ನಾಮಪತ್ರ ಸಲ್ಲಿಕೆಗೆ ನೀವೂ ಬನ್ನಿ: ಸುಮಲತಾ ಅಂಬರೀಷ್ ಆಹ್ವಾನ
Recommended Video

ಬೆಂಗಳೂರು, ಮಾರ್ಚ್ 19: ತಾವು ನಾಮಪತ್ರ ಸಲ್ಲಿಸುವ ವೇಳೆ ತನ್ನೊಂದಿಗೆ ನೀವೂ ಬನ್ನಿ ಎಂದು ಸುಮಲತಾ ಅಂಬರೀಷ್ ಜನರಿಗೆ ಆಹ್ವಾನ ನೀಡಿದ್ದಾರೆ.
ಮಂಡ್ಯ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಸೋಮವಾರ ಘೋಷಣೆ ಮಾಡಿರುವ ಸುಮಲತಾ ಅಂಬರೀಷ್, ಬುಧವಾರ (ಮಾರ್ಚ್ 20) ಬೆಳಿಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಕೆ ಮಾಡುವುದಾಗಿ ತಿಳಿಸಿದ್ದರು. ಈ ಸಂದರ್ಭದಲ್ಲಿ ನೀವೆಲ್ಲರೂ ಇರಬೇಕು ಎಂದು ಅವರು ಫೇಸ್‌ಬುಕ್ ಪುಟದಲ್ಲಿ ಮನವಿ ಮಾಡಿದ್ದಾರೆ.
ತಮ್ಮ ಚುನಾವಣಾ ಸ್ಪರ್ಧೆಯನ್ನು ಅವರು 'ನನ್ನ ಜನರಿಗಾಗಿ ನನ್ನ ಹೆಜ್ಜೆ' ಎಂದು ಹೇಳಿಕೊಂಡಿದ್ದಾರೆ.

'ನನ್ನ ಪ್ರೀತಿಯ ಮಂಡ್ಯದ ಜನತೆಯ ನಿರ್ಧಾರದಂತೆ ಮಂಡ್ಯ ಲೋಕಸಭೆ ಚುನಾವಣೆಗೆ ನಾನು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ನನಗೆ ಇನ್ನಷ್ಟು ಧೈರ್ಯ ತುಂಬಲು ನೀವೆಲ್ಲಾ ಆ ದಿನ ಆಗಮಿಸಬೇಕೆಂದು ನನ್ನ ಪ್ರೀತಿಯ ಮನವಿ' ಎಂದು ಅವರು ಬರೆದುಕೊಂಡಿದ್ದಾರೆ.
ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಪ್ರಕಟಿಸಿರುವ ಸುಮಲತಾ, ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.
ವಿಶ್ವೇಶ್ವರಯ್ಯ ಪ್ರತಿಮೆ ಮಂಡ್ಯ ನಗರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಮೆರವಣಿಗೆ ಹೊರಡಲಿದೆ. ಸಿಲ್ವರಿ ಜ್ಯುಬಿಲಿ ಪಾರ್ಕ್ ಮುಂಭಾಗ ಸಮಾವೇಶ ನಡೆಯಲಿದೆ ಎಂದು ಸುಮಲತಾ ಮಾಹಿತಿ ನೀಡಿದ್ದಾರೆ.












Click it and Unblock the Notifications