Get Updates
Get notified of breaking news, exclusive insights, and must-see stories!

ಸ್ನಾತಕೋತ್ತರ ಪದವೀಧರರಿಗೆ ಉದ್ಯಮ ಸ್ಥಾಪಿಸಲು ಸಹಾಯಧನ, ಷರತ್ತುಗಳು

ಬೆಂಗಳೂರು, ಫೆಬ್ರವರಿ 09: ಕರ್ನಾಟಕ ಸರ್ಕಾರ ಸ್ನಾತಕೋತ್ತರ ಪದವೀಧರರಿಗೆ ಸಿಹಿಸುದ್ದಿಯನ್ನು ನೀಡಿದೆ. ಜಿಲ್ಲಾ/ ತಾಲೂಕು ಮಟ್ಟದಲ್ಲಿ ಉದ್ಯಮ ಸ್ಥಾಪನೆ ಮಾಡಲು ಗರಿಷ್ಠ 5 ಲಕ್ಷದ ತನಕ ಸಬ್ಸಿಡಿಯನ್ನು ನೀಡಿಲಿದೆ. ಇದಕ್ಕಾಗಿ ಷರತ್ತುಗಳನ್ನು ಸಹ ವಿಧಿಸಲಾಗಿದೆ.

ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಕಲಾವತಿ ಎಸ್. ವಿ. ಸರ್ಕಾರದ ಜಂಟಿ ಕಾರ್ಯದರ್ಶಿ ಸಮಾಜ ಕಲ್ಯಾಣ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಪತ್ರಿಕೋದ್ಯಮದಲ್ಲಿ (Journalism) ಪರಿಶಿಷ್ಟ ಜಾತಿ/ ವರ್ಗದ ಸ್ನಾತಕೋತ್ತರ ಪದವೀಧರರಿಗೆ ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಉದ್ದಿಮೆಯನ್ನು ಸ್ಥಾಪಿಸಲು ಸಹಾಯಧನ ನೀಡುವ ಕುರಿತು ಎಂಬ ವಿಷಯ ಒಳಗೊಂಡಿದೆ.

Subsidy For Post Graduate To Set Up Business Conditions

ದಿನಾಂಕ 19/10/2023ರಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ ಯುವತಿಯರು ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಜಿಲ್ಲಾ/ ತಾಲ್ಲೂಕು ಮಟ್ಟದಲ್ಲಿ ಉದ್ಯಮವನ್ನು ಸ್ಥಾಪಿಸಲು ಘಟಕ ವೆಚ್ಚದ ಶೇ. 70 ರಷ್ಟು ಅಥವಾ ಗರಿಷ್ಟ ರೂ. 5 ಲಕ್ಷಗಳ ಸಹಾಯಧನವನ್ನು ಕೆಲವು ಷರತ್ತುಗಳಿಗೆ ಒಳಪಟ್ಟು ಮಂಜೂರಾತಿ ನೀಡಿ ಆದೇಶಿಸಲಾಗಿತ್ತು.

ಈ ಆದೇಶದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡುವಂತೆ ಮನವಿ ಸಲ್ಲಿಸಲಾಗಿತ್ತು. ಮನವಿಯನ್ನು ಪರಿಶೀಲಿಸಿದ ಸರ್ಕಾರವು ದಿನಾಂಕ 19/10/2023ರ ಆದೇಶದಲ್ಲಿನ ಕೆಲವು ಮಾರ್ಪಾಡುಗಳನ್ನು ಮಾಡಲು ತೀರ್ಮಾನಿಸಿ, ಈ ಕೆಳಗಿನಂತೆ ಆದೇಶ ಹೊರಡಿಸಿದೆ.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪರಿಶಿಷ್ಟ ಜಾತಿ ನಿರುದ್ಯೋಗಿ ಯುವಕ/ ಯುವತಿಯರು ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಉದ್ಯಮವನ್ನು ಸ್ಥಾಪಿಸಲು ಘಟಕ ವೆಚ್ಚದ ಶೇ. 70 ರಷ್ಟು ಅಥವಾ ಗರಿಷ್ಟ ರೂ. 5 ಲಕ್ಷಗಳ ಸಹಾಯಧನವನ್ನು ನಿಗದಿಪಡಿಸಿ ಹೊರಡಿಸಲಾದ ಸರ್ಕಾರದ ಆದೇಶದಲ್ಲಿನ ಷರತ್ತುಗಳನ್ನು ಮಾರ್ಪಡಿಸಲಾಗಿದೆ.

ಷರತ್ತುಗಳು

* ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ-ಯುವತಿಯರು ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ತೊಡಗಿಸಿಕೊಳ್ಳಲು ಪ್ರಾಯೋಗಿಕವಾಗಿ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ರಾಜ್ಯದ ಇತರ ಮಹಾನಗರ ಪಾಲಿಕೆಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸುವುದು.

* ಪತ್ರಿಕೋದ್ಯಮದಲ್ಲಿ ಉದ್ಯಮ ಸ್ಥಾಪಿಸಲು ಘಟಕ ವೆಚ್ಚವನ್ನು ರೂ. 12 ಲಕ್ಷಗಳಿಗೆ ನಿಗದಿಗೊಳಿಸಿದೆ. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ರೂ. 10 ಲಕ್ಷಗಳ ಮಿತಿಯಲ್ಲಿರಬೇಕು

* ಅರ್ಜಿದಾರರು ಕಳೆದ 15 ವರ್ಷಗಳಿಂದ ಕರ್ನಾಟಕದ ರಾಜ್ಯದ ನಿವಾಸಿಯಾಗಿರಬೇಕು. ಅರ್ಜಿದಾರರು 30 ವರ್ಷದಿಂದ 50 ವರ್ಷದ ವಯೋಮಾನದವರಾಗಿರಬೇಕು.

* ಅರ್ಜಿದಾರರು ಯಾವುದಾದರೂ ಪದವಿಯ ಜೊತೆಗೆ 10 ವರ್ಷಗಳ ಸೇವಾನುಭವ (ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಹೆಸರಿರುವ ಪ್ರಮುಖ ಮಾಧ್ಯಮ ಮುದ್ರಣ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ) ಹೊಂದಿರಬೇಕು. ಅರ್ಜಿದಾರರು ಈ ಹಿಂದೆ ನಿಗಮಗಳಿಂದ ಯಾವುದೇ ಆರ್ಥಿಕ ಸೌಲಭ್ಯವನ್ನು ಪಡೆದಿರಬಾರದು.

* ಅರ್ಜಿದಾರರು ಕಡ್ಡಾಯವಾಗಿ UAM (Udyog Aadhaar Memorandum) ನಲ್ಲಿ
ನೋಂದಾಯಿತವಾಗಿರಬೇಕು. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ ಅರೆ ಸರ್ಕಾರಿ/ ನಿಗಮ ಮಂಡಳಿ ಮತ್ತು ಇತರ ಸಂಸ್ಥೆಗಳಲ್ಲಿ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಹುದ್ದೆಯಲ್ಲಿ ಇರಬಾರದು.

* ಅರ್ಜಿದಾರರು ಪ್ರಾಜೆಕ್ಟ್ ರಿಪೋರ್ಟ್‌ನೊಂದಿಗೆ ಅರ್ಜಿಯನ್ನು ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ಇವರಿಗೆ ಸಲ್ಲಿಸುವುದು. ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ಇವರು ಅನುಮೋದನೆ ನೀಡಿ ಬ್ಯಾಂಕ್ ಗಳಿಗೆ ಕಳುಹಿಸಬೇಕು.

* ಬ್ಯಾಂಕ್‌ಗಳಿಂದ ಸಹಾಯಧನ ಬಿಡುಗಡೆ ಮಾಡಲು ಕ್ಲೈಮ್‌ ಬಂದ ಕೂಡಲೇ ಸಹಾಯಧನದ ಮೊತ್ತವನ್ನು ಸಂಬಂಧಿಸಿದ ಬ್ಯಾಂಕ್‌ಗಳಿಗೆ ಬಿಡುಗಡೆ ಮಾಡಬೇಕು. ಘಟಕವನ್ನು ಸ್ಥಾಪಿಸಿದ ಬಗ್ಗೆ ಸಂಬಂಧಿಸಿದ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಇವರು ಸ್ಥಳ ಪರಿಶೀಲನೆ ಮಾಡಿ ಜಿಪಿಎಸ್ ಫೋಟೋದೊಂದಿಗೆ ಆಯುಕ್ತರಿಗೆ ವರದಿ ನೀಡತಕ್ಕದ್ದು.

* ಆಯ್ಕೆಯಾದ ಫಲಾನುಭವಿಯು ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಸುದ್ದಿಗಳನ್ನು ಬಿತ್ತಾರ ಮಾಡಬೇಕು. ಘಟಕ ಸ್ಥಾಪಿಸಿದ ಉದ್ಯಮದಲ್ಲಿ ಒಬ್ಬ ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ/ ಯುವತಿಯರಿಗೆ ಕಡ್ಡಾಯವಾಗಿ ಉದ್ಯೋಗ ನೀಡತಕ್ಕದ್ದು.

* ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳಲ್ಲಿ ಸೌಲಭ್ಯ ಪಡೆದುಕೊಂಡು ಯಶಸ್ವಿಯಾಗಿರುವ ವಿವಿಧ ಯೋಜನೆಗಳ ಫಲಾನುಭವಿಗಳ ಸಂದರ್ಶನ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡಬೇಕು.

* ಡಿಜಿಟಲ್ ಉದ್ಯಮ ಆರಂಭಿಸುವ ಫಲಾನುಭವಿಯು ಕಡ್ಡಾಯವಾಗಿ ಪರಿಶಿಷ್ಟ ಜಾತಿಯ ಒಬ್ಬ ನಿರುದ್ಯೋಗಿಗೆ 7 ತಿಂಗಳ ಕಾಲ ಡಿಜಿಟಲ್ ಪತ್ರಿಕೋದ್ಯಮ ತರಬೇತಿ ನೀಡಬೇಕು ಜೊತೆಗೆ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಸುದ್ದಿಗಳನ್ನು ಪ್ರಸಾರ ಮಾಡಬೇಕು.

* ಸಮಾಜ ಕಲ್ಯಾಣ ಇಲಾಖೆಯ ರಾಜ್ಯವಲಯ ಲೆಕ್ಕ ಶೀರ್ಷಿಕೆ ಅಡಿ ಪತ್ರಕರ್ತರಿಗೆ ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾದ್ಯಮ ಉದ್ಯಮ ಸ್ಥಾಪನೆಗೆ ರೂ. 4 ಕೋಟಿಗಳ ಅನುದಾನದಲ್ಲಿ ಈ ವೆಚ್ಚವನ್ನು ಭರಿಸುವುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+