ಮೋದಿ, ಅಮಿತ್ ಶಾಗೆ ಸಿದ್ದರಾಮಯ್ಯ 5 ಪ್ರಶ್ನೆಗಳು!
Recommended Video

ಬೆಂಗಳೂರು, ಫೆಬ್ರವರಿ 20 : ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಟ್ವಿಟರ್ ವಾರ್ ಮುಂದುವರೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಮಂಗಳವಾರ ಕುಕ್ಕೆ ಸುಬ್ರಮಣ್ಯದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದ ಅಮಿತ್ ಶಾ, 'ನಾನು ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡುತ್ತೇನೆ. 5 ವರ್ಷದಲ್ಲಿ ನೀವೇನು ಸಾಧನೆ ಮಾಡಿದ್ದಿರಿ?. ನೀವು ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ, ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದೆ. ನಿಮ್ಮ ದುರಾಡಳಿತದ ವಿರುದ್ದ ಜನ ಈ ಬಾರಿ ಹೋರಾಡುತ್ತಾರೆ' ಎಂದು ಹೇಳಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಯಕ್ತಿಕ ಟ್ವಿಟರ್ ಖಾತೆ @siddaramaiah ಮೂಲಕ ಅಮಿತ್ ಶಾ ಮತ್ತು ನರೇಂದ್ರ ಮೋದಿ ಅವರಿಗೆ ಉತ್ತರ ಕೊಟ್ಟಿದ್ದಾರೆ. ಹಲವಾರು ಪ್ರಶ್ನೆಗಳನ್ನು ಅವರ ಮುಂದಿಟ್ಟಿದ್ದಾರೆ.
'ರಾಜ್ಯದಲ್ಲಿ ಗೂಂಡಾ ಸರ್ಕಾರವಿದೆ ಎಂದು ಆರೋಪಿಸುತ್ತಿರುವುದು ಜೈಲು ಸೇರಿದ, ಗಡಿಪಾರಾದ ಗುಜರಾತ್‌ನ ಮಾಜಿ ಗೃಹ ಸಚಿವರು' ಎಂದು ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಮಾಡಿದ ಟ್ವಿಟ್‌ಗಳ ವಿವರ ಇಲ್ಲಿವೆ ನೋಡಿ...
| Array |
ಕಮಿಷನ್ ಸರ್ಕಾರ ಆರೋಪಕ್ಕೆ ತಿರುಗೇಟು
ಕಮಿಷನ್ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕು ಮೋದಿ ಅವರಿಗೆ ಇದೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೋದಿ ಬೆಂಗಳೂರು ಮತ್ತು ಮೈಸೂರಿನ ಸಮಾವೇಶದಲ್ಲಿ 'ರಾಜ್ಯದಲ್ಲಿ ಕಮಿಷನ್ ಸರ್ಕಾರವಿದೆ' ಎಂದು ಆರೋಪಿಸಿದ್ದರು.
| Array |
ಪ್ರಧಾನಿ ಹುದ್ದೆಯಲ್ಲಿ ಮುಂದುವರೆಯಲು ಅರ್ಹತೆ ಇಲ್ಲ
'ಕಮಿಷನ್ ವ್ಯವಹಾರದ ಬಗ್ಗೆ ಮೋದಿ ಅವರು ದಾಖಲೆ ಕೊಟ್ಟಿದ್ದಾರೆಯೇ?. ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ' ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
'ಕಾಂಗ್ರೆಸ್ ಸರ್ಕಾರ ಯೋಜನೆಯಲ್ಲಿ ಶೇ 10 ರಷ್ಟು ಕಮಿಷನ್ ಕೇಳುತ್ತದೆ' ಎಂದು ಮೋದಿ ಆರೋಪಿಸಿದ್ದರು. ಇದಕ್ಕೆ ದಾಖಲೆಯನ್ನು ಸಿದ್ದರಾಮಯ್ಯ ಕೇಳಿದ್ದಾರೆ.
| Array |
ಓಡಿ ಹೋಗಲು ಎಷ್ಟು ಕಮಿಷನ್ ಕೊಟ್ಟಿರಬಹುದು?
'ನೀರವ್ ಮೋದಿ ದೇಶದಿಂದ ಓಡಿಹೋಗಲು ಎಷ್ಟು ಕಮಿಷನ್ ಕೊಟ್ಟಿರಬಹುದು?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನೀರವ್ ಮೋದಿ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ 11 ಸಾವಿರ ಕೋಟಿ ಸಾಲ ಪಡೆದಿದ್ದ ವಜ್ರದ ಉದ್ಯಮಿ ನೀರವ್ ಮೋದಿ ದೇಶ ಬಿಟ್ಟು ಪರಾರಿಯಾಗಿದ್ದಾರೆ.
| Array |
ಸತ್ತವರಿಗೂ ಪಕ್ಷ ಸದಸ್ಯತ್ವ ನೀಡುತ್ತದೆಯೇ?
'ರಾಜ್ಯದಲ್ಲಿ ಸತ್ತವರು, ಲಾಠಿ ಏಟು ತಿಂದವರೆಲ್ಲಾ ಬಿಜೆಪಿ ಕಾರ್ಯಕರ್ತರೇ?'
ಬೆಂಗಳೂರಿನಲ್ಲಿ ಕೆಲವು ದಿನಗಳ ಹಿಂದೆ ಹತ್ಯೆಯಾದ ಸಂತೋಷ್ ಬಿಜೆಪಿ ಕಾರ್ಯಕರ್ತ ಎಂದು ಪಕ್ಷದ ನಾಯಕರು ಹೇಳಿದ್ದರು. ಅದಕ್ಕೆ ಸಿದ್ದರಾಮಯ್ಯ ಈ ಪ್ರಶ್ನೆ ಕೇಳಿದ್ದಾರೆ.
| Array |
ಗಡಿಪಾರಾದ ಗುಜರಾತ್‌ನ ಮಾಜಿ ಗೃಹ ಸಚಿವರು
'ಜೈಲು ಸೇರಿದ, ಗಡಿಪಾರಾದ ಗುಜರಾತ್‌ನ ಮಾಜಿ ಗೃಹ ಸಚಿವರು' ಎಂದು ಸಿದ್ದರಾಮಯ್ಯ ಅಮಿತ್ ಶಾ ಲೇವಡಿ ಮಾಡಿದ್ದಾರೆ.
'ರಾಜ್ಯದಲ್ಲಿ ಗೂಂಡಾ ಸರ್ಕಾರವಿದೆ' ಎಂದು ಅಮಿತ್ ಶಾ ಹೇಳಿದ್ದರು. ಇದಕ್ಕೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.












Click it and Unblock the Notifications