SSLC Results 2025: ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಿಡುಗಡೆ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ?
SSLC Results 2025: ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 21ರಿಂದ ಏಪ್ರಿಲ್ 4, 2025ರ ವರೆಗೆ ನಡೆದಿದ್ದವು. ಇನ್ನು ಇಂದು (ಮೇ 2) ಪತ್ರಿಕಾಗೋಷ್ಠಿ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶ ಬಿಡುಗಡೆ ಮಾಡಿದ್ದಾರೆ. ಹಾಗಾದ್ರೆ ಯಾವ ಜಿಲ್ಲೆ ಎಷ್ಟನೇ ಸ್ಥಾನ ಅಲಂಕರಿಸಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಶುಕ್ರವಾರ ಪ್ರಕಟ ಮಾಡಿದರು. ವಿದ್ಯಾರ್ಥಿಗಳು ಫಲಿತಾಂಶಗಳನ್ನು kseab.karnataka.gov.in ಅಥವಾ karresults.nic.in ನಲ್ಲಿ ಪರಿಶೀಲಬೆ ಮಾಡಬಹುದಾಗಿದೆ.

ಯಾವ ಜಿಲ್ಲೆ ಎಷ್ಟನೇ ಸ್ಥಾನ?: ಈ ಬಾರಿ ಎಸ್‌ಎಲ್‌ಎಲ್‌ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ದ್ವಿತೀಯ ಸ್ಥಾನ ಅಲಂಕರಿಸಿದರೆ, ಕಲಬುರಗಿ ಕೊನೇ ಸ್ಥಾನದಲ್ಲಿ
ಶೇಕಡಾ 91.12ರಷ್ಟು ಫಲಿತಾಂಶ ಪಡೆದು ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆಕೊಂಡಿದೆ. ಉಡುಪಿ ಜಿಲ್ಲೆ 89.96% ಪಡೆಯುವ ಮೂಲಕ ದ್ವಿತೀಯ ಸ್ಥಾನದಲ್ಲಿದೆ. ಕಲಬುರಗಿ ಜಿಲ್ಲೆ ಶೇಕಡಾ 66.14 ಫಲಿತಾಂಶ ಪಡೆದುಕೊಂಡು ಕೊನೇ ಸ್ಥಾನ ಅಲಂಕರಿಸಿದೆ.
ಜಿಲ್ಲಾವಾರು ಉತ್ತೀರ್ಣ ಫಲಿತಾಂಶ
* ದಕ್ಷಿಣ ಕನ್ನಡ - ಶೇಕಡ 91.12
* ಉಡುಪಿ - ಶೇಕಡ 89.96
* ಉತ್ತರ ಕನ್ನಡ - ಶೇಕಡ 83.19
* ಶಿವಮೊಗ್ಗ - ಶೇಕಡ 82.29
* ಕೊಡಗು - ಶೇಕಡ 82.21
* ಹಾಸನ - ಶೇಕಡ 82.12
* ಶಿರಸಿ - ಶೇಕಡ 80.21
SSLC Results 2025: ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಿಡುಗಡೆ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ?
— oneindiakannada (@OneindiaKannada) May 2, 2025
Read more : https://t.co/prNDsdisES
#sslc #karnataka #sslcresults2025 #firstrank #sslcresults #NewsUpdate #OIKannada pic.twitter.com/BFjrwKCs5W
* ಚಿಕ್ಕಮಗಳೂರು - ಶೇಕಡ 77.9
* ಬೆಂಗಳೂರು ಗ್ರಾಮಾಂತರ - ಶೇಕಡ 74.02
* ಬೆಂಗಳೂರು ದಕ್ಷಿಣ - ಶೇಕಡ 72.3
* ಬೆಂಗಳೂರು ಉತ್ತರ - ಶೇಕಡ 72.27
* ಮಂಡ್ಯ - ಶೇಕಡ 69.27
* ಹಾವೇರಿ - ಶೇಕಡ 69.03
* ಕೋಲಾರ - ಶೇಕಡ 68.47
* ಮೈಸೂರು - ಶೇಕಡ 68.39
* ಬಾಗಲಕೋಟೆ - ಶೇಕಡ 68.29
* ಗದಗ - ಶೇಕಡ 67.72
* ಧಾರವಾಡ - ಶೇಕಡ 67.62
* ವಿಜಯನಗರ - ಶೇಕಡ 67.62
* ತುಮಕೂರು - ಶೇಕಡ 67.03
* ದಾವಣಗೆರೆ - ಶೇಕಡ 66.09
* ಚಿಕ್ಕಬಳ್ಳಾಪುರ - ಶೇಕಡ 63.64
* ಚಿತ್ರದುರ್ಗ - ಶೇಕಡ 63.21
* ರಾಮನಗರ - ಶೇಕಡ 63.12
* ಬೆಳಗಾವಿ - ಶೇಕಡ 62.16
* ಚಿಕ್ಕೋಡಿ - ಶೇಕಡ 62.12
* ಚಾಮರಾಜನಗರ - ಶೇಕಡ 61.45
* ಮಧುಗಿರಿ - ಶೇಕಡ 60.65
* ಬಳ್ಳಾರಿ - ಶೇಕಡ 60.26
* ಕೊಪ್ಪಳ - ಶೇಕಡ 57.32
* ಬೀದರ್ - ಶೇಕಡ 53.25
* ರಾಯಚೂರು - ಶೇಕಡ 52.05
* ಯಾದಗಿರಿ - ಶೇಕಡ 51.6
* ವಿಜಯಪುರ - ಶೇಕಡ 49.58
* ಕಲಬುರಗಿ - ಶೇಕಡ 42.43ಬೆಂಗಳೂರು
ಈ ಬಾರಿಯ ಎಸ್‌ಎಸ್‌ಎಲ್‌ಸಿ ಒಟ್ಟು ಫಲಿತಾಂಶ 66.14ರಷ್ಟಿದ್ದು. ಕಳೆದ ವರ್ಷಕ್ಕಿಂತ ಶೇಕಡಾ 8ರಷ್ಟು ಫಲಿತಾಂಶ ಹೆಚ್ಚಳ ಆಗಿದೆ. ಪರೀಕ್ಷೆ ಬರೆದಿದ್ದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇಕಡಾ 70ರಷ್ಟು ವಿದ್ಯಾರ್ಥಿಗಳು ಫಸ್ಟ್ ರ್ಯಾಂಕ್ ಪಡೆದಿದ್ದಾರೆ. ಅಲ್ಲದೆ, 22 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, 625ಕ್ಕೆ 625 ಅಂಕಗನ್ನು ಪಡೆದುಕೊಂಡಿದ್ದಾರೆ. ಇನ್ನು 65 ವಿದ್ಯಾರ್ಥಿಗಳು 624 ಅಂಕ ಪಡೆದಿದ್ದು, 108 ವಿದ್ಯಾರ್ಥಿಗಳು 623 ಅಂಕ ಮತ್ತು 189 ವಿದ್ಯಾರ್ಥಿ 622 ಅಂಕ ಪಡೆದಿದ್ದಾರೆ.
ಈ ಭಾರಿ 144 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದ್ದು, 6 ಸರ್ಕಾರಿ ಶಾಲೆಗಳು, 30 ಅನುದಾನಿತ ಶಾಲೆಗಳು ಮತ್ತು 108 ಅನುದಾನ ರಹಿತ ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. ಪ್ರತಿ ಬಾರಿಯಂತೆ ಈ ಬಾರಿಯೂ ಹೆಣ್ಣುಮಕ್ಕಳು ಮೇಲುಗೈ ಸಾಧಿಸಿದ್ದಾರೆ. ಹೆಣ್ಣು ಮಕ್ಕಳು ಶೇಕಡ 74 ಫಲಿತಾಂಶ ಪಡೆದಿದ್ದರೆ, ಗಂಡುಮಕ್ಕಳು ಶೇಕಡ 58.07 ಫಲಿತಾಂಶ ಪಡೆದಿದ್ದಾರೆ.












Click it and Unblock the Notifications