ಕ್ರೈಂ: ಡರ್ಟಿ ಪಿಕ್ಚರ್ಸ್ ಹಂಚಿದ ಟೀಚರ್ ಸೆರೆ, ಇನ್ನಷ್ಟು
ಬೆಂಗಳೂರು, ಅ.30: ರಾಮನಗರದಲ್ಲಿ ಶಿಕ್ಷಕ ವೃತ್ತಿ ಜತೆಗೆ ಸೈಬರ್ ಸೆಂಟರ್ ನಡೆಸುತ್ತಿದ್ದ ಶಿಕ್ಷಕನೊಬ್ಬನನ್ನು ಕನಕಪುರ ಟೌನ್ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ಮೂಲದ 32 ವರ್ಷದ ಚಂದ್ರಶೇಖರ್ ಅವರು ಕನಕಪುರ ತಾಲೂಕಿನ ಕಡವಕೆರೆ ದೊಡ್ಡಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಜತೆಗೆ ಟೌನ್ ನ ಎವಿಟ್ ರಸ್ತೆಯಲ್ಲಿ ಚಾಂಪಿಯನ್ ಇನ್ಸ್ಟಿಟ್ಯೂಟ್ ಆಫ್ ಲರ್ನಿಂಗ್ ಮತ್ತು ಸ್ಮಾರ್ಟ್ ಸಲ್ಯೂಷನ್ ಎಂಬ ಕಂಪ್ಯೂಟರ್ ಸೆಂಟರ್ ಮತ್ತು ಇಂಟರ್ನೆಟ್ ಸಂಸ್ಥೆ ನಡೆಸುತಿದ್ದರು.
ಅಲ್ಲಿಗೆ ಬರುವ ವಿದ್ಯಾರ್ಥಿಗಳು ಹಾಗೂ ಇತರೆ ಗ್ರಾಹಕರಿಗೆ ಸಿಡಿಗಳಲ್ಲಿ ಅಶ್ಲೀಲ ದೃಶ್ಯಗಳನ್ನು ಲ್ಯಾಪ್ ಟಾಪ್ ಮೂಲಕ ಮೊಬೈಲ್ ಗಳಿಗೆ ಡೌನ್ ಲೋಡ್ ಮಾಡಿಕೊಡುತ್ತಿದ್ದ ಎಂಬ ಆರೋಪಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅಂಗಡಿ ಮೇಲೆ ದಾಳಿ ನಡೆಸಿ 2 ಲ್ಯಾಪ್ ಟಾಪ್, 1 ಡಾಟಾ ಕಾರ್ಡ್ ರೀಡರ್, 6 ಡಿವಿಡಿ, ಸಂಸ್ಥೆಯ ಪತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಶಿಕ್ಷಕ ಚಂದ್ರಶೇಖರ್ ಯುವತಿಯರನ್ನು ಕರೆ ತಂದು ಮಜಾ ಮಾಡಿ ವಿಡಿಯೋಗಳನ್ನು ಲ್ಯಾಪ್ ಟಾಪ್ ನಲ್ಲಿ ಬಚ್ಚಿಟ್ಟಿದ್ದಾನೆ ಎನ್ನಾಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಲ್ಯಾಪ್ ಟಾಪ್ ನ ಡಾಟಾವನ್ನು ಪರಿಶೀಲಿಸಿ ಸೈಬರ್ ಸೆಲ್ ನೆರವಿನೊಂದಿಗೆ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ಅನುಪಮ್ ಅಗರವಾಲ್ ಹೇಳಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ಮಂಡ್ಯ
ಮಂಡ್ಯ: ಬೆಂಗಳೂರಿನ ಪಿಳ್ಳಮ್ಮ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 'ಸೈನೆಡ್ ಮಲ್ಲಿಕಾ'ಗೆ ಇಲ್ಲಿನ ಮೊದಲನೇ ಹೆಚ್ಚುವರಿ ಸತ್ರ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ, 9 ಸಾವಿರ ರೂ. ದಂಡ ವಿಧಿಸಿದೆ.
ಆರೋಪಿಗೆ ಐಪಿಸಿ ಸೆಕ್ಷನ್ 302 ಪ್ರಕಾರ ಜೀವಾವಧಿ ಶಿಕ್ಷೆ, 5 ಸಾವಿರ ರೂ. ದಂಡ, ಸೆಕ್ಷನ್ 364 ಪ್ರಕಾರ 6 ವರ್ಷ ಕಠಿಣ ಶಿಕ್ಷೆ, 2 ಸಾವಿರ ರೂ. ದಂಡ ಹಾಗೂ ಸೆಕ್ಷನ್ 404 ಪ್ರಕಾರ 2 ವರ್ಷ ಶಿಕ್ಷೆ ಮತ್ತು 2 ಸಾವಿರ ರೂ. ದಂಡ ವಿಧಿಸಲಾಗಿದೆ.
ರಾಮನಗರ ಜಿಲ್ಲೆ ಕಗ್ಗಲೀಪುರ ಹೋಬಳಿ ಲಕ್ಷ್ಮೀಪುರ ನಿವಾಸಿ ಹನುಮಂತಪ್ಪನ ಪತ್ನಿ ಮಲ್ಲಿಕಾ ಅಲಿಯಾಸ್ ಸೈನೆಡ್ ಮಲ್ಲಿಕಾ(60) ಕೆಂಪಮ್ಮ, ಲಕ್ಷ್ಮಿ, ಜಯಮ್ಮ, ಕಲಾ, ಶಿವಮೊಗಮ್ಮ, ಸಾವಿತ್ರಮ್ಮ, ಮಲ್ಲಿಕಾ ಹೀಗೆ ಹಲವು ಹೆಸರಿನಿಂದ ಗುರುತಿಸಿಕೊಳ್ಳುತ್ತಿದ್ದಳು.

ಮಾರಾಣಾಂತಿಕ ರಸ್ತೆ ಅಪಘಾತ
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಾಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು, ಕುಂಬಾರಹಳ್ಳಿಗೇಟ್ ಬಳಿ, ಎನ್.ಹೆಚ್-4, ಚೈನ್-ಬೆಂಗಳೂರು ರಸ್ತೆಯಲ್ಲಿ ಸಂಭವಿಸಿರುತ್ತದೆ. ಚೈನ್ ವಾಸಿ ಬಾಲಾಜಿ ರವರು ಮತ್ತು ಅವರ ಕುಟುಂಬದವರು ಟಿ.ಎನ್-20, ಬಿ.ಕೆ-5874 ಕಾರಿನಲ್ಲಿ ಅ.30ರಂದು ಬೆಳಗಿನ ಜಾವ 4 ಗಂಟೆಯಲ್ಲಿ ಚೈನ್‌ನಿಂದ ಕೆ.ಆರ್ ಪುರಂಗೆ ಬರುತ್ತಿದ್ದು. ಈ ಸಮಯದಲ್ಲಿ ಕಾರ್ ಚಾಲನೆ ಮಾಡುತ್ತಿದ್ದ ವಿಜಯಕುಮಾರ್ ರವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮುಂದೆ ಹೋಗುತ್ತಿದ್ದ ಯಾವುದೋ ಒಂದು ವಾಹನಕ್ಕೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ಕಾರಿನ ಚಾಲಕ ವಿಜಯಕುಮಾರ್ ರವರು ಸ್ಥಳದಲ್ಲಿಯೆ ಮೃತಪಟ್ಟಿದ್ದು. ಕಾರಿನಲ್ಲಿದ್ದ ಇತರರಿಗೆ ಗಾಯಗಳಾಗಿರುತ್ತವೆ.

ಶಿವಮೊಗ್ಗ ದೊಡ್ಡಪೇಟೆ ಠಾಣೆ
ಎಸ್ ಪಿ ಸಾಹೆಬರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಪಿ ಐ ಡಿ ಸಿ ಐ ಬಿ ಮತ್ತು ಸಿಬ್ಬಂದಿಯವರು ನ್ಯೂಮಂಡಲಿ ಸರ್ಕಲ್ ಆರೋಪಿ ಫೈಯಾಜ್ ನ್ಯೂ ಮಂಡ್ಲಿ ಕೆ ಎ 14 ಎಂ 3306 ಒಮ್ನಿ ವ್ಯಾನಿನಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಂಡರನ್ನು ಇಳಿಸಿ ಅಕ್ರಮವಾಗಿ ರಿಫಿಲ್ಲಿಂಗ್ ಮಾಡುತ್ತಿದ್ದು ಅವರಿಂದ ಒಟ್ಟು 23 ಸಿಲಂಡರು ಮತ್ತು 4 ಸಣ್ಣ ಸಿಲಂಡರನ್ನು ಅಮಾನತ್ತುಗೊಳಿಸಿರುತ್ತೆ ಬೆಲೆ 1 ಲಕ್ಷ 31 ಸಾವಿರದ 350 ರೂ. ಗಳು ವಶಪಡಿಸಿಕೊಳ್ಳಲಾಗಿದೆ.

ಮಟ್ಕಾ ಜೂಜಾಟ ಪ್ರಕರಣ
ಬಸವನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 187/2013 - ಕಲಂ: 78(3) ಕೆಪಿ ಆಕ್ಟ್ - ದಿನಾಂಕ 29/10/2013 ರಂದು 19000 ಗಂಟೆಯಲ್ಲಿ ಬಸವನಹಳ್ಳಿ ಅರಳಿಮರದ ಹತ್ತಿರ ಪಿಎಸ್‌ಐ ರವರು ಗಸ್ತು ಕರ್ತವ್ಯದಲ್ಲಿದ್ದಾಗ ಯಾರೋ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ಆಡುತ್ತಿದ್ದಾನೆ ಎಂದು ಬಂದ ಖಚಿತ ವರ್ತಮಾನದ ಮೇರೆಗೆ ಸಾರ್ವಜನಿಕರ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೆ 1 ರೂಪಾಯಿಗೆ 10 ರೂ, 10 ರೂಗೆ 100 ರೂಪಾಯಿ ಬರುತ್ತೆ ಎಂದು ಹೇಳಿ ಸಾರ್ವಜನಿಕರಿಂದ ಹಣವನ್ನು ಪಡೆದು ಮಟ್ಕಾ ಜೂಜಾಟ ಆಡುತ್ತಿದ್ದವನನ್ನು ಹಿಡಿದು ಆತನ ಬಳಿ ಇದ್ದ, ಒಂದು ಮಟ್ಕಾ ಚೀಟಿ, ಒಂದು ಮೊಬೈಲ್, ಒಂದು ಪೆನ್ನು, ನಗದು 1600/- ರೂಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತೆ. ಆರೋಪಿ ಸುದೀರ್ ವಿಜಯಪುರ ವಾಸಿ ಈತನನ್ನು ದಸ್ತಗಿರಿ ಮಾಡಿರುತ್ತೆ.

ಚಿತ್ರದುರ್ಗ
ಜಗಳೂರು ಪೊಲೀಸ್ ಠಾಣೆ ಗುನ್ನೆ ನಂ: 25/2013, ಕಲಂ: 174 ಸಿ.ಆರ್.ಪಿ.ಸಿ.
ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಫಿರ್ಯಾದಿ ಶ್ರೀಮತಿ ಸುನಿತಾಬಾಯಿ ತನ್ನ ಮೂರು ಮಕ್ಕಳೊಂದಿಗೆ, ಹಾಗೂ ಕೂಲಿ ಕಾರರೊಂದಿಗೆ, ತಮ್ಮ ಜಮೀನಿನಲ್ಲಿ ಬೆಳೆದ ರಾಗಿ ಪ್ಶೆರನ್ನು ಕೊಯ್ಯಲು ಹೋಗಿದ್ದು, ಮಧ್ಯಾಹ್ನ 1.30 ಗಂಟೆ ಸಮಯದಲ್ಲಿ ತಮ್ಮ ಜಮೀನಿನ ಪಕ್ಕದಲ್ಲಿರುವ ಗೋಕಟ್ಟೆಯಲ್ಲಿ ನೀರು ಕುಡಿಯಲು ಪಿರ್ಯಾದಿ ಮಗನಾದ 14 ವರ್ಷದ ಭಗತ್ಸಿಂಗ್ ಈತನು ಹೋಗಿದ್ದಾಗ ಸದರಿ, ಗೋಕಟ್ಟೆಯಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು, ಈಜು ಬಾರದೇ ಸದರಿ ಗೋಕಟ್ಟೆಯಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುತ್ತಾನೆ. ಮುಂದಿನ ಕ್ರಮ ಕೈಗೊಳ್ಳಿ ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.












Click it and Unblock the Notifications