ಸಾಕುಪ್ರಾಣಿಗಳನ್ನು ಅನಧಿಕೃತವಾಗಿ ಮಾರಿದರೆ ಕಠಿಣ ಕ್ರಮ: ಸಚಿವ ಚವ್ಹಾಣ್

ಬೆಂಗಳೂರು, ಜನವರಿ 13: ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳದೆ ಸಾಕು ಪ್ರಾಣಿಗಳ ಮಾರಾಟ ಅಂಗಡಿಗಳನ್ನು ತೆರೆದರೆ ಅಂತಹ ಮಾರಾಟಗಾರರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಕರ್ನಾಟಕ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಶುಕ್ರವಾರ ಹೇಳಿದ್ದಾರೆ.

ಮಕರ ಸಂಕ್ರಾಂತಿ ವಿಶೇಷ ಪುಟ

ತಪಾಸಣೆ ಸಂದರ್ಭದಲ್ಲಿ ದೇಶಿ ಹಾಗೂ ವಿದೇಶಿ ಪಕ್ಷಿ, ಪ್ರಾಣಿಗಳ ಅನಧಿಕೃತ ಮಾರಾಟ ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಪಿಸಿಎ) ಕಾಯಿದೆ, 1960, ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ, ನಾಯಿ ತಳಿ ಮಾರುಕಟ್ಟೆ ನಿಯಮಗಳು, 2017 ಮತ್ತು ಪೆಟ್ ಶಾಪ್ ನಿಯಮಗಳು, 2018 ರ ಅಡಿಯಲ್ಲಿ ರೂಪಿಸಲಾದ ವಿವಿಧ ನಿಯಮಗಳು ಪಕ್ಷಿಗಳು ಮತ್ತು ಪ್ರಾಣಿಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಸ್ಪಷ್ಟವಾಗಿ ಅನ್ವಯಿಸುತ್ತವೆ ಎಂದು ಅವರು ಹೇಳಿದರು.

ಸಣ್ಣ ನಾಯಿ ಮರಿಗಳು, ಪಕ್ಷಿಗಳು ಆಹಾರ ಮತ್ತು ನೀರಿಲ್ಲದೆ ಸಾಯುತ್ತಿರುವ ಬಗ್ಗೆ ಅನೇಕ ದೂರುಗಳು ಬಂದವು. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ದಾಳಿ ನಡೆಸಿ ರಕ್ಷಿಸಿದ ಎಲ್ಲಾ ಪ್ರಾಣಿಗಳನ್ನು ಕಾನೂನಿನ ಪ್ರಕಾರ ಮಾನ್ಯತೆ ಪಡೆದ ಪ್ರಾಣಿ ರಕ್ಷಣಾ ಗೃಹದಲ್ಲಿ ಇರಿಸಲಾಗಿದೆ. ದಾಳಿ ವೇಳೆ ಹೆಚ್ಚಿನ ಅಂಗಡಿಗಳಲ್ಲಿ ಒಂದೇ ಪಂಜರದಲ್ಲಿ ಅನೇಕ ಪಕ್ಷಿಗಳನ್ನು ಇಡಲಾಗಿತ್ತು. ಪಕ್ಷಿಗಳು ಮತ್ತು ಪ್ರಾಣಿಗಳು ಸ್ಥಳಾವಕಾಶ ಮತ್ತು ಶುದ್ಧ ಗಾಳಿಗಾಗಿ ಹೆಣಗಾಡುತ್ತಿದ್ದವು. ನೀರು ಅಥವಾ ಆಹಾರ ಪೂರೈಕೆಯ ಕೊರತೆ ಮತ್ತು ಸ್ವಚ್ಛತೆಯ ಕೊರತೆಯೂ ಸಹ ಇತ್ತು ಎಂದು ಸಚಿವರು ಹೇಳಿದರು.

Strict action against unauthorized sale of pets: Minister prabhu Chavan

ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಅಕ್ರಮವಾಗಿ ಪ್ರಾಣಿ- ಪಕ್ಷಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ಹಿಂದೆ ಬಿಬಿಎಂಪಿಯ ಪಶುಸಂಗೋಪನಾ ಇಲಾಖೆ ಹಾಗೂ ಕರ್ನಾಟಕ ಪಶು ಕಲ್ಯಾಣ ಮಂಡಳಿ, ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಈ ಹಿಂದೆಯೇ ಬುಧವಾರ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಎಲ್ಲಾ ಪ್ರಾಣಿ-ಪಕ್ಷಿಗಳ ಮಾರಾಟದ ಅಂಗಡಿಗಳು ಮತ್ತು ಸಾಕುಪ್ರಾಣಿಗಳ ಅಂಗಡಿಗಳನ್ನು ಮುಂದಿನ ದಿನಗಳಲ್ಲಿ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಾರಿವಾಳ, ಮೊಲ, ಬಾತುಕೋಳಿ, ನಾಯಿ, ಬೆಕ್ಕು ಸೇರಿದಂತೆ ವಿವಿಧ ಜಾತಿಯ ಪ್ರಾಣಿ ಮತ್ತು ಪಕ್ಷಿಗಳನ್ನು ಮಾರಾಟ ಮಾಡುವ ಪೆಟ್ ಶಾಪ್ ಮಾಲೀಕರು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮತ್ತು ಪರವಾನಗಿ ಪಡೆಯಬೇಕು ಮತ್ತು ಸಾಕುಪ್ರಾಣಿಗಳನ್ನು ಖರೀದಿಸಲು ನಿಯಮಗಳನ್ನು ಅನುಸರಿಸಬೇಕು ಎಂದು ಚವ್ಹಾಣ್ ಸಲಹೆ ನೀಡಿದರು.

ಪ್ರಾಣಿ, ಪಕ್ಷಿಗಳನ್ನು ಮಾರಾಟ ಮಾಡುವ ಅಂಗಡಿಗಳ ಮಾಲೀಕರು ಸೂಕ್ತ ಆರೈಕೆ, ಪೋಷಣೆ, ರಕ್ಷಣೆ ಹಾಗೂ ಚಿಕಿತ್ಸೆ ನೀಡದೆ ಸ್ವಚ್ಛತೆ ಕಾಪಾಡದಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ತಕ್ಷಣ ಸಹಾಯವಾಣಿ ಸಂಖ್ಯೆ 82771 00200ಗೆ ಕರೆ ಮಾಡಬಹುದು. ಸಾರ್ವಜನಿಕರು ಅಂಗಡಿಗಳಿಗೆ ಭೇಟಿ ನೀಡಿದಾಗ ಸಾಕುಪ್ರಾಣಿ ಮಾರಾಟಗಾರರ ಪರವಾನಗಿಯನ್ನು ಪರಿಶೀಲಿಸಬೇಕು. ಸಾರ್ವಜನಿಕರು ಸಾಕುಪ್ರಾಣಿಗಳ ಖರೀದಿಯ ನಿಯಮಗಳನ್ನು ಪಾಲಿಸಬೇಕು ಮತ್ತು ನೋಂದಾಯಿತ ತಳಿಗಾರರು ಮತ್ತು ಪೆಟ್ ಶಾಪ್‌ಗಳಿಂದ ಮಾತ್ರ ಖರೀದಿಸಬೇಕು ಎಂದು ಚವ್ಹಾಣ ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+