ಗೃಹ ಸಚಿವರನ್ನ ಭೇಟಿಯಾಗ ಬಿಜೆಪಿ ಆ ಇಬ್ಬರು ಶಾಸಕರು- ಇದು ಕಮಲ ಬಿಟ್ಟು ಕೈ ಹಿಡಿಯುವ ತಯಾರಿಯೇ?

ಬೆಂಗಳೂರು,ಡಿಸೆಂಬರ್‌ 29: 2024 ಲೋಕಸಭಾ ಚುನಾವಣೆಯಲ್ಲಿ ಹೈಕಮಾಂಡ್‌ 28 ಕ್ಷೇತ್ರಗಳ ಪೈಕಿ 20 ಕ್ಕೂ ಸ್ಥಾನಗಳನ್ನ ಗೆಲ್ಲುವ ಟಾರ್ಗೆಟ್‌ ನೀಡಿದೆ. ಹೀಗಾಗಿ ಕರ್ನಾಟಕ ಕಾಂಗ್ರೆಸ್‌ ಲೋಕಸಮರಕ್ಕೆ ಭರ್ಜರಿ ತಯಾರಿ ನಡೆಸಿದ್ದು, ಬಿಜೆಪಿ ಇಬ್ಬರು ಶಾಸಕರಿಗೆ ಗಾಳ ಹಾಕಿದೆ.

ಹೌದು, ಈಗಾಗಲೇ ಕಾಂಗ್ರೆಸ್‌ ನಾಯಕ ಸಂಪರ್ಕದಲ್ಲಿರುವ ಯಶವಂತಪುರ ಶಾಸಕ ಎಸ್‌ ಟಿ ಸೋಮಶೇಖರ್‌ ಹಾಗೂ ಶಿವರಾಂ ಹೆಬ್ಬಾರ್‌ ಬಿಜೆಪಿ ನಾಯಕರಿಂದ ಅಂತರವನ್ನ ಕಾಯ್ದುಕೊಂಡಿದ್ದು, ಕಾಂಗ್ರೆಸ್‌ ನತ್ತ ಮುಖ ಮಾಡಿದ್ದಾರೆ. ಇತ್ತ ಉಪಮುಖ್ಯ ಮಂತ್ರಿ ಜೊತೆಗೆ ಈ ಇಬ್ಬರು ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದು, ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಅವರನ್ನ ಎಸ್‌ ಟಿ ಸೋಮಶೇಖರ್‌ ಹಾಗೂ ಶಿವರಾಂ ಹೆಬ್ಬಾರ್‌ ಗುರುವಾರ ಭೇಟಿ ಮಾಡಿರುವುದು ಕಾಂಗ್ರೆಸ್‌ ಬರುವ ತಯಾರಿ ಎನ್ನಲಾಗಿದೆ.

ST Somashekar Shivaram Hebbar Met Home Minister Parameshwar

ಇನ್ನೂ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇನದಲ್ಲೂ ಕಾಂಗ್ರೆಸ್‌ ಶಾಸಕಾಂಗ ಸಭೆಯ ಸದಸ್ಯರಿಗೆ ಆಯೋಜಿಸಿದ್ದ ಭೋಜನ ಕೂಟದಲ್ಲಿ ಎಸ್‌ ಟಿ ಸೋಮಶೇಖರ್‌ ಹಾಗೂ ಶಿವರಾಂ ಹೆಬ್ಬಾರ್‌ ಭಾಗಿಯಾಗಿದ್ದರು. ಅಲ್ಲದೇ ಸದನದಲ್ಲಿ ಚರ್ಚೆ ವೇಳೆ ಸರ್ಕಾರದ ವಿರುದ್ಧ ಸದನ ಸಭಾ ತ್ಯಾಗದ ವೇಳೆಯೂ ಸಹ ಎಸ್‌ ಟಿ ಸೋಮಶೇಖರ್‌ ಸದನದಲ್ಲಿ ಉಳಿದು ಬಿಜೆಪಿ ನಾಯಕರಿಗೆ ಮುಜುಗರವನ್ನುಂಟು ಮಾಡಿದ್ದರು. ಅಲ್ಲದೇ ಪದೇ ಪದೇ ಕಾಂಗ್ರೆಸ್‌ ನಾಯಕರನ್ನ ಭೇಟಿ ಮಾಡುತ್ತಿರುವುದು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಗೆ ಬರುವ ತಯಾರಿಯಾಗಿದೆ ಎಂಬ ಚರ್ಚೆ ಶುರುವಾಗಿದೆ.

ಗೃಹ ಸಚಿವ ಪರಮೇಶ್ವರ್‌ ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆಗೆ ಎಚ್‌ ಟಿ ಸೋಮಶೇಖರ್ ಮಾತನಾಡಿ, 'ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ 19. ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಸಂಚಾರ ದಟ್ಟಣೆ ಹೆಚ್ಚಿರುವ ಮಾಗಡಿ ರಸ್ತೆಗೆ ಪ್ರತ್ಯೇಕ ಪೊಲೀಸ್ ಠಾಣೆ ಮತ್ತು ಬ್ಯಾಡರಹಳ್ಳಿ ಪೊಲೀಸ್ ಠಾಣೆ ವಿಭಜಿಸಿ ಹೊಸದಾಗಿ ಅಂದ್ರಳ್ಳಿ ಪೊಲೀಸ್ ಠಾಣೆ ಮಾಡುವಂತೆ ಸಚಿವರ ಗಮನಕ್ಕೆ X ತಂದಿದ್ದೇನೆ ಎಂದು ಹೇಳಿದರು.

ST Somashekar Shivaram Hebbar Met Home Minister Parameshwar

ಇನ್ನೂ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವ ಕಾಲ ಬಂದಿದೆ ಎಂದು ಬಿಜೆಪಿ ಸಂಸದ ಸದಾನಂದ ಗೌಡ ನೀಡಿರುವ ಹೇಳಿಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಸರಿಯಾಗಿಯೇ ಹೇಳಿದ್ದಾರೆ. ನಾವೇನು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿಲ್ಲ. ಪಕ್ಷದಲ್ಲಿ ಹೇಳುವವರಿಲ್ಲ, ಕೇಳುವವರಿಲ್ಲ ಎಂಬುದು ಸರಿಯಲ್ಲ. ವಿಜಯೇಂದ್ರ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ. ಆರ್. ಅಶೋಕ ಅವರು ವಿಧಾನಸಭೆಯ ವಿರೋಧಪಕ್ಷದ ನಾಯಕ. ಇತ್ತೀಚೆಗೆ ಹೊಸ ಕಾರ್ಯಕಾರಿ ಸಮಿತಿ ರಚಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಪಕ್ಷ. ಕಾಲಕ್ಕೆ ಅನುಗುಣವಾಗಿ ಎಲ್ಲವೂ ನಡೆಯುತ್ತವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+