ಹೈಕಮಾಂಡ್ ಜೊತೆ ಮೀಟಿಂಗ್ ಮಾಡುವಾಗ ಬಿಎಸ್‌ವೈ, ವಿಜಯೇಂದ್ರ ಹಾಜರಿರಬೇಕಂತೆ: ಹಠ ಹಿಡಿದು ಕೂತ ವಿ ಸೋಮಣ್ಣ
ಬೆಂಗಳೂರು, ಡಿಸೆಂಬರ್ 15: ರಾಜ್ಯ ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದ ವಿ ಸೋಮಣ್ಣ ಅವರಿಗೆ ಬಿಜೆಪಿ ಹೈಕಮಾಂಡ್ ದೆಹಲಿಗೆ ಬರುವಂತೆ ಆಹ್ವಾನ ನೀಡಿದೆ. ಆದರೆ, ವಿ ಸೋಮಣ್ಣ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸಹ ದೆಹಲಿಗೆ ಕರೆಸಿ ಮುಖಾಮುಖಿ ಮಾತುಕತೆ ನಡೆಸಬೇಕು ಎಂದು ಪಟ್ಟು ಹಿಡಿದ್ದಾರೆ.
ಹೌದು, ಬಿಜೆಪಿ ಹೈಕಮಾಂಡ್, ವಿಶೇಷವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೇಡಿಕೆಗೆ ಮನ್ನಣೆ ನೀಡುತ್ತಾರೆಯೇ ಅಥವಾ ಪಕ್ಷದಲ್ಲಿ ಕೆಲವು ಹುದ್ದೆಗಳ ಭರವಸೆ ನೀಡುವ ಮೂಲಕ ಅವರನ್ನು ಸಮಾಧಾನಪಡಿಸುತ್ತಾರೆಯೇ ಎಂದು ನೋಡಬೇಕು.

2023 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ವರುಣಾ ಹಾಗೂ ಚಾಮರಾಜನಗರ ಎರಡರಲ್ಲೂ ವೀರಶೈವ ಲಿಂಗಾಯತ ಸೋಮಣ್ಣ ಸೋಲಿಗೆ ಕಾರಣಗಳು ಸೇರಿದಂತೆ ಕೆಲವು ಅಂಶಗಳನ್ನು ಬಹಿರಂಗಪಡಿಸಲು ನಿಯೋಗ ಯೋಜಿಸಿದೆ. ಯಡಿಯೂರಪ್ಪ ಅವರು ಒಂದು ದಶಕದಿಂದ ಬಿಜೆಪಿಯೊಳಗಿನ ವೀರಶೈವ ಲಿಂಗಾಯತ ನಾಯಕರನ್ನು ಹೇಗೆ ಮುಷ್ಠಿಯಲ್ಲಿರಿಸಲು ಪ್ರಯತ್ನಿಸಿದರು ಎಂಬುದನ್ನು ವಿವರಿಸಲು ನಿಯೋಗ ಮುಂದಾಗಿದೆ ಎಂದು ಹೇಳಲಾಗಿದೆ.
ಮೊದಲ ವಾರದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಪಕ್ಷದ ಹೈಕಮಾಂಡ್ ಬಳಿಗೆ ನಿಯೋಗವನ್ನು ಮುನ್ನಡೆಸುವುದಾಗಿ ಸೋಮಣ್ಣ ಹೇಳಿದ್ದರು. ಆದರೆ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಮುಖ್ಯಮಂತ್ರಿಗಳ ನೇಮಕದಲ್ಲಿ ಕೇಂದ್ರ ನಾಯಕತ್ವ ಇಷ್ಟು ದಿನಗಳ ನಿರತರಾಗಿತ್ತು.
2024ರ ಲೋಕಸಭೆ ಚುನಾವಣೆಗೂ ಮುನ್ನ ಎಲ್ಲ ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ವಿಜಯೇಂದ್ರ ಅವರಿಗೆ ಮನವಿ ಸಲ್ಲಿಸಿದ್ದರೂ,ಯತ್ನಾಳ್ ಸಿಟ್ಟು ಮಾತ್ರ ತಣ್ಣಗಾಗಿಲ್ಲ. ಮಂಗಳವಾರವೂ ಬೆಳಗಾವಿಯಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದ ಅವರು, ವಿಜಯೇಂದ್ರ ಅವರನ್ನು ಇತ್ತೀಚೆಗೆ ರಾಜ್ಯಾಧ್ಯಕ್ಷರಾಗಿ ಮತ್ತು ಆರ್ ಅಶೋಕ ಅವರನ್ನು ವಿರೋಧ ಪಕ್ಷದ ನಾಯಕರಾಗಿ ನೇಮಿಸಿರುವುದಕ್ಕೆ ಯತ್ನಾಳ್ ಬಹಿರಂಗವಾಗಿ ವಾಗ್ದಾಳಿಯನ್ನ ನಡೆಸಿದ್ದಾರೆ.

ತುಮಕೂರಿನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಯಾಗಿರುವ ಸೋಮಣ್ಣ ಅವರು ಇತ್ತೀಚೆಗೆ ಸಿದ್ದಗಂಗಾ ಮಠದಲ್ಲಿ ಸಮಾವೇಶ ನಡೆಸಿದರು. ಆದರೆ ಅವರು ಮತ್ತು ಯಡಿಯೂರಪ್ಪ ಅವರು ಹೊಂದಾಣಿಕೆ ಮಾಡಿಕೊಳ್ಳದ ಹೊರತು ಅವರಿಗೆ ಮತ್ತು ಪಕ್ಷಕ್ಕೆ ಸ್ಥಾನ ಗೆಲ್ಲುವುದು ಕಠಿಣವಾಗುತ್ತದೆ ಎಂಬ ಭಯ ಪಕ್ಷದ ನಾಯಕತ್ವದಲ್ಲಿದೆ. ಇತ್ತೀಚೆಗಷ್ಟೇ ತುಮಕೂರು ಸಂಸದ ಜಿ ಎಸ್ ಬಸವರಾಜು ಅವರನ್ನು ಭೇಟಿ ಮಾಡಿದ ವಿಜಯೇಂದ್ರ ಸೋಮಣ್ಣ ಅವರನ್ನು ಕಣಕ್ಕಿಳಿಸಲು ನೆರವು ಕೋರಿದ್ದರು.
ಇನ್ನೂ ಕಾಂಗ್ರೆಸ್ ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸೋಮಣ್ಣ ಅವರ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ತೀವ್ರ ಆಕಾಂಕ್ಷೆಯಲ್ಲಿದ್ದಾರೆ. ಪಕ್ಷದ ಕಾರ್ಯತಂತ್ರದ ಭಾಗವಾಗಿ ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟು ಚಾಮರಾಜನಗರ ಮತ್ತು ವರುಣಾಕ್ಕೆ ತೆರಳಲು ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಅಮಿತ್ ಶಾ ಸೂಚನೆ ಮೇರೆಗೆ ಸ್ಪರ್ಧಿಸಿ, ಸೋಮಣ್ಣ ಅಂತಿಮವಾಗಿ ಎರಡೂ ಸ್ಥಾನಗಳನ್ನು ಕಳೆದುಕೊಂಡರು. ಸೋಮಣ್ಣ ಅವರು ಚಾಮರಾಜನಗರದಿಂದ ಮಾತ್ರ ಸ್ಪರ್ಧಿಸಲು ಬಯಸಿದ್ದರು. ಅದರತ್ತ ಗಮನ ಹರಿಸಿದ್ದರೆ ಗೆಲ್ಲುತ್ತಿದ್ದರು ಎಂದು ಬಿಜೆಪಿ ಮುಖಂಡರೊಬ್ಬರು ಹೇಳುತ್ತಾರೆ.












Click it and Unblock the Notifications