ಕ್ರೈಂ: ಶಬರಿಮಲೆ ಯಾತ್ರಾರ್ಥಿ ವಿದ್ಯಾರ್ಥಿಗಳ ದುರ್ಮರಣ

ಬೆಂಗಳೂರು, ನ.4: ತಮಿಳುನಾಡಿನ ದಿಂಡಿಗಲ್ ಬಳಿ ತಮಿಳುನಾಡು ಸರ್ಕಾರಿ ಬಸ್ ಗೆ ಟೆಂಪೊ ಟ್ರಾವಲರ್ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರು ಮೂಲದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿರುವ ದಾರುಣ ಘಟನೆ ಸೋಮವಾರ ಮುಂಜಾನೆ ನಡೆದಿದೆ.

ಬೆಂಗಳೂರು ಮೂಲದ ವಿದ್ಯಾರ್ಥಿಗಳಾದ ಭರತ್(24), ಲೋಕೇಶ್(22) ಹಾಗೂ ವಿನಯ್(22) ಎಂಬುವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಇವರ ಮೃತದೇಹಗಳನ್ನು ದಿಂಡಿಗಲ್ ನ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಟೆಂಪೊ ಟ್ರಾವಲರ್ ನ ಇತರ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಪ್ರಥಮ ಚಿಕಿತ್ಸೆಗಾಗಿ ದಿಂಡಿಗಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಗುರುವಾರ ಬೆಂಗಳೂರಿನಿಂದ ಶಬರಿಮಲೆಗೆ 13 ವಿದ್ಯಾರ್ಥಿಗಳ ತಂಡ ತೆರಳಿತ್ತು. ಶಬರಿಮಲೆ ದರ್ಶನವನ್ನು ಮುಗಿಸಿಕೊಂಡು ಪಳನಿಗೆ ತೆರಳುತ್ತಿದ್ದರು. ಭಾನುವಾರ ಮಧ್ಯರಾತ್ರಿ ನಂತರ ಸುಮಾರು 1.30ರ ಸಮಯದಲ್ಲಿ ತಮಿಳುನಾಡು ಸಾರಿಗೆ ಬಸ್ಸಿಗೆ ಟೆಂಪೊ ಟ್ರಾವಲರ್ ಡಿಕ್ಕಿ ಹೊಡೆದಿದೆ. ಈ ಹದಿಮೂರು ವಿದ್ಯಾರ್ಥಿಗಳು ಬೆಂಗಳೂರಿನ ಗಾಯತ್ರಿನಗರದಲ್ಲಿರುವ ಮರಿಯಪ್ಪ ಕಾಲೇಜಿನಲ್ಲಿ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿದ್ದರು. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ಹುಂಡಿ ಹೊಡೆದು ಕಳ್ಳತನ

ಹುಂಡಿ ಹೊಡೆದು ಕಳ್ಳತನ

ಶ್ರೀನಿವಾಸಪುರ ತಾಲ್ಲೂಕು, ಗಾಂಡ್ಲಹಳ್ಳಿ ಗ್ರಾಮದ ಶ್ರೀಚೌಡೇಶ್ವರಿ ದೇವಾಲಯದ ಬಾಗಿಲು ಮುರಿದು ಒಳ ಪ್ರವೇಶಿಸಿ, ದೇವಾಲಯದ ಹುಂಡಿ ಹಣ ಮತ್ತು ಚೌಡೇಶ್ವರಿ ದೇವಿಯ 2 ಗ್ರಾಂ ತೂಕದ ಮಾಂಗಲ್ಯ ಮತ್ತು ಚಿನ್ನದ ಕಾಸನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಭಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.

ಜೀವ ಬೆದರಿಕೆ ಪ್ರಕರಣ

ಜೀವ ಬೆದರಿಕೆ ಪ್ರಕರಣ

ಉಡುಪಿ: ನ.3 ರಂದು 23:00 ಗಂಟೆಗೆ ಪಿರ್ಯಾದಿದಾರರಾದ ಜಲೇಶ್ ಶೆಟ್ಟಿ (32) ತಂದೆ ಸಂಜೀವ ಶೆಟ್ಟಿ , ಶೆಟ್ಟಿ ಕಾಂಪೌಂಡ್,ಅಲೆವೂರ್, ಉಡುಪಿ ಎಂಬವರು ಕೃಷ್ಣಮಠದ ಪಾರ್ಕಿಂಗ್ ಸ್ಥಳದಲ್ಲಿರುವಾಗ ಆರೋಪಿ ಕಿರಣ್ ಸೇರಿಗಾರ್ ತಂದೆ: ನಾರಾಯಣ ಸೇರಿಗಾರ್ ಎಂಬಾತನು ತನ್ನ ಸಹಚರನೊಂದಿಗೆ ಬೈಕಿನಲ್ಲಿ ಬಂದು ತನ್ನ ಅಂಗಿಯ ಕಾಲರ್ ಹಿಡಿದು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ನನಗೆ ಭೂಗತ ಜಗತ್ತಿನ ರೌಡಿಗಳೊಂದಿಗೆ ಸಂಪರ್ಕ ಇದ್ದು ಫುಲ್ ಟೈಮ್ ರೌಡಿಸಂಗೆ ಇಳಿದಿದ್ದಾಗಿದೆ, ನಿನ್ನನ್ನು ಜೀವಂತ ಬಿಡುವುದಿಲ್ಲ, ಎಂದು ಕೊಲೆ ಬೆದರಿಕೆ ಹಾಕಿ ಎದೆಗೆ ತುಳಿದು ಜಖಂಗೊಳಿಸಿರುತ್ತಾರೆ.

ಈ ಬಗ್ಗೆ ಜಲೇಶ್ ಶೆಟ್ಟಿರವರು ಆರೋಪಿ ವಿರುದ್ಧ ನೀಡಿದ ದೂರಿನಂತೆ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 434/13 ಕಲಂ 341,323,504,506,ಜೂತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಶಿವಮೊಗ್ಗ ಜಿಲ್ಲೆ ಕ್ರೈಂ

ಶಿವಮೊಗ್ಗ ಜಿಲ್ಲೆ ಕ್ರೈಂ

ಗ್ರಾಮಾಂತರ ಠಾಣೆ ಭದ್ರಾವತಿ: ಬಸಪ್ಪ ಬಿನ್ ಬರ್ಮಪ್ಪ 80 ವರ್ಷ ವಾಸ ಸೀತಾರಾಮಪುರ ಗ್ರಾಮ ರವರು ತಮ್ಮ ಜಮೀನಿಗೆ ಬಿದ್ದ ಬೆಂಕಿಯನ್ನು ಅರಿಸಲು ಹೋಗಿ ಬೆಂಕಿ ತಗುಲಿ, ಚಿಕಿತ್ಸೆ ಫಲಾಕಾರಿಯಾಗದೆ ವೆನ್ ಲಾಕ್ ಆಸ್ಪತ್ರೆ ಮಂಗಳೂರಿನಲ್ಲಿ ಮೃತ ಪಟ್ಟಿರುತ್ತಾರೆ.

ಮಾಳೂರು ಠಾಣೆ : ಆತ್ಮ ಹತ್ಯೆ ಪ್ರಕರಣ

ಮುರುಗೇಶ್ ಬಿನ್ ಕನ್ನಪ್ಪ 40 ವರ್ಷ ವಾಸ ಸಿಂಗನ ಬಿದರೆ ಇವರಿಗೆ ಅತಿಯಾದ ಕುಡಿತದ ಚಟವಿದ್ದು, ಕೆಲಸಕ್ಕ ಹೋಗಿ ಬರುವುದಾಗಿ ಹೇಳಿ ಹೋದವರು ಕಾಡಿನಲ್ಲಿ ಮರವೊಂದಕ್ಕೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾರೆ.

ಕಳ್ಳಂಬೆಳ್ಳ ಪೊಲೀಸ್ ಠಾಣಾ

ಕಳ್ಳಂಬೆಳ್ಳ ಪೊಲೀಸ್ ಠಾಣಾ

ಮೊ.ನಂ. 185/2013 ಕಲಂ 324, 504, 498(ಎ) ರೆ/ವಿ 34 ಐ.ಪಿ.ಸಿ.
ಪಿರ್ಯಾದಿ ನೇತ್ರಾವತಿ ನೀಡಿದ ದೂರು: ನನ್ನನ್ನು ಕೆಂಚಗಾನಹಳ್ಳಿ ವಾಸಿ ಕೆ.ಟಿ.ರಂಗನಾಥ್ ಗೆ ಕೊಟ್ಟು ಮದುವೆ ಮಾಡಿದ್ದು ಮದುವೆ ಕಾಲದಲ್ಲಿ 32 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ. ನನ್ನ ಗಂಡನಿಗೆ 50000 ರೂ ನಗದು ಹಣ., 10 ಗ್ರಾಂ ಚಿನ್ನದ ಉಂಗುರ. 15 ಗ್ರಾಂ ತೂಕದ ಚಿನ್ನದ ಕೊರಳ ಚೈನನ್ನು ಕೊಟ್ಟಿದ್ದರು. ನನಗೆ 4 ವರ್ಷದ ಒಂದು ಗಂಡು ಇರುತ್ತೆ. ಮದುವೆಯಾಗಿ 2 ವರ್ಷಗಳ ಕಾಲ ನನ್ನ ಗಂಡ ನನ್ನೊಂದಿಗೆ ಚೆನ್ನಾಗಿದ್ದರು. ಇತ್ತೀಚೆಗೆ ನಮ್ಮ ಮಾವ ತಿಮ್ಮರಾಯಪ್ಪ. ಅತ್ತೆ ಗಂಗಮ್ಮ ನನ್ನ ಗಂಡನಿಗೆ ಬೇರೊಂದು ಮದುವೆ ಮಾಡುವ ಉದ್ದೇಶದಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ನನ್ನ ಗಂಡ ಅವಾಚ್ಯ ಶಬ್ದಗಳಿಂದ ಬೈದು ಮಚ್ಚಿನಿಂದ ನನ್ನ ಎಡಕಾಲು ಮಂಡಿಯ ಕೆಳಗಡೆ ಹೊಡೆದು ರಕ್ತ ಗಾಯ ಮಾಡಿರುತ್ತಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+