ರೈಲು ಪ್ರಯಾಣಿಕರಿಗೆ ದೀಪಾವಳಿ ಹಬ್ಬಕ್ಕೆ ಬಂಪರ್!
ದೀಪವಾಳಿ ಹಬ್ಬ ಇನ್ನೇನು ಬಂದೇ ಬಿಡ್ತು, ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಲು ಈಗಲೇ ಜನರು ತಯಾರಿ ಶುರು ಮಾಡಿದ್ದಾರೆ. ಕೆಲಸಕ್ಕೆ ರಜೆ ಕೇಳಿ, ಒಂದೆರಡು ದಿನ ಎಕ್ಸ್‌ಟ್ರಾ ರಜೆ ಕೂಡ ಹಾಕುವ ಪ್ಲಾನ್ ಕೂಡ ಮಾಡಿದ್ದಾರೆ. ಆದರೆ ಒಂದೇ ಒಂದು ದೊಡ್ಡ ಚಿಂತೆ ಕಾಡುತ್ತಿದೆ. ಅದು ಏನಪ್ಪ ಅಂದ್ರೆ ಹಬ್ಬದ ಸಮಯ ಬಂದಾಗ ಬಸ್‌ಗಳಲ್ಲಿ ಜಾಗವೇ ಸಿಗಲ್ಲ, ಹೋಗಲಿ ಬಿಡು ಟ್ರೈನ್ ಮೂಲಕ ಊರು ಸೇರೋಣ ಅಂತಾ ನಿರ್ಧಾರ ಮಾಡಿದರೂ ಸಮಸ್ಯೆ ತಪ್ಪುತ್ತಿಲ್ಲ. ಯಾಕಂದ್ರೆ ಲಕ್ಷಾಂತರ ಜನ ಒಂದೇ ಬಾರಿಗೆ ದೀಢೀರ್ ತಮ್ಮ ತಮ್ಮ ಊರುಗಳಿಗೆ ಹೋಗುವ ಕಾರಣ ಸಂಚಾರ ಸಮಸ್ಯೆ ಆಗುತ್ತಿದೆ. ಇದೇ ಕಾರಣಕ್ಕೆ ರೈಲು ಪ್ರಯಾಣಿಕರಿಗೆ ಇದೀಗ ಗುಡ್ ನ್ಯೂಸ್ ನೀಡಲಾಗಿದೆ!
ಹೌದು, ದೀಪಾವಳಿ & ಛತ್ ಹಬ್ಬ ಹಿನ್ನೆಲೆ ರೈಲು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನ ನಿರ್ವಹಿಸಲು ಹುಬ್ಬಳ್ಳಿ-ಕೊಲ್ಲಂ, ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಸಂತ್ರಗಾಚಿ, ಯಶವಂತಪುರ ಟು ಕೊಟ್ಟಾಯಂ, ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಕಲಬುರಗಿ ಮತ್ತು ಹುಬ್ಬಳ್ಳಿ-ಮುಜಾಫರ್‌ಪುರ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲು ಈಗ ನೈಋತ್ಯ ರೈಲ್ವೆ ನಿರ್ಧರಿಸಿದೆ. ಹಾಗಾದ್ರೆ ದೀಪಾವಳಿ ಹಬ್ಬದ ವಿಶೇಷ ರೈಲುಗಳ ವೇಳಾಪಟ್ಟಿ ಹೇಗಿದೆ? ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ದೀಪಾವಳಿ ಹಬ್ಬದ ವಿಶೇಷ ರೈಲುಗಳು
ಇದೀಗ ಹುಬ್ಬಳ್ಳಿ & ಕೊಲ್ಲಂ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ರೈಲು ಸಂಚಾರ ಮಾಡಲಿದೆ, ಈ ಮೂಲಕ ದೀಪಾವಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್ ಸಿಕ್ಕಂತಾಗಿದೆ. ರೈಲು ಸಂಖ್ಯೆ 07313 ಎಸ್‌ಎಸ್‌ಎಸ್ ಹುಬ್ಬಳ್ಳಿ ಟು ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 26 ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಮಧ್ಯಾಹ್ನ 3.15ಕ್ಕೆ ಹೊರಡಲಿದ್ದು, ಮರು ದಿನ ಸಂಜೆ ವೇಳೆಗೆ, ಅಂದ್ರೆ 5.10ಕ್ಕೆ ಕೊಲ್ಲಂ ನಿಲ್ದಾಣವನ್ನ ತಲುಪಲಿದೆ ಎಂದು ಮಾಹಿತಿ ನೀಡಲಾಗಿದೆ.
ಹಾಗೇ ಈ ರೈಲು ಹಿಂದಿರುಗುವ ಪ್ರಯಾಣದಲ್ಲಿ, ರೈಲು ಸಂಖ್ಯೆ 07314 ಅಕ್ಟೋಬರ್ 27ರ ಭಾನುವಾರ ಕೊಲ್ಲಂನಿಂದ ರಾತ್ರಿ 8.30 ಕ್ಕೆ ಹೊರಟು, ಮರುದಿನ ರಾತ್ರಿ 8.45 ಕ್ಕೆ ಹುಬ್ಬಳ್ಳಿ ತಲುಪಲಿದೆ. ಈ ರೈಲು ದೀಪಾವಳಿ ಹಬ್ಬಕ್ಕೆ ಊರುಗಳಿಗೆ ಹೋಗಬೇಕಿದ್ದ ಪ್ರಯಾಣಿಕರಿಗೆ ಸಹಾಯ ಮಾಡುವ ನಿರೀಕ್ಷೆ ಇದೆ.
ಇನ್ನು ಈ ರೈಲು ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು & ಚಿಕ್ಕಬಾಣಾವರ, ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಕರೂರ್, ದಿಂಡಿಗಲ್, ಮಧುರೈ, ವಿರುಡುನಗರ, ಶಿವಕಾಶಿ, ರಾಜಪಾಳ್ಯಂ, ಶ್ರೀವಿಲ್ಲಿಪುತ್ತೂರು, ಕಡಯನಲ್ಲೂರು & ತೆಂಕಾಶಿ, ಸೆಂಗೋಟ್ಟೈ , ತೆನಮಲೈ , ಪುನಲೂರು, ಆವನೀಶ್ವರಂ, ಕೊಟ್ಟಾರಕರ ಮತ್ತು ಕುಂದರ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.











Click it and Unblock the Notifications