ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಹಲ್ಲೆ

ಬೆಂಗಳೂರು, ಫೆ.25: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಮಾರಣಾಂತಿಕ ಹಲ್ಲೆ ನಡೆಸಿ ಕಾರಿನಲ್ಲಿ ಅಪಹರಿಸಲು ಯತ್ನಿಸಿದ ಘಟನೆ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಪವರ್ ‌ಲೂಮ್ ಕಾರ್ಖಾನೆಯನ್ನು ಹೊಂದಿರುವ ಕೊಟ್ಟಿಗೆಪಾಳ್ಯ ನಿವಾಸಿ ಕೃಷ್ಣಪ್ಪ (46) ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಅಪಹರಿಸಲಾಗಿದೆ.

ಜ್ಞಾನಭಾರತಿ ಕ್ಯಾಂಪಸಿನ ಹಿಂಭಾಗದ ದೀಪ ಕಾಂಪ್ಲೆಕ್ಸ್ ಬಳಿ ಇರುವ ವಿಶ್ವೇಶ್ವರಯ್ಯ ಕ್ಲಬ್ ‌ಗೆ ಪ್ರತಿದಿನ ಬೆಳಿಗ್ಗೆ ಬಂದು ಸ್ನೇಹಿತರೊಂದಿಗೆ ಬ್ಯಾಡ್ಮಿಂಟನ್ ಆಟವಾಡಿ ಕೃಷ್ಣಪ್ಪ ಅವರು ಮನೆಗೆ ತೆರಳುತ್ತಾರೆ. ಎಂದಿನಂತೆ ಇಂದು ಬೆಳಿಗ್ಗೆ 7 ಗಂಟೆಗೆ ತಮ್ಮ ಹುಂಡೈ ಕಾರಿನಲ್ಲಿ ಕ್ಲಬ್ ‌ಗೆ ಬಂದು ಕಾರ್ ಪಾರ್ಕ್ ಮಾಡಿ ಬ್ಯಾಟ್ ಹಾಗೂ ಮೊಬೈಲ್ ‌ಅನ್ನು ಕೈಯಲ್ಲಿ ಹಿಡಿದುಕೊಂಡು ಕಾರಿನಿಂದ ಇಳಿದಿದ್ದಾರೆ.

ತಕ್ಷಣವೇ ನಾಲ್ವರು ಲಾಂಗ್ ಮತ್ತು ಚಾಕುವಿನಿಂದ ಏಕಾಏಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಕೃಷ್ಣಪ್ಪ ಕೂಗಿಕೊಂಡಿದ್ದು, ಆಟವಾಡಲು ಆಗಲೇ ಬಂದಿದ್ದ ಸ್ನೇಹಿತರು ಹತ್ತಿರಕ್ಕೆ ಬಂದಿದ್ದಾರೆ. ಆಗ ದುಷ್ಕರ್ಮಿಗಳು ಸ್ನೇಹಿತರನ್ನು ಬೆದರಿಸಿದ್ದಾರೆ. ಅಷ್ಟರಲ್ಲಿ ರಸ್ತೆಗೆ ಬಂದ ಇನ್ನೋವಾ ಕಾರಿಗೆ ಕೃಷ್ಣಪ್ಪ ಅವರನ್ನು ತಳ್ಳಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಘಟನೆಯನ್ನು ಕಂಡ ಸ್ನೇಹಿತರು ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಪೊಲೀಸರು ದಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೃತ್ಯ ನಡೆದಿರಬಹುದು ಎಂದು ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ಲಾಬೂರಾಮ್ ಅವರು ತಿಳಿಸಿದ್ದಾರೆ. ಕೃಷ್ಣಪ್ಪ ಅವರಿಗೆ ಇಬ್ಬರು ಹೆಂಡತಿಯರಿದ್ದು, ಆಸ್ತಿ ವಿಚಾರವಾಗಿ ಇಬ್ಬರ ನಡುವೆ ಜಗಳವಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಎರಡನೆ ಪತ್ನಿಯ ಸೋದರ ಮಂಡ್ಯದಲ್ಲಿ ರೌಡಿ ಶೀಟರ್ ಪಟ್ಟಿಯಲ್ಲಿದ್ದು ಆತನೇ ಈ ಕೃತ್ಯ ಎಸಗಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರು, ಮಂಡ್ಯ ತುಮಕೂರು, ರಾಮನಗರ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ವ್ಯಾಪಕ ಶೋಧ ಮುಂದುವರಿದಿದೆ.

ಕರ್ನಾಟಕ ಕ್ರೈಂ ಸುದ್ದಿಗಳ ಸಂಗ್ರಹ

ಕರ್ನಾಟಕ ಕ್ರೈಂ ಸುದ್ದಿಗಳ ಸಂಗ್ರಹ

ಬಂಟ್ವಾಳ: ಮನೆಯಲ್ಲಿ ಯಾರೂ ಇಲ್ಲದಿದ್ದ ವೇಳೆ ಯುವತಿಯೋರ್ವಳು ಮನೆಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇಪು ಗ್ರಾಮದ ನೀರ್ಕಜೆ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಪುಟ್ಟಣ್ಣನಾಯ್ಕರ ಪುತ್ರಿ ಸಂಧ್ಯಾ(22) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಹೆತ್ತವರು ಕೆಲಸಕ್ಕೆ ತೆರಳಿದ್ದ ವೇಳೆ ಮನೆಯಲ್ಲೇ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳದಲ್ಲಿ ಡೆತ್‌ನೋಟ್ ಬರೆದಿಟ್ಟಿರುವುದು ಪತ್ತೆಯಾಗಿದ್ದು, ನನ್ನನ್ನು ಕ್ಷಮಿಸಿ, ನಾನು ಟೆನ್ಷನ್‌ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆಂದು ಬರೆದಿದ್ದಾಳೆ. ವಿಟ್ಲ ಉಪನಿರೀಕ್ಷಕ ಟಿ.ಆರ್. ರಾಘವೇಂದ್ರ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಂದಾಪುರ: ಜೀವನದಲ್ಲಿ ಜಿಗುಪ್ಸೆ ಆತ್ಮಹತ್ಯೆ

ಕುಂದಾಪುರ: ಜೀವನದಲ್ಲಿ ಜಿಗುಪ್ಸೆ ಆತ್ಮಹತ್ಯೆ

ಪಿರ್ಯಾದಿ ಪ್ರೀತಿ ದೇವಾಡಿಗ (20) ತಂದೆ ಕೃಷ್ಣ ದೇವಾಡಿಗ ಮಕ್ಕಿಮನೆ, ನೆರಂಬಳ್ಳಿ, ಹಂಗಳೂರು ಗ್ರಾಮ ಕುಂದಾಪುರ ಇವರ ತಂದೆ ಕೃಷ್ಣ ದೇವಾಡಿಗ (56) ಎಂಬವರು ಸುಮಾರು 10 ವರ್ಷಗಳಿಂದ ಶರಾಬು ಕಡಿಯುವ ಚಟವಿದ್ದು ಮನೆಗೆ ಬರುವಾಗ ಶರಾಬು ಕುಡಿದು ಬರುತ್ತಿದ್ದು ಕಳೆದ 6-7 ತಿಂಗಳಿಂದ ಬಾಯಿಯಲ್ಲಿ ಹುಣ್ಣು ಆಗಿದ್ದು ಬಲ ಮತ್ತು ಎಡ ದವಡೆ ಊದಿಕೊಂಡಿದ್ದು ಅವರಿಗೆ ಊಟ ಮಾಡಲು ಆಗುತ್ತಿರಲಿಲ್ಲ

ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 24/02/2014 ರಂದು ಸಂಜೆ 6:30 ಗಂಟೆಗೆ ನೆರಂಬಳ್ಳಿಯಲ್ಲಿರುವ ತನ್ನ ಹಳೆ ಮನೆಯ ಮಾಡಿನ ಜಂತಿಗೆ ನೈಲಾನ್ ಹಗ್ಗದಿಂದ ಕುತ್ತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಪ್ರೀತಿ ದೇವಾಡಿಗ ಇವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 10/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಶಿವಮೊಗ್ಗ ಜಿಲ್ಲೆಯ ಕ್ರೈಂ ಸುದ್ದಿಗಳು

ಶಿವಮೊಗ್ಗ ಜಿಲ್ಲೆಯ ಕ್ರೈಂ ಸುದ್ದಿಗಳು

ಜಯನಗರ ಠಾಣೆ : ಜೂಜಾಟ ಪ್ರಕರಣ

ಆರೋಪಿಯು ಯಾವುದೇ ಪರವಾನಿಗೆ ಇಲ್ಲದೆ ಗುರು ಕಣ್ಣಿನ ಆಸ್ಪತ್ರೆಯ ಹತ್ತಿರ ಓ.ಸಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ನೆಡಸಿ ಜೂಜಾಟಕ್ಕೆ ಬಳಸಿದ್ದ 1010/- ರೂಗಳನ್ನು ವಶ ಪಡಿಸಿಕೊಂಡು ಮುಂದಿನ ಕ್ರಮ ಕೈ ಗೊಂಡಿದೆ.

ಗ್ರಾಮಾಂತರ ಠಾಣೆ ಶಿವಮೊಗ್ಗ : ಆತ್ಮ ಹತ್ಯೆ ಪ್ರಕರಣ

ಶ್ರೀಮತಿ ಪಾಂಚಾಲಮ್ಮ ವಾಸ ಬೆಳಲಕಟ್ಟೆ ಇವರ ಮಗ ಸುಬ್ರಮಣಿ 38 ವರ್ಷ ವಾಸ ಬೆಳಲಕಟ್ಟೆ ಈತನು ಹೊಟ್ಟೆನೊವಿನ ಕಾರಣ ಜೀವನದಲ್ಲಿ ಜಿಗುಪ್ಸೆ ಹೊಂದಿ ಯಾವುದೋ ಕ್ರಿಮಿನಾಶಕ ಸೇವಿಸಿ ಮೃತ ಪಟ್ಟಿರುತ್ತಾನೆ.

ಕಳ್ಳಂ ಬೆಳ್ಳ ಪೊಲೀಸರಿಂದ ಸ್ಫೋಟಕಗಳ ವಶ

ಕಳ್ಳಂ ಬೆಳ್ಳ ಪೊಲೀಸರಿಂದ ಸ್ಫೋಟಕಗಳ ವಶ

ಕಳ್ಳಂ ಬೆಳ್ಳ ಪೊಲೀಸ್ ಠಾಣಾ ಮೊ.ನಂ. 38/2014 Sec 5 Explosive substances act 1908 & Esplosive act 1884 u/s 9b.

ಫೆ.24 ರಂದು ರಾತ್ರಿ 11-00 ಗಂಟೆಗೆ ಪಿರ್ಯಾದಿ M ಪ್ರಶಾಂತ್ ಪಿ.ಎಸ್ .ಐ ಕಳ್ಳಂಬೆಳ್ಳ ಪೊಲೀಸ್ ಠಾಣೆರವರು ನೀಡಿದ ವರದಿ ಅಂಶ:

ನಾನು ಪೊಲೀಸ್ ಠಾಣೆಯಲ್ಲಿ ಇದ್ದಾಗ ಚಿನ್ನಪ್ಪನಹಳ್ಳಿ ಗೇಟ್ ಕಡೆಯಿಂದ ಕುನ್ನಾಲಮ್ಮ ದೇವಸ್ಥಾನದ ಕಡೆಗೆ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ಒಂದು ಚೀಲದಲ್ಲಿ ಇಟ್ಟುಕೊಂಡು ಸಾಗಾಣಿಕೆ ಮಾಡುತ್ತಿರುತ್ತಾರೆ ಎಂದು ಬಂದ ಮಾಹಿತಿ ಮೇರೆಗೆ ಮೇಲ್ಖಂಡ ಸ್ಥಳಕ್ಕೆ ಹೋಗಿ ನೋಡಲಾಗಿದೆ.

ಮೂರು ಜನ ಆಸಾಮಿಗಳಾದ 1] ಶಿವಲಿಂಗಯ್ಯ ಬಿನ್ ನಿಂಗಪ್ಪ. ಉಪ್ಪಾರ ಜನಾಂಗ. 2] ಸಿದ್ಧರಾಜು ಬಿನ್ ಸಿದ್ದಲಿಂಗಪ್ಪ. ಉಪ್ಪಾರ ಜನಾಂಗ. 3] ಮೀನಾಕ್ಷಪ್ಪ ಬಿನ್ ನಿಂಗಣ್ಣ. ಉಪ್ಪಾರ ಜನಾಂಗ. ಎಲ್ಲರೂ ಮಾಯಸಂದ್ರ ಗ್ರಾಮ. ಶಿರಾ ತಾಲ್ಲೂಕ್. ರವರುಗಳನ್ನು ಹಿಡಿದುಕೊಂಡು ಅವರ ಬಳಿ ಇದ್ದ ಪ್ಲಾಸ್ಟಿಕ್ ಚೀಲವನ್ನು ಚೆಕ್ ಮಾಡಲಾಗಿ ಐಡಿಯಲ್ ಕಂಪನಿಯ ಜಿಲೇಟಿನ್ ಪೇಸ್ಟ್ ಇರುವ 55 ಪೀಸುಗಳು ಮತ್ತು ಎಲೆಕ್ಟ್ರಿಕಲರ್ ಡಿಟೋನೇಟರ್ ನ 64 ಪೀಸುಗಳು ಇದ್ದು ಮೇಲ್ಖಂಡ ಮೂರು ಜನ ಆಸಾಮಿಗಳನ್ನು ಮತ್ತು ಸ್ಪೋಟಕ ವಸ್ತುಗಳನ್ನು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡು ಕ್ರಮ ಜರುಗಿಸಿ ಎಂದು ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಚಿತ್ರದುರ್ಗ ಕ್ರೈಂ ನ್ಯೂಸ್ ಕವರೇಜ್

ಚಿತ್ರದುರ್ಗ ಕ್ರೈಂ ನ್ಯೂಸ್ ಕವರೇಜ್

ರಸ್ತೆಯ ಬದಿಯಲ್ಲಿ ನಿಂತಿದ್ದವರಿಗೆ ವಾಹನ ಡಿಕ್ಕಿ, ಒಬ್ಬರ ಸಾವು ಮತ್ತೊಬ್ಬರಿಗೆ ಗಾಯ : ಹಿರಿಯೂರು, ಫೆ. 24 : ಕೆಎ-16/3794 ನೇ ವಾಹನದ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ ಇಬ್ಬರಿಗೆ ಡಿಕ್ಕಿ ಪಡಿಸಿದ ಪರಿಣಾಮ ಒಬ್ಬರು ಸ್ಥಳದಲ್ಲಿಯೇ ಮೃತಪಟ್ಟು ಮತ್ತೊಬ್ಬರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಪಾಲವ್ವನಹಳ್ಳಿ ಗ್ರಾಮದ ಸಮೀಪದ ಎನ್ ‍ಹೆಚ್-4 ರಸ್ತೆಯ ಸರ್ವೀಸ್ ರಸ್ತೆಯಲ್ಲಿ ರಾತ್ರಿ 10.45 ಗಂಟೆ ಸಮಯದಲ್ಲಿ ನಡೆದಿದೆ. ಅಪಘಾತದಲ್ಲಿ ಚಳ್ಳಕೆರೆ ತಾಲ್ಲೂಕಿನ ಪೆತ್ತಮರಹಟ್ಟಿ ಗ್ರಾಮದ ವಾಸಿ ಲಕ್ಷ್ಮೀಪತಿ(25) ಇವರಿಗೆ ತೀವ್ರಸ್ವರೂಪದ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಅದೇ ಗ್ರಾಮದ ವಾಸಿ ಉಮೇಶ(18) ಎಂಬುವರಿಗೆ ಮೈಕೈಗಳಿಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿರುತ್ತವೆ. ಈ ಬಗ್ಗೆ ಐಮಂಗಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+