Train Cancelled: ನೈರುತ್ಯ ರೈಲ್ವೆಯ ವಿವಿಧ ರೈಲುಗಳು ಭಾಗಶಃ ರದ್ದು, ಪಟ್ಟಿ, ರೈಲು ಸಂಖ್ಯೆ ಇಲ್ಲಿದೆ
ಹುಬ್ಬಳ್ಳಿ, ಆಗಸ್ಟ್ 19: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ ಹಾಗೂ ರಾಯಚೂರಿನ ಸಿಂಧನೂರು ನಿಲ್ದಾಣಗಳ ಮಧ್ಯೆ ಸಂಚರಿಸುವ ದೈನಂದಿನ ಪ್ಯಾಸೆಂಜರ್ ಸ್ಪೆಷಲ್ ರೈಲುಗಳಿಗೆ (ಸಂಖ್ಯೆ 07381/07382) ಹಳ್ಳಿಗುಡಿ ಹಾಲ್ಟ್ ನಿಲ್ದಾಣದಲ್ಲಿ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆ ಸೌಲಭ್ಯ ಕಲ್ಪಿಸಲಾಗಿದೆ. ಕೆಲವು ರೈಲುಗಳು ಭಾಗಶಃ ರದ್ದುಗೊಂಡಿವೆ. ಅವುಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ನಿಲುಗಡೆಯು ಮುಂದಿನ ತಿಂಗಳ ಸೆಪ್ಟೆಂಬರ್ 1ರಿಂದ ಆರಂಭವಾಗಿ ಮುಂದಿನ ವರ್ಷ 2025ರ ಫೆಬ್ರವರಿ 28 ರವರೆಗೆ ಅಸ್ತಿತ್ವದಲ್ಲಿರುತ್ತದೆ. ಅದರೆ ನಿಲುಗಡೆಯು ಮುಂದಿನ ಆರು ತಿಂಗಳ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಅಪ್ಡೇಟ್ ಮಾಹಿತಿ ಕೊಟ್ಟಿದೆ.

ಅರಸೀಕೆರೆ ಯಾರ್ಡ್‌ನಲ್ಲಿ ಸುರಕ್ಷತೆಗೆ ಕುರಿತಂತೆ ಅಗತ್ಯ ಕಾಮಗಾರಿ ಕೈಗೊಳ್ಳುವ ಸಲುವಾಗಿ, ಈ ಕೆಳಗಿನ ರೈಲುಗಳನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ. ಕೆಲವು ರೈಲುಗಳ ಸಮಯದಲ್ಲಿ ಬದಲಾವಣೆ ಆಗಿದ್ದು, ಕೆಲವು ರೈಲುಗಳನ್ನು ನಿಯಂತ್ರಿಸಲಾಗುತ್ತಿದೆ. ಅವುಗಳ ಮಾಹಿತಿ ಇಲ್ಲಿದೆ.
ಭಾಗಶಃ ರದ್ದಾದ ರೈಲುಗಳ ಪಟ್ಟಿ ಇಲ್ಲಿದೆ
* ಅರಸೀಕೆರೆ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16213) ಆಗಸ್ಟ್ 27, ಸೆಪ್ಟೆಂಬರ್ 3, 10, 17, 22, 24, 29, ಅಕ್ಟೋಬರ್ 1, 6 ಮತ್ತು 15 ರಂದು ಅರಸೀಕೆರೆ-ಬೀರೂರು ನಿಲ್ದಾಣಗಳ ಮಧ್ಯ ರದ್ದಾಗಿರುತ್ತದೆ. ಪ್ರಯಾಣಿಕರು ಗಮನಿಸಿಬೇಕು.
* ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು (ಸಂಖ್ಯೆ 06213) ಆಗಸ್ಟ್ 27, ಸೆಪ್ಟೆಂಬರ್ 3, 10, 17, 24, ಅಕ್ಟೋಬರ್ 1 ಮತ್ತು 15 ರಂದು ಅರಸೀಕೆರೆ-ಹಾಸನ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
* ಎಸ್ಎಸ್ಎಸ್ ಹುಬ್ಬಳ್ಳಿ-ಅರಸಿಕೆರೆ ಡೈಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16214 ) ಆಗಸ್ಟ್ 26, ಸೆಪ್ಟೆಂಬರ್ 2, 9, 16, 21, 23, 28, 31, ಅಕ್ಟೋಬರ್ 5 ಮತ್ತು 14ರಂದು ಬೀರೂರು-ಅರಸಿಕೆರೆ ನಿಲ್ದಾಣಗಳ ನಡುವೆ ಭಾಗಶಃ ರದ್ದು ಮಾಡಲಾಗಿದೆ.

ಈ ರೈಲುಗಳ ಸಮಯದಲ್ಲಿ ಬದಲಾವಣೆ
* ಅರಸೀಕೆರೆ-ಕೆಎಸ್‌ಆರ್ ಬೆಂಗಳೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು (ಸಂಖ್ಯೆ 06274) ಆಗಸ್ಟ್ 27, ಸೆಪ್ಟೆಂಬರ್ 3, 10, 17, 24, ಅಕ್ಟೋಬರ್ 1 ಮತ್ತು 15ರಂದು ಅರಸೀಕೆರೆ ನಿಲ್ದಾಣದಿಂದ 155 ನಿಮಿಷ ತಡವಾಗಿ ಪ್ರಯಾಣಿಸಲಿದೆ.
ನಿಯಂತ್ರಗೊಂಡ ರೈಲುಗಳು ಯಾವುವು?
* ಆಗಸ್ಟ್ 31, ಸೆಪ್ಟೆಂಬರ್ 21, 28, ಅಕ್ಟೋಬರ್ 5 ಮತ್ತು 12, 2024 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 16545 ಯಶವಂತಪುರ-ಸಿಂಧನೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಮಾರ್ಗ ಮಧ್ಯ 30 ನಿಮಿಷಗಳವರೆಗೆ ನಿಯಂತ್ರಣ ಮಾಡಲಾಗುತ್ತದೆ.
* ಆಗಸ್ಟ್ 31, ಸೆಪ್ಟೆಂಬರ್ 21, 28, ಅಕ್ಟೋಬರ್ 5 ಮತ್ತು 12, 2024 ರಂದು ಪ್ರಾರಂಭವಾಗುವ ರೈಲು (ಸಂಖ್ಯೆ 20653) ಕೆಎಸ್ಆರ್ ಬೆಂಗಳೂರು-ಬೆಳಗಾವಿ ಎಕ್ಸ್‌ಪ್ರೆಸ್ ರೈಲು ಮಾರ್ಗ ಮಧ್ಯವೇ 20 ನಿಮಿಷಗಳವರೆಗೆ ನಿಯಂತ್ರಣಗೊಳ್ಳಲಿದೆ.
* ಇನ್ನೂ ಸೋಲಾಪುರ-ಹುಬ್ಬಳ್ಳಿ ಪ್ಯಾಸೆಂಜರ್ ಸ್ಪೆಷಲ್ ರೈಲು (ಸಂಖ್ಯೆ 07331) ಆಗಸ್ಟ್ 20 ಮತ್ತು 22 ರಂದು ಸೋಲಾಪುರದಿಂದ ಪ್ರಯಾಣ ಬೆಳೆಸುವ ರೈಲು ಕುಸುಗಲ್ ಮತ್ತು ಹೆಬಸೂರ ನಿಲ್ದಾಣಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿ ನಿಮಿತ್ತ ಸುಮಾರು ಒಂದು ಗಂಟೆ ಕಲಾ ತಡವಾಗಿ ನಿಗದಿತ ನಿಲ್ದಾಣಕ್ಕೆ ಬಂದು ಸೇರಲಿದೆ ಎಂದು ನೈಋತ್ಯ ರೈಲ್ವೆ ಸಂಪರ್ಕಾಧಿಕಾರಿ ಕನಮಡಿ ತಿಳಿಸಿದ್ದಾರೆ.












Click it and Unblock the Notifications