• search

ಗೌರಿ ಹಂತಕರ ಲಿಸ್ಟಲ್ಲಿ ಜಾಮದಾರ್, ನಿಜಗುಣಾನಂದ, ನಾಗಮೋಹನ್ ದಾಸ್

By Sachhidananda Acharya
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಗೌರಿ ಹಂತಕರು ಗೌರಿ ಅಲ್ಲದೆ ಇನ್ನು 11 ಜನಕ್ಕೆ ಹಾಕಿದ್ರು ಸ್ಕೆಚ್

    ಬೆಂಗಳೂರು, ಜೂನ್ 14: ಗೌರಿ ಲಂಕೇಶ್ ಹಂತಕರು ಕೇವಲ ಗೌರಿ ಹತ್ಯೆಗೆ ಮಾತ್ರ ಸೀಮಿತವಾಗಿರಲಿಲ್ಲ. ಇನ್ನೂ ಹಲವರ ತಲೆಗೆ ಅವರು ಗುರಿ ಇಟ್ಟಿದ್ದರು ಎಂಬ ಸ್ಪೋಟಕ ಮಾಹಿತಿಗಳು ಹೊರಬರುತ್ತಿವೆ.

    ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರಾದ ಪರುಶುರಾಮ್ ವಾಲ್ಮೋರೆ, ಸುಜಿತ್ ಅಲಿಯಾಸ್ ಪ್ರವೀಣ್, ಅಮೋಲ್ ಕಾಳೆಯವರ ಬಳಿಯಿದ್ದ ವಸ್ತುಗಳನ್ನುಪೊಲೀಸ್ ಅಧಿಕಾರಿಗಳು ತಪಾಸಣೆ ವೇಳೆ ವಶಕ್ಕೆ ಪಡೆದಿದ್ದು ಈ ಆಘಾತಕಾರಿ ಮಾಹಿತಿಗಳು ಸಿಕ್ಕಿವೆ.

    ಗೌರಿ ಕೊಲೆ ಪ್ರಕರಣ: ಪರಶುರಾಮ್ ವಾಗ್ಮೋರೆ ಬೆನ್ನತ್ತಿದ ರೋಚಕ ಕಥೆ

    11 ಜನರ ಹತ್ಯೆಗೆ ಸ್ಕೆಚ್

    ಆರೋಪಿಗಳ ಬಳಿಯಿಂದ ವಶಕ್ಕೆ ಪಡೆದುಕೊಂಡ ಪುಸ್ತಕ, ಡೈರಿಗಳಲ್ಲಿ ಒಟ್ಟು 11 ಜನರ ಹೆಸರುಗಳಿತ್ತು ಎಂದು ತಿಳಿದು ಬಂದಿದೆ. ಇವರಲ್ಲಿ ಮೂರು ಜನರ ಹೆಸರನ್ನು ಪ್ರತ್ಯೇಕವಾಗಿ ಅಂತಿಮಗೊಳಿಸಲಾಗಿತ್ತು.

    SM Jamadar, Nijagunananda Sri, Nagmohan Das in Gauri Lankesh killers hit list

    ಅವರು ಮತ್ಯಾರೂ ಅಲ್ಲ. ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ್, ನಿಜಗುಣಾನಂದ ಸ್ವಾಮೀಜಿ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್. ಇವರೆಲ್ಲಾ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಬೇರೆ ಬೇರೆ ರೀತಿಯಲ್ಲಿ ತೊಡಗಿಸಿಕೊಂಡಿದ್ದರು ಎಂಬುದು ಗಮನಾರ್ಹ.

    ಈ ನಾಯಕರ ಭಾಷಣಗಳು ಆರೋಪಿಗಳ ಬಳಿ ಸಿಕ್ಕಿವೆ ಎನ್ನಲಾಗಿದೆ. ಜೊತೆಗೆ ನಿಜಗುಣಾನಂದ ಸ್ವಾಮೀಜಿಯವರ ಬಗ್ಗೆ ವಿವರಗಳನ್ನೂ ಕಲೆ ಹಾಕಿದ್ದರು. ಅವರು ಸಂಚರಿಸುವ ಕಾರಿನ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿದ್ದರು ಎಂದು ತಿಳಿದು ಬಂದಿದೆ.

    ಈ ಮೂವರಲ್ಲದೆ ಮೈಸೂರು ವಿವಿ ಪ್ರಧ್ಯಾಪಕ ಮಹೇಶ್ ಚಂದ್ರ ಗುರು ಅವರ ಹೆಸರುಗಳು ಈ ಪಟ್ಟಿಯಲ್ಲಿದ್ದವು ಎಂದು ಪೊಲೀಸರು ಮೂಲಗಳು ಹೇಳಿವೆ. ಹೀಗಾಗಿ ಇವರಿಗೆಲ್ಲಾ ಎಚ್ಚರಿಕೆಯಲ್ಲಿರುವಂತೆ ಸೂಚನೆ ನೀಡಲಾಗಿದೆ. ಮಹೇಶ್ ಚಂದ್ರ ಗುರು ಅವರಿಗೆ ಇದೀಗ ಪೊಲೀಸ್ ಭದ್ರತೆಯೂ ನೀಡಲಾಗಿದೆ.

    ಹಿಟ್ ಲಿಸ್ಟ್ ನಲ್ಲಿದ್ದವರ ಕಥೆ ಹೀಗಾದರೆ ಸದಾ ವಿವಾದಗಳ ತರಂಗಗಳನ್ನು ಎಬ್ಬಿಸುವ ಸಾಹಿತಿ ಕೆ.ಎಸ್. ಭಗವಾನ್ ಹತ್ಯೆಗೆ ತಂಡ ಅಂತಿಮ ತಯಾರಿಯನ್ನೇ ನಡೆಸಿತ್ತು. ವಿಧಾನಸಭೆ ಚುನಾವಣೆ ಮುನ್ನವೇ ಭಗವಾನ್ ಕತೆ ಮುಗಿಸಲು ಹಂತಕರು ಸಿದ್ಧರಾಗಿದ್ದರು ಎಂದು ಗೊತ್ತಾಗಿದೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Gauri Lankesh killers plotted to assassinate retired IAS officer SM Jamadar, Nijagunananda Swamiji, retired high court judge Nagmohan Das and 8 others as per investigation sources.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more