ಅಂಕೋಲದಲ್ಲಿ ಶೂಟೌಟ್: ಉದ್ಯಮಿ ಆರ್ ಎನ್ ನಾಯಕ್ ಹತ್ಯೆ
ಅಂಕೋಲ, ಡಿ.21: ನಗರದ ಬಸ್ ನಿಲ್ದಾಣದ ಬಳಿ ಬಳಿ ನಾಲ್ಕು ಜನ ದುಷ್ಕರ್ಮಿಗಳ ತಂಡ ಶನಿವಾರ ಮಧ್ಯಾಹ್ನ ನಡೆಸಿದ ಶೂಟೌಟ್ ನಲ್ಲಿ ಸಹಕಾರಿ ಕ್ಷೇತ್ರದ ಧುರೀಣ ಆರ್ ಎನ್ ನಾಯಕ್ ಅವರು ಬಲಿಯಾಗಿದ್ದಾರೆ. ನಾಲ್ವರ ತಂಡ ನಡೆಸಿದ ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡ ರಕ್ತದ ಮಡುವಿನಲ್ಲಿದ್ದ ಆರ್.ಎನ್.ನಾಯಕ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯತ್ನಿಸಲಾಯಿತು. ಆದರೆ, ಮಾರ್ಗಮಧ್ಯದಲ್ಲೇ ನಾಯಕ್ ಅವರು ಅಸುನೀಗಿದ್ದಾರೆ.
ಗುಂಡಿನ ಚಕಮಕಿ ಆರಂಭವಾಗುತ್ತಿದ್ದಂತೆ ನಾಯಕ್ ಅವರ ಗನ್ ಮ್ಯಾನ್ ಕೂಡಾ ಪ್ರತಿದಾಳಿ ನಡೆಸಿದ್ದು, ಓರ್ವ ದುಷ್ಕರ್ಮಿ ಗುಂಡು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳೀಯರ ಸಹಕಾರಿಂದ ಇನ್ನೊಬ್ಬ ಹಂತಕನನ್ನು ಸೆರೆ ಹಿಡಿಯಲಾಗಿದೆ.
ಆರ್ .ಎನ್ .ನಾಯಕ್ ಅವರು ರಾಜಕೀಯವಾಗಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು, ಸಹಕಾರಿ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು ಹಾಗೂ ಹಣಕಾಸು ಸಂಸ್ಥೆಯೊಂದನ್ನು ನಡೆಸುತ್ತಿದ್ದರು. ಅಂಕೋಲದ ಕೆಸಿ ರಸ್ತೆ ಬಳಿಯ ದ್ವಾರಕ ಸೌಹಾರ್ದ ಕ್ರೆಡಿಟ್ ಸಹಕಾರಿ ಲಿ. ಸಂಸ್ಥೆಗೆ ಇಂದು ಬೆಳಗ್ಗೆ ಭೇಟಿ ನೀಡಿದ್ದ ನಾಯಕ್ ಅವರು ಕಚೇರಿಯಿಂದ ಹೊರಕ್ಕೆ ಬಂದ ನಂತರ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ.
ಆರ್ ಎನ್ ನಾಯಕ್ ಅವರ ಸಾವಿಗೆ ಅವರ ಆಪ್ತರು, ಬಂಧುಮಿತ್ರರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಶಿವಮೊಗ್ಗ
ಕೃಷ್ಣಮೂರ್ತಿ ನಾಯ್ಕ ಮಳವಳ್ಳಿ ತಾಂಡಾ ಇವರಿಗೆ ಕೇರಳ ರಾಜ್ಯದ ಬಾಸಿರ ಎಂಬ ವ್ಯಕ್ತಿಯೊಬ್ಬರ ಪರಿಚಯವಾಗಿದೆ. ಕೃಷ್ಣಮೂರ್ತಿ ಎನ್ನುವವರು ತನಗೆ ಬಂಗಾರದ ನಿಧಿ ಸಿಕ್ಕಿದೆ ಎಂದು ಪಿರ್ಯಾದಿಗೆ ನಂಬಿಸಿ, ಹಾಗೂ 2 ಗ್ರಾಮ್ ತೂಕದ ಬಂಗಾರದ ಹರಳು ನೀಡಿ ನಂತರ ಬಾಸಿರ ಇವರು ಕೇರಳಕ್ಕೆ ಹೋಗಿ 10.50.000/-ರೂಗಳನು ತೆಗೆದುಕೊಂಡು ಕೃಷ್ಣಮೂರ್ತಿಯವರಿಗೆ ಕೊಡುವುದಾಗಿ ತಿಳಿಸಿದಾಗ ಬಾಸಿರ ಇವರನ್ನು ಬ್ಯೆರಿಕೊಪ್ಪ ಬಸ್ಸ್ ನಿಲ್ದಾಣದ ಬಳಿ ಕರೆದುಕೊಂಡು ಬಂದು ಚಾಕು ಚೂರಿ ತೋರಿಸಿ ಬೆದರಿಸಿ ಹಣ ಕಸಿದುಕೊಂಡು ಹೋಗಿರುತ್ತಾರೆ

ಚಿತ್ರದುರ್ಗ
ಹೊಟ್ಟೆನೋವಿನ ಬಾಧೆಯಿಂದ ನರಳುತ್ತಿದ್ದ ಯುವತಿಯೊಬ್ಬಳು ಜೀವನದಲ್ಲಿ ಜಿಗುಪ್ಸೆಗೊಂಡು ವಿಷಸೇವಿಸಿ ಮೃತಪಟ್ಟಿರುವ ಘಟನೆ ನಿನ್ನೆ ಮಧ್ಯಾಹ್ನ ಹಿರಿಯೂರು ತಾಲ್ಲೂಕಿನ ಕರೋಬನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶೃತಿ (17) ಎಂಬುವವರು ಸುಮಾರು ಎರಡು ವರ್ಷಗಳಿಂದ ಹೊಟ್ಟೇ ನೋವಿನ ಬಾಧೆಯಿಂದ ನರಳುತ್ತಿದ್ದು, ಇದರಿಂದ ಜಿಗುಪ್ಸೆಗೊಂಡಿದ್ದ ಶೃತಿ ನಿನ್ನೆ ವಿಷ ಸೇವಿಸಿ ಸುಸ್ತಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗಮಧ್ಯೆ ಮೃತಪಟ್ಟಿರುತ್ತಾರೆ ಎಂದು ದೂರು ಇದ್ದ ಮೇರೆಗೆ ಐಮಂಗಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.
ಅಪಘಾತ ಪ್ರಕರಣ
ಬ್ರಹ್ಮಾವರ: ಡಿ.21ರಂದು ಪಿರ್ಯಾದಿದಾರ ಶ್ರುತಿ (28) ಅವರ ಗಂಡ ರಘುರಾಮ ಹೊಳ್ಳ ವಾಸ:ಬಡಾಹೋಳಿ ಕಾರ್ಕಡ ಸಾಲಿಗ್ರಾಮ ಉಡುಪಿ ತಾಲೂಕು ಎಂಬುವರು ಹೊಂಡಾ ಆಕ್ಟಿವಾನಂಬರ್ ಕೆಎ-20ಇಡಿ-1303 ರಲ್ಲಿ ತನ್ನ ಅತ್ತೆ ಶ್ರೀಮತಿ ನಾಗರತ್ನರವರನ್ನು ಕೂರಿಸಿಕೊಂಡು ಸಾಲಿಗ್ರಾಮದಿಂದ ಉಡುಪಿ ಕಡೆಗೆ ಹೋಗುತ್ತಾ ಮಾಬುಕಳ ಸೇತುವೆಯ ಬಳಿ ವಾಹನವನ್ನು ಆಪಾದಿತರಾದ ರಘುರಾಮ ಹೊಳ್ಳರವರು ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ನಾಗರತ್ನ (60) ರವರು ವಾಹನದಿಂದ ರಸ್ತೆಗೆ ಬಿದ್ದು ದೇಹಕ್ಕೆ ಒಳ ಜಖಂ ಆದವರನ್ನು ಮಹೇಶ್ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣೆಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು, 03:15 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ.

ಚಿಕ್ಕಮಗಳೂರು
ನಗರ ಪೊಲೀಸ್ ಠಾಣೆ ಮೊ.ಸಂ.232/2013 - ಕಲಂ: 380 ಐಪಿಸಿ - ವಿಶ್ವನಾಥ್, ಸಂಗೀತಾ ಶೋ ರೂಂ ಎಂಜಿರಸ್ತೆ ಒಬ್ಬರೇ ಶೋ ರೂಮ್ ನಲ್ಲಿ ಇರುವಾಗ್ಗೆ ಯಾರೋ 5 ಜನ ಅಪರಿಚಿತರು ಶೋ ರೂಂ ನ ಸೆಟ್ ಗಳನ್ನು ನೋಡಲು ಮತ್ತು ವಿಚಾರಿಸಲು ಆರಂಭಿಸಿದರು.
ಅವರಲ್ಲಿ ಯಾರೂ ಸಹ ಮೊಬೈಲ್ ಖರೀದಿಸದೇ ಹಿಂತಿರುಗಿದರು ನಂತರ ಸ್ಟಾಕ್ ಚೆಕ್ ಮಾಡಿ ನೋಡಿದಾಗ ಎರಡು ಸೋನಿ ಎರಿಕ್ಸನ್ ಕಂಪನಿಯ ಮೊಬೈಲ್ ಗಳು ಕಾಣದಿರುವುದನ್ನು ಮನಗಂಡು ಭಾನುವಾರದ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾದ ವೀಡಿಯೋ ಕ್ಲಿಪ್ ವೀಕ್ಷಿಸಿದಾಗ ಎರಡು ಜನರ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿಯು ನಮ್ಮ ಶೋ ರೂಂ ನಲ್ಲಿದ್ದ ಎರಡು ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಕಳ್ಳತನ ಮಾಡಿ ಅದನ್ನು ಮಗುವನ್ನು ಎತ್ತಿಕೊಂಡ ವ್ಯಕ್ತಿಗೆ ನೀಡಿದ ದೃಶ್ಯ ನಮ್ಮ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿವೆ ಕಳ್ಳತನ ವಾದ ಮೊಬೈಲ್ ಗಳ.ಬೆಲೆ-27,989/-

ಕುಖ್ಯಾತ ಸರಗಳ್ಳರ ಬಂಧನ
* ಮೋಹನ್‍ರಾಜ್. ಜೆ @ ಗುಂಡ ಬಿನ್ ಡಿ.ಜೋಸೆಫ್, 22 ವರ್ಷ, ನಂ.107, 3ನೇ ಅಡ್ಡರಸ್ತೆ, 3ನೇ ಮುಖ್ಯ ರಸ್ತೆ, ಪೈಪ್ ಲೇನ್, ವಿಜಯನಗರ, ಬೆಂಗಳೂರು.
* ಮಂಜುನಾಥ @ ಮತ್ತಿ @ ಮತ್ತಿ ಮಂಜ ಬಿನ್ ಅನಿಲ್, 22 ವರ್ಷ, ನಂ.63, 6ನೇ ಮೈನ್, ಪೈಪ್ ಲೇನ್, ವಿಜಯನಗರ, ಬೆಂಗಳೂರು.
ಎಂಬುವರನ್ನು ದಸ್ತಗಿರಿ ಮಾಡಿ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 7,30,000/- ರೂಪಾಯಿ ಮೌಲ್ಯದ 255 ಗ್ರಾಮಿನ 4 ಚಿನ್ನದ ಸರಗಳನ್ನು ಉಪ್ಪಾರ್‍ಪೇಟೆ ಠಾಣೆಯ ಪೊಲೀಸರು ವಶಪಡಿಸಿಕೊಂಡಿರುತ್ತಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದ 3 ಸರ ಅಪಹರಣ ಪ್ರಕರಣಗಳು ಮತ್ತು ಉಪ್ಪಾರ್‍ಪೇಟೆ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದ ಸರ ಕಳವು ಪ್ರಕರಣವನ್ನು ಪತ್ತೆ ಮಾಡಲಾಗಿದೆ












Click it and Unblock the Notifications