ಯಶವಂತಪುರ-ವಿಜಯಪುರ ವಿಶೇಷ ರೈಲು ವಿಸ್ತರಣೆ: ನಿಲ್ದಾಣ, ವೇಳಾಪಟ್ಟಿ

ಬೆಂಗಳೂರು, ನವೆಂಬರ್ 28: ಪ್ರಯಾಣಿಕರ ಬೇಡಿಕೆಯ ಹಿನ್ನಲೆಯಲ್ಲಿ ನೈಋತ್ಯ ರೈಲ್ವೆ ಬೆಂಗಳೂರಿನ ಯಶವಂತಪುರ ಮತ್ತು ವಿಜಯಪುರ ನಿಲ್ದಾಣಗಳ ನಡುವಿನ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ವಿಸ್ತರಣೆ ಮಾಡಿದೆ. ಪರಿಷ್ಕೃತ ವೇಳಾಪಟ್ಟಿಯೊಂದಿಗೆ ರೈಲು ಸೇವೆ ವಿಸ್ತರಣೆ ಮಾಡಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ವೇಳಾಪಟ್ಟಿ, ನಿಲ್ದಾಣಗಳ ಮಾಹಿತಿಯನ್ನು ಪ್ರಕಟಿಸಿದೆ. ಈ ಮಾರ್ಗದಲ್ಲಿ ಸಂಚಾರ ನಡೆಸುವ ಜನರು ರೈಲು ಸೇವೆಯ ಉಪಯೋಗ ಪಡೆದುಕೊಳ್ಳಬಹುದು.

ಈ ಕುರಿತು ನೈಋತ್ಯ ರೈಲ್ವೆ ಆದೇಶವನ್ನು ಹೊರಡಿಸಿದ್ದು, ಬೆಂಗಳೂರಿನ ಯಶವಂತಪುರ- ವಿಜಯಪುರ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 06545/ 06546) ಅವಧಿಯನ್ನು ಪರಿಷ್ಕೃತ ವೇಳಾಪಟ್ಟಿಯೊಂದಿಗೆ ವಿಸ್ತರಿಸಲು ನಿರ್ಧರಿಸಿದೆ ಎಂದು ಹೇಳಿದೆ.

SWR Extended Yesvantpur Vijayapura Yesvantpur Special Express Train Service

ರೈಲು ಸಂಖ್ಯೆ 06545 ಯಶವಂತಪುರ-ವಿಜಯಪುರ ಡೈಲಿ ಎಕ್ಸ್‌ಪೈಸ್ ವಿಶೇಷ ರೈಲು ಸೇವೆಯನ್ನು ಈ ಮೊದಲು ಡಿಸೆಂಬರ್ 31, 2024ರವರೆಗೆ ಓಡಿಸಲು ಸೂಚಿಸಲಾಗಿತ್ತು, ಈಗ ಅದನ್ನು ಜನವರಿ 1, 2025 ರಿಂದ ಜೂನ್ 30, 2025ರವರೆಗೆ ವಿಸ್ತರಿಸಲಾಗಿದೆ.

ರೈಲು ಸಂಖ್ಯೆ 06546 ವಿಜಯಪುರ-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆಯನ್ನು ಈ ಮೊದಲು ಜನವರಿ 1, 2025ರವರೆಗೆ ಓಡಿಸಲು ಸೂಚಿಸಲಾಗಿತ್ತು. ಈಗ ಅದನ್ನು ಜನವರಿ 2, 2025 ರಿಂದ ಜುಲೈ 1, 2025ರವರೆಗೆ ವಿಸ್ತರಿಸಲಾಗಿದೆ.

ಅಲ್ಲದೇ ಜನವರಿ 1, 2025ರಿಂದ ಜಾರಿಗೆ ಬರುವಂತೆ ಈ ರೈಲುಗಳ ವೇಳಾಪಟ್ಟಿ ಬದಲಾಗಲಿದೆ. ಪರಿಷ್ಕೃತ ವೇಳಾಪಟ್ಟಿ ಅನ್ವಯ ರೈಲು ಸಂಖ್ಯೆ 06545 ಯಶವಂತಪುರ-ವಿಜಯಪುರ ಡೈಲಿ ಎಕ್ಸ್‌ಪ್ರೆಸ್‌ ವಿಶೇಷ ರೈಲು, ಯಶವಂತಪುರದಿಂದ (21:30 ಗಂಟೆ) ಹೊರಡುವ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದಾಗ್ಯೂ, ಚಿಕ್ಕಜಾಜೂರಿನಲ್ಲಿ 01:03/ 01:05 ಗಂಟೆಗೆ ಬದಲು ಈ ರೈಲು 01:00/ 01:05 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.

ನಿಲ್ದಾಣ, ವೇಳಾಪಟ್ಟಿ ಮಾಹಿತಿ: ರೈಲು ಸಂಖ್ಯೆ 06546 ವಿಜಯಪುರ ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ವಿಜಯಪುರದಿಂದ 14:00 ಗಂಟೆಯ ಬದಲು 13:50 ಗಂಟೆಗೆ ಹೊರಡಲಿದೆ. ಬಸವನ ಬಾಗೇವಾಡಿ ರೋಡ್ 14:34/ 14:35ರ ಬದಲು 14:24/ 14:25 ಗಂಟೆಗೆ, ಆಲಮಟ್ಟಿ 14:54/ 14:55ರ ಬದಲು 14:44/ 14:45 ಗಂಟೆಗೆ, ಬಾಗಲಕೋಟೆ 15:59/ 16:00 ರ ಬದಲು 15:33/ 15:35 ಗಂಟೆಗೆ, ಗುಳೇದಗುಡ್ಡ ರೋಡ್ 16:13/ 16:14ರ ಬದಲು 15:50/15:51 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.

ಬದಾಮಿ 16:24/ 16:25 ರ ಬದಲು 16:09/16:10 ಗಂಟೆಗೆ, ಹೊಳೆ ಆಲೂ‌ರ್ 16:49/16:50 ರ ಬದಲು 16:29/16:30 ಗಂಟೆಗೆ, ಮಲ್ಹಾಪುರ 17:04/ 17:05 ರ ಬದಲು16:49/ 16:50 ಗಂಟೆಗೆ, ಗದಗ 17:48/ 17:50 ರ ಬದಲು 17:28/ 17:30 ಗಂಟೆಗೆ ಆಗಮನ/ ನಿರ್ಗಮನ.

ಕೊಪ್ಪಳ 18:49/ 18:50 ರ ಬದಲು 18:20/ 18:22 ಗಂಟೆಗೆ. ಹೊಸಪೇಟೆ 19:30/ 19:50ರ ಬದಲು 19:20/ 19:40 ಗಂಟೆಗೆ. ಕೊಟ್ಟೂರು 21:49/ 21:50ರ ಬದಲು 21:48/ 21:50 ಗಂಟೆ. ಚಿಕ್ಕಜಾಜೂರು 23:48/ 23:50 ರ ಬದಲು 23:45/ 23:50 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ. ಉಳಿದ ಎಲ್ಲಾ ನಿಲ್ದಾಣದ ಸಮಯಗಳು ಎಂದಿನಂತೆ ಇರಲಿದೆ, ಯಾವುದೇ ಬದಲಾವಣೆ ಇರುವುದಿಲ್ಲ.

ರೈಲು ಸೇವೆ ವಿಸ್ತರಣೆ: ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ನರಸಾಪುರ ಮತ್ತು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣಗಳ ನಡುವೆ ವಾರಕೊಮ್ಮೆ ಸಂಚಾರ ನಡೆಸುವ ವಿಶೇಷ ರೈಲುಗಳ ಸೇವೆ ಮುಂದುವರಿಸಲು ದಕ್ಷಿಣ ಮರ ರೈಲ್ವೆ ಸೂಚಿಸಿದೆ. ಈ ವಿಶೇಷ ರೈಲು ಅಸ್ತಿತ್ವದಲ್ಲಿರುವ ವೇಳಾಪಟ್ಟಿ, ದಿನಗಳು ಮತ್ತು ನಿಲುಗಡೆಗಳೊಂದಿಗೆ ಮುಂದುವರಿಯಲಿದೆ.

ರೈಲು ಸಂಖ್ಯೆ 07153 ನರಸಾಪುರ-ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್, ಈ ಮೊದಲು ನವೆಂಬರ್ 22, 2024 ರವರೆಗೆ ಓಡಿಸಲು ಸೂಚಿಸಲಾಗಿತ್ತು, ಈಗ ನವೆಂಬರ್ 29, 2024 ರಿಂದ ಡಿಸೆಂಬರ್ 27, 2024ರವರೆಗೆ ಒಟ್ಟು 5 ಟ್ರಿಪ್ ಓಡಿಸಲಾಗುತ್ತಿದೆ.

ರೈಲು ಸಂಖ್ಯೆ 07154 ಎಸ್‌ಎಂವಿಟಿ ಬೆಂಗಳೂರು-ನರಸಾಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್, ಈ ಮೊದಲು ನವೆಂಬರ್ 23, 2024 ರವರೆಗೆ ಚಲಿಸಲು ಸೂಚಿಸಲಾಗಿತ್ತು. ಈಗ ನವೆಂಬರ್ 30 ರಿಂದ ಡಿಸೆಂಬರ್ 28, 2024 ರವರೆಗೆ ಒಟ್ಟು 5 ಟ್ರಿಪ್ ಮುಂದುವರೆಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+