SSLC Results 2025: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಇವರೇ ನೋಡಿ ರಾಜ್ಯಕ್ಕೆ ಫಸ್ಟ್
SSLC Results 2025: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ-1 ಪರೀಕ್ಷೆಗಳು ಮಾರ್ಚ್ 21ರಿಂದ ಏಪ್ರಿಲ್ 4, 2025ರವರೆಗೆ ನಡೆದಿದ್ದವು. ಇನ್ನು ಇಂದು (ಮೇ 2) ಅಂದುಕೊಂಡಂತೆ ಶಿಕ್ಷಣ ಇಲಾಖೆ ಫಲಿತಾಂಶ ಪ್ರಕಟಿಸಿದೆ. ಹಾಗಾದ್ರೆ ಇಡೀ ರಾಜ್ಯಕ್ಕೆ ಯಾರು ಪ್ರಥಮ ಹಾಗೂ ಯಾವ ಜಿಲ್ಲೆಯವರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ..
ರಾಜ್ಯದಲ್ಲಿ ಇದೇ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ನಡೆದಿದ್ದು, 2,818 ಕೇಂದ್ರಗಳಲ್ಲಿ 8.96 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 4,61,563 ಹುಡುಗರು ಹಾಗೂ 4,34,884 ಹುಡುಗಿಯರು ಪರೀಕ್ಷೆಗೆ ಹಾಜರಾಗಿದ್ದರು. 240 ಕೇಂದ್ರಗಳಲ್ಲಿ 65,000 ಶಿಕ್ಷಕರು ಮೌಲ್ಯಮಾಪನ ನಡೆಸಿದ್ದರು. ಇನ್ನು ಶುಕವಾರ ಕೊನೆಗೂ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ರಾಜ್ಯಕ್ಕೆ ಇವರೇ ಪ್ರಥಮ ನೋಡಿ..

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಫಲಿತಾಂಶ ಪ್ರಕಟಿಸಿದ್ದಾರೆ. ಪ್ರಸಕ್ತ ವರ್ಷ ಶೇ.66.14ಫಲಿತಾಂಶ ಬಂದಿದೆ. ಅದರಲ್ಲೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಮೊದಲೆರಡು ಸ್ಥಾನವನ್ನು ಅಲಂಕರಿಸಿವೆ.
ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶಲ್ಲಿ ದಕ್ಷಿಣ ಕನ್ನಡ ಜಿಲ್ಲೆ (ಶೇ.91.12), ಉಡುಪಿ ಜಿಲ್ಲೆ (ಶೇ.89.96), ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆ ಮೊದಲ ನಾಲ್ಕು ಸ್ಥಾನ ಪಡೆದಿವೆ. ಇನ್ನು ಕಲಬುರಗಿ ಜಿಲ್ಲೆ ಕೊನೇ ಸ್ಥಾನದಲ್ಲಿದೆ. ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.inನಲ್ಲಿ ಫಲಿತಾಂಶ ವೀಕ್ಷಣೆ ಮಾಡಬಹುದು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಾರೆ. ಈ ಪೈಕಿ ಟಾಸ್ 5 ಟಾಪರ್ಸ್‌ಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಎಸ್‌ಎಸ್‌ಎಲ್‌ಸಿ ಟಾಪರ್ಸ್
1. ಅಖಿಲ್ ಅಹಮ್ಮದ್ ನದಾಫ್ -ವಿಜಯಪುರ - ಆಕ್ಸ್ ಫರ್ಡ್ ಹೈ ಸ್ಕೂಲ್ ನಗರಬೆಟ್ಟ, ಮುದ್ದೇಬಿಹಾಳ - 625
2. ಸಿ ಭಾವನ - ಬೆಂಗಳೂರು ಗ್ರಾಮಾಂತರ - ನೀಲಗಿರಿಶ್ವೇರ ವಿದ್ಯಾನಿಕೇತನ ಸ್ಕೂಲ್ ದೇವನಹಳ್ಳಿ - 625
3. ಧನಲಕ್ಷ್ಮಿ - ಬೆಂಗಳೂರು ಉತ್ತರ - ಸೈಂಟ್ ಯಾಶ್ ಪಬ್ಲಿಕ್ ಸ್ಕೂಲ್ ಕೆಂಪೇಗೌಡ ನಗರ ಮಾಗಡಿ ರಸ್ತೆ - 625
4. ಧನುಷ್ - ಮೈಸೂರು - ಮರಿಮಲ್ಲಪ್ಪ ಹೈ ಸ್ಕೂಲ್ ಮೈಸೂರು - 625
5. ಧೃತಿ ಜೆ - ಮಂಡ್ಯ - ಸಾಹುಕಾರ ಎಸ್ ಕೆ ಚಿಕ್ಕಣ್ಣಗೌಡ ಇಂಗ್ಲಿಷ್ ಹೈ ಸ್ಕೂಲ್ ಕೆಆರ್ ಪೇಟೆ - 625
2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಈ ಬಾರಿಯೂ ಹೆಣ್ಣುಮಕ್ಕಳದ್ದೇ ಮೇಲುಗೈ ಸಾಧಿಸಿದ್ದಾರೆ. ಹೆಣ್ಣುಮಕ್ಕಳು ಶೇಕಡ 74, ಗಂಡು ಮಕ್ಕಳು ಶೇಕಡ 58.07. ಒಟ್ಟಾರೆಯಾಗಿ ಈ ಬಾರಿ ಪರೀಕ್ಷೆಗೆ 8,42,173 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಈ ಪೈಕಿ 5,24,984 ವಿದ್ಯಾರ್ಥಿಗಳು ಉತ್ತೀತರ್ಣರಾಗಿದ್ದರೆ, 3,17,189 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 62.34% ಫಲಿತಾಂಶ ಬಂದಿದೆ. ಕಳೆದ ಬಾರಿ ಒಬ್ಬರು ಮಾತ್ರ ಗರಿಷ್ಠ ಅಂಕ ಪಡೆದಿದ್ದರು. ಈ ಬಾರಿ 327 ಮಕ್ಕಳು 620ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಹೀಗೆ ಈ ಬಾಇ ಕಳೆದ ಬಾರಿಗಿಂತಲೂ ಉತ್ತಮ ಫಲಿತಾಂಶ ಬಂದಿಗೆ ಅಂತಲೂ ತಿಳಿಸಿದ್ದಾರೆ.












Click it and Unblock the Notifications