SWR Railway Fare Hike: ಸಾಮಾನ್ಯ ರೈಲುಗಳಿಗೆ 'ಸೂಪರ್ ಫಾಸ್ಟ್' ಟ್ಯಾಗ್, ಪ್ರಯಾಣದ ದರ ಏರಿಕೆ, ಪ್ರಯಾಣಿಕರಿಗೆ ಹೊರೆ, ಕಾರಣ?
ಹುಬ್ಬಳ್ಳಿ, ಮಾರ್ಚ್ 12: ಕರ್ನಾಟಕದ ನೈಋತ್ಯ ರೈಲ್ವೆಯು ಕೆಲವು ರೈಲುಗಳಿಗೆ 'ಸೂಪರ್ ಫಾಸ್ಟ್' ಸ್ಥಾನಮಾನ ನೀಡುವ ಮೂಲಕ ಪ್ರಯಾಣ ದರ ಏರಿಕೆ ಮಾಡಿದೆ. ಇದು ಪ್ರಯಾಣಿಕರಿಗೆ ಹೊರೆಯಾಗಿ ಪರಿಣಮಿಸುತ್ತಿದೆ.
ರೈಲ್ವೆಯು 2014 ರಿಂದ ಕಾಯ್ದಿರಿಸದ ಟಿಕೆಟ್‌ಗಳಿಗೆ ರೈಲು ದರವನ್ನು ಹೆಚ್ಚಿಸಿಲ್ಲ. ಆದರೆ ಕೊರೊನಾ ಸಾಂಕ್ರಾಮಿಕ ಪಿಡುಗಿನ ನಂತರ ಅಕ್ಟೋಬರ್ 2022 ರಲ್ಲಿ ಕೆಲವು ರೈಲುಗಳಿಗೆ 'ಸೂಪರ್‌ಫಾಸ್ಟ್' ಸ್ಥಾನಮಾನ ನೀಡಲಾಗಿದೆ. ಇದರಿಂದಾಗಿ ಪ್ರಯಾಣದ ದರ ಹೆಚ್ಚಳ ಮಾಡಲಾಗಿದೆ. ಕೊರೊನಾ ವೇಳೆ ಭಾರಿ ನಷ್ಟ ಉಂಟಾದ ಬಳಿಕ ಹಲವಾರು ಪ್ಯಾಸೆಂಜರ್ ರೈಲುಗಳು ಮತ್ತು ಫಾಸ್ಟ್ ಪ್ಯಾಸೆಂಜರ್ ರೈಲುಗಳನ್ನು 'ಪ್ಯಾಸೆಂಜರ್ ಸ್ಪೆಷಲ್' ಎಂದು ಮರುನಾಮಕರಣ ಮಾಡಲಾಗಿದೆ. ಇದರಿಂದಾಗಿ ಪ್ರಯಾಣ ದರ ಬಹುತೇಕ ದುಪ್ಪಟ್ಟಾಗಿದೆ. ರೈಲಿನ ವೇಗ ಅಥವಾ ಸೇವೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಪಲಾಯನ ಮಾಡಲಾಗುತ್ತಿದೆ ಎಂದು ಪ್ರಯಾಣಿಕರು ಅಮಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ನೈಋತ್ಯ ರೈಲ್ವೆ (SWR) ಪ್ರಯಾಣಿಕರ ಸಮಿತಿಯ ಕಾರ್ಯದರ್ಶಿ ರೋಹಿತ್ ಎಸ್ ಜೈನ್ ಮಾತನಾಡಿ, ಕೋವಿಡ್‌ಗೂ ಮುನ್ನ ಹುಬ್ಬಳ್ಳಿ-ಬೆಂಗಳೂರು ಸಿಟಿ-ಹುಬ್ಬಳ್ಳಿ ಫಾಸ್ಟ್ ಪ್ಯಾಸೆಂಜರ್ ಉತ್ತರ ಕರ್ನಾಟಕದ ಬಡವರ ಜೀವನಾಡಿಯಾಗಿತ್ತು. SWR ಇದನ್ನು ರೈಲು ಸಂಖ್ಯೆ 17391 ಮತ್ತು 17392 ರೊಂದಿಗೆ ಎಕ್ಸ್‌ಪ್ರೆಸ್ ಆಗಿ ಪರಿವರ್ತಿಸಿತು ಮತ್ತು ಈ ರೈಲು ಮಾರ್ಗದಲ್ಲಿನ ಎಲ್ಲಾ 31 ನಿಲ್ದಾಣಗಳಲ್ಲಿ ನಿಲ್ಲುತ್ತದೆಯಾದರೂ ದರವು ಹೆಚ್ಚಾಗಿದೆ ಎಂದರು.
ಹುಬ್ಬಳ್ಳಿ-ಚಿತ್ರದುರ್ಗ-ಹುಬ್ಬಳ್ಳಿ ಮತ್ತು ಹುಬ್ಬಳ್ಳಿ-ಅರಸೀಕೆರೆ-ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲುಗಳು ಈ ಹಿಂದೆ ಪ್ಯಾಸೆಂಜರ್ ರೈಲುಗಳಾಗಿ ಸಂಚರಿಸುತ್ತಿದ್ದವು. ವಿಜಯಪುರ-ಮಂಗಳೂರು-ವಿಜಯಪುರ ರೈಲು ಮೂರು ವರ್ಷಗಳವರೆಗೆ 1.5 ಪಟ್ಟು ಹೆಚ್ಚಿನ ದರವನ್ನು ಸಂಗ್ರಹಿಸಲು 'ವಿಶೇಷ' ಟ್ಯಾಗ್ ಸಹಿತ ಓಟಾಟ ಆರಂಭಿಸಿವೆ. ಇವು ಆರು ತಿಂಗಳಿಂದ ಒಂದು ವರ್ಷದವರೆಗೆ ಓಡಾಡಲಿವೆ ಎಂದು ತಿಳಿದು ಬಂದಿದೆ.
ಇತ್ತೀಚಿನ ದಿನಗಳಲ್ಲಿ ನೈಋತ್ಯ ರೈಲುಗಳು ಬಸ್ ಪ್ರಯಾಣದ ದರದಲ್ಲಿ ಸೇವೆ ನೀಡುತ್ತಿವೆ. ಈ 'ನಕಲಿ' ಎಕ್ಸ್‌ಪ್ರೆಸ್‌ಗಳು ಮೊದಲಿನಂತೆ ಪ್ರತಿ ಊರಿಗೂ ನಿಲುಗಡೆ ಮಾಡುತ್ತವೆ. ಜೊತೆಗೆ ರೈಲುಗಳಲ್ಲಿ ದರದ ತಕ್ಕ ಹಾಗೇಯೇ ಇದೆ. ನಿಲುಗಡೆಯನ್ನು ಕಡಿಮೆ ಮಾಡಿಲ್ಲ, ಸೌಲಭ್ಯಗಳನ್ನು ಹೆಚ್ಚಿಸಿಲ್ಲ ಎಂದು ಆರೋಪಿಸಿದರು.

ರೈಲು ಪ್ರಯಾಣ ದರ ಏರಿಕೆ: ಸೌಲಭ್ಯ ಹೆಚ್ಚಿಸಿಲ್ಲ
ಉತ್ತರ ಕರ್ನಾಟಕದಲ್ಲಿ ಇಂತಹ ರೈಲುಗಳು ಹೆಚ್ಚಾಗಿದ್ದು, ಬಡ ಪ್ರಯಾಣಿಕರಿಗೆ ಬಹಿರಂಗವಾಗಿ ವಂಚನೆ ಮಾಡಲಾಗುತ್ತಿದೆ ಎಂದು ಗದಗದಿಂದ ನಿತ್ಯ ಪ್ರಯಾಣಿಸುವ ಪ್ರೊ.ಭಾರ್ಗವ್ ಎಚ್.ಕೆ. ಹುಬ್ಬಳ್ಳಿ-ತಿರುಪತಿ-ಹುಬ್ಬಳ್ಳಿ ರೈಲು ಮಹಾಮಾರಿ ಮೊದಲು ಫಾಸ್ಟ್ ಪ್ಯಾಸೆಂಜರ್ ಆಗಿತ್ತು. ಈಗ ಸೂಪರ್‌ಫಾಸ್ಟ್ ದರವನ್ನು ಸಂಗ್ರಹಿಸಲು ಇದು 'ಪ್ಯಾಸೆಂಜರ್ ಸ್ಪೆಷಲ್' ಸಂಖ್ಯೆ 07657 ಮತ್ತು 07658 ಆಗಿದೆ. ಸೋಲಾಪುರ-ಗದಗ-ಸೋಲಾಪುರ ಡೆಮು ರೈಲು ಸಾಮಾನ್ಯ ರೈಲು ಆದರೆ ಈಗ ಅದು ಎಕ್ಸ್‌ಪ್ರೆಸ್ ಆಗಿದೆ. ಇದು ಎಲ್ಲಾ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಗ್ರಾಹಕರ ವೇದಿಕೆ (ಕಲಬುರಗಿ) ಅಧ್ಯಕ್ಷ ಸುನೀಲ ಕುಲಕರ್ಣಿ ಅವರು, ನೈಋತ್ಯ ರೈಲ್ವೆ ಇಲಾಖೆಯು ಶೇಕಡಾ100 ವೆಚ್ಚದಲ್ಲಿ ಶೇಕಡಾ 40 ಮಾತ್ರವೇ ಆದಾಯ ಪಡೆಯುತ್ತಿದೆ ಎಂದು ಲೋಕಸಭೆಯಲ್ಲಿ ಹಾಗೂ ವೆಬ್‌ಸೈಟ್‌ನಲ್ಲಿ ಬಹಿರಂಗವಾಗಿ ತಿಳಿಸಿದೆ. ಪ್ರಯಾಣವನ್ನು ಹೆಚ್ಚಿಸದೆ, ಅವರು ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಕೋವಿಡ್ ಬಳಿಕ ಶೇಕಡಾ 10 ಪ್ಯಾಸೆಂಜರ್ ರೈಲು ಆರಂಭಿಸಿಲ್ಲ ಎಂದ ಅವರು, ಸಣ್ಣ ರೈಲು ನಿಲ್ದಾಣಗಳಲ್ಲಿ ರೈಲು ನಿಲುಗಡೆ ಆಗಬೇಕು. ಸ್ಲೀಪರ್ ಮತ್ತು ಜನರಲ್ ಕೋಚ್ ಹೆಚ್ಚಿಸುವಂತೆ ಅವರು ಅಭಿಪ್ರಾಯ ಹೊರ ಹಾಕಿದರು.
ಇತ್ತ ನೈಋತ್ಯ ರೈಲ್ವೆ ಇಲಾಖೆ ಅಧಿಕಾರಿಯೊಬ್ಬರು, ರೈಲ್ವೆ ಮಂಡಳಿಯ ನೀತಿಯಂತೆಯೇ ರೈಲ್ವೆಗಳ ಪ್ರಯಾಣ ದರ ನಿಗದಿ ಮಾಡಲಾಗಿದೆ ಎಂದು ಸಬೂಬು ನೀಡಿದರು.












Click it and Unblock the Notifications