ಕೃಷಿ ಕ್ಷೇತ್ರ ಉಳಿಸಲು ಸರ್ಕಾರ ರೈತರಿಗೆ ನೀರು ಕೊಡಬೇಕು: ಮಾಜಿ ಸಿಎಂ

ಹಾವೇರಿ, ಜನವರಿ 14: ಕರ್ನಾಟಕದಲ್ಲಿ ನೀರಾವರಿ ಹರಿಕಾರ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು, ಸಾವಿರ ಕೆರೆಗಳ ತುಂಬಿಸಿ ಅಭಿವೃದ್ದಿಗೆ ಮಂಜೂರಾತಿ ನೀಡಿದ್ದರು. ಸಚಿವ ಜೆ.ಸಿ.ಮಾಧುಸ್ವಾಮಿ ಕೆರೆ ತುಂಬಿಸಲು ಹೆಚ್ಚು ಆದ್ಯತೆ ನೀಡಿದ್ದರು. ಇದೀಗ ಕೃಷಿ ಕ್ಷೇತ್ರ ಉಳಿಸಲು ಸರ್ಕಾರ ರೈತರಿಗೆ ನೀರು ಕೊಡಬೇಕಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಅವರು ಇಂದು ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರಲ್ಲಿ ನೊಳಂಭ ಸಮಾಜದ ವತಿಯಿಂದ ಜರುಗುತ್ತಿರುವ ಮಹಾಯೋಗಿ ಸಿದ್ದರಾಮೇಶ್ವರ 851 ನೇಯ ಜಯಂತ್ಯುತ್ಸವದಲ್ಲಿ ಮಾತನಾಡಿದರು.

 State Govt Should Give The Water For Farmers of state Who Face the Drought in This year

ಪ್ರಸಕ್ತ ಸಮಾಜದಲ್ಲಿ ಕಾಯಕ ಮರೆತಿದ್ದೇವೆ. ರಾಜ್ಯದಲ್ಲಿ ಬರಗಾಲ ಛಾಯೆ ಹೆಚ್ಚಿದೆ, ಬರುವ ದಿನಗಳಲ್ಲಿ ನೀರಿನ ಉಲ್ಭಣ ಸಾದ್ಯತೆಯಿದೆ. ಕೃಷಿ ಕ್ಷೇತ್ರ ಉಳಿಸಲು ಸರ್ಕಾರ ರೈತರಿಗೆ ನೀರು ಕೊಡಬೇಕು, ರೈತರಿಗೆ ಅಗತ್ಯ ಅನುಕೂಲ ಕಲ್ಪಿಸಬೇಕು ಎಂದರು.

ಶಿಕ್ಷಣಕ್ಕೆ ಒತ್ತು ಕೊಟ್ಟರೆ ಸುಸಂಸ್ಕೃತ ಸಮಾಜ ನಿರ್ಮಾಣ
ಇನ್ನೂ ನೊಳಂಬ ಸಮಾಜದ ಅಭಿವೃದ್ದಿ ನಿಗಮ ಮಾಡಿದ್ದು, ಬಡಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಸಿದ್ದರಾಮೇಶ್ವರರು ವಚನಗಳ ಮೂಲಕ ಸಮಾಜ ಪರಿವರ್ತನೆ ಮಾಡಿದರು. ಸಮಾಜ ಬಾಂಧವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟು ಸುಸಂಸ್ಕೃತ ಸಮಾಜ ನಿರ್ಮಿಸಬೇಕಿದೆ. ಯುವಕರು ಶಿಕ್ಷಣ ಪಡೆದು ಸ್ವಾಭಿಮಾನ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಸಮಾಜ ಸಂಘಟನೆಯಿಂದ ಪ್ರಜಾಪ್ರಭುತ್ವದಲ್ಲಿ ಶಕ್ತಿ ತಿಳಿಯಲಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಸಮಾಜ ಬಾಂಧವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟು ಸುಸಂಸ್ಕೃತ ಸಮಾಜ ನಿರ್ಮಿಸಬೇಕಿದೆ. ಯುವಕರು ಶಿಕ್ಷಣ ಪಡೆದು ಸ್ವಾಭಿಮಾನ ಜೀವನ ನಡೆಸಬೇಕು.

 State Govt Should Give The Water For Farmers of state Who Face the Drought in This year

ಸಿದ್ದರಾಮೇಶ್ವರರು ಸೊಲ್ಲಾಪುರದಿಂದ ಬರುವಾಗ ಊರೂರಲ್ಲಿ ಕೆರೆಕಟ್ಟೆ ಕಟ್ಟಿಸಿದ್ದರು. ಪವಾಡ ಶರಣರಾಗಿ ನಾಡಿನಲ್ಲಿ ವಚನಸಾಹಿತ್ಯ ಮೂಲಕ ಸಮಾಜ ಪರಿವರ್ತನೆ ಮಾಡಿದ್ದರು ಎಂದು ಹೇಳಿದರು.

ಈ ವೇಳೆ ನಂದಿಗುಡಿ ಸಿದ್ದರಾಮೇಶ್ವರ ಶ್ರೀಗಳು,ಪುಷ್ಪಗಿರಿ ಸೋಮೇಶ್ವರ ಶ್ರೀಗಳು,ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ,ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಬಸವರಾಜ ಶಿವಣ್ಣನವರ, ನಂದಿಗುಡಿ ಸಿದ್ದರಾಮೇಶ್ವರ ಶ್ರೀಗಳು, ಪುಷ್ಪಗಿರಿ ಸೋಮೇಶ್ವರ ಶ್ರೀಗಳು, ಸಿರಿಗೇರಿ ಶಿವಮೂರ್ತಿ ಶಿವಾಚಾರ್ಯರು, ಎಂ.ಪಿ.ರೇಣುಕಾಚಾರ್ಯ, ಸುರೇಶಗೌಡ್ರ ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ ಮತ್ತಿತರರು ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+