ಬಿಎಸ್‌ವೈ ಬಗ್ಗೆ ಅಮಿತ್ ಷಾ ಹೇಳಿದ್ದು ಸರಿ: ಸಿದ್ದರಾಮಯ್ಯ ವ್ಯಂಗ್ಯ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾರನ್ನು ಮಹಾನ್ ಸುಳ್ಳುಗಾರ ಎಂದು ಜರಿಯುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಾತ್ರ ಅಮಿತ್ ಷಾ ಹೇಳಿದ್ದು ಸತ್ಯ ಎಂದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅದಕ್ಕೆ ಕಾರಣ ಅಮಿತ್ ಷಾ ಅವರು ಯಡಿಯೂರಪ್ಪ ಅವರನ್ನು ಭ್ರಷ್ಟ ಎಂದದ್ದು, ಹೌದು ಇಂದು ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಮಿತ್ ಷಾ ಅವರು ಬಾಯಿ ತಪ್ಪಿ 'ಯಡಿಯೂರಪ್ಪ ಅವರದ್ದು ನಂ.1 ಭ್ರಷ್ಟ ಸರ್ಕಾರ' ಎಂದು ಬಿಟ್ಟರು. ಆನಂತರ ಸರಿಪಡಿಸಿಕೊಂಡರು ಆದರೆ ಹೀಗೆ ಕೈಗೆ ಸಿಕ್ಕ ಮಹದವಕಾಶ ಬಿಡುತ್ತಾರೆಯೇ ಸಿದ್ದರಾಮಯ್ಯ, ಈಗ ಅದನ್ನೇ ವ್ಯಂಗ್ಯ ಮಾಡಿ ಯಡಿಯೂರಪ್ಪ ಹಾಗೂ ಅಮಿತ್ ಷಾ ಅವರನ್ನು ಛೇಡಿಸುತ್ತಿದ್ದಾರೆ.
ಇಂದು ಎದುರಾದ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಅಮಿತ್ ಷಾ ಮೊದಲ ಬಾರಿಗೆ ಸತ್ಯ ಹೇಳಿದ್ದಾರೆ. ಅವರು ತಪ್ಪು ಮಾತನಾಡಿಲ್ಲ, ಅವರು ಹೇಳಿದ್ದು ಸರಿಯಾಗಿಯೇ ಇದೆ' ಎಂದಿದ್ದಾರೆ.

ಅಮಿತ್ ಷಾ ಅವರು ಯಡಿಯೂರಪ್ಪ ಅವರನ್ನು ಭ್ರಷ್ಟ ಎಂದ ದೃಶ್ಯದ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಸಿದ್ದರಾಮಯ್ಯ ಅವರು 'ಕೊನೆಗೂ ಸತ್ಯ ಮಾತನಾಡಿದಿರಿ ಧನ್ಯವಾದಗಳು' ಎಂದು ಅಮಿತ್ ಷಾ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.












Click it and Unblock the Notifications