ತಮಿಳು ನೆಲದಲ್ಲಿ ಕನ್ನಡ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿತ, ವಿಡಿಯೋ ವೈರಲ್
ಕರ್ನಾಟಕದ ಚಾಲಕರೊಬ್ಬರ ಮೇಲೆ ತಮಿಳುನಾಡಿನಲ್ಲಿ ಹಲ್ಲೆ ನಡೆದಿದೆ ಎನ್ನಲಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಲಾರಿ ಚಾಲಕನನ್ನು ತಮಿಳುನಾಡಿನ ಪೊಲೀಸ್ ಪೇದೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ತಮಿಳುನಾಡಿನ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರು ಕರ್ನಾಟಕದ ಲಾರಿ ಚಾಲಕನ ಮೇಲೆ ಸರಿಯಾದ ಕಾರಣವಿಲ್ಲದೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹೊಸೂರು ಗಡಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಲಾರಿ ಚಾಲಕ ವೇಗವಾಗಿ ಬಂದ ಕಾರಣಕ್ಕೆ ಪೇದೆ ಆತನನ್ನು ನಡುರಸ್ತೆಯಲ್ಲೇ ಥಳಿಸಿದ್ದಾನೆ ಎಂದು ಹೇಳಲಾಗಿದೆ. ಆದರೆ, ಅಲ್ಲಿದ್ದ ಸ್ಥಳೀಯರು ಚಾಲಕ ಮಾಮೂಲಿಯಾಗಿಯೇ ನಿಧಾನವಾಗಿ ಲಾರಿ ಚಲಾಯಿಸಿದ್ದ ಎಂದು ವಾದಿಸಿರುವುದು ವಿಡಿಯೋದಲ್ಲಿದೆ.
ಇದು ಅನ್ಯಾಯ@mkstalin please take action
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) October 28, 2024
Against this police
ಕರ್ನಾಟಕ ಲಾರಿ ಡ್ರೈವರ್ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ Tamilunadu ಟ್ರಾಫಿಕ್ ಪೊಲೀಸ್ ಪೇದೆ
ವೇಗದ ಚಾಲನೆ ಕಾರಣ ನೀಡಿ ಲಾರಿಡ್ರೈವರ್ ಅಡ್ಡಗಟ್ಟಿ ಹೊಡೆತ
Incident place-hosuru border ಬಳಿ ನೆನ್ನೆ ೧೦ ಘಂಟೆಲಿ ನಡೆದ ಘಟನೆ.@Udhaystalin@CMofKarnataka pic.twitter.com/NtWLqzmJ6w
ಪೇದೆ ಚಾಲಕನಿಗೆ ಥಳಿಸುತ್ತಿದ್ದ ಘಟನೆಯನ್ನು ಅಲ್ಲೇ ಇದ್ದ ಸ್ಥಳೀಯರೊಬ್ಬರು ವಿಡಿಯೋ ಮಾಡಿಕೊಳ್ಳುತ್ತಿದ್ದರು. ಆ ಪೇದೆ ಅವರ ಮೇಲೂ ಎರಗಿದ್ದಾನೆ ಎನ್ನಲಾಗಿದೆ. ಅಲ್ಲದೆ ಒಂದು ವೇಳೆ ಚಾಲಕ ವೇಗವಾಗಿ ಲಾರಿ ಚಲಾಯಿಸಿದ್ದರೆ, ಅದಕ್ಕೆ ದಂಡ ವಿಧಿಸಲು ಮಾತ್ರವೇ ಪೊಲೀಸರಿಗೆ ಅಧಿಕಾರ ಕೊಡಲಾಗಿದೆ. ಈ ರೀತಿ ಹಲ್ಲೆ ಮಾಡುವುದೇನಿತ್ತು? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಿಡಿಯೋ ಹಂಚಿಕೊಂಡಿರುವ ಹಲವರು, ಲಾರಿ ಚಾಲಕನನ್ನು ಕಾನ್ಸ್‌ಟೇಬಲ್ ನಿಲ್ಲಿಸಲು ಅತಿಯಾದ ವೇಗವೇ ಕಾರಣ ಎಂದು ಉಲ್ಲೇಖಿಸಿದ್ದಾರೆ. ಆದರೆ, ವೃತ್ತಿಪರವಾಗಿ ವಿಷಯ ತಿಳಿಸುವ ಬದಲು ಚಾಲಕನ ಮೇಲೆ ವಿನಾಕಾರಣ ದೈಹಿಕ ಹಲ್ಲೆ ನಡೆಸಿದ್ದಾನೆ. ಅಂತಹ ಕ್ರಮಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ಅಲ್ಲದೆ ವಿಡಿಯೋ ನಿನ್ನೆ ರಾತ್ರಿ ನಡೆದಿದೆ ಎನ್ನಲಾಗಿದ್ದು, ಈ ಬಗ್ಗೆ ಗಂಭೀರವಾಗಿ ಕ್ರಮ ತೆಗೆದುಕೊಳ್ಳುವಂತೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಹಾಗೂ ಡಿಸಿಎಂ ಉದಯನಿಧಿ ಸ್ಟಾಲಿನ್ ಅವರನ್ನು ಟ್ಯಾಗ್ ಕೂಡ ಮಾಡಿದ್ದಾರೆ. ಈ ಘಟನೆ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ.

ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇದು ಅನ್ಯಾಯ, ಸಿಎಂ ಎಂ.ಕೆ.ಸ್ಟಾಲಿನ್ ಅವರೇ ಇದರ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಿ. ಈ ಪೇದೆ ವಿರುದ್ಧ ಕೂಡಲೇ ಕ್ರಮ ಜರುಗಬೇಕು. ತಮಿಳುನಾಡಿನ ಟ್ರಾಫಿಕ್ ಪೊಲೀಸ್ ಪೇದೆ ಕರ್ನಾಟಕ ಲಾರಿ ಡ್ರೈವರ್ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾನೆ. ವೇಗದ ಚಾಲನೆ ಕಾರಣ ನೀಡಿ ಲಾರಿ ಡ್ರೈವರ್ ಅಡ್ಡಗಟ್ಟಿ ಹೊಡೆದಿದ್ದಾರೆ. ಹೊಸೂರು ಗಡಿಭಾಗದಲ್ಲಿ ಈ ಘಟನೆ ನಡೆದಿದೆ ಎಂದು ವಿವರ ನೀಡಿದ್ದಾರೆ.
ಪೊಲೀಸರು ಈ ರೀತಿ ಮೃಘಗಳಂತೆ ವರ್ತಿಸುವುದು ಸರಿಯಲ್ಲ. ಚಾಲಕನ ಮೇಲೆ ಕ್ರಮ ಕೈಗೊಳ್ಳಲು ಕಾನೂನುಗಳಿವೆ. ಆದರೆ, ಈತ ಕಾನೂನನ್ನೇ ಕೈಗೆತ್ತಿಕೊಂಡಿದ್ದಾನೆ. ಮೈಮೇಲೆ ಯೂನಿಫಾರ್ಮ್ ಇದ್ದಾಕ್ಷಣ ಏನು ಬೇಕಾದರೂ ಮಾಡಬಹುದಾ? ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಆ ಚಾಲಕನ ಮೇಲೆ ಕ್ರಮ ತೆಗೆದುಕೊಳ್ಳದೇ ಇದ್ದರೆ, ನಾವಂತೂ ಸುಮ್ಮನಿರಲ್ಲ ಎಂದು ತಮಿಳು ನಾಡು ಸರ್ಕಾರಕ್ಕೆ ಕೆಲವರು ಸವಾಲ್ ಕೂಡ ಹಾಕಿದ್ದಾರೆ.












Click it and Unblock the Notifications