ಒಕ್ಕಲಿಗರ ಸಂಘಕ್ಕೆ ಭಾನುವಾರ ಚುನಾವಣೆ

ಬೆಂಗಳೂರು. ಜ.3 : ಭಾನುವಾರ ನಡೆಯಲಿರುವ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಕಣ ರಂಗೇರಿದೆ. ಒಟ್ಟು 140 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, 3,70 ಲಕ್ಷ ಮತದಾರರು ಆಡಳಿತ ಮಂಡಳಿಯ 35 ನಿರ್ದೇಶಕರನ್ನು ಆಯ್ಕೆ ಮಾಡಲಿದ್ದಾರೆ. ಅಭ್ಯರ್ಥಿ­ಗಳ ನಡುವೆ ತೀವ್ರ ಪೈಪೋಟಿ ಆರಂಭವಾಗಿದ್ದು, ಪ್ರಚಾರದ ಭರಾಟೆ ಜೋರಾಗಿದೆ.

ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಸಂಘದ ಸದಸ್ಯರ ಸಂಖ್ಯೆ ಹಾಗೂ ಮತದಾರರ ಸಂಖ್ಯೆ ಹನ್ನೊಂದು ಪಟ್ಟು ಹೆಚ್ಚಾಗಿದೆ. ಹಿಂದಿನ ಚುನಾವಣೆಯಲ್ಲಿ ಕೇವಲ 23 ಸಾವಿರವಿದ್ದ ಸದಸ್ಯರ ಸಂಖ್ಯೆ ಬಾರಿ 3 ಲಕ್ಷಕ್ಕೆ ಏರಿಕೆಯಾಗಿದೆ. ಭಾನುವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಚುನಾವಣೆ ನಡೆಯಲಿದೆ.

Vokkaliga

ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಮತ್ತು ಹಾಸನ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರದ ಕಾವು ಹೆಚ್ಚಾಗಿದೆ. ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರದಿಂದ 15 ನಿರ್ದೇ­ಶಕರು ಆಯ್ಕೆಯಾಗಲಿದ್ದಾರೆ.

ಉಳಿದಂತೆ ಮಂಡ್ಯದಿಂದ 4, ಮೈಸೂರು, ಕೋಲಾರ, ಹಾಸನ, ತುಮಕೂರು ಕ್ಷೇತ್ರ­ಗಳಿಂದ ತಲಾ 3, ಚಿಕ್ಕ­ಮಗಳೂರು, ಚಿತ್ರದುರ್ಗ, ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ ಕ್ಷೇತ್ರಗಳಿಂದ ತಲಾ 1 ಸ್ಥಾನಗಳಿಗೆ ಚುನಾವಣೆ ಭಾನುವಾರ ಚುನಾವಣೆ ನಡೆಯಲಿದೆ.

ಒಕ್ಕಲಿಗರ ಸಂಘದ ಹಾಲಿ ಅಧ್ಯಕ್ಷ ಕೆಂಚಪ್ಪಗೌಡ, ಪ್ರೊ.ನಾಗರಾಜು, ಪ್ರೊ.ಕೆ.ಮಲ್ಲಯ್ಯ, ಅಪ್ಪಾಜಿಗೌಡ, ಕೆ.ವಿ.ಚಂದ್ರಶೇಖರ್‌ ಅವರ ನೇತೃತ್ವದಲ್ಲಿ ರಚಿಸಿಕೊಂಡಿರುವ ಐದು ಸಿಂಡಿಕೇಟ್‌ಗಳು ಸ್ಪರ್ಧಾ ಕಣದಲ್ಲಿವೆ. ನೂರಕ್ಕೂ ಹೆಚ್ಚು ಸ್ವತಂತ್ರ ಅಭ್ಯರ್ಥಿ­ಗಳು ಸ್ಪರ್ಧಿಸಿದ್ದು, ತೀವ್ರ ಪೈಪೋಟಿ ನೀಡುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+