Liquor Price Hike: ಮದ್ಯದ ದರ ಏರಿಕೆ : ಅಬಕಾರಿ ಸಚಿವರು ಹೇಳಿದ್ದೇನು?
ಬೆಂಗಳೂರು, ಜನವರಿ 02: ಮದ್ಯದ ದರವನ್ನ ನಾವು ಯಾವುದೇ ತೆರಿಗೆಯನ್ನು ಹೆಚ್ಚಳ ಮಾಡಿಲ್ಲ. ಮದ್ಯ ಉತ್ಪಾದಕ ಕಂಪನಿಗಳಿಂದ ಬೆಲೆ ಹೆಚ್ಚಳವಾಗಿದೆ ಎಂದು ಅಬಾಕರಿ ಸಚಿವ ಆರ್.ಬಿ.ತಿಮ್ಮಾಪುರ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮದ್ಯ ಉತ್ಪಾದಕರು ದರ ಹೆಚ್ಚಳ ಮಾಡಿರಬಹುದು. ಆದರೆ, ನಾವಂತೂ ಹೆಚ್ಚಿಸಿಲ್ಲ. ಅಬಕಾರಿ ಶುಲ್ಕ ಹೆಚ್ಚಳ ಮಾಡೋದಾದರೆ ಮೊದಲೇ ಹೇಳುತ್ತೇವೆ. ಇನ್ನು ಬಜೆಟ್ನಲ್ಲೂ ಸದ್ಯ ತೆರಿಗೆ ಹೆಚ್ಚಳದ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಯಾವುದೇ ಟಾರ್ಗೆಟ್ ಕೂಡ ನೀಡಿಲ್ಲ, ಆದರೆ, ಆದಾಯ ಸಂಗ್ರಹದ ಗುರಿ ಇದೆ ಎಂದು ಅಬಕಾರಿ ಸಚಿವರು ಹೇಳಿದರು.

ಯಾವುದೇ ಮದ್ಯದ ದರದಲ್ಲಿ ಏರಿಕೆ ಮಾಡಿಲ್ಲ. ಹೊಸ ವರ್ಷಕ್ಕೆ ಗಣನೀಯ ಏರಿಕೆಯೇನೂ ಆಗಿಲ್ಲ, ಪ್ರತಿ ವರ್ಷದಂತೆ ಮಾರಾಟ ಆಗಿದೆ. ಟ್ಯಾಕ್ಸ್ ಏರಿಸಿದರೆ ಮೊದಲೇ ನಿಮಗೆ ಹೇಳುತ್ತೇವೆ. ಮಾರ್ಕೆಟ್ ಮಾಡುವವರು ಮಾಡಿಕೊಳ್ಳಬಹುದು, ನಮಗೆ ಸರ್ಕಾರಕ್ಕೆ ಟ್ಯಾಕ್ಸ್ ಮಾತ್ರ ಕಟ್ಟಬೇಕು ಅಷ್ಟೇ ಅಲ್ವೇ? ಟ್ಯಾಕ್ಸ್ ನಲ್ಲಿ ಏರಿಕೆ ಮಾಡಿಲ್ಲ, ಹೇಗಿದೆಯೇ ಹಾಗೇ ಇದೆ. ಒಳ್ಳೆಯ ಡ್ರಿಂಕ್ಸ್ ಕೊಡಲಿಕ್ಕೆ ಪ್ರಯತ್ನ ಮಾಡುತ್ತೇವೆ.
ಈ ಹಿಂದೆ 17% ರಷ್ಟು ಎಲ್ಲಾ ಮಾದರಿಯ ಮಧ್ಯದ ಮೇಲಿನ ದರ ಏರಿಕೆ ಮಾಡಲಾಗಿತ್ತು. ಈಗ ಮತ್ತೊಮ್ಮೆ ರಾಜ್ಯಾದ್ಯಂತ ಬಡವರು ಹೆಚ್ಚಾಗಿ ಕುಡಿಯುವ ಮೂರು ಹಾಟ್ ಫೇವರೆಟ್ ಬ್ರ್ಯಾಂಡ್ಗಳ ದರ ಹೆಚ್ಚಳ ಮಾಡಲಾಗಿದೆ. ಜೊತೆಗೆ ಮದ್ಯ ಉತ್ವಾದಕ ಕಂಪನಿಗಳು ಕ್ವಾಟರ್ಗೆ 20 ರಿಂದ ಮೂವತ್ತು ರೂಪಾಯಿ ಏರಿಸಿವೆ ಎನ್ನಲಾಗಿತ್ತು ಎಂಬುದಕ್ಕೆ ಅಬಕಾರಿ ಸಚಿವ ಆರ್ಬಿ ತಿಮ್ಮಾಪುರ ಸ್ಪಷ್ಟನೆ ನೀಡಿದರು.
ಜನವರಿ 22ರಂದು ರಾಮಲಲ್ಲಾ ಪ್ರತಿಷ್ಠಾಪನೆ ವಿಚಾರವಾಗಿ ಮಾತನಾಡಿ, ಧರ್ಮ ದೇವರು ಯಾರಪ್ಪನ ಮನೆ ಆಸ್ತಿಯೂ ಆಗಬಾರದು. ಧರ್ಮ ದೇವರು ನಮಗೆಲ್ಲರಿಗೂ ಇರಬೇಕು ವಿನಹಃ ನಂದೇ ಧರ್ಮ, ನಾನೇ ಸ್ಥಾಪನೆ ಮಾಡುತ್ತೇನೆ, ನಾನೇ ದೇವಸ್ಥಾನ ಕಟ್ಟಿಬಿಟ್ಟೆ ಅನ್ನುವ ಆಭಾಸತನದಿಂದ ದೇಶ ದಿವಾಳಿ ಆಗುತ್ತದೆ. ಇದು ಆಗಬಾರದು. ಎಲ್ಲರ ಧರ್ಮ ಆಗಬೇಕು, ಎಲ್ಲರ ರಾಮ ಆಗಬೇಕು. ರಾಮನ ಗುಡಿ ಕಟ್ಟಿದರೆ ಸಾಲದು, ರಾಮ ರಾಜ್ಯ ಆಗಬೇಕು ಎಂದು ಹೇಳಿದರು.
ಹಿಂದೂ ಕರಸೇವಕರ ಅರೆಸ್ಟ್ ವಿಚಾರವಾಗಿ ಮಾತನಾಡಿ, ಅದು ಕಾನೂನಿನ ವಿಚಾರ, ಕಾನೂನಿನ ಎದುರುಗಡೆ ನಾನೂ ನೀನೂ ಇವನು ಯಾರೂ ದೊಡ್ಡವರಲ್ಲ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ವಿನಃ ಇವರು ಅವರು ಎನ್ನೋದು ಬರುವುದಿಲ್ಲ. ಕಾನೂನು ಅಡಿಯಲ್ಲಿ ಮಂತ್ರಿಯೂ ಬರುವುದಿಲ್ಲ, ಪ್ರಧಾನ ಮಂತ್ರಿಯೂ ಬರುವುದಿಲ್ಲ. ಕರಸೇವಕನೂ ಇಲ್ಲ, ರಾಮನ ಭಕ್ತನು ಇಲ್ಲ, ಅಲ್ಲಾ ನ ಭಕ್ತನೂ ಇಲ್ಲ. ಕಾನೂನು ಅಡಿಯಲ್ಲಿ ಎಲ್ಲರೂ ಒಂದೇ, ಕಾನೂನು ಪ್ರಕಾರ ಕ್ರಮ ಆಗುತ್ತದೆ ಅಷ್ಟೇ
ಬಿಜೆಪಿಯವರೆಲ್ಲ ಧರ್ಮ ದೇವರನ್ನು ರಾಜಕೀಯಕ್ಕೆ ಉಪಯೋಗಿಸಿಕೊಳ್ಳುತ್ತಲೇ ಬಂದಿದ್ದಾರೆ. ಇದನ್ನು ಬಿಟ್ಟು ಅವರು ಬೇರೇನೂ ಮಾಡುವುದಿಲ್ಲ, ಅವರು ಅಭಿವೃದ್ಧಿ ಬಗ್ಗೆ ಮಾತಾಡಿದ್ದಾರಾ? ಬಿಜೆಪಿಯವರಿಗೆ ರಾಮ ಗೊತ್ತು ಅಷ್ಟೇ, ರಾಮರಾಜ್ಯ ಗೊತ್ತಿಲ್ಲ ಅವರಿಗೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.












Click it and Unblock the Notifications