Karnataka Railways: ಭರ್ಜರಿ ₹3172 ಕೋಟಿ ಆದಾಯ! ಸರಕು ಸೇವೆ, ಪ್ರಯಾಣಿಕರು, ಹೊಸ ಮಾರ್ಗದಲ್ಲಿ ಸಾಧನೆ
ಬೆಂಗಳೂರು, ಏಪ್ರಿಲ್ 02: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತ ವಿವಿಧ ರಾಜ್ಯಗಳಿಗೆ ಸೇವೆ ನೀಡುತ್ತಿರುವ ನೈಋತ್ಯ ರೈಲ್ವೆಯು ಕಳೆದ ಆರ್ಥಿಕ ವರ್ಷದಲ್ಲಿ ಮಹತ್ವದ ಸಾಧನೆ ಮಾಡಿದೆ ಅಧಿಕ ಆದಾಯ ಗಳಿಕೆ, ಸರಕು ಸೇವೆ, ರೈಲ್ವೆ ವಿದ್ಯುದೀಕರಣ ಮತ್ತು ಹೊಸ ಮಾರ್ಗ ನಿರ್ಮಾಣದಲ್ಲಿ ಮೈಲಿಗಲ್ಲು ತಲುಪಿದೆ. ಮೂಲ ಸೌಕರ್ಯ ಅಭಿವೃದ್ಧಿ ಸೇರಿ ಪ್ರತಿ ಹಂತದಲ್ಲೂ ಏಳಿಗೆ ಕಂಡಿದೆ. ಈ ಕುರಿತು SWR ಅಧಿಕಾರಿಗಳು ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.
2024-25 ರ ಆರ್ಥಿಕ ವರ್ಷದಲ್ಲಿ ನೈಋತ್ತ ರೈಲೆಯು ಸರಕು ಸಾಗಣೆ, ಆದಾಯ ಉತ್ಪಾದನೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಯ ದೃಷ್ಟಿಯಲ್ಲಿ ಮಹತ್ವದ ಸಾಧನೆಗಳನ್ನು ಮಾಡಿದೆ. ಆರ್ಥಿಕವಾಗಿ ವಿವಿಧ ಆದಾಯಗಳ ಮೂಲಕ ಗಣನೀಯ ಬೆಳವಣಿಗೆಯನ್ನು ಸಾಧಿಸಿರುವ ನೈಋತ್ತ ರೈಲ್ವೆಯು ಪ್ರಯಾಣಿಕರ ಸಂಚಾರದಿಂದ 3,172.82 ಕೋಟಿ ರೂಪಾಯಿ ಆದಾಯ ಗಳಿಸಿದೆ. ಇದು ಕಳೆದ ವರ್ಷಕ್ಕೆ (2023-24) ಹೋಲಿಸಿದರೆ, 335.24 ಕೋಟಿಗೆ ಹೆಚ್ಚು.

ಪಾರ್ಸೆಲ್ ಆದಾಯವು ಕಳೆದ ವರ್ಷ 157.77 ಕೋಟಿ ರೂಪಾಯಿ ಆಗಿದೆ. ಈ ವರ್ಷ 16.6 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ. ಒಟ್ಟು ಆದಾಯ 8,340.90 ಕೋಟಿ ರೂಪಾಯಿಗೆ ತಲುಪಿದೆ. ಇದು ನೈಋತ್ಯ ರೈಲಿನ ಬಲವಾದ ಆರ್ಥಿಕ ಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ. ವಾಣಿಜ್ಯ ಆದಾಯವೂ ಮಹತ್ತರ ಏರಿಕೆ ಕಂಡಿದ್ದು, 2023-24 ರ 78.90 ಕೋಟಿ ರೂಪಾಯಿಯಿಂದ ಈ ವರ್ಷ 91.60 ಕೋಟಿ ರೂಪಾಯಿ ಸಂಗ್ರಹವಾಗಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ, 165.51 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಿದರೆ ಹಿಂದಿನ ವರ್ಷ ಈ ಸಂಖ್ಯೆ 162.16 ಮಿಲಿಯನ್ ಮಂದಿ ಪ್ರಯಾಣಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸರಕಿನಲ್ಲಿ ಹುಬ್ಬಳ್ಳಿ ವಿಭಾಗದ ಕೊಡುಗೆ ಅಪಾರ
2024-25 ನೇ ಹಣಕಾಸು ವರ್ಷದ ನೈಋತ್ಯ ಒಟ್ಟು 45.66 ಮಿಲಿಯನ್ ಟನ್ ಸರಕುಗಳನ್ನು ದಾಖಲಿಸಲಾಗಿದೆ. ಇದರಲ್ಲಿ ಹುಬ್ಬಳ್ಳಿ ವಿಭಾಗವು 32.69 ಮಿಲಿಯನ್ ಟನ್ ಸರಕು ಸಾಗಿಸುವ ಮೂಲಕ ಪ್ರಮುಖ ಪಾತ್ರ ವಹಿಸಿದೆ., ಮೈಸೂರು ವಿಭಾಗವು 10.89 ಮಿಲಿಯನ್ ಟನ್ ಗುರಿ ಮೀರಿಸುವ ಮೂಲಕ ಮಹತ್ತರ ಸಾಧನೆ ಮಾಡಿದೆ. ಉಳಿದ ಲೋಡಿಂಗ್ ಅನು ಬೆಂಗಳೂರು ವಿಭಾಗ ನಿರ್ವಹಿಸಿದೆ.

ಸರಕು ಲೋಡ್‌ಗಳ ಪ್ರಮಾಣ ಹೆಚ್ಚಳ, ಅಂಕಿ-ಸಂಖ್ಯೆ
ಮಾರ್ಚ್ 2025 ರಲ್ಲಿ, ನೈಋತ್ಯ ಮಾಸಿಕ ತನ್ನ ಅತ್ಯಧಿಕ ಸರಕು ಸಾಗಣೆ 5.024 ಮಿಲಿಯನ್ ಟನ್ ಸಾಗಾಣೆ ಮಾಡಿದೆ. ಇದು ಆರ್ಥಿಕ ವರ್ಷದ ಅತ್ತುತ್ತಮ ಸಾಧನೆ ಆಗಿದೆ. ಈ ವರ್ಷ, ವಲಯವು 2.56 ಮಿಲಿಯನ್ ಟನ್ ಖನಿಜ ತೈಲವನ್ನು ಲೋಡ್ ಮಾಡುವ ಮೂಲಕ ಹೊಸ ಸೌಲಭ್ಯ ಸ್ಥಾಪಿಸಲಾಗಿದೆ. ಅದೇ ರೀತಿ, ಒಂದೇ ದಿನದಲ್ಲಿ 3,870 ಎಂಟು ಚಕ್ರಗಳ ವಾಹನಗಳನ್ನು ಲೋಡ್ ಮಾಡಿದ್ದು, ಈ ವರ್ಷ ದಾಖಲಾದ ಅತಿ ಹೆಚ್ಚು ಲೋಡ್ ಆಗಿದೆ.
2.26 ಮಿಲಿಯನ್ ಟನ್ ಖನಿಜ ತೈಲವನ್ನು ಲೋಡ್ ಮಾಡಲಾಗಿದೆ. 2023-24 ರ 2.11 ಮಿಲಿಯನ್ ಟನ್ ಗರಿಷ್ಠ ದಾಖಲೆಯನ್ನು ಮೀರಿಸುವಲ್ಲಿ ನೈಋತ್ಯ ರೈಲ್ವೆ ಯಶಸ್ವಿಯಾಗಿದೆ. ಉಕ್ಕು ತಯಾರಿಕಾ ಸ್ಥಾವರಗಳಿಗೆ ಕಚ್ಚಾ ವಸ್ತುಗಳ ಲೋಡ್ 1.31 ಮಿಲಿಯನ್ ಟನ್ ತಲುಪಿಸಲಾಗಿದೆ. ಇದೂ ಸಹ ಹಿಂದಿನ ವರ್ಷ 1.10 ಮಿಲಿಯನ್ ಟನ್ ನಷ್ಟು ಅಧಿಕವಾಗಿದೆ. ಡೋಲಮೈಟ್ ಲೋಡ್ ಕೂಡ ಗಣನೀಯ ಏರಿಕೆ ಕಂಡು 0.13 ಮಿಲಿಯನ್ ತಲುಪಿದೆ, ಹಿಂದಿನ ವರ್ಷ 0.052 ಮಿಲಿಯನ್ ಟನ್ ಆಗಿತ್ತು ಎಂದು ಅಧಿಕಾರಿಗಳು ಅಂಕಿ ಸಂಖ್ಯೆ ಸಮೇತ ವಿವರಿಸಿದ್ದಾರೆ.
ಉಕ್ಕು ಲೋಡಿಂಗ್‌ನಲ್ಲಿ ಹೊಸ ಸಾಧನೆ
ಇದೇ ವರ್ಷ 2025ರ ಮಾರ್ಚ್ ರಲ್ಲಿ ಕಬ್ಬಿಣದ ಅದಿರು ಲೋಡ್ 2.02 ಮಿಲಿಯನ್ ಟನ್ ಆಗಿದೆ. ಇದು ವರ್ಷದಲ್ಲಿ ಗರಿಷ್ಠ ದಾಖಲಾಗಿದೆ, ಮಾರ್ಚ್ 3 ರಂದು, ನೈಋತ್ಯ ಆರ್ಥಿಕತೆ ಒಂದೇ ದಿನದಲ್ಲಿ 29 ರೇಕ್‌ಗಳು ಮತ್ತು 1,539 ಯುನಿಟ್‌ಗಳನ್ನು ಲೋಡ್ ಮಾಡುವ ಮೂಲಕ ಉಕ್ಕು ಲೋಡಿಂಗ್‌ನಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಲಾಗಿದೆ.
ಮೂಲಸೌಕರ್ಯ ಅಭಿವೃದ್ದಿಯ ದೃಷ್ಟಿಯಿಂದಲೂ ನೈಋತ್ಯ ಮಹತ್ವದ ಪ್ರಗತಿಯನ್ನು ಸಾಧಿಸಿದೆ. ಕಾರ್ಯಾಚರಣೆಯ ದಕ್ಷತೆಯನು ತನ್ನ ಜಾಲವನ್ನು ಬಲಪಡಿಸುತ್ತಾ, 67.57 ಮಾರ್ಗ ಕಿಲೋಮೀಟರ್ ವಿದ್ಯುದ್ದೀಕರಣ ಪೂರ್ಣಗೊಳಿಸಿದೆ.
ರೈಲ್ವೆ ವಿದ್ಯುದೀಕರಣ, ಹೊಸ ಮಾರ್ಗ ನಿರ್ಮಾಣ
ಇದರಿಂದ ನೈಋತ್ಯ ರೈಲೆಯ ವ್ಯಾಪ್ತಿಯ 3,692 ಕಿಲೋಮೀಟರ್ ಎತ್ತರ 3,323 ಕಿಲೋಮೀಟರ್ ವಿದ್ಯುದ್ದೀಕರಣ ಮಾಡಲಾಗಿದೆ. ಈವರೆಗೆ 26.5 ಕಿಲೋಮೀಟರ್ ಹೊಸ ಮಾರ್ಗಗಳನ್ನು ಯಶಸ್ವಿಯಾಗಿ ನಿರ್ಮಾಣವಾಗಿದೆ. 39.1 ಕಿಲೋಮೀಟರ್ ದೀಪದ ಮಾರ್ಗವನ್ನು ಪೂರ್ಣಗೊಳಿಸಿದೆ. ಈ ಮೂಲಕ ರೈಲು ಸಂಚಾರ ಸಾಮರ್ಥ್ಯ ಮತ್ತು ಸಂಪರ್ಕವನ್ನು ಇನ್ನಷ್ಟು ಸುಧಾರಿಸಲಾಗಿದೆ.
ಸರಕು ಸಾಗಣೆ, ಆದಾಯದ ಉತ್ಪಾದನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನೈಋತ್ಯ ಯೋಜನೆಯ ತೋರಿದ ಅಪೂರ್ವ ಸಾಧನೆಗಳು, ದಕ್ಷತೆ ಮತ್ತು ಸೇವಾ ಸಂಸ್ಥೆಗಳು ಗುಣಮಟ್ಟದಲ್ಲಿ ಈ ವಲಯದ ಬದ್ದತೆಯನು ಪ್ರತಿಬಿಂಬವಾಗಿದೆ. ಈ ಸಾಧನೆಯೊಂದಿಗೆ, ನೈಋತ್ಯ ಸರಕು ಮತ್ತು ಪ್ರಯಾಣಿಕರ ಸೇವೆಗಳಲ್ಲಿ ತನ್ನ ಸೇವಾ ಮಟ್ಟವನ್ನು ಇನ್ನಷ್ಟು ಬಲಪಡಿಸಿದೆ. ಭವಿಷ್ಯದ ಪ್ರಗತಿಗಾಗಿ ಉತ್ತಮ ಸಂಪರ್ಕ ಮತ್ತು ತಡೆರಹಿತ ಕಾರ್ಯಾಚರಣೆ ಖಚಿತಪಡಿಸಿದೆ ಎಂದು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದಕ್ಕಾಗಿ ಅವರು ನೈಋತ್ಯ ರೈಲೆಯ ಉದ್ಯೋಗಿಗಳನ್ನು ಅಭಿನಂದಿಸಿದ್ದಾರೆ. ರೈಲೇಯ ಸೇವೆಯಲ್ಲಿ ಸುರಕ್ಷತೆಗೆ ಧಕ್ಕೆ ಆಗದಂತೆ ಕಾಪಾಡುವಂತೆ ಸಲಹೆ ನೀಡಿದ್ದಾರೆ. ಮುಂದಿನ ವರ್ಷ ನೈಋತ್ಯ ಕಾರ್ಯಕ್ರಮಗಳು ಇನ್ನಷ್ಟು ಉತ್ತಮ ವಸ್ತುಗಳನ್ನು ಸಾಧಿಸಲು ಎಲ್ಲರಿಗೂ ಪ್ರೋತ್ಸಾಹ ನೀಡುವಂತೆ ಅವರು ಕೋರಿದ್ದಾರೆ.
ನೈಋತ್ಯ ರೈಲ್ವೆ ಸಾಧನೆಯ ಸಂಕ್ಷಿಪ್ತ ಮಾಹಿತಿ
* ನೈಋತ್ಯ ರೈಲ್ವೆ 45.66 ಮಿಲಿಯನ್ ಟನ್ ಸರಕು ಸಾಗಣೆಯ ಮಹತ್ತರ ಮೈಲಿಗಲ್ಲು ಸಾಧಿಸಿದೆ.
* ಹುಬ್ಬಳ್ಳಿ ವಿಭಾಗವು 32.69 ಮಿಲಿಯನ್ ಟನ್ ಸಾಧಿಸಿ, ನೈಋತ್ಯ ರೈಲ್ವೆಗೆ ದೊಡ್ಡ ಕೊಡುಗೆ ನೀಡಿದೆ.
* ಮೈಸೂರು ವಿಭಾಗವು 10.84 ಮಿಲಿಯನ್ ಟನ್ ಗುರಿ ಮೀರಿ 10.89 ಮಿಲಿಯನ್ ಟನ್ ಸಾಧಿಸಿದೆ.
* 67.57 ಮಾರ್ಗ ಕಿಲೋಮೀಟರ್ ವಿದ್ಯುದ್ದೀಕರಣ ಪೂರ್ಣ.
* 39.1 ಕಿ.ಮೀ ದ್ವಿಪಥ ಮಾರ್ಗ ಮತ್ತು 26.5 ಕಿ.ಮೀ ಹೊಸ ಮಾರ್ಗ ಪೂರ್ಣ.
* 160 ಕೋಟಿ ರೂ.ಗಳ ಗುರಿಯ ವಿರುದ್ಧ ಸ್ಟ್ರಾಪ್ ಮಾರಾಟದಿಂದ 188.07 ಕೋಟಿ ರೂ.ಗಳ ದಾಖಲೆಯ ಆದಾಯ ಗಳಿಕೆ.












Click it and Unblock the Notifications