Get Updates
Get notified of breaking news, exclusive insights, and must-see stories!

ಕರ್ನಾಟಕ: 2021ರಿಂದ ಈವರೆಗೆ ಕಲುಷಿತ ನೀರಿಗೆ 40 ಬಲಿ: ಬಲವಾದ ನೀತಿ ಅಗತ್ಯವಿದೆ

ಬೆಂಗಳೂರು, ಆಗಸ್ಟ್ 04: ಕರ್ನಾಟಕ ರಾಜ್ಯದಲ್ಲಿ ಬೇಸಿಗೆ ಬಂತೆಂದರೆ ಸಾಕು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುತ್ತದೆ. ಇಷ್ಟಾದರೆ ಪರಿವಾಗಿಲ್ಲ, ಆದರೆ ಪೂರೈಕೆಯಾಗುವ ನೀರು ಕಲುಷಿತೊಂದು ಜನ ಜೀವಕ್ಕೆ ಕಂಟಕ ಆಗುತ್ತಿದೆ. ಇಂತಹ ಘಟನೆಗಳು ಹೆಚ್ಚಾಗಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಭಾಗದ ಹಳ್ಳಿಗಳಲ್ಲಿ ಸಂಭವಿಸುತ್ತಿರುವುದು ದುರಂತ ಎನ್ನಬಹುದು.

ರಾಜ್ಯದಲ್ಲಿ ಈವರೆಗೆ ನೀರಿನ ಕಲುಷಿತ ಪೂರೈಕೆ, ಸೇವೆನೆಯಿಂದಾಗಿ ಸಾವುಗಳು ಹೆಚ್ಚಾಗುತ್ತಿದ್ದು, ಇದು ಕರ್ನಾಟಕ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಸರಬರಾಜು ಆಗುತ್ತಿರುವುದು ಜೀವನ ಹಾನಿಯಂತ ಅಪಾಯ ತಂದೊಡ್ಡಬಹುದಾಗಿದೆ.

Since 2021 Contaminted Water Reason 40 Death, Need Strong Policy For Fight Against Dirty Water

ಇಂತಹ ಸಾವಿನ ಪ್ರಕರಣ ತಡೆಗೆ ರಾಜ್ಯದಲ್ಲಿ ಬಲವಾದ ನೀತಿ-ನಿಯಮ ರೂಪಿಸುವ ಅಗತ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ. ಸೂಕ್ತ ಯೋಜನೆ ಮೂಲಕ ನೀರು ಕಲುಷಿತಗೊಳ್ಳದಂತೆ, ಸಾವು ನೋವು ಸಂಭವಿಸಿದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕಿದೆ.

ಒಂದೇ ದಿನ ಆರು ಸಾವು, ನೂರಾರು ಮಂದಿ ಆಸ್ಪತ್ರೆಗೆ ದಾಖಲು

ಆರೋಗ್ಯ ಇಲಾಖೆ ಪ್ರಕಾರ, 2021 ರಿಂದೀಚೆಗೆ ನೀರಿನ ಮಾಲಿನ್ಯದಿಂದಾಗಿ ಕನಿಷ್ಠ 40 ಜನರು ಮೃತಪಟ್ಟ ಬಗ್ಗೆ ವರದಿ ಆಗಿದೆ. 2021 ಸೆಪ್ಟೆಂಬರ್ 21 ರಂದು ಒಂದೇ ದಿನ ವಿಜಯನಗರ ಜಿಲ್ಲೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಆರು ಜನರು ಸಾವನ್ನಪ್ಪಿದರು. ಅಂದು ನೂರಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು.

ರಾಜ್ಯದ ಕೊಪ್ಪಳ, ರಾಯಚೂರು, ಬೀದರ್, ಚಿತ್ರದುರ್ಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ತಿಂಗಳಲ್ಲಿ ಕೆಟ್ಟ ನೀರು ಸೇವಿಸಿ ಸಾವಿಗೀಡಾದ ಪ್ರಕರಣಗಳು ತಿಂಗಳಿಗೆ 1-2 ವರದಿ ಆಗುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚಿನ ಕೆಲವು ಘಟನೆಗಳ ಕುರಿತು ತನಿಖೆಗೆ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಘಟನೆ, ಶುದ್ಧ ಕುಡಿಯುವ ನೀರು, ಸರಬರಾಜು ಕುರಿತು ಮಾಹಿತಿ ಕೇಳಿದ್ದಾರೆ. ಆದರೆ ಯಾವ ಕ್ರಮಗಳು ಇನ್ನೂವರೆಗೆ ಜಾರಿಯಾಗಿಲ್ಲ.

Since 2021 Contaminted Water Reason 40 Death, Need Strong Policy For Fight Against Dirty Water

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯಲು ಸಾರ್ವಜನಿಕ ನಲ್ಲಿಗಳ ನೀರನ್ನೇ ಜನ ಬಳಸುತ್ತಾರೆ. ಜೊತೆಗೆ ಇನ್ನೂ ಅಲ್ಲಿ ಕೈ ಪಂಪ್ ಬೋರ್‌ಗಳು, ಬಾವಿಗಳ ನೀರು ಕುಡಿಯಲು ಬಳಕೆ ಆಗುತ್ತದೆ. ಇವೆಲ್ಲವು ಮಾಲಿನ್ಯಗೊಂಡಾಗ ಇಂತಹ ಪ್ರಕರಣಗಳು ಸಂಭವಿಸುತ್ತವೆ. ಕೆಲವೆಡೆ ಪಂಚಾಯಿ ಪೂರೈಸುವ ನೀರಿನಲ್ಲಿ ಕಲುಷಿತ ಮಿಶ್ರಣಗೊಂಡ ಘಟನೆಗಳು ಕೊಪ್ಪಳ್ಳದಲ್ಲಿ ಈ ಹಿಂದೆ ವರದಿ ಆಗಿತ್ತು.

ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚು

ಮುಖ್ಯವಾಗಿ ಉತ್ತರ ಕರ್ನಾಟಕ ಜಿಲ್ಲೆಗಳು ದೀರ್ಘಕಾಲದಿಂದ ಸುರಕ್ಷಿತ ಕುಡಿಯುವ ನೀರಿನ ಕೊರತೆ ಎದುರಿಸುತ್ತಿವೆ. ಈ ಸಮಸ್ಯೆ ಪರಿಹರಿಸಲು ಕೆಲಸ ಮಾಡುತ್ತಿರುವ ಎನ್‌ಜಿಒ ಸಂಚಾಲಕ ಪಿಜಿ ಗಂಗಾಧರ್ ಅವರು ಮಾತನಾಡಿ, ನೀರಿನ ಮೂಲಗಳಲ್ಲಿ ಹೆಚ್ಚಿನವು ಕಲುಷಿತಗೊಂಡ ಹಿನ್ನೆಲೆಯಲ್ಲಿ ಕುಡಿಯಲು ಅವು ಯೋಗ್ಯವಾಗಿರುವುದಿಲ್ಲ. ನಂತರ ಬಂದ ಸರ್ಕಾರಗಳು ವಿವಿಧ ಗ್ರಾಮಗಳಲ್ಲಿ ನೀರು ಶುದ್ಧೀಕರಣ ಯಂತ್ರಗಳನ್ನು ಅಳವಡಿಸಲಾಗಿದೆ. ಆದರೆ ಅವುಗಳ ನೀರಿನ ಪೂರ್ಣ ಅಗತ್ಯವನ್ನು ಪೂರೈಸಲು ಸಾಕಾಗುತ್ತಿಲ್ಲ ಎಂದು ಅವರು ಮಾಹಿತಿ ನೀಡಿದರು.

ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದ ಗ್ರಾಮಗಳಲ್ಲಿ ಅಂತರ್ಜಲವು ಹೆಚ್ಚಿನ ಪ್ರಮಾಣದಲ್ಲಿ ನೈಸರ್ಗಿಕವಾಗಿ ಆರ್ಸೆನಿಕ್ ಮತ್ತು ಫ್ಲೋರೈಡ್ ಅನ್ನು ಹೊಂದಿದೆ. ಇದರ ನಿರಂತರ ಸೇವನೆಯಿಂದ ಅನಾರೋಗ್ಯ ಸಂಭವಿಸಬಹುದು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.

ರಸಾಯನಿಕ ಭಾರೀ ಕೈಗಾರಿಕೆಗಳು, ರಾಸಾಯನಿಕ ಘಟಕಗಳು ಹಾಗೂ ಜವಳಿ ಕಾರ್ಖಾನೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯಗಳು ಸಹ ಅನಾರೋಗ್ಯ ಸಮಸ್ಯೆ, ನೀರು ಕಲುಷಿತಗೊಳ್ಳಲು ಕಾರಣ ಎನ್ನಲಾಗುತ್ತಿದೆ. ಇದರೊಂದಿಗೆ ಸೂಕ್ತ ನೈರ್ಮಲ್ಯ ಸೌಲಭ್ಯಗಳು ಇಲ್ಲಿದಿರುವುದು ಒಂದು ಕಾರಣವಾಗಿದೆ ಎಂದು ಅಂತರ್ಜಲ ತಜ್ಞರೊಬ್ಬರು ಹೇಳಿದರು.

ಅಪಾಯ ತಡೆಗೆ ಅಗತ್ಯ ಎಚ್ಚರಿಕೆ ವಹಿಸಬೇಕು

ಹಳ್ಳಿ ಭಾಗಗಳಲ್ಲಿ ಓವರ್‌ ಹೆಡ್‌ ಟ್ಯಾಂಕ್ ನಿಂದ ನೀರು ಸರಬರಾಜು ಆಗುತ್ತದೆ. ಆ ಕುಡಿಯುವ ನೀರಿನೊಂದಿಗೆ ಕೊಳಚೆ ನೀರು ಮಿಶ್ರಣ ಆಗುವುದನ್ನು ತಪ್ಪಿಸಲು ತಪಾಸಣೆ ಕೈಗೊಳ್ಳಬೇಕು. ನೆಲಮಟ್ಟದ ಮತ್ತು ಓವರ್‌ಹೆಡ್ ಟ್ಯಾಂಕ್‌ಗಳ ಆಗಾಗ್ಗೆ ತಪಾಸಣೆಗೆ ಒಳಪಡಿಸಬೇಕು. ಇಂತಹ ಕ್ರಮಗಳನ್ನು ಸಭವನೀಯ ಅಪಾಯ ತಡೆಯಲು ಸಾಧ್ಯವಾಗುತ್ತದೆ.

ಸರ್ಕಾರವು ಕುಡಿಯುವ ನೀರಿನ ವಿಚಾರವನ್ನು, ಅದರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕಟ್ಟುನಿಟ್ಟಾದ ನಿಯಮಗಳ ಜಾರಿ ಜೊತೆಗೆ ತ್ಯಾಜ್ಯನೀರಿನ ಸಂಸ್ಕರಣಾ ಘಟಕಗಳು, ಜಾಗೃತಿ ಅಭಿಯಾನಗಳು ಮತ್ತು ಸಮುದಾಯ ಆಧಾರಿತ ಉಪಕ್ರಮಗಳ ಮೂಲಕ ನೀರಿನ ಮಾಲಿನ್ಯವನ್ನು ಪರಿಹರಿಸಲು ಎನ್‌ಜಿಓ ಮತ್ತು ಸಮುದಾಯ ಸಂಸ್ಥೆಗಳನ್ನು ತೊಡಗಿಸಿಕೊಳ್ಳಬೇಕು ಎಂದು ತಜ್ಞರ ವಲಯದಿಂದ ಸಲಹೆಗಳು ವ್ಯಕ್ತವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+