SSLC exam: ಮಂಗಳೂರಿನಲ್ಲಿ ಮೊದಲನೇ ದಿನದ SSLC ಪರೀಕ್ಷೆಗೆ 244 ವಿದ್ಯಾರ್ಥಿಗಳು ಗೈರು

ಮಂಗಳೂರು ಏಪ್ರಿಲ್ 1: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 244 ವಿದ್ಯಾರ್ಥಿ ಮೊದಲನೇ ದಿನದ SSLC ಪರೀಕ್ಷೆಗೆ ಗೈರಾಗಿರುವುದು ಕಂಡು ಬಂದಿದೆ. ದಕ್ಷಿಣ ಕನ್ನಡದಲ್ಲಿ ಶುಕ್ರವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಗಮವಾಗಿ ಆರಂಭವಾಯಿತು. ಜಿಲ್ಲೆಯ 98 ಕೇಂದ್ರಗಳಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 27,996 ಹೊಸಬರು ಸೇರಿದಂತೆ 28,506 ಅಭ್ಯರ್ಥಿಗಳು ಕನ್ನಡ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಈ ಪೈಕಿ 189 ಹೊಸಬರು ಸೇರಿದಂತೆ 244 ಅಭ್ಯರ್ಥಿಗಳು ಗೈರು ಹಾಜರಾಗಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡ ದಕ್ಷಿಣ ಕನ್ನಡ ಡಿಡಿಪಿಐ ಡಿ.ಆರ್.ನಾಯಕ್ ಅಭ್ಯರ್ಥಿಗಳು ಪರೀಕ್ಷೆ ಕೈಬಿಡಲು ಕಾರಣ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

SSLC Exam: Mangalore-244 students absented themselves for SSLC examination on the first day

'ಅನೇಕ ಹೊಸ ಅಭ್ಯರ್ಥಿಗಳು ದೀರ್ಘಕಾಲದ ಗೈರುಹಾಜರಿಗಳಾಗಿದ್ದಾರೆ. ಅವರು ಪರೀಕ್ಷೆಗೆ ನೋಂದಾಯಿಸಿಕೊಳ್ಳುತ್ತಾರೆ. ಆದರೆ ಪ್ರವೇಶ ಟಿಕೆಟ್ ತೆಗೆದುಕೊಳ್ಳಲು ಅಥವಾ ಪರೀಕ್ಷೆಯನ್ನು ಬರೆಯಲು ಎಂದಿಗೂ ಆಸಕ್ತಿ ತೋರಿಸುವುದಿಲ್ಲ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 55 ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ 13,235 ವಿದ್ಯಾರ್ಥಿಗಳು ಹಾಜರಾಗಿದ್ದು, 75 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಬೋರ್ಡ್ ಹೈಸ್ಕೂಲ್ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆಯ ವ್ಯವಸ್ಥೆ ಪರಿಶೀಲಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಆರಂಭದ ದಿನ (ಮಾರ್ಚ್ 31) ಯಾವುದೇ ಸ್ಥಳದಿಂದ ಅವ್ಯವಹಾರದ ಪ್ರಕರಣಗಳು ವರದಿಯಾಗಿಲ್ಲ ಎಂದು ನಾಯಕ್ ತಿಳಿಸಿದರು. ಮೊದಲ ದಿನ ಯಾವುದೇ ತೊಂದರೆಗಳಿಲ್ಲದೆ ಸುಸೂತ್ರವಾಗಿ ಸಾಗಿದ್ದು, ಸೋಮವಾರ ಎರಡನೇ ಪರೀಕ್ಷೆ ನಡೆಯಲಿದೆ ಎಂದರು. ಪುತ್ತೂರಿನ ಮಾಣಿಯಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಸಿಇಒ ಕುಮಾರ್ ಭೇಟಿ ನೀಡಿ ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಪರಿಶೀಲಿಸಿದರು.

SSLC Exam: Mangalore-244 students absented themselves for SSLC examination on the first day

ಬೆಂಗಳೂರಿನಲ್ಲಿ ಹಾಲ್‌ಟಿಕೆಟ್ ಸಮಸ್ಯೆ

ಬೆಂಗಳೂರಿನಲ್ಲಿ ಹಲವೆಡೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಆರಂಭದ ದಿನ ಹಾಲ್ ಟಿಕೆಟ್ ನೀಡಿಲ್ಲ ಎಂಬ ದೂರು ಕೇಳಿ ಬಂದಿದೆ. ಶಾಲೆಯ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ನಿರ್ಲಕ್ಷ್ಯ ಮಾಡಿರುವುದು ಕಂಡು ಬಂದಿದೆ. ಪರೀಕ್ಷೆಗೆ ಹಾಲ್‌ಟಿಕೆಟ್‌ ನೀಡಿಲ್ಲವೆಂದು ಶಿಕ್ಷಣ ಸಚಿವರಿಗೆ ಫೋನ್ ಮಾಡಿ ಪೋಷಕರು ದೂರು ನೀಡಿದ್ದಾರೆ. ಇದಕ್ಕೆ ಬಿಸಿ ನಾಗೇಶ್ ಕೂಡ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಎಂಟು ವಿದ್ಯಾರ್ಥಿಗಳು ಹಾಲ್‌ಟಿಕೆಟ್ ಸಿಗದೆ ಪರೀಕ್ಷೆ ಸಮಯದಲ್ಲಿ ಅಂತಂತ್ರರಾಗಿರುವುದು ಕಂಡು ಬಂದಿದೆ. ಈ ವೇಳೆ ಕೋಪಗೊಂಡ ಪೋಷಕರು ಹೇಗಾದರೂ ಮಕ್ಕಳು ಪರೀಕ್ಷೆ ಬರೆಯುವಂತಾಗಬೇಕು ಎಂದು ಒತ್ತಾಯಿಸಿದ್ದಾರೆ. ಯಾವುದೇ ಕಾರಣಕ್ಕೂ ಅವರ ಒಂದು ವರ್ಷದ ಭವಿಷ್ಯ ಹಾಳಾಗಬಾರದು ಎಂದು ಸಚಿವರಿಗೆ ಕರೆ ಮಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

ಬಿಸಿ ನಾಗೇಶ್ ಅವರು ಫೋಷಕರು ಕರೆ ಮಾಡುತ್ತಿದ್ದಂತೆ ಪರಿಶೀಲನೆ ಮಾಡಿ ವಿದ್ಯಾರ್ಥಿಗಳಿಗೆ ಹಾಲ್‌ಟಿಕೆಟ್ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ. ಸೆಂಟ್ ಮೇರಿಸ್ ಶಾಲೆಯ ಮುಖ್ಯೋಪಾಧ್ಯಾಯನ ಜೊತೆ ಮಾತನಾಡಿ ಮಕ್ಕಳಿಗೆ ಪರೀಕ್ಷೆ ಬರಿಯುವಂತೆ ಅನುಮತಿಸಿದ್ದಾರೆ.

SSLC Exam: Mangalore-244 students absented themselves for SSLC examination on the first day

ಪರೀಕ್ಷೆಯ ದಿನಗಳ ವೇಳೆ ನಿಷೇಧಾಜ್ಞೆ

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯನ್ನು ರಾಜ್ಯಾದ್ಯಂತ 31-03-2023 ರಿಂದ 15-04-2023 ರವರೆಗೆ ನಡೆಯಲಿದೆ. ಪರೀಕ್ಷೆಯ ದಿನಗಳ ವೇಳೆ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ನಿಷೇಧಾಜ್ಞೆಯನ್ನು ಜಾರಿಗೊಳಿಸದ ಪ್ರದೇಶದಲ್ಲಿ ಜೆರಾಕ್ಸ್ ಮತ್ತು ಸೈಬರ್ ಸೆಂಟರ್‌ಗಳನ್ನು ತೆರೆಯುವಂತಿಲ್ಲ ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಆದೇಶ ಹೊರಡಿಸಿದ್ದಾರೆ.

SSLC ಪರೀಕ್ಷೆ ಸಮಯ

ಮೊದಲ ಭಾಷೆ ಮತ್ತು ಐಚ್ಛಿಕ ವಿಷಯಗಳಿಗೆ ಪರಿಕ್ಷಾ ಸಮಯ 3 ಗಂಟೆಗಳು ಮತ್ತು ಪ್ರಶ್ನೆ ಪತ್ರಿಕೆ ಓದಲು 15 ನಿಮಿಷಗಳು. ಎರಡನೇ ಮತ್ತು ತೃತೀಯ ಭಾಷೆಯ ಪತ್ರಿಕೆಗಳಿಗೆ ಉತ್ತರ ಬರೆಯಲು 2 ಗಂಟೆ ಮತ್ತು 45 ನಿಮಿಷಗಳು ಮತ್ತು ಪ್ರಶ್ನೆ ಪತ್ರಿಕೆ ಓದಲು 15 ನಿಮಿಷಗಳ ಕಾಲಾವಕಾಶ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+