SSLC: ಪೂರಕ ಪರೀಕ್ಷಾ ಶುಲ್ಕ ಅವಧಿ ವಿಸ್ತರಣೆ
ಬೆಂಗಳೂರು, ಮೇ 21: ಜೂನ್ ತಿಂಗಳಲ್ಲಿ ನಡೆಸುವ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗೆ ಕುಳಿತುಕೊಳ್ಳುವ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ ಹಾಗೂ ನಾಮಿನಲ್ ರೋಲ್ ಪ್ರಸ್ತಾವಣೆಯಲ್ಲಿ ಸಲ್ಲಿಸಲು ದಿನಾಂಕಗಳನ್ನು ವಿಸ್ತರಿಸಲಾಗಿದೆ.
ಪುನರಾವರ್ತಿತ ಅಭ್ಯರ್ಥಿಗಳಿಂದ ಪರೀಕ್ಷಾ ಶುಲ್ಕ ಸ್ವೀಕರಿಸಿ ನೆಫ್ಟ್ ಚಲನ್ ಮೂಲಕ ಜಮೆ ಮಾಡುವ ದಿನಾಂಕ ಮೇ 23, ನಾಮಿನಲ್ ರೋಲ್ ಪ್ರಸ್ತಾವನೆ ಹಾಗೂ ಬ್ಯಾಂಕ್ ಚಲನ್ ಮೂಲ ಪ್ರತಿ ಶಾಲೆಗಳಿಂದ ಮಂಡಳಿಗೆ ತಲುಪಿಸುವ ಕಡೆ ದಿನಾಂಕ ಮೇ 25 ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಣೆ ತಿಳಿಸಿದೆ.

ಏಪ್ರಿಲ್ 30ರಿಂದ ಪರೀಕ್ಷೆ ಪ್ರಾರಂಭವಾಗಿತ್ತು. ಎಸ್‌ಎಸ್‌ಎಲ್‌ಸಿ ಫಲಿತಾಂಶ ಮೇ 7 ರಂದು ಹೊರಬಿದ್ದಿತ್ತು. ಈ ಬಾರಿ ಒಟ್ಟಾರೆ ಶೇ.71.93 ಫಲಿತಾಂಶ ಬಂದಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿಗೆ ಮೊದಲ ಸ್ಥಾನದಲ್ಲಿದ್ದರೆ, ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಶೇಕಡಾ 4ರಷ್ಟು ಹೆಚ್ಚಳವಾಗಿದೆ.












Click it and Unblock the Notifications