ರಮೇಶ ಮತ್ತು ರಘು ತಮ್ಮ ಪ್ರಿಯತಮೆಯರೊಂದಿಗೆ ಮೇಲುಕೋಟೆಗೆ ತೆರಳಿ ಗುರುವಾರ ಮದುವೆ ಮಾಡಿಕೊಂಡಿದ್ದಾರೆ.[ಲೈಫ್ ಎಂಜಾಯ್ ಮಾಡೋಕೆ, ವೈಫ್ ಜಗಳ ಆಡೋಕೆ!]

ಕಲ್ಪನಾ ಮತ್ತು ರಮ್ಯಾ ಪೋಷಕರು ತಮ್ಮ ಮಕ್ಕಳು ನಾಪತ್ತೆಯಾಗಿದ್ದರಿಂದ ಗಾಬರಿಗೊಂಡು ಎಲ್ಲೆಡೆ ವಿಚಾರಿಸಿದ ವೇಳೆ ಅವರಿಬ್ಬರು ಕರ್ನಾಟಕಕ್ಕೆ ತೆರಳಿದ್ದು ತಿಳಿದುಬಂದಿದೆ. ತಕ್ಷಣ ಮಂಡ್ಯಕ್ಕೆ ಬಂದು ನಾಗಮಂಗಲ ಸೇರಿದಂತೆ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ.[ಪ್ರೇಮಕೆ ಹುಟ್ಟೂ ಇಲ್ಲ, ಹೇಳಿಕೊಡಲು ಗುರುವೂ ಬೇಕಾಗಿಲ್ಲ!]

ಪೋಷಕರು ಹುಡುಕಾಟ ನಡೆಸುತ್ತಿರುವ ವಿಚಾರ ತಿಳಿದ ಯುವ ಜೋಡಿಗಳು ಭಯಗೊಂಡಿದ್ದು, ಆತ್ಮಹತ್ಯೆಗೆ ಮಾಡಿಕೊಳ್ಳುವುದೇ ಒಳ್ಳೆಯದು ಎಂಬ ತೀರ್ಮಾನಕ್ಕೆ ಬಂದು ಶುಕ್ರವಾರ ಮಂಡ್ಯ ನಗರದ ಶ್ರೀ ಅರ್ಕೇಶ್ವರಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ದೇವಾಲಯದ ಪಕ್ಕದಲ್ಲಿರುವ ಕಲ್ಯಾಣಿ ಬಳಿ ತೆರಳಿ ವಿಷ ಕುಡಿಯಲು ಮುಂದಾದರಾದರೂ ಧೈರ್ಯ ಸಾಲದೆ ಅಳುತ್ತಿದ್ದರು. ಇವರನ್ನು ನೋಡಿದ ಸ್ಥಳೀಯರು ವಿಚಾರಿಸಿ ಪೂರ್ವ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

English summary
Tamil Nadu lovers Kalpana(19),Ramya(20), Raghu(23),Ramesh(22) attempt committed suicide at Arkheshwary Temple Nagamangal, Mandya on Friday, February 19th
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X