Cabinet Reshuffle: ಸಚಿವ ಸಂಪುಟ ಪುನರ್‌ರಚನೆ; ಯಾರು ಇನ್? ಯಾರು ಔಟ್?: ಇಲ್ಲಿದೆ ಪಟ್ಟಿ
ಬೆಂಗಳೂರು, ಸೆಪ್ಟೆಂಬರ್ 23: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ಶೀಘ್ರವೇ ಶಸ್ತ್ರ ಚಿಕಿತ್ಸೆ ನಡೆಯೋ ಸಾಧ್ಯತೆ ಇದೆ. ದೊಡ್ಡ ಮಟ್ಟದಲ್ಲಿ ಸಂಪುಟ ಪುನಾರಚನೆ ಆಗಲಿದೆ ಅನ್ನೋ ಗುಸುಗುಸು ಕೇಳಿಸ್ತಿದೆ. ನವೆಂಬರ್ ನಲ್ಲಿ ಸಂಪುಟ ಪುನರ್ ರಚನೆಯಾಗಲಿದೆ. ಶೇ 50ರಷ್ಟು ಸಚಿವರು ಬದಲಾವಣೆಯಾಗುವ ಸಾಧ್ಯತೆ ಇದೆ. ಇನ್ನು ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡುವ ಸಾಧ್ಯತೆಗಳಿವೆ ಎಂದು ದೆಹಲಿಯಲ್ಲಿ ಮಂತ್ರಿಯಾಗುವ ಆಸೆಯನ್ನ ಸಲೀಂ ಅಹಮದ್ ಬಿಚ್ಚಿಟ್ಟಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಭಾರೀ ಬದಲಾವಣೆ ಕುರಿತು ಕಳೆದ ಒಂದು ತಿಂಗಳಿನಿಂದ ಚರ್ಚೆ ನಡೆಯುತ್ತಿದ್ದು, ಇದೀಗ ಸಂಪುಟ ಪುನಾರಚನೆ ಆಗಲಿದೆ ಎನ್ನುವ ಗುಸುಗುಸು ಚರ್ಚೆಗಳು ನಡೆಯುತ್ತಿರುವಾಗಲೇ ಸಲೀಂ ಅಹಮದ್ ಅವರ ಈ ಹೇಳಿಕೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸಂಪುಟದಿಂದ ಯಾರಿಗೆ ಕೊಕ್ ಕೊಡುತ್ತಾರೆ ಎನ್ನುವ ಆತಂಕ ಸಚಿವರುಗಳಲ್ಲಿ ಮನೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದ ಸಚಿವರಿಗೆ ಢವಢವ ಶುರುವಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದ್ದು, ನವೆಂಬರ್‌ಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡುವರೆ ವರ್ಷ ಪೂರೈಸಲಿದೆ. ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸಾಲು ಸಾಲು ಆರೋಪಗಳಿಂದ ಕಾಂಗ್ರೆಸ್ ಹೈಕಮಾಂಡ್ ರೋಸಿ ಹೋಗಿದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಬರೋಬ್ಬರಿ 15 ಸಚಿವರಿಗೆ ಸಂಪುಟದಿಂದ ಕಿತ್ತುಹಾಕಲು ನಿರ್ಧರಿಸಿದೆ ಎನ್ನಲಾಗಿದೆ.ಸಿದ್ದರಾಮಯ್ಯ ಸಂಪುಟದಲ್ಲಿ ಖಾತೆ ವಹಿಸಿಕೊಂಡ ದಿನದಿಂದ ಯಾರು? ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಯಾರು ಕೆಲಸವನ್ನು ಸರಿಯಾಗಿ ನಿಭಾಯಿಸಿಲ್ಲ. ಆಟಕ್ಕುಂಟು ಲೆಕ್ಕಕ್ಕೇ ಇಲ್ಲ ಎಂಬಂತೆ ಇರುವ ಸಚಿವರನ್ನು ಸಂಪುಟದಿಂದ ತೆಗೆಯಲು ಹೈಕಮಾಂಡ್ ಮುಂದಾಗಿದ್ದು, ಸಂಪುಟದ ಹಲವು ಮಂತ್ರಿಗಳ ಎದೆ ಬಡಿತ ಜೋರಾಗುವಂತೆ ಮಾಡಿದೆ.
ನವೆಂಬರ್- ಡಿಸೆಂಬರ್ ನಲ್ಲಿ ಸಂಪುಟ ಪುನಾರಚನೆ ಸಾಧ್ಯತೆ ದಟ್ಟವಾಗಿದೆ. ಎಂಟರಿಂದ ಹತ್ತರಷ್ಟು ಸಚಿವರನ್ನು ಬದಲಾವಣೆ ಮಾಡಿ ಹೊಸ ಮುಖಗಳನ್ನು ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರವನ್ನು ಹೈಕಮಾಂಡ್ ನಾಯಕರು ತೆಗೆದುಕೊಳ್ಳಲಿದ್ದಾರೆ. ಈಗಾಗಲೇ ಸಾಲು ಸಾಲು ಆರೋಪ ಕೇಳಿ ಬಂದಿದ್ದು, ಇದೀಗ ಆಡಳಿತಕ್ಕೆ ಹೊಸ ವೇಗ ಅನಿವಾರ್ಯತೆ ಬಿದ್ದಿದೆ. ಸಂಪುಟ ಪುನಾರಚನೆ ಶೀಘ್ರದಲ್ಲೇ ನೆರವೇರುವ ಸಾಧ್ಯತೆ ಹೆಚ್ಚುತ್ತಿದೆ. ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಸಂಪುಟ ಪುನರ್ ರಚನೆಯಾಗಲಿದೆ.
ಸಿದ್ದರಾಮಯ್ಯ ಸಂಪುಟಕ್ಕೆ ಎಂಟರಿಂದ ಹತ್ತರಷ್ಟು ಸಚಿವರನ್ನ ಕೈಬಿಟ್ಟು ಹೊಸ ಮುಖಗಳನ್ನ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳಲಿದೆ. ಹೈಕಮಾಂಡ್ ಮಟ್ಟದಲ್ಲಿ ಅಸಮರ್ಥ ಸಚಿವರನ್ನ ಕೈ ಬಿಡುಗ ಚರ್ಚೆ ಶುರುವಾಗಿದ್ದು, ಸಚಿವರ ಸಾಮರ್ಥ್ಯದ ಬಗ್ಗೆ ವರಿಷ್ಠರಿಗೆ ಕೆಪಿಸಿಸಿ, ಉಸ್ತುವಾರಿ ವರದಿಯನ್ನ ತರಿಸಿಕೊಂಡಿದ್ದಾರೆ. ಅಲ್ಲದೇ ಎರಡು ವರ್ಷಗಳಲ್ಲಿ ಯಾವ್ಯಾವ ಸಚಿವರ ಕಾರ್ಯವೈಖರಿ ಹೇಗಿದೆ? ಎಂಬ ಬಗ್ಗೆ ಹೈಕಮಾಂಡ್ ಗಮನಹರಿಸಿದೆ.
ಇನ್ನೂ ಹೊಸಬರಿಗೆ ಅವಕಾಶ ಕೊಡಬೇಕೆಂಬ ಲೆಕ್ಕಾಚಾರದಲ್ಲಿ ಹೈಕಮಾಂಡ್ ಮುಂದಾಗಿದ್ದು, ಉಳಿದ ಅವಧಿಯಲ್ಲಿ ಆಡಳಿತಕ್ಕೆ ವೇಗ, ಪುನಾರಚನೆ ಅನಿವಾರ್ಯವಾಗಿದೆ. ಸದ್ಯ ಡಜನ್ಗೂ ಹೆಚ್ಚಿನ ಸಚಿವರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸುವ ಕುರಿತು ಸಮಾಲೋಚನೆ ನಡಿಯುತ್ತಿದೆ. ಆದ್ರೆ, ಖಾಲಿ ಇರುವ ಸ್ಥಾನಗಳ ಭರ್ತಿ ಮಾಡುವ ಜೊತೆಗೆ ಮೂರ್ನಾಲ್ಕು ಮಂದಿಯ ಬದಲಾವಣೆಗೆ ಮಾತ್ರ ಸಿಎಂ ಒಲವು ತೋರಿದ್ದಾರೆ. ಇತ್ತ ಮಾಸ್ ಚೇಂಜೇಸ್ನಿಂದ ಗೊಂದಲ ಸೃಷ್ಟಿಯಾಗಲಿದೆ ಎಂಬ ಆತಂಕದಿಂದ ದೊಡ್ಡಮಟ್ಟದಲ್ಲಿ ಸಂಪುಟ ಪುನಾರಚನೆಗೆ ಸಿಎಂ ಆಸಕ್ತಿ ತೋರಿಲ್ಲ ಎನ್ನಲಾಗಿದೆ.
ಯಾರು ಸಂಪುಟದಿಂದ ಔಟ್?
* ಎಂ.ಸಿ. ಸುಧಾಕರ್
* ರಹೀಂ ಖಾನ್
* ಎನ್ ಎಸ್ ಬೋಸರಾಜು
* ಕೆಎಚ್ ಮುನಿಯಪ್ಪ
* ಡಿ. ಸುಧಾಕರ್
* ಮಧು ಬಂಗಾರಪ್ಪ
* ಲಕ್ಷ್ಮೀ ಹೆಬ್ಬಾಳ್ಕರ್
* ಶಿವಾನಂದ ಪಾಟೀಲ್
ಯಾರು ಸಂಪುಟಕ್ಕೆ ಇನ್?
* ಬಿಕೆ ಹರಿಪ್ರಸಾದ್
* ಅನಿಲ್ ಚಿಕ್ಕಮಾದು
* ವಿನಯ್ ಕುಲಕರ್ಣಿ
* ವಿಜಯಾನಂದ ಕಾಶಪ್ಪನವರ್
* ಬಿ ಆರ್ ಪಾಟೀಲ
* ಟಿ ರಘುಮೂರ್ತಿ
* ಬಿಕೆ ಸಂಗಮೇಶ್
* ತನ್ವೀರ್ ಸೇಠ್
* ಅಜಯ್ ಸಿಂಗ್












Click it and Unblock the Notifications