SWR: ಹೋಳಿ ಪ್ರಯುಕ್ತ ವಿಶೇಷ ರೈಲುಗಳ ಸೇವೆ ವಿಸ್ತರಣೆ, ಬೆಂಗಳೂರು, ಹುಬ್ಬಳ್ಳಿ, ಮೈಸೂರು ಮಾರ್ಗದ ಪ್ರಯಾಣಿಕರಿಗೆ ಸಿಹಿ ಸುದ್ದಿ

ಬೆಂಗಳೂರು: ಮುಂದಿನ ತಿಂಗಳು ಮಾರ್ಚ್‌ ಮೊದಲ ವಾರದ ಬಣ್ಣದ ಹಬ್ಬ ಹೋಳಿ ಆಚರಿಸಲಾಗುತ್ತದೆ. ಈ ವೇಳೆ ರಜೆಗಳು ಇರುವ ಕಾರಣ ಬೇರೆ ಬೇರೆ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಿರುತ್ತದೆ. ಪ್ರಯಾಣಿಕರ ದಟ್ಟಣೆ ನಿವಾರಣೆಗೆ, ಅನುಕೂಲಕ್ಕಾಗಿ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ ಮಾಡಲಾಗಿದೆ. ಮೈಸೂರು, ಹುಬ್ಬಳ್ಳಿ, ಕೊಲ್ಲಂ, ಬೆಂಗಳೂರು ಸೇರಿ ವಿವಿಧ ಮಾರ್ಗದ ಪ್ರಯಾಣಿಕರಿಗೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ.

1. ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೊಲ್ಲಂ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (07313) ಭಾನುವಾರ ಸಂಚರಿಸುತ್ತದೆ. ಇದನ್ನು 2026 ಮಾರ್ಚ್ 01 ರಿಂದ ಮಾರ್ಚ್ 29 ರವರೆಗೆ ವಿಸ್ತರಿಸಲಾಗಿದೆ. ಮರಳಿ ಅಲ್ಲಿಂದ ಸೋಮವಾರದಂದು ಬರುವ ಇದೇ ರೈಲು (07314) ಮಾರ್ಚ್ 02 ರಿಂದ 30, 2026 ರವರೆಗೆ ವಿಸ್ತರಿಸಲಾಗಿದೆ.

SWR Extends Special Trains

2. ಎಸ್‌ಎಂವಿಟಿ ಬೆಂಗಳೂರು-ತಿರುವನಂತಪುರಂ ಉತ್ತರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (06523) ಪ್ರತಿ ಸೋಮವಾರ ಸಂಚಾರ ನಡೆಸುತ್ತದೆ. ಮಾರ್ಚ್ 2 ರಿಂದ 30ರವರೆಗೆ ವಿಸ್ತರಿಸಲಾಗಿದೆ. ಮರಳಿ ಅಲ್ಲಿಂದ ಮಂಗಳವಾರದಂದು ವಾಪಸ್ಸಾಗುವ ರೈಲು (06524) ತಿರುವನಂತಪುರಂ ಉತ್ತರ-ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲಿನ ಸೇವೆಯನ್ನು ಮಾರ್ಚ್ 03 ರಿಂದ 31ರವರೆಗೆ ವಿಸ್ತರಣೆ ಆಗಿದೆ.

3. ಪ್ರತಿ ಶುಕ್ರವಾರ ಸಂಚಾರ ನಡೆಸುವ ಎಸ್‌ಎಂವಿಟಿ ಬೆಂಗಳೂರು-ತಿರುವನಂತಪುರಂ ಉತ್ತರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (06555) ಫೆಬ್ರವರಿ 27ರಿಂದ ಮಾಚ್ 27 ರವರೆಗೆ ವಿಸ್ತರಣೆ ಆಗಿದೆ. ಪ್ರತಿ ಭಾನುವಾರದಂದು ಚಲಿಸುವ ತಿರುವನಂತಪುರಂ ಉತ್ತರ-ಎಸ್‌ಎಂವಿಟಿ ರೈಲು (06556) ಮಾರ್ಚ್ 1ರಿಂದ ಮಾರ್ಚ್ 29ರವರೆಗೆ ವಿಸ್ತರಣೆ ಮಾಡಲಾಗಿದೆ.

4. ಪ್ರತಿ ಶುಕ್ರವಾರದಂದು ಚಲಿಸುವ ನರಸಾಪುರ-ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (07153) ಮಾರ್ಚ್ 6 ರಿಂದ 27ರವರೆಗೆ ಹಾಗೂ ಶನಿವಾರ ಸಂಚರಿಸುವ ಎಸ್‌ಎಂವಿಟಿ ಬೆಂಗಳೂರು-ನರಸಾಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (07154) ಮಾರ್ಚ್ 07 ರಿಂದ 28ರವರೆಗೆ ವಿಸ್ತರಣೆ ಮಾಡಲಾಗಿದೆ.

ವಿಸ್ತರಿಸಿದ ಮಾರ್ಗದಲ್ಲಿ ಹಲವು ಟ್ರಿಪ್ ಸಂಚಾರ ಸೇವೆ

5. ಎಸ್‌ಎಂವಿಟಿ ಬೆಂಗಳೂರು-ತಿರುವನಂತಪುರಂ ಉತ್ತರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (06547) ಬುಧವಾರ ಸಂಚಾರ ಸೇವೆ ನೀಡಲಿದೆ. ಈ ರೈಲು ಮಾರ್ಚ್ 4ರಿಂದ 25ರವರೆಗೆ ವಿಸ್ತರಣೆ ಮಾಡಲಾಗಿದೆ. ಅದೇ ರೀತಿ ಗುರುವಾರಗಳಂದು ಚಲಿಸುವ ತಿರುವನಂತಪುರಂ ಉತ್ತರ-ಎಸ್‌ಎಂವಿಟಿ ರೈಲು (06548) ಮಾರ್ಚ್ 5 ರಿಂದ 26ರವರೆಗೆ ಸೇವೆ ನೀಡಲಿದ್ದು, ನಾಲ್ಕು ಟ್ರಿಪ್ ಸಂಚಾರ ಮಾಡಲಿದೆ.

6. ಸೋಮವಾರ ಮತ್ತು ಶುಕ್ರವಾರಗಳಂದು ಚಲಿಸುವ ಕಾಕಿನಾಡ ಪಟ್ಟಣ-ಮೈಸೂರು ದ್ವೈವಾರ ಎಕ್ಸ್‌ಪ್ರೆಸ್ ವಿಶೇಷ ರೈಲು ರೈಲು (07033) ಮಾರ್ಚ್ 02 ರಿಂದ 30ರವರೆಗೆ ವಿಸ್ತರಣೆ ಮಾಡಲಾಗಿದೆ. ಅದಕ್ಕೆ ಅನುಗುಣವಾಗಿ ಮಂಗಳವಾರ ಮತ್ತು ಶನಿವಾರಗಳಂದು ಚಲಿಸುವ ಮೈಸೂರು-ಕಾಕಿನಾಡ ಪಟ್ಟಣ ದ್ವೈವಾರ ಎಕ್ಸ್‌ಪ್ರೆಸ್ ವಿಶೇಷ ರೈಲು (07034) ಮಾರ್ಚ್ 3 ರಿಂದ 31ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ರೈಲು ಪ್ರತಿ ದಿಕ್ಕಿನಲ್ಲಿ ಒಂಬತ್ತು ಟ್ರಿಪ್‌ ಸಂಚಾರ ಮಾಡುತ್ತದೆ ಎಂದು ನೃಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+