Chikkamgaluru-Tirupati Train: ರಾಜ್ಯದ ವಿವಿಧ ಜಿಲ್ಲೆಗಳ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ವಿ.ಸೋಮಣ್ಣ

ಬೆಂಗಳೂರು, ಜೂನ್ 28: ಮಲೆನಾಡು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳ ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ತಿರುಗಪತಿಗೆ ಹೋಗುವವರಿಗೆ ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರು ಗುಡ್ ನ್ಯೂಸ್ ನೀಡಿದ್ದಾರೆ.

ತಿರುಪತಿಯ ಶ್ರೀ ವೆಂಕಟೇಶ್ವರನ ದರ್ಶನಕ್ಕಾಗಿ ಪ್ರಯಾಣಿಸುವವರಿಗೆ ವಿಶೇಷ ರೈಲು ಸೇವೆ ಮೂಲಕ ಅನುಕೂಲ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೌದು, ಕರ್ನಾಟಕದ ಮಲೆನಾಡಿನಿಂದ ತಿರುಪತಿಗೆ ವಿಶೇಷ ರೈಲು ಕಾರ್ಯಾಚರಣೆ ಆರಂಭವಾಗಲಿದೆ ಎಂದು ಖುದ್ದು ರಾಜ್ಯ ರೈಲ್ವೆ ಸಚಿವರೇ ಅಧಿಕೃತ ಮಾಹಿತಿ ನೀಡಿದ್ದಾರೆ. ರಾಜ್ಯದ ಮಲೆನಾಡು, ತುಮಕೂರು, ಬೆಂಗಳೂರು ಹಾಗೂ ಕೋಲಾರ ಭಾಗದ ಭಕ್ತರಿಗೆ ಸೌಲಭ್ಯ ಕಲ್ಪಿಸಲು ಚಿಕ್ಕಮಗಳೂರಿನಿಂದ ತಿರುಪತಿಗೆ ನೂತನ ವಾರದ ರೈಲಿನ (Tirupati Weekly Train 17423/17424) ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ವಾರದ ಯಾವ ದಿನ ಸಂಚರಿಸುತ್ತದೆ. ಸಮಯ, ನಿಲುಗಡೆ ವಿವರ ಇಲ್ಲಿದೆ.

SWR Launched Weekly Special Train from Chikkamagaluru to Tirupati Says V Somanna

ಚಿಕ್ಕಮಗಳೂರಿನಿಂದ ತಿರುಪತಿಗೆ ಪ್ರತಿ ಗುರುವಾರ ಮತ್ತು ಶುಕ್ರವಾರ ಸಂಚರಿಸುತ್ತಿದೆ. ಗುರುವಾರ ತಿರುಪತಿಯಿಂದ ಹಾಗೂ ಪ್ರತಿ ಶುಕ್ರವಾರ ಚಿಕ್ಕಮಗಳೂರಿನಿಂದ ಈ ರೈಲು ಹೊರಡಲಿದೆ. ಈ ಭಾಗದ ಜನರು ಈ ವಿಶೇಷ ರೈಲಿನ ಸೌಲಭ್ಯ ಪಡೆದುಕೊಳ್ಳಬೇಕೆಂದು ಸಚಿವ ವಿ.ಸೋಮಣ್ಣ ಅವರು ಮನವಿ ಮಾಡಿದ್ದಾರೆ. ಈ ಮೂಲಕ ಮಲೆನಾಡಿನ ಭಾಗದ ಅನೇಕರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.

ರೈಲು ವೇಳಾಪಟ್ಟಿ ಸಮಯ, ವಿವರ

* ತಿರುಪತಿ-ಚಿಕ್ಕಮಗಳೂರು ಸಾಪ್ತಾಹಿಕ ವಿಶೇಷ ರೈಲು (ಸಂಖ್ಯೆ 17423) ಪ್ರತಿ ಗುರುವಾರ ರಾತ್ರಿ 09 ಗಂಟೆಗೆ ತಿರುಪತಿ ನಿಲ್ದಾಣದಿಂದ ಹೊರಡಲಿದೆ. ಮರುದಿನ ಬೆಳಗ್ಗೆ 10.30ಕ್ಕೆ ಚಿಕ್ಕಮಗಳೂರು ಬಂದು ಸೇರಲಿದೆ.

* ಚಿಕ್ಕಮಗಳೂರು-ತಿರುಪತಿ ಸಾಪ್ತಾಹಿಕ ವಿಶೇಷ ರೈಲು ( ಸಂಖ್ಯೆ 17424) ಚಿಕ್ಕಮಗಳೂರು ನಿಲ್ದಾಣದಿಂದ ಸಂಜೆ 5.30ಕ್ಕೆ ಹೊರಡಲಿದ್ದು, ಶನಿವಾರ ಬೆಳಗ್ಗೆ 7.40ಕ್ಕೆ ತಿರುಪು ತಲುಪುತ್ತದೆ.

ರೈಲು ನಿಲುಗಡೆ ನಿಲ್ದಾಣಗಳು ಯಾವುವು?

ಚಿತ್ತೂರು, ಕಟ್ಟಾಡಿ, ಕುಪ್ಪಂ, ಬಂಗಾರಪೇಟೆ, ವೈಟ್‌ಫಿಲ್ಡ್, ಕೆ.ಆರ್.ಪುರಂ, ಎಸ್‌ಎಂವಿಟಿ ಬೆಂಗಳೂರು, ಚಿನ್ನಬಾಣಾವರ, ತುಮಕೂರು, ತಿಪಟೂರು, ಅರಸೀಕರೆ, ದೇವನೂರು, ಬೀರೂರು, ಕಡೂರು, ಬಿಸಲೇಹಳ್ಳಿ ಮತ್ತು ಸಹರಾಯಪಟ್ಟಣ ರೈಲು ನಿಲ್ದಾಣಗಳಲ್ಲಿ ಎರಡು ಬದಿ ಸಂಚಾರ ವೇಳೆ ನಿಲುಗಡೆ ನೀಡುತ್ತದೆ. ಎಸಿ ಟೈರ್, ಸಾಮಾನ್ಯ ದರ್ಜೆ, ದ್ವಿತಿಯ ದರ್ಜೆ, ಜನರಲ್ ಕೋಚ್ ಸೇರಿದಂತೆ ಎಲ್ಲ ಬಗೆಯ ಕೋಚ್‌ಗಳು ಇದರಲ್ಲಿರಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+