ಜುಲೈ 10ರಿಂದ 2 ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

ಬೆಂಗಳೂರು, ಜುಲೈ 08: ರಾಜ್ಯದಲ್ಲಿ ಜುಲೈ 10ರಿಂದ ಎರಡು ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಇನ್ನು ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಹಾವೇರಿ, ಕಲಬುರಗಿ, ದಕ್ಷಿಣ ಒಳನಾಡಿನ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

 ಉತ್ತರ ಒಳನಾಡಿನಲ್ಲಿ ಮಳೆ

ಉತ್ತರ ಒಳನಾಡಿನಲ್ಲಿ ಮಳೆ

ಇಂಡಿ, ಹಡಗಲಿಯಲ್ಲಿ ಭಾರಿ ಮಳೆಯಾಗಿದೆ, ಕೋಲಾರ, ಶ್ರೀರಾಂಪುರ, ಕಂಪ್ಲಿ, ಹಿರೆಕೆರೂರು, ನರಗುಂದ, ಗೌರಿಬಿದನೂರು, ಚಿಂತಾಮಣಿ, ಶಿವಾನಿ, ಸೇಡಂ, ಕಲಬುರಗಿ, ಔರದ್, ನಾಯಕನಹಟ್ಟಿ, ಬೆವೂರು, ಲಿಂಗಸುಗೂರು, ಚಿಕ್ಕನಾಯಕನಹಳ್ಳಿ, ಹಾಸನ, ಕುಷ್ಟಗಿ, ಕೊಟ್ಟೂರು, ಬಾಗೇಪಲ್ಲಿ, ಸಿರಾದಲ್ಲಿ ಮಳೆಯಾಗಿದೆ.

 ಎಲ್ಲೆಲ್ಲಿ ಮಳೆಯಾಗಲಿದೆ

ಎಲ್ಲೆಲ್ಲಿ ಮಳೆಯಾಗಲಿದೆ

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಇನ್ನು ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಹಾವೇರಿ, ಕಲಬುರಗಿ, ದಕ್ಷಿಣ ಒಳನಾಡಿನ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
 ಬೆಂಗಳೂರಿನ ವಾತಾವರಣ ಹೇಗಿದೆ

ಬೆಂಗಳೂರಿನ ವಾತಾವರಣ ಹೇಗಿದೆ

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಎಚ್‌ಎಎಲ್‌ನಲ್ಲಿ 30.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೆಂಗಳೂರು ನಗರದಲ್ಲಿ 30.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್‌ನಲ್ಲಿ 30.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
 ರಾಜ್ಯದಲ್ಲಿ ಮುಂಗಾರು ಚುರುಕು

ರಾಜ್ಯದಲ್ಲಿ ಮುಂಗಾರು ಚುರುಕು

ಮುಂಗಾರು ರಾಜ್ಯಕ್ಕೆ ಪ್ರವೇಶ ಪಡೆದು ಒಂದು ತಿಂಗಳಾಗಿದ್ದರೂ ಸಹ ಈ ವರೆಗೆ ಹೇಳಿಕೊಳ್ಳುವಂತಹ ಉತ್ತಮ ಮಳೆಯಾಗಿರಲಿಲ್ಲ. ಪಶ್ಚಿಮ ಘಟ್ಟ - ಮಲೆನಾಡನ್ನು ಹೊರತುಪಡಿಸಿ ಉಳಿದೆಡೆ ಸಾಧಾರಣ ಮಳೆಯಾಗಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಮುಂಗಾರು ಚುರುಕಾಗುವುದಾಗಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+