ಕ್ರೈಂ: ಸರ್ಕಾರಿ ಶಾಲಾ ಶಿಕ್ಷಕಿ ಬರ್ಬರ ಹತ್ಯೆ, ಇನ್ನಷ್ಟು
ಬೆಂಗಳೂರು, ನ.11: ತುಮಕೂರಿನ ಹನುಮಂತಪುರದಲ್ಲಿ ಶಾಲಾ ಶಿಕ್ಷಕಿಯೊಬ್ಬರನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ. ಸೋಮವಾರ ಮಧ್ಯಾಹ್ನ ಶಿಕ್ಷಕಿ ಕೊಲೆಯಾಗಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ.
54 ವರ್ಷ ವಯಸ್ಸಿನ ಅನ್ನಪೂರ್ಣಮ್ಮ ಸ್ಥಳೀಯ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದಾರೆ. ಸೋಮವಾರ ಬೆಳಗ್ಗೆ ಶಾಲೆಗೆ ಹೋಗಲು ತಯಾರಾಗುತ್ತಿದ್ದವರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಅನ್ನಪೂರ್ಣಮ್ಮ ಅವರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಆದರೆ, ದುಷ್ಕರ್ಮಿ ಆಕೆಯ ಕತ್ತು ಕೊಯ್ದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಅನ್ನಪೂರ್ಣಮ್ಮ ಅವರ ಮೈಮೇಲೆ ಗಾಯಗಳಾಗಿದ್ದು, ಕುತ್ತಿಗೆ ಕುಯ್ಯಲಾಗಿದೆ. ಹತ್ಯೆ ಮಾಡಿದವರ ಬಗ್ಗೆ ಸುಳಿವು ಇನ್ನೂ ಸಿಕ್ಕಿಲ್ಲ. ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಎಂಬುದು ಇನ್ನೂ ತಿಳಿಯಬೇಕಿದೆ. ಎನ್ ಇಪಿಎಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಉಳಿದಂತೆ, ದೊಡ್ದಬಳ್ಳಾಪುರ: ಕುಡಿತದ ಚಟಕ್ಕೆ ಬಿದ್ದ ಒಂದು ಕುಟುಂಬವೊಂದು ಮನೆಯ ಯಜಮಾನನನ್ನೇ ಕಳೆದುಕೊಂಡ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಗೂಳ್ಯ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚಿಕ್ಕ ಬಂಗ್ಯಪ್ಪ (49) ಹತ್ಯೆಯಾದವ.
ಈತನ ಮಗ ಗಂಗಾಧರ್(30) ಮತ್ತು ಬಂಗ್ಯಪ್ಪನ ತಮ್ಮನ ಮಗಳು ಶಶಿಕಲಾ(30)ಕುಡಿದ ಅಮಲಿನಲ್ಲಿ ತಂದೆಯನ್ನೇ ಕೊಂದ ಆರೋಪ ಎದುರಿಸುತ್ತಿದ್ದಾರೆ. ಗ್ರಾಮದ ಹೊರ ವಲಯದಲ್ಲಿ ತೆಂಗಿನ ಮರವೊಂದರ ಬುಡದಲ್ಲಿ ಕುತ್ತಿಗೆಗೆ ಹಗ್ಗ ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಶಿವಮೊಗ್ಗ, ಉಡುಪಿ, ರಾಯಚೂರುಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ರಾಯಚೂರು
ಮಾನ್ವಿ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹಳ್ಳಿ ಹೊಸೂರು ಗ್ರಾಮದಲ್ಲಿ ವಿಕಲಾಂಗ ಯುವತಿಯ ಮೇಲೆ ಯುವಕನೋರ್ವ ಅತ್ಯಾಚಾರ ಎಸಗಿರುವ ಬಗ್ಗೆ ವರದಿಯಾಗಿದೆ.
ಆರೋಪಿಯನ್ನು ರಂಜಾನ್ ಎಂದು ಗುರುತಿಸಲಾಗಿದೆ. ಯುವತಿಯು ಬಹಿರ್ದೆಸೆ ತೆರಳಿದ್ದಾಗ ಆರೋಪಿಯು ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಕೊಂಡಿದ್ದ ಸಿರವಾರ ಠಾಣಾ ಪೊಲೀಸರು, ಆರೋಪಿ ರಂಜಾನ್ ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.

ಕೊಡಗು ಜಿಲ್ಲೆ
ಮಡಿಕೇರಿ: ಬೈಲುಕುಪ್ಪೆ ವ್ಯಾಪ್ತಿಯ ಮರೂರು ಗ್ರಾಮದಿಂದ 11 ದಿನಗಳಿಂದ ನಾಪತ್ತೆಯಾಗಿದ್ದ ಸಂತೋಷ್ (23) ಎಂಬ ಯುವಕನ ಮೃತದೇಹ ಕಾವೇರಿ ನದಿತೀರದಲ್ಲಿ ಭಾನುವಾರ ಪತ್ತೆಯಾಗಿದೆ.
ಪ್ರೀತಿಸಿದ ತಪ್ಪಿಗಾಗಿ ಸಂತೋಷ್ನ ಪ್ರಿಯತಮೆಯ ಮನೆಯವರೇ ಆತನನ್ನು ಹೊಡೆದು ಕೊಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.
ಕುಶಾಲನಗರ ಸಮೀಪದ ಬೈಲುಕುಪ್ಪೆ ಠಾಣೆ ವ್ಯಾಪ್ತಿಯ ಮರೂರು ಗ್ರಾಮದ ನಿವಾಸಿ ಸ್ವಾಮಿ ಎಂಬವರ ಮಗ ಸಂತೋಷ್ ಹಾಗೂ ಅದೇ ಗ್ರಾಮದ ಶ್ರೀನಿವಾಸ್ ಎಂಬವರ ಮಗಳು ಪರಸ್ಪರ ಪ್ರೀತಿಸುತ್ತಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಲುಕೊಪ್ಪೆ ಪೊಲೀಸರು ಯುವತಿಯ ದೊಡ್ಡಪ್ಪಂದಿರಾದ ಶಿವಣ್ಣ, ರಾಮಣ್ಣ ಹಾಗೂ ದೊಡ್ಡಪ್ಪನ ಮಗ ದಿಲೀಪ್ ಎಂಬವರನ್ನು ವಶಕ್ಕೆ ತೆಗೆದುಕೊಂಡು ದೂರು ದಾಖಲಿಸಿಕೊಂಡಿದ್ದಾರೆ.

ರಸ್ತೆ ಅಪಘಾತ ಸಾವು
ಪಿರ್ಯಾದಿ ಜಗದೀಶ ಬಿನ್ ಚಂದ್ರನಾಯ್ಕ 17 ವರ್ಷ ವಾಸ ಕಲ್ಪನಹಳ್ಳಿ ಗ್ರಾಮ ಭದ್ರಾವತಿ ರವರು ಭದ್ರಾವತಿ ಪೇಪರ್ ಟೌನ್ ಠಾಣೆನೀಡಿದ ದೂರಿನ ಸಾರಾಂಶ.
ತಂದೆ ಚಂದ್ರನಾಯ್ಕ ಎಂಬುವರು ಬಾರಂದೂರು ಬೈಪಾಸ್ ಕ್ರಾಸ್ ಹತ್ತಿರ ನಡೆದುಕೊಂಡು ಊರಿಗೆ ಬರುತ್ತಿರುವಾಗ ಯಾವುದೋ ವಾಹನ ಡಿಕ್ಕಿ ಹೊಡೆಸಿ ನಿಲ್ಲಿಸದೆ ಪರಾರಿಯಾಗಿರುವನು, ಪಿರ್ಯಾದಿ ತಂದೆ ಸ್ಥಳದಲ್ಲಿಯೆ ಮೃತಪಟ್ಟಿರುವರು

ಚಿತ್ರದುರ್ಗ: ಅನಾರೋಗ್ಯ ಆತ್ಮಹತ್ಯೆ
ಹೊಟ್ಟೆನೋವಿನ ಬಾಧೆಯಿಂದ ನರಳುತ್ತಿದ್ದ ವ್ಯಕ್ತಿಯೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಮೃತಪಟ್ಟಿರುವ ಘಟನೆ ತಾಲ್ಲೂಕಿನ ನಿನ್ನೆ ಸಂಜೆ ಕ್ಯಾದಿಗ್ಗೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿಂಗಪ್ಪ (45) ಎಂಬುವವರಿಗೆ ಸುಮಾರು ಆರು ತಿಂಗಳಿನಿಂದ ಹೊಟ್ಟೆ ನೋವು ಬರುತ್ತಿದ್ದು, ಈ ಬಗ್ಗೆ ಆಸ್ಪತ್ರೆಗಳಿಗೆ ತೋರಿಸಿಕೊಂಡರೂ ಗುಣವಾಗಿರಲಿಲ್ಲ ಇದರಿಂದ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ ಎಂದು ದೂರು ಇದ್ದ ಮೇರೆಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

ತುರುವೇಕೆರೆ
ಪಿರ್ಯಾದಿ ವೀಣಾ ಕೊಂ ವಿಜಯ್ ಮಾಯಸಂದ್ರ ತುರುವೇಕೆರೆ ತಾಲ್ಲೋಕು ಠಾಣೆಗೆ ಹಾಜರಾಗಿ ನೀಡಿದ ದೂರು: 24/11/10 ರಿಂದ 25/11/2010 ರಂದು ಶ್ರೀನಿವಾಸ ಕಲ್ಯಾಣದಲ್ಲಿ ವಿಜಯ್ ಎಂಬುವರಿಗೆ ಕೊಟ್ಟಡು ಮದುವೆ ಮಾಡಿದ್ದು, ನನಗೆ ತ್ರೀಶಾ ಎಂಬ 2 ವರ್ಷದ ಮಗಳಿರುತ್ತಾಳೆ. ಮೂರು ತಿಂಗಳಿಂದ ನನ್ನ ಗಂಡ ಸಂಸಾರ ವಿಚಾರವಾಗಿ ಗಲಾಟೆ ಮಾಡುತ್ತಿದ್ದು
ಅತ್ತೆ ಪ್ರೇಮ ನನ್ನ ಬೆನ್ನಿಗೆ ಹೊಡೆದು ನಿನ್ನ ತವರು ಮನೆಯಿಂದ ಒಡವೆಗಳನ್ನು ತೆಗೆದುಕೊಂಡು ಬಾ ಎಂದು ಬೈಯುತ್ತಾರೆ. ಮದುವೆಯ ಸಮಯದಲ್ಲಿ ಹುಡುಗನಿಗೆ 15 ಗ್ರಾಂ ಕೈ ಚೈನು, 30 ಗ್ರಾಂ ಕೊಳ ಚೈನು,10 ಗ್ರಾಂ ಉಂಗುರ, 60 ಗ್ರಾಂ ಮಾಂಗಲ್ಯ ಸರ ,5 ಗ್ರಾಂ ಉಂಗುರ,5 ಗ್ರಾಂ ಗುಂಡು ಮತ್ತು ಡ್ರಾಪ್ಸ್ ಮತ್ತು ನನ್ನ ಮಗಳಿಗೆ 8 ಗ್ರಾಂ ಕತ್ತು ಚೈನ್ ,3 ಗ್ರಾಂ ಕೈ ಬಳೆ.

ಉಡುಪಿ
ಬೋಜ ಕರ್ಕೆರಾ (60ವರ್ಷ) ಶರಾಬು ಕುಡಿಯುವ ಚಟವಿದ್ದು, ಕೆಲಸವಿಲ್ಲದೇ ಹೊಟ್ಟೆ ನೋವಿನಿಂದ ಬಳಲುತ್ತಿದ್ದವರು ಜೀವನದಲ್ಲಿ ಜಿಗುಪ್ಸೆಗೊಂಡವರು ನಡ್ಸಾಲು ಗ್ರಾಮದ ಡೌನ್ ಡೌನ್ ಬಾರ್ ಎಂಡ್ ರೆಸ್ಟೋರೆಂಟ್ ನ ಹಿಂಬದಿಯಲ್ಲಿರುವ ಸಿರಿ ಗಾರ್ಡನ್ ಹಾಲ್ ಪಕ್ಕದಲ್ಲಿರುವ ಕೆಲಸಗಾರರ ವಿಶ್ರಾಂತಿ ಕೊಠಡಿಯ ಒಳಗೆ ಪಕ್ಕಸಿಗೆ ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಈ ಬಗ್ಗೆ ಶ್ರೀ ಕರುಣಾಕರ್ ಪೂಜಾರಿ(47ವರ್ಷ)ತಂದೆ:ದಿ. ಶೀನಪ್ಪ ಪೂಜಾರಿ, ವಾಸ: ಅಲಂಗಾರು ಗರಡಿ ಮನೆ, ಪೆರ್ಡೂರು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ರಮಾಂಕ 18/13 ಕಲಂ 174 ಸಿ.ಆರ್ ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.












Click it and Unblock the Notifications