Rani Chennamma Express Train: ಡೀಸೆಲ್ ಇಂಜಿನ್‌ನೊಂದಿಗೆ ಕೊನೆಯ ಬಾರಿ ಸಂಚರಿಸಿದ ರೈಲು
ಬೆಂಗಳೂರು, ನವೆಂಬರ್ 12: ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ದಶಕಗಳಿಂದ ದಕ್ಷಿಣದ ಕರ್ನಾಟಕ ಬೆಂಗಳೂರಿನಿಂದ ಉತ್ತರ ಕರ್ನಾಟಕ ಮಾರ್ಗವಾಗಿ ಮಹಾರಾಷ್ಟ್ರ ತಲುಪುತ್ತಿದ್ದ ಫೇಮಸ್ ರೈಲಾಗಿದ್ದ 'ರಾನಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲು' (Rani Chennamma Express Train 16589) ತನ್ನ ಕೊನೆಯ ಪ್ರಯಾಣ ಮುಗಿಸಿದೆ. ಬೆಳಗಾವಿಯಲ್ಲಿ ನವೆಂಬರ್ 11ರಂದು ಕೊನೆಯದಾಗಿ ಸಂಚರಿಸಿದೆ ಎಂದು ರೈಲ್ವೆ ಮೂಲಗಳು ತಿಳಿಸಿದೆ.
ಈ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲು ಕೆಸ್‌ಆರ್ ಬೆಂಗಳೂರು ನಿಲ್ದಾಣದಿಂದ ತುಮಕೂರು, ಅರಸಿಕೆರೆ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಮಿರಜ್, ಸಾಂಗ್ಲಿಗೆ ನಿತ್ಯ ಒಡಾಡುವ ರೈಲಾಗಿತ್ತು. ಈ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದ ಪ್ರಯಾಣಿಕರ ಪ್ರಯಾಣದ ಅವಿಭಾಜ್ಯ ಅಂಗವೇ ಆಗಿತ್ತು.

1995 ರ ಆಗಸ್ಟ್ 15ರಂದು ತನ್ನ ಮೊದಲೇ ಸೇವೆ ನೀಡಿದ್ದ ಈ ರಾಣಿಚೆನ್ನಮ್ಮ ರೈಲು ಸದ್ಯ ಡೀಸೆಲ್ ಇಂಜಿನ್ ಸಹಿತ ಕೊನೆಯ ಪ್ರಯಾಣವನ್ನು ಮುಗಿಸಿದೆ. ಇಂದು ನವೆಂಬರ್ 12ರಿಂದ ಈ ರೈಲು ವಿದ್ಯುತ್ ಸಹಿತ ಸಂಚಾರಗೊಳ್ಳಲಿದೆ. ಈ ಮೂಲಕ ಹಳೆಯ ಡೀಸೆಲ್ ಪದ್ಧತಿಯಿಂದ ವಿದ್ಯುತ್ ಚಾಲಿತ ರೈಲಾಗಿ ಬದಲಾಗಲಿದೆ.
ವಿದ್ಯುತ್ ಚಾಲಿತ ರಾಣಿಚನ್ನಮ್ಮ ರೈಲು ಸೇವೆ ಆರಂಭ
ಭಾರತೀಯ ರೈಲ್ವೆ ಇಲಾಖೆಯು ನೈಋತ್ಯ ರೈಲ್ವೆ ವಲಯ ಸೇರಿದಂತೆ, ವಿವಿಧೆ ರೈಲು ಮಾರ್ಗಗಳನ್ನು ಬಹುತೇಕ ಎಲ್ಲವನ್ನು ವಿದ್ಯುದೀಕರಣ ಮಾಡಿದೆ. ಈ ಪೈಕಿ ರಾಣಿ ಚನ್ನಮ್ಮ ರೈಲು ಓಡಾಡುವ ಮಾರ್ಗದಲ್ಲಿ ವಿದ್ಯುದೀಕರಣ, ಸಂಪೂರ್ಣ ಡಬಲ್ ಟ್ರ್ಯಾಕ್ ಕೆಲಸ ಮುಗಿದಿದೆ. ಆದರೆ ಈ ಮಾರ್ಗದಲ್ಲಿ ಸಂಚರಿಸುವ ರಾಣಿ ಚೆನ್ನಮ್ಮ ರೈಲು ಇನ್ನೂ ಡೀಸೆಲ್ ಇಂಜಿನ್‌ನೊಂದಿಗೆ ಕಾರ್ಯ ನಿರ್ವಹಿಸುತ್ತಿತ್ತು.
ಸದ್ಯ ರೈಲ್ವೆ ಅಧಿಕಾರಿಗಳು ಈ ರೈಲಿಗೂ ವಿದ್ಯುತ್ ಚಾಲಿತ ಇಂಜಿನ್ ಹಾಗೂ ಅಗತ್ಯ ವಿದ್ಯುತ್ ಮೂಲಸೌಕರ್ಯ ಒದಗಿಸುವ ಮೂಲಕ ಅಪ್‌ಗ್ರೇಡ್ ಮಾಡಿದ್ದಾರೆ. ಇನ್ನು ಮುಂದೆ ಬೆಂಗಳೂರು ಮತ್ತು ಉತ್ತರ ಕರ್ನಾಟಕ, ಮಹಾರಾಷ್ಟ್ರದ ಸಾಂಗ್ಲಿವರೆಗಿನ ಪ್ರಯಾಣಿಕರಿಗೆ ವಿದ್ಯುತ್ ಚಾಲಿತ ರಾಣಿಚನ್ನಮ್ಮ ರೈಲು ಸೇವೆ ನೀಡಲಿದೆ.
ದೈನಂದಿನ ರೈಲುಗಳ ಪೈಕಿ ಬೆಂಗಳೂರಿನಿಂದ ಕೊಲ್ಲಾಪುರಕ್ಕೆ ಸಂಪರ್ಕ ಕಲ್ಪಿಸಿದ್ದ ಈ ರೈಲು ಬರೋಬ್ಬರಿ 28 ವರ್ಷಗಳ ಸೇವೆ ನೀಡಿದ ನಂತರ ವಿದ್ಯುತ್ ಚಾಲಿತ ರೈಲಾಗಿ ಪರಿವರ್ತನೆಗೊಂಡಿದೆ. ಬೆಳಗಾವಿಯಲ್ಲಿ ಡೀಸೆಲ್ ಸಹಿತ ರೈಲಿನ ಕೊನೆಯ ಸಂಚಾರದ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.












Click it and Unblock the Notifications