ರಾಹುಲ್ ಹೇಳಿಕೆಗೆ ರೇಣುಕಾ ಉತ್ತರ, ಇನ್ನಷ್ಟು
ದಾವಣಗೆರೆ, ಅ.25: ತಮ್ಮ ಅಜ್ಜಿ ಇಂದಿರಾಗಾಂಧಿ, ತಂದೆ ರಾಜೀವ್‌ಗಾಂಧಿಯಂತೆ ತಮ್ಮನ್ನ ಹತ್ಯೆ ಮಾಡಿದರೂ ಹೆದರುವುದಿಲ್ಲವೆನ್ನುವ ಮೂಲಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಜನರ ಅನುಕಂಪ ಗಳಿಸಲು ವ್ಯರ್ಥ ಸಾಹಸ ನಡೆಸಿದ್ದಾರೆ ಎಂದು ಮಾಜಿ ಸಚಿವ, ಕೆಜೆಪಿ ಮುಖಂಡ ಎಂ.ಪಿ. ರೇಣುಕಾಚಾರ್ಯ ಟೀಕಿಸಿದ್ದಾರೆ.
ರಾಹುಲ್ ಗಾಂಧಿ ತಮ್ಮ ಅಜ್ಜಿ ಇಂದಿರಾಗಾಂಧಿ, ತಂದೆ ರಾಜೀವ್‌ಗಾಂಧಿ ಸಾವಿನ ಸಂಗತಿಯನ್ನು ಹೇಳಿಕೊಳ್ಳುವ ಮೂಲಕ ರಾಜಸ್ಥಾನದ ವಿಧಾನಸಭೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ಅನುಕಂಪದ ಮತಗಳನ್ನು ಪಡೆಯಲು ಯತ್ನಿಸುತ್ತಿದ್ದು, ಅಂತಹ ಪ್ರಯತ್ನ ಫಲ ನೀಡದು ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಆಗಲಿ, ಯುಪಿಎ ಸರ್ಕಾರವಾಗಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಕಲ್ಲಿದ್ದಲಿನ ಮಸಿ ಸ್ವತಃ ಪ್ರಧಾನಿ ಮುಖಕ್ಕೂ ಬಳಿದಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಲಕ್ಷಾಂತರ ಕೋಟಿ ಹಣದ ಸರಣಿ ಹಗರಣ, ಭ್ರಷ್ಟಾಚಾರದಿಂದ ಜನತೆಯೂ ಬೇಸತ್ತಿದ್ದಾರೆ.
ಯುಪಿಎ ಸರ್ವನಾಶ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ, ಯುಪಿಎ ಸರ್ಕಾರ ಸರ್ವನಾಶವಾಗುವುದು ನಿಶ್ಚಿತ. ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ್ ಗೆ ಬೆಂಬಲಿಸಿ, ಗೆಲ್ಲಿಸಲು ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ ಎಂದು ರೇಣುಕಾಚಾರ್ಯ ಸುಳಿವು ನೀಡಿದರು.

ಗದಗ ಜಿಲ್ಲೆಯಿಂದ
ಗದಗ: ಕನ್ನಡ ಜಾಗೃತಿ ವೇದಿಕೆ 20 ವರ್ಷ ತುಂಬಿದ ಅಂಗವಾಗಿ ಡಿ. 1ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವ ಕನ್ನಡಿಗರ ಮಹಾ ಸಮ್ಮೇಳನ ನಡೆಸಲಾಗುವುದು ಎಂದು ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ ಹೇಳಿದ್ದಾರೆ.
ಕನ್ನಡ ಭಾಷೆಗೆ ಅಭಿಮಾನವಿರಲಿ, ದುರಭಿಮಾನ ದೂರಾಗಲಿ, ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಕನ್ನಡ ಭಾಷೆಯಲ್ಲಿಯೇ ವ್ಯವಹರಿಸಬೇಕು ಎಂದರು

ಹರಿಹರ
ಕೊಟ್ಟೂರು-ಹರಿಹರ ರೈಲು ಮಾರ್ಗದ ಕಾಮಗಾರಿಕ್ಕೆ ವಿಘ್ನ ಎದುರಾಗಿದೆ. ದಾವಣಗೆರೆ ಜಿಲ್ಲೆ ಹರಿಹರದ ಬಳಿ ಕೇವಲ 10 ಕಿ.ಮೀ. ಮಾರ್ಗದ ಕಾಮಗಾರಿಯಲ್ಲಿ ಆ ಭಾಗದ ರೈತರು ಕಾಮಗಾರಿಗೆ ವಶಪಡಿಸಿಕೊಂಡ ತಮ್ಮ ಜಮೀನಿಗೆ ಹೆಚ್ಚಿನ ಪರಿಹಾರ ನೀಡಲಾಗಿಲ್ಲ.
ಹೆಚ್ಚಿನ ಪರಿಹಾರಧನ ಘೋಷಣೆಯಾಗದ ಹೊರತು ಅಳಿದುಳಿದ ಯಾವುದೇ ಕಾಮಗಾರಿಯನ್ನು ಮುಂದುವರೆಸಲು ಖಂಡಿತ ಬಿಡುವುದಿಲ್ಲ ಎಂದು ರೈತರು ಹಠ ಹಿಡಿದಿದ್ದಾರೆ.65 ಕಿ.ಮೀ. ಉದ್ದದ ಈ ಕಾಮಗಾರಿ ವೆಚ್ಚ 1996ರಲ್ಲಿ ಕೇವಲ ರು. 67 ಕೋಟಿಗೆ ನಿಗದಿಯಾಗಿತ್ತು. ಕಾಮಗಾರಿ ವಿಳಂಬದಿಂದಾಗಿ ಈ ಯೋಜನಾ ವೆಚ್ಚ ಈಗ ಬರೋಬ್ಬರಿ ರು. 1000 ಕೋಟಿಗಿಂತಲೂ ಹೆಚ್ಚಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ
ಶಿರಾಡಿಘಾಟ್ ರಸ್ತೆ ಉತ್ತಮಗೊಳಿಸಲು ಸುರಂಗ ಮಾರ್ಗವೊಂದೇ ಶಾಶ್ವತ ಪರಿಹಾರ ಎಂದು ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಹೇಳಿದ್ದಾರೆ.
ಶಿರಾಡಿಘಾಟ್ ನಲ್ಲಿ 18.5 ಕಿ.ಮೀ. ಸುರಂಗ ಮಾರ್ಗ ನಿರ್ಮಾಣದ ಕುರಿತು ಸಾಧಕ-ಬಾಧಕಗಳನ್ನು ಪರಿಶೀಲಿಸಿದ್ದು, ಸುರಂಗ ಕೊರೆದು ಎರಡು ಪಥಗಳ ರಸ್ತೆ ನಿರ್ಮಿಸುವುದರಿಂದ ಸುಮಾರು 10 ಕಿ.ಮೀ.ನಷ್ಟು ಉಳಿತಾಯವಾಗಲಿದೆ.
ದೇಶದಲ್ಲಿ ಎಂಟು ಸಾವಿರ ಕಿ.ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಸಿದ್ಧವಿದ್ದರೂ ರಾಜ್ಯ ಸರ್ಕಾರಗಳು ಅಗತ್ಯ ಭೂಮಿ ಸ್ವಾಧೀನ ಪಡಿಸಿಕೊಡುತ್ತಿಲ್ಲ ಎಂದು ಕರ್ನಾಟಕ ಸರ್ಕಾರಕ್ಕೂ ಟಾಂಗ್ ನೀಡಿದರು.

ಮೈಸೂರು
ತಿ.ನರಸೀಪುರ ತಾಲೂಕಿನ ಮುಡುಕುತೊರೆ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿರುವ ಶ್ರೀ ಭ್ರಮರಾಂಭ ದೇಗುಲದಲ್ಲಿ ಗೋಲುಕ ಒಡೆದಿರುವ ಕಳ್ಳರು, ನೋಟುಗಳನ್ನು ಕಳವು ಮಾಡಿದ್ದಾರೆ.
ಶ್ರೀ ಭ್ರಮರಾಂಭ ದೇವಸ್ಥಾನದಲ್ಲಿ ದಕ್ಷಿಣಾಭಿಮುಖವಾಗಿರುವ ಕಬ್ಬಿ ಣ ಹಾಗೂ ಮರದ ಬಾಗಿಲಿನ ಬೀಗಗಳನ್ನು ಒಡೆದು ತಾಳವನ್ನು ಮೀಟಿ, ಒಳ ಪ್ರವೇಶಿಸಿದ್ದಾರೆ. ಸುಮಾರು 4 ರಿಂದ 5 ಮಂದಿ ಈ ಕಳ್ಳತನದಲ್ಲಿ ಭಾಗಿಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.











Click it and Unblock the Notifications