ಶಿವಮೊಗ್ಗ ಪೊಲೀಸರ ನಿದ್ದೆಗೆಡಸಿರುವ ಕಡ್ಡಿಗಳು
ಬೆಂಗಳೂರು, ಜ. 15: ಶಿವಮೊಗ್ಗ ನಗರದಲ್ಲಿ ಸಿಕ್ಕಿರುವ ಎರಡು ಬ್ಯಾಗ್ ಭರ್ತಿ ಜಿಲೆಟಿನ್ ಕಡ್ಡಿಗಳು ಸ್ಥಳೀಯ ಪೊಲೀಸರ ನಿದ್ದೆಗೆಡಿಸಿದೆ. ಜಿಲೆಟಿನ್ ಕಡ್ಡಿಗಳು ಪತ್ತೆಯಾದ ಬೆನ್ನಲ್ಲೇ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ಆದರೆ, ಸಿಕ್ಕಿ ಬಿದ್ದಿರುವ ಆರೋಪಿಗೂ ಕಡ್ಡಿಗಳಿಗೂ ಸಂಬಂಧ ಇಲ್ಲ ಎಂದು ತಿಳಿದು ಬಂದಿದೆ. ಜಿಲೆಟಿನ್ ಕಡ್ಡಿಗಳನ್ನು ನಕ್ಸಲರಿಗೆ ನೀಡಲು ಶೇಖರಿಸಿಡಲಾಗಿತ್ತು ಎಂದು ಶಂಕೆ ವ್ಯಕ್ತವಾಗಿದ್ದು ಆದರೆ, ಬಂಧಿತ ಆರೋಪಿ ಸುಮಾರು 15 ವರ್ಷಗಳಿಂದ ಶಿವಮೊಗ್ಗ ನಿವಾಸಿಯಾಗಿದ್ದು, ಯಾವುದೇ ರೀತಿಯಿಂದಲೂ ನಕ್ಸಲರ ಸಂಘಟನೆ ಜತೆ ಸಂಪರ್ಕ ಇರಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು, ಉಡುಪಿ ಹಾಗೂ ಮಂಗಳೂರು ಮುಂತಾದ ಕಡೆ ವಿಚಾರಣೆ ನಡೆಸಿ ಆರೋಪಿಗೂ ಜಿಲೆಟಿನ್ ಕಡ್ಡಿಗೂ ಸಂಬಂಧವಿಲ್ಲ ಎಂದು ಇನ್ನೊಮ್ಮೆ ಖಚಿತಪಡಿಸಿಕೊಂಡ ಶಿವಮೊಗ್ಗ ಪೊಲೀಸರು ಈಗ ಇದು ಉಗ್ರ ಸಂಘಟನೆಗೆ ಸಹಾಯಕರಾಗಿರುವ ವ್ಯಕ್ತಿಗಳ ಕೈವಾಡವೇ ಎಂದು ಶಂಕಿಸಿದ್ದಾರೆ.
ಕಳೆದೆರಡು ದಿನಗಳಿಂದ ಈ ಜಿಲೆಟನ್ ಕಡ್ಡಿಗಳು ಪೊಲೀಸರ ಚಿಂತೆ ಹೆಚ್ಚಿಸಿದೆ. ದೊಡ್ಡಪೇಟೆ ಠಾಣೆ ಪೊಲೀಸರು ಜಿಲೆಟನ್ ಕಡ್ಡಿಗೂ ನಕ್ಸಲರಿಗೂ ಸಂಬಂಧ ಹುಡುಕಲು ಯತ್ನಿಸಲು ಕಾರಣವಿದೆ. ಎರಡು ಬ್ಯಾಗ್ ಗಳ ಜತೆಗೆ ನಕ್ಸಲರನ್ನು ಬೆಂಬಲಿಸುವ ಕರಪತ್ರ ಕೂಡಾ ಸಿಕ್ಕಿದ್ದು ಪೊಲೀಸರ ತನಿಖೆ ದಿಕ್ಕು ಬದಲಾಯಿಸಿತ್ತು.

ಕರ್ನಾಟಕ ರಾಜ್ಯ ಕ್ರೈಂ ನ್ಯೂಸ್ ಕವರೇಜ್
ಹುಳಿಮಾವು ಪೊಲೀಸ್ ಠಾಣೆ ಮೊಕದ್ದಮೆ ಸಂಖ್ಯೆ: 29/2014, ಕಲಂ.392. ಐ.ಪಿ.ಸಿ : ಪಿರ್ಯಾದುದಾರರು,ನಂ.103,3ನೇಕ್ರಾಸ್,ಅಕ್ಷಯಗಾರ್ಡನ್, ಅಕ್ಷಯನಗರ, ಬೇಗೂರುಹೋಬಳಿ, ಬೆಂಗಳೂರು-83ರಬಳಿ ಹೊಸದಾಗಿ ಮನೆ ನಿರ್ಮಿಸುತ್ತಿರುವ ಜಾಗದಲ್ಲಿ ಸುದೀರ್‍ದೇವ್ ಮತ್ತು ಇನ್ನಿರ್‍ದೇವ್ ಈ ಇಬ್ಬರು ಕೆಲಸಗಾರರು ದಿ.14-01-2014 ರಂದು ಬೆಳಿಗ್ಗೆಯಿಂದ ಸಂಜೆಯ ವರೆಗೆ ಕೆಲಸಮಾಡಿ ನಂತರ ರಾತ್ರಿ ಅಲ್ಲೆ ಮಲಗಿದ್ದಾಗ ದಿನಾಂಕ: 15/01/2014 ರಂದು ಬೆಳಗಿನ ಜಾವ4.30 ಗಂಟೆಯಲ್ಲಿ ಇಬ್ಬರು ಅಪರಿಚಿತರು ಸುದೀರ್‍ದೇವ್ ಮತ್ತು ಇನ್ನಿರ್‍ದೇವ್ ಅವರ ಬಳಿ ಹೋಗಿ ದೊಣ್ಣೆ ತೋರಿಸಿ ಹೆದರಿಸಿಅವರ ಬಳಿಇದ್ದ ಒಂದುಲಾವ ಮೊಬೈಲ್, ಒಂದು ಮೈಕ್ರೋಮ್ಯಾಕ್ಸ್‍ಮೊಬೈಲ್ ಮತ್ತು 5000ಸಾವಿರರೂ ನಗದು ಹಣವನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ ಈ ಆರೋಪಿಗಳನ್ನು ಪತ್ತೆಮಾಡಿ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು ಇತ್ಯಾದಿ.

ಸಖರಾಯಪಟ್ಟಣ : ಅಪಘಾತದಲ್ಲಿ ಸಾವು
ಮೊ.ಸಂ.03/2014 - ಕಲಂ: 279 304(ಎ) ಐಪಿಸಿ : ಪಿರ್ಯಾದಿ ವೆಂಕಟೇಶ್ ಇವರ ತಂದೆಗೆ ಪರಿಚಯ ಇರುವ ರಫೀಕ್ ಅಹಮದ್ ಎಂಬುವವರು ತನ್ನ ಟಿವಿಎಸ್ ಎಕ್ಸೆಲ್ ಮೋಟಾರ್ ಸೈಕಲ್ ನಲ್ಲಿ ಈರಪ್ಪರವರನ್ನು ಕೂರಿಸಿಕೊಂಡು ಹೋಗುತ್ತಿರುವಾಗ ರಪೀಕ್ ಅಹಮದ್ ನು ಮೋಟಾರ್ ಬೈಕ್ ನ್ನು ಅತಿವೇಗ ಮತ್ತು ಅಜಾಗುರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕ್ ಸ್ಕಿಡ್ ಆಗಿ ಕೆಳಕ್ಕೆ ಬಿದ್ದು ಈರಪ್ಪ ರವರ ಎಡದೇ ಪಕ್ಕೆ, ಎಡದೇ ಭುಜ ಮತ್ತು ಎಡದೇ ಸೊಂಟ ಮತ್ತು ಎಡಕಾಲಿನ ತೊಡೆಯ ಹತ್ತಿರ ಗಾಯವಾಗಿದ್ದು ಚಿಕಿತ್ಸೆ ಕೊಡಿಸಿದ್ದು ಈರಪ್ಪ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಆದ್ದರಿಂದ ಅಪಘಾತ ಮಾಡಿದ ಕೆಎ-18-ಇ-9637 ಟಿವಿಎಸ್ ಎಕ್ಸೆಲ್ ಮೋಟಾರ್ ಬೈಕ್ ಚಾಲಕನಾದ ರಫೀಕ್ ಅಹಮದ್ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೋರಿದ್ದಾಗಿರುತ್ತೆ .

ಕೋಲಾರ: ಬೀಗ ಮುರಿದು ಮನೆಕಳ್ಳತನ
ಮಾಲೂರು ಪೊಲೀಸ್ ಠಾಣೆಯಲ್ಲಿ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ಟೌನ್, 2ನೇ ಕ್ರಾಸ್, ಮಾರುತಿ ಬಡಾವಣೆಯಲ್ಲಿ ಸಂಭವಿಸಿರುತ್ತದೆ. ಮಾರುತಿ ಬಡಾವಣೆಯ ವಾಸಿ ಸಗಾಯ್ ಮೇರಿ ರವರು ಈ ಸಮಯದಲ್ಲಿ ಸಗಾಯ್ ಮೇರಿ ರವರ ಮನೆಯ ಬೀಗವನ್ನು ಮುರಿದು ಒಳ ಪ್ರವೇಶಿಸಿದ ಯಾರೋ ಕಳ್ಳರು ಮನೆಯಲ್ಲಿದ್ದ ಬಂಗಾರದ ವಡವೆಗಳು, ಬೆಳ್ಳಿ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಶಿವಮೊಗ್ಗ ಗ್ರಾಮಾಂತರ ನಗರ ಠಾಣೆ
ಚೊಕ್ಕನಹಳ್ಳಿ: ಅಡವಿಯಪ್ಪ 48 ವರ್ಷ ಸನವಳ್ಳಿ, ಕಾರವಾರ ಜಿಲ್ಲೆ ಇತನು ಹೊಸನಗರ ತಾ. ಅಡುಗೊಡಿ ಗ್ರಾಮದ ಅಕೇಶಿಯ ಪ್ಲಾಟೇಸಿನಲ್ಲಿ ಮರಗಳನ್ನು ಕಡಿಯವ ಕೆಲಸಕ್ಕೆ ಬಂದಿದ್ದು. ಶರಾವತಿ ಹಿನ್ನಿರಿನಲ್ಲಿ ಬಿದ್ದು ಮರಣ ಹೊಂದಿರುತ್ತಾನೆ.
ಶಿವಮೊಗ್ಗ ಗ್ರಾಮಾಂತರ, ಅಸ್ವಾಭಾವಿಕ ಸಾವು: ಮರಿಸ್ವಾಮಿ 35 ವರ್ಷ ವಾಸ ಸುತ್ತುಕೋಟೆ ಇತನು ತನ್ನ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಎದೆನೋವು ಕಾಣಿಸಿಕೊಂಡಿದ್ದು. ನಂತರ ಚಿಕಿತ್ಸೆಗಾಗಿ ಅಸ್ವತ್ರೆಗೆ ತಂದಾಗ ಮರಣ ಹೊಂದಿರುತ್ತಾನೆ.

ಕಾರ್ಕಳ: ಜೀವ ಬೆದರಿಕೆ ಪ್ರಕರಣ
ಕಾರ್ಕಳ ತಾಲೂಕು ಕಸಬಾ ಗ್ರಾಮದ ಬಂಗ್ಲೆಗುಡ್ಡೆ ಅಂಗನವಾಡಿ ಶಾಲೆಯ ಬಳಿ ಪಿರ್ಯಾದಿ ಶ್ರೀಮತಿ ಮೈಮುನ (33),ತಂದೆ: ಅಶ್ರಫ್ ವಾಸ: ಇಮ್ರಾನ್ ಮಂಜಿಲ್ ಬಂಗ್ಲೆಗುಡ್ಡೆ ಅಂಗನವಾಡಿ ಶಾಲೆಯ ಬಳಿ ಕಾರ್ಕಳ ಕಸಬಾ ಗ್ರಾಮ ಕಾರ್ಕಳ ತಾಲೂಕು ಎಂಬವರ ಗಂಡ ಆರೋಪಿ ಅಶ್ರಫ್ ಒಬ್ಬಳು ಹೆಂಗಸಿನೊಂದಿಗೆ ಹಾಗೂ ಅವನ ಆಣ್ಣ ಹುಸೈನರ್ ರವರ ಜೊತೆ ಪಿರ್ಯಾದಿದಾರರ ಮನೆಗೆ ಬಂದಿದ್ದು, ಅದಕ್ಕೆ ಪಿರ್ಯಾದಿದಾರರು ಈ ಹೆಂಗಸನ್ನು ಇಲ್ಲಿಗೆ ಯಾಕೆ ಕರೆದುಕೊಂಡು ಬಂದಿದ್ದು ಎಂದು ಕೇಳಿದಾಗ ಕೊಪಗೊಂಡ ಆರೋಪಿಯೂ ಇದನ್ನು ಕೇಳಲು ನೀನು ಯಾರು ಎಂದು ಹೇಳಿ ಆವಾಚ್ಯ ಶದ್ದಗಳಿಂದ ಬೈದ್ದು ಕೈಯಿಂದ ಕೆನ್ನೆಗೆ ಹೊಡೆದು,ಕಾಲಿನಿಂದ ತುಳಿದುದಲ್ಲದೇ ಆರೋಪಿಯ ಆಣ್ಣ ಹಸೈನರ್ ಕೂಡಾ ಪಿರ್ಯಾದಿದಾರರಿಗೆ ಕೈಯಿಂದ ಕೆನ್ನೆಗೆ ಗುದ್ದಿ ನೋವುವುಂಟು ಮಾಡಿರುವುದಲ್ಲದೇ ಇನ್ನು ಮುಂದೆ ಮನೆಯ ವಿಚಾರವನ್ನು ಪೊಲೀಸ್ ಠಾಣೆಗೆ ದೂರು ನೀಡಿದರೆ ನಿನ್ನ ಮೇಲೆ ಸೀಮೆ ಎಣ್ಣೆ ಸುರಿದು ಸುಟ್ಟು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಶ್ರೀಮತಿ ಮೈಮುನ ರವರು ನೀಡಿದ ದೂರಿನಂತೆ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 07/14 ಕಲಂ 504, 323,341,506 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.












Click it and Unblock the Notifications