Get Updates
Get notified of breaking news, exclusive insights, and must-see stories!

Sumalatha : ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌

ಬೆಂಗಳೂರು, ಮಾರ್ಚ್‌ 10: ಕರ್ನಾಟಕ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಇದೆ. ಈ ಸಂದರ್ಭದಲ್ಲಿ ಮಂಡ್ಯ ರಾಜಕಾರಣ ಮತ್ತೆ ರಾಷ್ಟ್ರದಾದ್ಯಂತ ಸದ್ದು ಮಾಡುತ್ತಿದೆ. ಅಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ನೇರ ಪೈಪೋಟಿ ಇದೆ. ಈ ಜಿಲ್ಲೆಯಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿ ಶತಾಯಗತಾಯ ಯತ್ನ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಸಂಸದೆ, ಹೆಸರಾಂತ ನಟಿ ಸುಮಲತಾ ಅಂಬರೀಷ್‌ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಬಿಜೆಪಿ ಹಲವಾರು ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದೆ. ಸುಮಲತಾ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಊಹಾಪೋಹಗಳಿಗೆ ಇಂದು ತೆರೆಬಿದ್ದಿದೆ.

ಇಂದು ಮಂಡ್ಯದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್‌ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಎಂಪಿ ಅನ್ನೋದು ಇರಲಿ, ಒಬ್ಬ ಮಹಿಳೆ ಅನ್ನುವುದನ್ನೂ ಲೆಕ್ಕಿಸಿದೇ, ನನ್ನ ತೆಜೋವಧೆ ಮಾಡುತ್ತಲೇ ಬಂದರು. ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ನಿಲ್ಲಿಸಿದೆ. ಆ ಕಾರಣಕ್ಕಾಗಿ ನನ್ನ ಮೇಲೆ ಹಲ್ಲೆ ಯತ್ನಗಳು ನಡೆದವು ಎಂದು ಬೇಸರ ವ್ಯಕ್ತಪಡಿಸಿದರು.

Actor-turned-Politician Sumalatha Ambareesh Decided to join BJP

ಇದೇ ವೇಳೆ, ಬಿಜೆಪಿಗೆ ಸೇರ್ಪಡೆಯಾಗುವುದಾಗಿ ತಿಳಿಸಿದರು. ಇದು ಮಂಡ್ಯ ಜಿಲ್ಲೆಯ ಅಭಿವೃದ್ಧಿಗೋಸ್ಕರವೆಂದು ಹೇಳಿದರು.

ಸುಮಲತಾ ಅಂಬರೀಶ್‌ ದಕ್ಷಿಣ ಭಾರತದ ಜನಪ್ರಿಯ ನಟಿ. ಅವರು ಮಲಯಾಳಂ, ತಮಿಳು, ಕನ್ನಡ, ತೆಲುಗು ಮತ್ತು ಹಿಂದಿಯಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಚೆನ್ನೈನಲ್ಲಿ ಜನಿಸಿದ ಅವರು ಮುಂಬೈ ಮತ್ತು ಆಂಧ್ರಪ್ರದೇಶದಲ್ಲಿ ಬೆಳೆದರು. ಈಗ ಪ್ರಸ್ತುತ ಬೆಂಗಳೂರಿನ ಜೆಪಿ ನಗರದಲ್ಲಿ ನೆಲೆಸಿದ್ದಾರೆ.

ಸುಮಲತಾ ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ ನಡೆದಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ನಂತರ 15 ನೇ ವಯಸ್ಸಿನಲ್ಲಿ ನಟಿಸಲು ಪ್ರಾರಂಭಿಸಿದರು. ಅವರು ಕನ್ನಡದ ರೆಬಲ್‌ ಸ್ಟಾರ್‌ ಅಂಬರೀಶ್ ಅವರನ್ನು ವಿವಾಹವಾಗಿದರು. ಸುಮಲತಾ ಆರು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ನಾಲ್ಕು ಭಾಷೆಗಳ ಚಲನಚಿತ್ರರಂಗದಲ್ಲಿ ನಟಿಸಿದ್ದಾರೆ.ಸಹನಟಿ ನಟಿ ಸುಹಾಸಿನಿ ಮಣಿರತ್ನಂ ಅವರ ನಿಕಟ ಸ್ನೇಹಿತರಾಗಿದ್ದಾರೆ.

Actor-turned-Politician Sumalatha Ambareesh Decided to join BJP

1987 ರಲ್ಲಿ ಶ್ರುತಿಲಯಲು ಚಿತ್ರದಲ್ಲಿನ ಅವರ ಪಾತ್ರಕ್ಕಾಗಿ ಅತ್ಯುತ್ತಮ ನಟಿಯಾಗಿ ನಂದಿ ಪ್ರಶಸ್ತಿಯನ್ನು ಪಡೆದರು. ಅವರು ಜಯಮ್ಮು ನಿಶ್ಚಯಮ್ಮು ರಾ ಮತ್ತು ಡೊಂಗ ಕೊಳ್ಳು ಚಿತ್ರಗಳಲ್ಲಿ ರಾಜೇಂದ್ರ ಪ್ರಸಾದ್ (ನಟ) ಜೊತೆ ನಟಿಸಿದ್ದಾರೆ. ಚಿರಂಜೀವಿ ಜೊತೆ ಸ್ವಯಂಕೃಷಿ, ಗ್ಯಾಂಗ್ಲೀಡರ್, ವೇಟ, ರಾಕ್ಷಸುಡು, ಕೈದಿ, ಚಟ್ಟಂ ತೋ ಪೋರಟಂ, ಅಗ್ನಿಗುಂಡಂ ಮತ್ತು ಶ್ರೀ ಮಂಜುನಾಥದಲ್ಲಿ ಅಭಿನಯಿಸಿದ್ದಾರೆ.

ಕಲ್ಲರಳಿ ಹೂವಾಗಿ ಎಂಬ ಕನ್ನಡ ಚಿತ್ರದಲ್ಲಿ ತಮ್ಮ ಪತಿಯೊಂದಿಗೆ ಕಾಣಿಸಿಕೊಂಡರು. ಅದು ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಂಬರೀಶ್ ಅವರು ನವೆಂಬರ್ 24, 2018 ರಂದು ಹೃದಯಘಾತದಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾದರು.

ಅಂಬರೀಶ್‌ ಅವರ ನಿಧನದ ನಂತರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರು. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಸುಮಲತಾ ಮಾರ್ಚ್ 2019 ರಲ್ಲಿ ಘೋಷಿಸಿದರು. ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಪರ ಖ್ಯಾತ ನಟರಾದ ದರ್ಶನ್ ಮತ್ತು ಯಶ್ ಪ್ರಚಾರ ನಡೆಸಿದರು. ಸುಮಲತಾ ಅವರು ಮಂಡ್ಯದಲ್ಲಿ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಸಾಧಿಸಿದರು.

Actor-turned-Politician Sumalatha Ambareesh Decided to join BJP

ಮಂಡ್ಯ ಸಂಸದೆ ಸುಮಲತಾ ನಾಳೆ ಬಿಜೆಪಿ ಸೇರಲಿದ್ದಾರೆ ಎಂದು ಮೇಲುಕೋಟೆ ಜೆಡಿಎಸ್ ಶಾಸಕ ಸಿ ಎಸ್ ಪುಟ್ಟರಾಜು ಹೇಳಿದ್ದರು. ಅವರು ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಬಿಜೆಪಿ ಸೇರಲು ಯೋಜಿಸಿದ್ದರು. ಆದರೆ ಇದು ಸರ್ಕಾರಿ ಕಾರ್ಯಕ್ರಮ ಆಗಿರುವುದರಿಂದ ಸೇರ್ಪಡೆಗೆ ಅವಕಾಶವಿಲ್ಲ. ಆ ಕಾರಣ ಅವರು ಒಂದು ದಿನ ಮುಂಚಿತವಾಗಿ ಪಕ್ಷಕ್ಕೆ ಸೇರಲಿದ್ದಾರೆ ಎಂದು ತಿಳಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+