KSRTC: 2 ಹೊಸ ಬಸ್ ನಿಲ್ದಾಣಗಳಿಗೆ ಶಂಕುಸ್ಥಾಪನೆ: ₹1,23,00,000 ವೆಚ್ಚದ ವಸತಿಗೃಹ ಉದ್ಘಾಟನೆ: ರಾಮಲಿಂಗಾ ರೆಡ್ಡಿ
KSRTC New Busstands: ಇತ್ತೀಚೆಗೆ ಹಿರಿಯೂರಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ನೂತನ ಘಟಕ ಉದ್ಘಾಟನಗೊಂಡ ಬೆನ್ನಲ್ಲೆ ರಾಜ್ಯದಲ್ಲಿ ಮತ್ತೆ ಎರಡು ಹೊಸ ಬಸ್ ನಿಲ್ದಾಣಗಳಿಗೆ ಶಂಕುಸ್ಥಾಪನೆ ನೆರವೇರಿದೆ. ಜೊತೆಗೆ ಇಲ್ಲಿನ ಆವರಣದಲ್ಲಿ ನಿರ್ಮಿಸಲಾದ ವಸತಿ ಗೃಹವನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಉದ್ಘಾಟಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಬಸ್ ನಿಲ್ದಾಣದ ಆವರಣದಲ್ಲಿ ಕಡೂರು ನೂತನ ಬಸ್ ನಿಲ್ದಾಣ ನಿರ್ಮಾಣ ಹಾಗೂ ತರೀಕೆರೆ ಬಸ್ ನಿಲ್ದಾಣದ ಆವರಣದಲ್ಲಿ ತರೀಕೆರೆ ಬಸ್ ನಿಲ್ದಾಣದ ನಿರ್ಮಾಣ ಕಾಮಗಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಭೂಮಿ ಫೂಜೆ ನೆರವೇರಿಸಿದೆ. ಅಲ್ಲದೇ ಕಡೂರು ಬಸ್ ಘಟಕದಲ್ಲಿ ನಿರ್ಮಿಸಿರುವ ₹1,23,00,000 ವೆಚ್ಚದ ಸಿಬ್ಬಂದಿ ವಸತಿಗೃಹಗಳನ್ನು ಲೋಕಾರ್ಪಣೆ ಮಾಡಿದರು.

ಸಾರ್ವಜನಿಕರ ಅನುಕೂಲಕ್ಕಾಗಿ ಅತ್ಯಾಧುನಿಕವಾದ, ಸುಸಜ್ಜಿತವಾದ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಇದರ ಸದುಪಯೋಗಬೇಕು. ಕಡೂರು ಮತ್ತು ತರೀಕೆರೆ ತಾಲ್ಲೂಕು ಕೇಂದ್ರಗಳಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿರುವುದರಿಂದ ಸಮರ್ಪಕ ವ್ಯವಸ್ಥೆ ಇರುವ ಸುಸಜ್ಜಿತ ನಿಲ್ದಾಣಗಳ ಅಗತ್ಯತೆ ಇರುವ ಹಿನ್ನೆಲೆಯಲ್ಲಿ ಹೊಸ ಬಸ್ ನಿಲ್ದಾಣಗಳ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಡೂರು ವಿಧಾನಸಭಾ ಶಾಸಕ ಆನಂದ್ ಕೆ.ಎಸ್ ಹಾಗೂ ತರೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಹೆಚ್.ಶ್ರೀನಿವಾಸ್ ಅವರು ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಸಹಕರಿಸಿ, ಹೆಚ್ಚಿನ ಬಸ್ಸುಗಳನ್ನು ನೀಡುವ ಮೂಲಕ ಗ್ರಾಮೀಣ ಭಾಗಗಳಿಗೆ ಹೆಚ್ಚಿನ ಮಟ್ಟದಲ್ಲಿ ಬಸ್ಸುಗಳನ್ನು ಸಂಚರಿಸಲು ಸಹಕಾರ ನೀಡುವಂತೆ ಸಾರಿಗೆ ಸಚಿವರಲ್ಲಿ ಇದೇ ವೇಳೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹಾಸನ ಲೋಕಸಭಾ ಸದಸ್ಯರಾದ ಶ್ರೇಯಸ್ ಎಂ.ಪಟೇಲ್ ಅವರು ಸಾರಿಗೆ ಸಂಸ್ಥೆ ವತಿಯಿಂದ ಶಕ್ತಿ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ನೂತನ ಸಾರಿಗೆ ಘಟಕವನ್ನು ರಾಮಲಿಂಗಾ ರೆಡ್ಡಿ ಅವರು ಉದ್ಘಾಟಿಸಿದ್ದರು. ಮಾತ್ರವಲ್ಲದೇ ಇಲ್ಲಿಂದ ಬೇರೆ ಬೇರೆ ಮಾರ್ಗಗಳಲ್ಲಿ ಸಂಚಾರ ಮಾಡಬೇಕಿದ್ದ ಹೊಸ KSRTC ಬಸ್‌ಗಳಿಗೂ ಅವರು ಅವರು ಚಾಲನೆ ನೀಡಿದ್ದರು. ಇದರಿಂದ ಮಧ್ಯ ಕರ್ನಾಟಕ, ಚಿತ್ರದುರ್ಗ ಹಾಗು ಇತರ ಜಿಲ್ಲೆಗಳ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲ ಒದಗಿಸಿದೆ. ದೈನಂದಿನ ಸಾರಿಗೆ ಸಂಚಾರ ಈ ಭಾಗದಲ್ಲಿ ಸುಧಾರಿಸಿದೆ ಎನ್ನಬಹುದು.












Click it and Unblock the Notifications