ಖಾಸಗಿ ವಾಹನ ಚಾಲಕರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ
ಬೆಂಗಳೂರು, ಡಿಸೆಂಬರ್ 21: ಕರ್ನಾಟಕದ ಚಾಲಕ ಸಮೂಹದ ಹಲವು ದಶಕಗಳ ಕನಸು ನನಸಾಗಿದೆ. ಖಾಸಗಿ ಚಾಲಕರಿಗಾಗಿ ನಿಗಮ ಮಂಡಳಿ ಬೇಕು ಎನ್ನುವುದು ಆ ಮಂಡಳಿಯಿಂದ ಇದೀಗ ದೇಶದಲ್ಲೇ ಯಾವುದೇ ರಾಜ್ಯದ ಚಾಲಕರಿಗೆ ನೀಡದ ಸೌಲಭ್ಯ ಮತ್ತು ಸವಲತ್ತುಗಳನ್ನು ನೀಡಲು ಮುಂದಾಗಿದೆ.
ಹೌದು, ಹಲವು ದಶಕಗಳಿಂದ ಖಾಸಗಿ ವಾಹನ ಚಾಲಕರ ಕನಸು ನನಸಾಗಿದೆ. ಖಾಸಗಿ ಚಾಲಕರಿಗಾಗಿ ಅಭಿವೃದ್ಧಿ ನಿಗಮ ಮಂಡಳಿ ಬೇಕು ಎನ್ನುವ ಬೇಡಿಕೆ ಈಡೇರಿದೆ. ಖಾಸಗಿ ಚಾಲಕರ ಅಭಿವೃದ್ಧಿ ನಿಗಮ ಮಂಡಳಿಯ ಮೂಲಕ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯ ಅಡಿಯಲ್ಲಿ ಚಾಲಕರಿಗೆ ಆರೋಗ್ಯ ಕಾರ್ಡ್ ನೀಡಲು ತಿರ್ಮಾನ ಮಾಡಲಾಗಿದೆ.

ಖಾಸಗಿ ಚಾಲಕರಿಗಾಗಿ ಅಭಿವೃದ್ಧಿ ನಿಗಮ ಮಂಡಳಿ ಬೇಕು ಎನ್ನುವ ಬೇಡಿಕೆ ಈಡೇರಿದ್ದು, ದೇಶದಲ್ಲಿ ಇದೆ ಮೊದಲ ಬಾರಿಗೆ ಇಂತಹ ಸೌಲಭ್ಯವನ್ನು ರಾಜ್ಯ ಸರ್ಕಾರ ನೀಡಲು ಮುಂದಾಗಿದೆ. ಈ ಹಿಂದೆ ಚಾಲಕರು ಆಕ್ಸಿಡೆಂಟ್ ನಲ್ಲಿ ಮೃತಪಟ್ಟರೇ ಅಂತಹವರ ಕುಟುಂಬಕ್ಕೆ ಐದು ಲಕ್ಷ ರುಪಾಯಿ ಪರಿಹಾರ ನೀಡಲಾಗಿತ್ತು, ಇದೀಗ ಸರ್ಕಾರ ಚಾಲಕ ಅಭಿವೃದ್ಧಿ ನಿಗಮ ಮಂಡಳಿಯಲ್ಲಿ ನೋಂದಾಯಿತ ಚಾಲಕ ಆಕ್ಸಿಡೆಂಟ್ ಮತ್ತು ಸಹಜವಾಗಿ ಮೃತಪಟ್ಟರೇ ಅಂತಹ ಚಾಲಕರಿಗೆ ಐದು ಲಕ್ಷ ರುಪಾಯಿ ಪರಿಹಾರ ನೀಡಲಾಗುತ್ತದೆ.
ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯ ಅಡಿಯಲ್ಲಿ ಚಾಲಕರಿಗೆ ಆರೋಗ್ಯ ಕಾರ್ಡ್ ನೀಡಲು ತಿರ್ಮಾನ ಮಾಡಲಾಗಿದ್ದು, ಕರ್ನಾಟಕದ ಯಾವುದೇ ಖಾಸಗಿ ಆಸ್ಪತ್ರೆಯಲ್ಲು ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಚಾಲಕರಿಗೆ ಏನೆಲ್ಲ ಸೌಲಭ್ಯಗಳು ಸಿಗಲಿದೆ?
ಇನ್ನೂ ಅಧಿವೇಶನದಲ್ಲಿ ಪಾಸ್ ಆದ ಬಿಲ್ ನಲ್ಲಿ ಚಾಲಕರಿ ಹಲವು ಸೌಲಭ್ಯಗಳು ಸಿಗಲಿದೆ. ನೋಂದಾಯಿತ ಸದಸ್ಯರು ರಾಜ್ಯದ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು 5 ಲಕ್ಷ ರುಪಾಯಿವರೆಗೆ ಕ್ಯಾಶ್ಲೆಸ್ ವ್ಯವಸ್ಥೆ. 50 ರಿಂದ 1 ಲಕ್ಷದವರೆಗೆ ಯಾವುದೇ ಕಾಯಿಲೆಗೆ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಪಡೆದುಕೊಂಡು ಬಿಲ್ ಪಾವತಿ ಮಾಡಿದ್ರೆ, ಆ ಬಿಲ್ ನಲ್ಲಿ ಒಂದು ಲಕ್ಷ ರುಪಾಯಿವರೆಗೆ ಹಣವನ್ನು ಮಂಡಳಿಗೆ ಬಿಲ್ ನೀಡಿ ಮರುಪಾವತಿ ಮಾಡಿಕೊಳ್ಳಬಹುದಾಗಿದೆ.
ಮಹಿಳಾ ಚಾಲಕಿಯರಿಗೆ ಯಾವ ಸೌಲಭ್ಯ ಸಿಗಲಿದೆ?
ಮಹಿಳಾ ಚಾಲಕಿಯರಿಗೆ ಎರಡು ಮಕ್ಕಳಿಗೆ ಹೆರಿಗೆ ಭತ್ಯೆಯ ರೂಪದಲ್ಲಿ ತಲಾ ಹತ್ತು ಸಾವಿರ ರುಪಾಯಿ ನೀಡಲಾಗುತ್ತದೆ. ನೋಂದಾಯಿಸಲ್ಪಟ್ಟ ಚಾಲಕ ಆಕ್ಸಿಡೆಂಟ್ ನಲ್ಲಿ ಮೃತಪಟ್ಟರೇ ಅಂತಹ ಚಾಲಕನ ಮಕ್ಕಳಿಗೆ 1 ರಿಂದ ಡಬಲ್ ಡಿಗ್ರಿವರೆಗೆ ಹತ್ತು ಸಾವಿರದಿಂದ 25 ಸಾವಿರದವರೆಗೆ ಸಹಾಯಧನ ನೀಡಲಾಗುತ್ತದೆ. ಆಟೋ ಚಾಲಕರು, ಕ್ಯಾಬ್ ಡ್ರೈವರ್, ಖಾಸಗಿ ಬಸ್ ಚಾಲಕರು, ಸ್ಕೂಲ್ ಬಸ್ ಚಾಲಕರು, ಲಾರಿ ಚಾಲಕರು, ಖಾಸಗಿ ಬಸ್ ಕಂಡಕ್ಟರ್, ಕ್ಲಿನರ್, ಮೆಕಾನಿಕ್, ವಾಹನಗಳ ಪೇಂಟರ್, ವೆಲ್ಡರ್ಸ್, ಬಾಡಿ ಬಿಲ್ಡರ್ಸ್ ಗಳು ಈ ಸೌಲಭ್ಯಗಳನ್ನ ಪಡೆದುಕೊಳ್ಳಬಹುದಾಗಿದೆ.
ಈ ಸೌಲಭ್ಯ ಪಡೆಯಲು ಚಾಲಕ ಅಭಿವೃದ್ಧಿ ನಿಗಮ ಮಂಡಳಿಯಲ್ಲಿ ನೋಂದಾಯಿಸಿಕೊಂಡಿರಬೇಕು ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮ ಅವರು ತಿಳಿಸಿದ್ದು, ಚಾಲಕರ ಹಲವು ದಶಕಗಳ ಕನಸನ್ನು ನನಸು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.












Click it and Unblock the Notifications