ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಕೇಸ್: ಕೃಪಾ ಆಳ್ವಾ ಕಾಂಗ್ರೆಸ್‌ನಿಂದ 6 ವರ್ಷ ಉಚ್ಚಾಟನೆ

ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡೆ ಕೃಪಾ ಆಳ್ವ ಅವರಿಗೆ ಪಕ್ಷದಿಂದ 6 ವರ್ಷಗಳ ಉಚ್ಚಾಟನೆ ಶಿಕ್ಷೆ ವಿಧಿಸಲಾಗಿದೆ. ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅವರನ್ನು ಉಚ್ಚಾಟಿಸಿ ಕೆಪಿಸಿಸಿ ಆದೇಶ ಹೊರಡಿಸಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಸೂಚನೆಯ ಮೇರೆಗೆ ಕೆಪಿಸಿಸಿ ಉಪಾಧ್ಯಕ್ಷ ಎಂ. ನಾರಾಯಣಸ್ವಾಮಿ ಅವರು ಈ ಆದೇಶವನ್ನು ಹೊರಡಿಸಿದ್ದು, ಉಚ್ಚಾಟನೆ ತಕ್ಷಣದಿಂದಲೇ ಜಾರಿಗೆ ಬರಲಿದೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್‌ ಮಾತನಾಡಿ, ಸಾರ್ವಜನಿಕ ಕ್ಷೇತ್ರದಲ್ಲಿ ನಾಯಕರಿಗೆ ಮುಜುಗರ ಉಂಟುಮಾಡುವ ಕೆಲಸದಿಂದ ಮಾಧ್ಯಮಗಳಲ್ಲಿ ಅಹಿತಕರ ಸುದ್ದಿಗಳು ಬಂದಿದ್ದವು. ಈ ವಿಚಾರವಾಗಿ ಕಾರಣ ಕೇಳಿ ನೋಟೀಸ್ ನೀಡಿ ಉತ್ತರ ನೀಡಲು ಮೂರು ದಿನಗಳ ಕಾಲಾವಕಾಶ ನೀಡಲಾಗಿತ್ತು. ಅವರಿಂದ ಉತ್ತರ ಬಾರದ ಕಾರಣ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ ಎಂದರು.

Siddaramaiah Sting Operation Kripa Alva Expelled from Karnataka Pradesh Congress Committee for 6 Years

Siddaramaiah Sting Operation: ಬೇರೆ ವಿಧಿ ಇಲ್ಲದೆ ಕೆಪಿಸಿಸಿ ಕ್ರಮ

ನೋಟೀಸ್ ಅವರಿಗೆ ತಲುಪಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ, ಅವರಿಗೆ ಕಳುಹಿಸಿದ ನೋಟೀಸ್ ವಾಪಸ್ ಬಂದಿದೆ. ಹೀಗಾಗಿ ಬೇರೆ ವಿಧಿ ಇಲ್ಲದೆ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ಕೃಪ ಆಳ್ವಾ ಅವರು ವಿದೇಶಕ್ಕೆ ಹೋಗಿರುವ ವಿಚಾರವಾಗಿ ಮಹಾಮಾನವನ ಐಬಿ, ಸಿಬಿಐ ನೋಡಿಕೊಳ್ಳುತ್ತದೆ. ನಾನು ಅದರ ಬಗ್ಗೆ ನೋಡುವುದಿಲ್ಲ ಎಂದು ಬಿ ಕೆ ಹರಿ ಪ್ರಸಾದ್‌ ಹೇಳಿದರು.

ಇಷ್ಟು ತಡವಾಗಿ ಕ್ರಮ ಯಾಕೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನಾವು ದುಡುಕಿ ಹೆಜ್ಜೆ ಇಡುವ ಮುನ್ನ, ಅವರನ್ನು ಕೇಳಿ ಕ್ರಮ ಕೈಗೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಒಂದು ಅವಕಾಶ ನೀಡಬೇಕು. ಅವರು ಉತ್ತರ ನೀಡದೇ ಇದ್ದಾಗ ತೀರ್ಮಾನ ಕೈಗೊಂಡಿದ್ದೇವೆ ಎಂದರು.

ಕೃಪ ಆಳ್ವಾ ಅವರ ಹಿಂದೆ ಬೇರೆ ಯಾರಾದರೂ ಇದ್ದಾರ ಎಂಬ ವಿಚಾರವಾಗಿ ಪಕ್ಷದಲ್ಲಿ ಆಂತರಿಕ ತನಿಖೆ ಮಾಡಿಸುತ್ತೀರಾ ಎಂದು ಕೇಳಿದಾಗ, "ಈ ವಿಚಾರವನ್ನು ಮಹಾಮಾನವನಿಗೆ ಬಿಟ್ಟಿದ್ದೇವೆ. ಕೃಪ ಆಳ್ವಾ ಅವರ ವಿರುದ್ಧ ನೇರ ಸಾಕ್ಷಿ ಇರುವ ಕಾರಣ ಉಚ್ಛಾಟಿಸಿದ್ದೇವೆ ಎಂದರು.

ನಾಗ್ಪುರ ಎಂದರೆ ಕನ್ನಡದಲ್ಲಿ ಹಾವಿನಪುರ

ನಾಗ್ಪುರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ಬಗ್ಗೆ ಕೇಳಿದಾಗ, ನಾಗ್ಪುರ ಎಂದರೆ ಕನ್ನಡದಲ್ಲಿ ಹಾವಿನಪುರ. ದೇಶದಲ್ಲಿ ದ್ವೇಷದ ವಿಷ ಕಾರುವ ಸಂಘಟನೆ ಕತ್ತಿಗೆ ಕೈ ಹಾಕಿ ಹಿಡಿದಿದ್ದೇವೆ. ಅಲ್ಲಿ ಆರಂಭವಾಗಿದ್ದು, ದೇಶದಲ್ಲಿ ಅವರನ್ನು ಮಣಿಸುವ ಸಂದೇಶ ರವಾನಿಸುತ್ತೇವೆ ಎಂದರು.‌

ಕಾಂಗ್ರೆಸ್ ಪಕ್ಷವನ್ನು ಮಣಿಸಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ಕೇಳಿದಾಗ, "ಕಾಂಗ್ರೆಸ್ ಸೋಲಿಸಿದ್ದೇವೆ ಎಂದು ಹೇಳಿಕೊಂಡು ಹೋದರೆ ಆಗುವುದಿಲ್ಲ. ಮಹಾಮಾನವನ ಕ್ಷೇತ್ರ ವಾರಣಾಸಿಯಲ್ಲಿ ಬಹಳ ಕೆಟ್ಟದಾಗಿ ಸೋತಿದ್ದಾರೆ. ಬಿಜೆಪಿ ಅಧ್ಯಕ್ಷನ ಕ್ಷೇತ್ರ ಬಿಹಾರದಲ್ಲಿ, ನಿತೀನ್ ಗಡ್ಕರಿ ಅವರ ಕ್ಷೇತ್ರದಲ್ಲಿ, ಯೋಗಿ ಆದಿತ್ಯನಾಥ್ ಕ್ಷೇತ್ರದಲ್ಲಿ ಸೋತಿದ್ದಾರೆ" ಎಂದು ತಿಳಿಸಿದರು.

ಕಮಲ-ದಳ ನಾಯಕರಿಗೆ ತಿರುಗೇಟು

ದೇವೇಗೌಡರನ್ನು ಯಡಿಯೂರಪ್ಪ ಅವರು ಭೇಟಿ ಮಾಡಿದ ಬಳಿಕ ಈ ಸರ್ಕಾರದ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಆನೆ ನಡೆಯುವಾಗ ಏನಾದರೂ ಬೀಳಬಹುದು ಎಂದು ಅದರ ಹಿಂದೆ ತೋಳ ಮತ್ತು ನರಿ ನಡೆದುಕೊಂಡು ಹೋಗುತ್ತಿರುತ್ತದೆ. ಅದರಲ್ಲಿ ತಪ್ಪೇನಿಲ್ಲ ಎಂದು ತಿರುಗೇಟು ನೀಡಿದರು.

ದೆಹಲಿ ಪ್ರತಿಭಟನೆ ಬಗ್ಗೆ ಮಾತನಾಡಿ, ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಸಲು ಹೋರಾಟಕ್ಕೆ ಕರೆ ನೀಡಿದ್ದಾರೆ. ಕರ್ನಾಟಕದಿಂದ ಹೋಗಲು ರೈಲ್ವೇಗೆ ಅನುಮತಿ ನೀಡಿರಲಿಲ್ಲ. ಆಮೂಲಕ ನಾವು ಭಾಗವಹಿಸಲು ತೊಂದರೆ ನೀಡಿದ್ದಾರೆ. ನಮ್ಮ ಕಾರ್ಯಕರ್ತರು ಈಗಾಗಲೇ ಸಹಸ್ರಾರು ಸಂಖ್ಯೆಯಲ್ಲಿ ದೆಹಲಿ ತಲುಪಿದ್ದು, ರಾಮಲೀಲಾ ಮೈದಾನದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣೆಗಾಗಿ ದೊಡ್ಡ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+