ಕೆಎಸ್ಆರ್‌ಟಿಸಿ ಪಾರ್ಸೆಲ್ ಸೇವೆಗೆ ಹೆಸರು ಸೂಚಿಸಿ ಬಹುಮಾನ ಗೆಲ್ಲಿ

ಬೆಂಗಳೂರು, ಆಗಸ್ಟ್ 12 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೂತನ ಪಾರ್ಸೆಲ್ ಸೇವೆಯನ್ನು ಆರಂಭಿಸುತ್ತಿದೆ. ಜನರು ಹೊಸ ಸೇವೆಗೆ ಹೆಸರು ಸೂಚಿಸಿ ಬಹುಮಾನ ಗೆಲ್ಲಬಹುದು. ಹೆಸರು ಸೂಚಿಸಲು ಆಗಸ್ಟ್ 15 ಕೊನೆಯ ದಿನವಾಗಿದೆ.

Recommended Video

      R Ashok ರಾತ್ರಿ KG Halli , DJ Halliಗೆ ರಾತ್ರಿ ಹೋದಾಗ ಹೇಗಿತ್ತು ಗೊತ್ತಾ | Oneindia Kannada

      ಕೆಎಸ್ಆರ್‌ಟಿಸಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಜೊತೆ ಸೇರಿ ಹೊಸ ಪಾರ್ಸೆಲ್ ಸೇವೆ ಆರಂಭಿಸುತ್ತಿದೆ. ಕರ್ನಾಟಕ ಮತ್ತು ಅಂತರರಾಜ್ಯಕ್ಕೆ ಪಾರ್ಸೆಲ್ ತಲುಪಿಸಲಾಗುತ್ತದೆ.

      ಈ ಹೊಸ ಕೋರಿಯರ್ ಮತ್ತು ಪಾರ್ಸೆಲ್ ಸೇವೆ ಹೆಸರು ಸೂಚಿಸುವಂತೆ ಜನರಲ್ಲಿ ಮನವಿ ಮಾಡಲಾಗಿದೆ. ಉತ್ತಮ ಹೆಸರನ್ನು ಸೂಚಿಸಿದವರಿಗೆ ಬಹುಮಾನವನ್ನು ನೀಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

      Suggest Brand Name For KSRTC Parcel And Courier Services

      ಜನರು ಆಗಸ್ಟ್ 15ರ ಸಂಜೆ 5ಗಂಟೆಯೊಳಗೆ ನೂತನ ಪಾರ್ಸೆಲ್ ಸೇವೆಗೆ ಹೆಸರನ್ನು ಸೂಚಿಸಬಹುದಾಗಿದೆ.
      KSRTC_Journeys ಟ್ವಿಟರ್ ಹ್ಯಾಂಡಲ್, KSRTC.Karnataka ಫೇಸ್ ಬುಕ್ ಪುಟ, [email protected] ಇ ಮೇಲ್‌ಗೆ ಹೆಸರುಗಳನ್ನು ಕಳಿಸಬಹುದಾಗಿದೆ.

      ನೀವು ಸೂಚಿಸಿದ ಹೆಸರು ಆಯ್ಕೆಯಾದರೆ ಬಹುಮಾನವನ್ನು ನೀಡಲಾಗುತ್ತದೆ ಮತ್ತು ನೀವು ಆಯ್ಕೆ ಮಾಡಿದ ಒಂದು ಸ್ಥಳಕ್ಕೆ ಉಚಿತವಾಗಿ ಸಂಚಾರ ನಡೆಸಬಹುದಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+