ಕೆಆರ್ ಪುರಂನಲ್ಲಿ ಕಾರ್ಪೊರೇಟರ್ ಗಳ ಕದನ
ಬೆಂಗಳೂರು, ಜ.23: ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡ ಸಂಭ್ರಮಾಚರಣೆ ಎರಡು ಪಕ್ಷಗಳ ನಡುವಿನ ಕಾದಾಟಕ್ಕೆ ಕಾರಣವಾದ ಘಟನೆ ಗುರುವಾರ ಕೆಆರ್ ಪುರಂ ಕ್ಷೇತ್ರದಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಕೆ.ಆರ್ ಪುರಂ ನಲ್ಲಿ ಕ್ಷೇತ್ರದ ಶಾಸಕರ ಸಮ್ಮುಖದಲ್ಲೇ ನಡೆದಿದೆ.
ಜ.23ರಂದು ಕೆ.ಆರ್ ಪುರಂ ನ ಕೇಂಬ್ರಿಡ್ಜ್ ಕಾಲೇಜು ಬಳಿ ರಸ್ತೆ ಕಾಮಗಾರಿ ಉದ್ಘಾಟನೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಭೈರತಿ ಬಸವರಾಜು ಉಪಸ್ಥಿತರಿದ್ದರು. ಈ ವೇಳೆ ಶಾಸಕರು ಕೆ.ಆರ್ ಪುರಂನ ಬಿಜೆಪಿ ಕಾರ್ಪೊರೇಟರ್ ಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಪ್ರಶ್ನಿಸಿದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ.
ಶಾಸಕರಿಗೆ ಕುಡಿಯುವ ನೀರು ಪೂರೈಕೆಯಾಗದೇ ಇರುವ ಬಗ್ಗೆ ಜನರು ದೂರು ನೀಡಿದ್ದಾರೆ. ಜನರ ದೂರಿಗೆ ಪ್ರತಿಕ್ರಿಯಿಸಿದ ಶಾಸಕ ಭೈರತಿ ಬಸವರಾಜು, ಬಿಜೆಪಿ ಕಾರ್ಪೊರೇಟರ್ ಗಳಾದ ವೆಂಕಟೇಶ್ ಶೆಟ್ಟಿ ಹಾಗೂ ವೀರಣ್ಣ ಅವರನ್ನು ಪ್ರಶ್ನಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಅಲ್ಲದೇ ಪಾಲಿಕೆ ಕಾರ್ಪೊರೇಟರ್ ಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದನ್ನು ಪ್ರಶ್ನಿಸಿದ ವೆಂಕಟೇಶ್ ಶೆಟ್ಟಿ ಹಾಗೂ ವೀರಣ್ಣ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಪರಿಣಾಮ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ಸಂಭವಿಸಿದೆ.
ಕಾಂಗ್ರೆಸ್ ಹಲ್ಲೆ ನಡೆಸಿರುವುದನ್ನು ಖಂಡಿಸಿ ಕೆ.ಆರ್ ಪುರಂ ಮಾಜಿ ಶಾಸಕ ನಂದೀಶ್ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಗಾಯಗೊಂಡಿರುವ ಬಿಜೆಪಿ ಪಾಲಿಕೆ ಸದಸ್ಯ ವೆಂಕಟೇಶ್ ಶೆಟ್ಟಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕರ್ನಾಟಕ ರಾಜ್ಯ ಕ್ರೈಂ ನ್ಯೂಸ್ ಕವರೇಜ್
ಆತ್ಮಹತ್ಯೆ ಪ್ರಕರಣ : ಉಡುಪಿ: ಸತೀಶ್ ಬಿ ತಂದೆ ದಿವಂಗತ ಶೀನ ಸೇರಿಗಾರ್ ವಾಸ ಶ್ರೀ ಮೂಕಾಂಬಿಕ ಪಂಚಾಯತ್ ಹತ್ತಿರ ಬಡಾನಿಡಿಯೂರು ಉಡುಪಿರವರ ನಾದಿನಿ ಜಯಲಕ್ಷ್ಮೀಯವರು ದಿನಾಂಕ 23/01/2014 ರಂದು ಯಾವುದೋ ವಿಷಪದಾರ್ಥವನ್ನು ಸೇವಿಸಿರುವುದು ಕಂಡು ಬಂದಿದ್ದು ಕೂಡಲೇ ಚಿಕಿತ್ಸೆಯ ಬಗ್ಗೆ ಉಡುಪಿ ಬಾಳಿಗಾ ಆಸ್ಪತ್ರೆಗೆ ಕರೆತರಲಾಗಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಿರುತ್ತಾರೆ. ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿರುತ್ತದೆ.ಜಯಲಕ್ಷ್ಮೀಯವರು ಮಾನಸಿಕವಾಗಿ ಅಸ್ವಸ್ಥಗೊಂಡು ಜೀವನದಲ್ಲಿ ಜಿಗುಪ್ಸೆಹೊಂದಿ ಯಾವುದೋ ವಿಷ ಪಧಾರ್ಥ ಸೇವಿಸಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ಸತೀಶ್ ಬಿ ರವರು ನೀಡಿ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 10/14 174 ಸಿ ಆರ್ ಪಿ ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕೋಲಾರ: ದೊಂಬಿ ಮತ್ತು ಹಲ್ಲೆ ಪ್ರಕರಣ
ಕೋಲಾರ ನಗರ ಪೊಲೀಸ್ ಠಾಣೇಯಲ್ಲಿ ದೊಂಬಿ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಸಂಭವಿಸಿರುತ್ತದೆ.
ಕೋಲಾರ ತಾಲ್ಲೂಕು, ಲಕ್ಷ್ಮಿಸಾಗರದ ವಾಸಿ ವೆಂಕಟೇಶ್ ರವರನ್ನು ಅದೇ ಗ್ರಾಮದ ರಮೇಶ್ ಮತ್ತು ಇತರರು ಸೇರಿ ಜಮೀನಿನ ವಿಚಾರದಲ್ಲಿ ಜಗಳವನ್ನು ತೆಗೆದು, ಅವಾಚ್ಯ ಶಬ್ದಗಳಿಂದ ಬೈದು, ಕಲ್ಲುಗಳಿಂದ ಹಲ್ಲೆ ಮಾಡಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ದಿನಾಂಕ 22-01-2014 ರಂದು ಸಂಜೆ 8-00 ಗಂಟೆಯಲ್ಲಿ ವೆಂಕಟೇಶ್ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08152-243066 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

ಚಿಕ್ಕಮಗಳೂರು : ಆತ್ಮಹತ್ಯೆಗೆ ಪ್ರಚೋದನೆ
ನಗರ ಪೊಲೀಸ್ ಠಾಣೆ ಮೊ.ಸಂ.04/2014 - ಕಲಂ:306 ಐಪಿಸಿ - ಪಿರ್ಯಾದಿ ಶ್ರೀಮತಿ ಮಾಲಾ ನಗರ ವಾಸಿ ಇವರ ಮೊದಲನೇ ಮಗಳು ಶಿಲ್ಪ ಈಗ್ಗೆ 02 ವರ್ಷದ ಹಿಂದೆ ಕುಮಾರನೊಂದಿಗೆ ಪ್ರೀತಿಸಿ ಮದುವೆಯಾಗಿ ಅವಳ ಗಂಡನಮನೆಯಲ್ಲಿಯೇ ವಾಸವಾಗಿದ್ದಳು ಕುಮಾರನು. ದಿನನಿತ್ಯಾ ಕುಡಿದು ಬಂದು ಗಲಾಟೆ ಮಾಡಿ ಹೊಡೆಯುತಿದ್ದ ಬೇರೆಯವರ ಜೊತೆ ಮಾತನಾಡುತಿದ್ದರೆ ಅನುಮಾನ ಮಾಡುತಿದ್ದನು.
ಕುಮಾರ ನೊಂದಿಗೆ ಅವನ ಮನೆಯಲ್ಲಿದ್ದ ಅವನ ಅಕ್ಕ ಜ್ಯೋತಿ. ಕೃಷ್ಣಮೂರ್ತಿ. ಚಂದ್ರ. ಸೇಟ್ ರವರ ಮಾತನ್ನು ಕೇಳಿಕೊಂಡು ಮಗಳಿಗೆ ಹೊಡೆಯುತಿದ್ದನು. ಈ ವಿಚಾರವಾಗಿ ಮಗಳು ಜೀವನದಲ್ಲಿ ಬೇಸರಗೊಂಡು ಹಿಂಸೆಯನ್ನು ತಾಳಲಾರದೆ. ಜ.15 ರಂದು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು ಈ ಬಗ್ಗೆ ಚಿಕಿತ್ಸೆಗೆಂದು ಚಿಕ್ಕಮಗಳೂರು ಸರ್ಕಾರಿ ಎಂಜಿ ಆಸ್ಪತ್ರೆಗೆ ಸೇರಿಸಿದ್ದು ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಕಳೆದ ರಾತ್ರಿ 08-08 ಗಂಟೆಯ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶಿಲ್ಪಾಳು ಮೃತಪಟ್ಟಿರುತ್ತಾಳೆ.

ಶಿವಮೊಗ್ಗ ನಗರ : ಅಪಘಾತದಲ್ಲಿ ಮೃತ್ಯು
ಪಿರ್ಯಾದಿ ಕೃಷ್ಣ (50 ವರ್ಷ) ವಾಸ;ಹೊಸಗದ್ದೆ ಇವರು ಹೊಸನಗರದ ಕಡೆಗೆ ಹೋಗುತ್ತಿದ್ದಾಗ ರಾಘವೇಂದ್ರ ಪೂಜಾರಿ (28 ವರ್ಷ) ಹಾಗು ನವೀನ (23 ವರ್ಷ) ವಾಸ; ಚೋರಡಿ ಇವರು ಹೆಂಡೆಗದ್ದೆ ತಿರುವಿನಲ್ಲಿ ಕೆಎ-19-ಈಎಚ್-8537 ರಬೈಕಿನಲ್ಲಿ ಹೋಗುತ್ತಿದ್ದಾಗ ಆರೋಪಿತ ಮಂಜುನಾಥ (53 ವರ್ಷ ) ಕೆಎ-15-8640 ರ ಗಜಾನನ ಬಸ್ ಚಾಲಕನು ತನ್ನ ಬಸ್ಸನ್ನು ಅತಿ ವೇಗ ಹಾಗು ಅಜಾಗರೂಕತೆಯಿಂದ ಚಲಿಸಿ ಮೃತರ ಬೈಕಿಗೆ ಡಿಕ್ಕಿಹೊಡೆಸಿದ ಪರಿಣಾಮ ಆಸ್ಪತ್ರೆಗೆ ಸಾಗಿಸುವಾಗ ಇಬ್ಬರೂ ಮೃತಪಟ್ಟಿರುತ್ತಾರೆ.

ಪರೀಕ್ಷೆಯಲ್ಲಿ ಅನುತ್ತೀರ್ಣ, ನೇಣು ಹಾಕಿಕೊಂಡು ವಿದ್ಯಾರ್ಥಿ ಸಾವು
ಚಿತ್ರದುರ್ಗ: ಅಂತಿಮ ಬಿ.ಕಾಂ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿಯೊಬ್ಬ ಜಿಗುಪ್ಸೆಗೊಂಡು ನೇಣಿಗೆ ಶರಣಾಗಿರುವ ಘಟನೆ ನಿನ್ನೆ ರಾತ್ರಿಯಿಂದ ಈ ದಿನ ಬೆಳಗಿನ ಮಧ್ಯದ ಅವಧಿಯಲ್ಲಿ ನಗರದ ಕಲಾ ಕಾಲೇಜು ಹಾಸ್ಟೆಲ್‌ನ ಬಳಿ ನಡೆದಿದೆ. ಕೋನಸಾಗರ ಗ್ರಾಮದ ಮಂಜುನಾಥ (21) ಎಂಬುವವರು ಅಂತಿಮ ಬಿಕಾಂ ವಿದ್ಯಾಭ್ಯಾಸವನ್ನು ನಗರದ ಕಲಾ ಕಾಲೇಜಿನಲ್ಲಿ ಮಾಡುತ್ತಿದ್ದು, ನಿನ್ನೆ ೫ನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ ಬಂದಿದ್ದು, ಐದು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದರಿಂದ ಬೇಸರಗೊಂಡು ಹಾಸ್ಟೆಲ್‌ನ ಆವರಣದಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಎಂದು ದೂರು ಇದ್ದ ಮೇರೆಗೆ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.












Click it and Unblock the Notifications