ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಜಿಕಲ್ ಸ್ಟ್ರೈಕ್: ಕನ್ನಡ ಪತ್ರಿಕೆಗಳಲ್ಲಿ ಯಾವುದು ಬೆಸ್ಟ್ ಕವರೇಜ್?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 30: ಉರಿ ಸೇನಾ ಕ್ಯಾಂಪ್ ಮೇಲೆ ನಾಲ್ವರು ಉಗ್ರರು ದಾಳಿ ಮಾಡಿ, ಹತ್ತೊಂಬತ್ತು ಯೋಧರನ್ನು ಕೊಂದ ನಂತರದ ಬೆಳವಣಿಗೆಯಲ್ಲಿ ಭಾರತದ ನಡೆ ಏನು, ಪಾಕ್ ಗೆ ಹೇಗೆ ಎದುರೇಟು ನೀಡಬಹುದು ಎಂಬ ಬಗ್ಗೆ ಕುತೂಹಲವಿತ್ತು. ಅದಕ್ಕೆ ಭಾರತೀಯ ಸೇನೆ ಲೆಕ್ಕಾಚಾರದ ಎದುರೇಟು ನೀಡಿದೆ.

ಗುರುವಾರ ಪತ್ರಿಕಾಗೋಷ್ಠಿ ನಡೆಸಿ, ಉಗ್ರರ ನೆಲೆಯನ್ನು ಧ್ವಂಸ ಮಾಡಿದ 'ಸರ್ಜಿಕಲ್ ಆಪರೇಷನ್' ಬಗ್ಗೆ ಅಧಿಕೃತವಾಗಿ ಮಾಹಿತಿ ತಿಳಿಸಲಾಯಿತು. ಭಾರತೀಯ ಸೇನೆಯ ಬಗ್ಗೆ ಹಾಗೂ ಕೇಂದ್ರ ಸರಕಾರದ ನಡೆ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪಕ್ಷಾತೀತವಾಗಿ ಈ ನಿರ್ಧಾರವನ್ನು ಸ್ವಾಗತಿಸಲಾಗಿದೆ.[ಸರ್ಜಿಕಲ್ ಸ್ಟ್ರೈಕ್ ನಡೆದದ್ದು ಹೇಗೆ? 10 ಬೆಳವಣಿಗೆಗಳು]

ಈ ದಾಳಿ ಬಗ್ಗೆ ಕನ್ನಡದ ಪತ್ರಿಕೆಗಳು ಏನು ಹೆಡ್ಡಿಂಗ್ ಕೊಟ್ಟಿವೆ, ಯಾವ ವಿಚಾರಕ್ಕೆ ಮಹತ್ವ ಕೊಟ್ಟಿವೆ ಓದಿದ್ರಾ? ಓದಿದ್ದರೂ ಪರವಾಗಿಲ್ಲ, ಮತ್ತೊಮ್ಮೆ ನಿಮ್ಮ ಗಮನಕ್ಕೆ ಇರಲಿ ಎಂದು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ಶೀರ್ಷಿಕೆ ಹಾಗೂ ಮಾಹಿತಿಯನ್ನು ನಿಮಗಾಗಿ ಇಲ್ಲಿ ಕೊಡಲಾಗಿದೆ.

ಗಡಿ ದಾಟಿ ಉಗ್ರರ ಬಗ್ಗುಬಡಿದ ಭಾರತ

ಗಡಿ ದಾಟಿ ಉಗ್ರರ ಬಗ್ಗುಬಡಿದ ಭಾರತ

ವಿಜಯವಾಣಿಯಲ್ಲಿ ಉರಿ ಸೇನಾ ಕ್ಯಾಂಪ್ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಸೇನೆ ದಾಳಿ ನಡೆಸಿರುವುದು, ಏಳು ಉಗ್ರರ ನೆಲೆ ಧ್ವಂಸ ಮಾಡಿರುವುದು, 40 ಭಯೋತ್ಪಾದಕರ ಹತ್ಯೆ ಮತ್ತಿತರ ವಿವರಗಳಿವೆ ಜತೆಗೆ ಎಲ್ಲೆಲ್ಲೆ ದಾಳಿ ನಡೆದಿತ್ತು, ಎಲ್ಲ ರಾಜಕೀಯ ಪಕ್ಷಗಳು ದಾಳಿಗೆ ಬೆಂಬಲ ಸೂಚಿಸಿರುವುದನ್ನು ಹೈಲೈಟ್ ಮಾಡಲಾಗಿದೆ.

ಉರಿದವರಿಗೆ ಸಿಡಿಗುಂಡಿನ ಉತ್ತರ

ಉರಿದವರಿಗೆ ಸಿಡಿಗುಂಡಿನ ಉತ್ತರ

ವಿಜಯ ಕರ್ನಾಟಕ ಎರಡು ಪುಟಗಳಲ್ಲಿ ಸೇನಾ ದಾಳಿಯ ಬಗ್ಗೆ ವಿವರಣೆ ನೀಡಿದೆ. ಮೊದಲ್ನೆ ಭಾಗವಾಗಿ ಉರಿ ಮೇಲಿನ ಉಗ್ರರ ದಾಳಿಗೆ ಭಾರತ ನೀಡಿದ ಉತ್ತರ ಎಂಬಂತೆ ಇದ್ದರೆ, ಸರ್ಜಿಕಲ್ ಅಟ್ಯಾಕ್ ನ ಡೀಟೇಲ್ ರಿಪೋರ್ಟ್ ಎಂದು ಹಲವು ಮಾಹಿತಿಯನ್ನು ಪ್ರಕಟಿಸಿದೆ

ಪಾಕ್ ಗೆ ನುಗ್ಗಿ ಉಗ್ರ ಸಂಹಾರ

ಪಾಕ್ ಗೆ ನುಗ್ಗಿ ಉಗ್ರ ಸಂಹಾರ

ಮತ್ತೊಂದು ಪುಟದಲ್ಲಿ ಕಾರ್ಯಾಚರಣೆ ಆರಂಭವಾದ ವೇಳೆ, ಕಾರ್ಯಾಚರಣೆ ಎಷ್ಟು ಕಾಲ ನಡೆಯಿತು, ಎಲ್ಲೆಲ್ಲಿ ದಾಳಿ ನದೆಯಿತು ಎಂಬುದನ್ನು ಮ್ಯಾಪ್ ಸಹಿತ ಹಾಕಲಾಗಿದೆ.

'ಉರಿ' ದಾಳಿಗೆ ಪ್ರತೀಕಾರ

'ಉರಿ' ದಾಳಿಗೆ ಪ್ರತೀಕಾರ

ಪ್ರಜಾವಾಣಿ ಪತ್ರಿಕೆಯಲ್ಲೂ ಉರಿ ಮೇಲಿನ ಉಗ್ರದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ ಎಂಬ ಶೀರ್ಷಿಕೆಯನ್ನೇ ನೀಡಲಾಗಿದೆ. ದಾಳಿ ಕಾರ್ಯಾಚರಣೆಯ ಸಂಪೂರ್ಣ ವಿವರ, ಸಮಯ, ಸ್ಥಳದ ಬಗ್ಗೆ ಗ್ರಾಫಿಕ್ಸ್ ಮಾಡಲಾಗಿದೆ.

ಪಾಕ್ ಮೇಲೆ ಭಾರತದ ಉರಿ ಸಿಡಿಲು

ಪಾಕ್ ಮೇಲೆ ಭಾರತದ ಉರಿ ಸಿಡಿಲು

ಉದಯವಾಣಿಯಲ್ಲಿ ಉಅರಿ ದಾಳಿ ಪ್ರಸ್ತಾವ ಇದ್ದರೂ ಮನ್ ಕೀ ಬಾತ್ ಮುಗಿಯಿತು ಈಗ ಗನ್ ಕೀ ಬಾತ್ ಎಂಬ ಕಿಕ್ಕರ್ ಈ ಸಂದರ್ಭಕ್ಕೆ ತುಂಬ ಸೂಕ್ತವಾಗಿದೆ. ಸೇನೆ ದಾ ಕಾರ್ಯಾಚರಣೆಯ ವಿವರದ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕ್ಷಣ ಕ್ಷಣಕ್ಕೂ ಮಾಹಿತಿ ನೀಡಲಾಗಿತ್ತು ಎಂಬ ವಿವರ ಇದೆ. ಇಂಥ ದಾಳಿಯ ಸಂಭವವನ್ನು ಹಿಂದೆಯೇ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು ಎಂಬುದು ಕುತೂಹಲಕರವಾಗಿದೆ.

ಸಿಡಿದೆದ್ದ ಭಾರತ

ಸಿಡಿದೆದ್ದ ಭಾರತ

ಕನ್ನಡಪ್ರಭದಲ್ಲಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ವಿವರಣೆ ಇದ್ದು, ಕೇಂದ್ರ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೇಳಿಕೆಗಳನ್ನು ಪ್ರಕಟಿಸಲಾಗಿದೆ. ಹತ್ತು ಅಂಶಗಳನ್ನು ಹಾಕಿ, ಇಡೀ ದಾಳಿಯ ಬಗ್ಗೆ ವಿವರಣೆ ನೀಡಲಾಗಿದೆ.

ಮಿಷನ್ LOC

ಮಿಷನ್ LOC

ಹೊಸ ದಿಗಂತ ಪತ್ರಿಕೆಯು ಭಾರತ ಸೇನಾ ದಾಳಿಯ ಕ್ಷಣ-ಕ್ಷಣದ ಮಾಹಿತಿ, ದಾಳಿ ನಡೆದ ಸ್ಥಳಗಳು, ಶತ್ರು ಸಂಹಾರ ನಡೆದ ಬಗ್ಗೆ.. ಹೀಗೆ ಸರ್ಜಿಕಲ್ ಅಟ್ಯಾಕ್ ನ ವಿವರಗಳನ್ನು ನೀಡಿದೆ.

English summary
surgical strikes on terrorists by indian army is hot news now. So, here some of the Kannada news papers headings and how they cover the proud moment of Indian army.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X