ಸಿದ್ದರಾಮಯ್ಯ-ಮಾಧುಸ್ವಾಮಿ: ರಾಮ-ರಾವಣ ವೇಷ ಅದಲು-ಬದಲು
ಬೆಂಗಳೂರು, ಅಕ್ಟೋಬರ್ 12: ಸಿದ್ದರಾಮಯ್ಯ ಅವರು ಅತ್ಯುತ್ತಮ ಸಂಸದೀಯ ಪಟು ಬಿಜೆಪಿಯಲ್ಲಿ ಮಾಧುಸ್ವಾಮಿ ಅವರೂ ಸಹ ಕಲಾಪದಲ್ಲಿ ಸಿದ್ದರಾಮಯ್ಯ ಅವರನ್ನೇ ಹೋಲುತ್ತಾರೆ.
ಸಿದ್ದರಾಮಯ್ಯ ಅವರು ವಿಪಕ್ಷ ನಾಯಕ ಆದ ನಂತರ ನಡೆದಿರುವ ಕಲಾಪದಲ್ಲಿ ಸಿದ್ದರಾಮಯ್ಯ-ಮಾಧುಸ್ವಾಮಿ ಜುಗಲ್‌ಬಂದಿ ನಡೆಯುತ್ತಿದೆ. ಕಲಾಪದ ಮೂರನೇ ದಿನವೂ ಇದು ಮುಂದುವರೆದಿದ್ದು, ಇವರಿಬ್ಬರ ನಡುವೆ ನಡೆದ ರಾಮ-ರಾವಣನ ವೇಷದ ಚರ್ಚೆ ಗಮನ ಸೆಳೆಯಿತು.
ಇಂದು ಬಜೆಟ್ ಬಗ್ಗೆ ಚರ್ಚೆ ಆರಂಭವಾಗಿತ್ತು, ಸಿದ್ದರಾಮಯ್ಯ ಅವರು ಚರ್ಚೆ ನಡೆಸುತ್ತಿದ್ದರು, ಮಾತನಾಡುತ್ತಾ ಮಾತು ಕಲಾಪಕ್ಕೆ ಮಾಧ್ಯಮಗಳನ್ನು ನಿಷೇಧಿಸಿರುವುದರ ಕಡೆಗೆ ಹೊರಳಿತು.
ಆಗ ತಟ್ಟನೆ ಎದ್ದ ಸಚಿವ ಮಾಧುಸ್ವಾಮಿ, ಸಿದ್ದರಾಮಯ್ಯ ಅವರು ವಿಷಯಾಂತರ ಮಾಡುತ್ತಿದ್ದಾರೆ, ವಿತ್ತಿಯ ಬಗ್ಗೆ ಮಾತನಾಡುವುದು ಬಿಟ್ಟು ಮಾಧ್ಯಮದ ಕಡೆಗೆ ಹೊರಳಿದ್ದಾರೆ, ಈಗೇನು ಮಾಧ್ಯಮ ನಿರ್ಬಂಧದ ಬಗ್ಗೆ ಚರ್ಚೆ ನಡೆಯಬೇಕೆ ಅಥವಾ ಬಜೆಟ್ ಬಗ್ಗೆಯೋ ಎಂದು ಜೋರು ಮಾಡಿ ಕೇಳಿದರು.

ನೀವು ಹೇಗೆ ನಡೆದುಕೊಂಡಿರೆಂದು ಗೊತ್ತಿದೆ: ಸಿದ್ದರಾಮಯ್ಯ ಕಿಡಿ
ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, 'ಮಾಧುಸ್ವಾಮಿ ನೀವು ಯಾವಾಗ ಹೇಗೆ ನಡೆದುಕೊಂಡಿದ್ದೇರೆಂದು ಗೊತ್ತಿದೆ. ಈ ಕಡೆಯಿದ್ದಾಗ (ವಿಪಕ್ಷ) ಒಂದು ವೇಷ ತೊಡುತ್ತೀರಿ, ಆ ಕಡೆ ಇದ್ದಾಗ ಒಂದು ವೇಷ ತೊಡುತ್ತೀರಿ' ಎಂದು ಸಿದ್ದರಾಮಯ್ಯ ಅವರು ಛೇಡಿಸುವ ದನಿಯಲ್ಲಿ ಹೇಳಿದರು.

ಒಮ್ಮೆ ನೀವು ರಾವಣ, ಒಮ್ಮೆ ನಾವು ರಾವಣ
ಇದಕ್ಕೆ ನಕ್ಕ ಮಾಧುಸ್ವಾಮಿ, ಸಿದ್ದರಾಮಯ್ಯ ಅವರನ್ನು ಸಂತೈಸುತ್ತಾ, 'ಎಲ್ಲರೂ ಅದನ್ನೇ ಅಲ್ಲವೇ ಮಾಡುತ್ತಿರುವುದು, ಒಮ್ಮೆ ನೀವು ರಾವಣ ಆಗ್ತೀರಿ ಆಗ ನಾನು ರಾಮ ಆಗ್ತೀನಿ, ನೀವು ರಾಮ ಆದಾಗ ನಾವು ರಾವಣ ಆಗ್ತೀವಿ' ಎಂದು ಹೇಳಿದರು.

'ಪತ್ರಿಕಾರಂಗಕ್ಕೂ ಸಂವಿಧಾನದಲ್ಲಿ ಸಮಾನ ಪ್ರಾಮುಖ್ಯತೆ ಇದೆ'
ಸಿದ್ದರಾಮಯ್ಯ ಅವರು ಮಾತು ಮುಂದುವರೆಸಿ, 'ಸಂವಿಧಾನದಲ್ಲಿ ಪತ್ರಿಕಾರಂಗಕ್ಕೂ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಕ್ಕೆ ಇರುವಷ್ಟೆ ಪ್ರಾಮುಖ್ಯತೆ ಇದೆ ಮಾಧ್ಯಮದ ಹಕ್ಕನ್ನು ಮೊಟಕುಗೊಳಿಸುವುದು ಒಳ್ಳೆಯದಲ್ಲ' ಎಂದರು.

ಸರ್ಕಾರದಿಂದ ಚಾನೆಲ್ ತೆರೆಯಲು ನಿರ್ಧರಿಸಿದ್ದೆ: ಸಿದ್ದರಾಮಯ್ಯ
ವಿಧಾನಸಭೆ, ವಿಧಾನಪರಿಷತ್‌ಗೆ ಸೇರಿ ಒಂದು ಚಾನೆಲ್ ಅನ್ನು ಸರ್ಕಾರದಿಂದಲೇ ಪ್ರಾರಂಭ ಮಾಡುವ ಯೋಚನೆಯನ್ನು ನಾವು ಮಾಡಿದ್ದೇವು, ಆದರೆ ನಂತರ ಅದನ್ನು ಕೈಬಿಟ್ಟೆವು ಎಂದು ಸಿದ್ದರಾಮಯ್ಯ ಹೇಳಿದರು. ಆಗ ಸಚಿವ ಬೊಮ್ಮಾಯಿ ಅವರು, ಅದಕ್ಕೆ ಏನು ಕಾರಣ ಎಂದು ಕೇಳಿದರು, 'ನಾವಿಬ್ಬರೇ ಇದ್ದಾಗ ಹೇಳುತ್ತೇನೆ ಸುಮ್ಮನಿರು' ಎಂದು ನಕ್ಕರು ಸಿದ್ದರಾಮಯ್ಯ.

'ಮಾಧ್ಯಮ ನಿಷೇಧಿಸುವ ತೀರ್ಮಾನ ಕಾಗೇರಿ ಒಬ್ಬರದ್ದಲ್ಲ'
ಮಾಧುಸ್ವಾಮಿ ಅವರು ಮಾತನಾಡಿ, ಕಲಾಪಕ್ಕೆ ಮಾಧ್ಯಮಗಳನ್ನು ನಿಷೇಧಿಸುವ ವಿಚಾರ ಹತ್ತು ವರ್ಷದ ಹಿಂದೆಯೇ ಪ್ರಸ್ತಾಪವಾಗಿತ್ತು. ಹಲವು ಸರ್ಕಾರಗಳು ಈ ಬಗ್ಗೆ ಚರ್ಚೆ ನಡೆಸಿವೆ, ಹಲವು ರಾಜ್ಯಗಳಲ್ಲಿ ಮಾಧ್ಯಮಗಳಿಗೆ ಕಲಾಪಕ್ಕೆ ನಿಷೇಧವಿದೆ. ಕೇಂದ್ರದಲ್ಲೂ ನಿಷೇಧವಿದೆ. ಮಾಧ್ಯಮಕ್ಕೆ ನಿಷೇಧ ಹೇರುವ ನಿರ್ಧಾರದ ಹೊಣೆಯನ್ನು ಕಾಗೇರಿ ಒಬ್ಬರ ಮೇಲೆಯೇ ಹೇರಲು ನಾವು ತಯಾರಿಲ್ಲ ಎಂದು ಅವರು ಹೇಳಿದರು.
-
ಅಧಿಕಾರ ಬದಲಾವಣೆ; ನನ್ನ-ಸಿಎಂ ಬಿಟ್ಟು ಬೇರೆಯವರ ಮಾತು ಮುಖ್ಯವಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ -
ವಿಶ್ವ ಆರೋಗ್ಯ ದಿನ 2026: ಸ್ವಸ್ಥ ಕರ್ನಾಟಕ ನಿರ್ಮಾಣಕ್ಕೆ ಸಿದ್ದರಾಮಯ್ಯ ನೀಡಿದ 'ಆರೋಗ್ಯ ಭಾಗ್ಯ'ಗಳ ಪಟ್ಟಿ ಇಲ್ಲಿದೆ -
Darshan: ನಟ ದರ್ಶನ್ ಕಾನೂನು ಹೋರಾಟಕ್ಕೆ ಗೆಲುವು: 'ಬಾಸ್' ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ -
Copra Price: ಇದೇ ಮೊಟ್ಟ ಮೊದಲ ಬಾರಿ ತಿಪಟೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ -
KSRTC ನೌಕರರ ಹಿಂಬಾಕಿ 1271 ರೂ ಬಿಡುಗಡೆ; ವೇತನ ಹೆಚ್ಚಳಕ್ಕೆ ಮುಹೂರ್ತ ಫಿಕ್ಸ್: ಏ.17ಕ್ಕೆ ನಿರ್ಣಾಯಕ ಸಭೆ -
ಕರ್ನಾಟಕ ದ್ವಿತೀಯ PUC ಫಲಿತಾಂಶಕ್ಕೆ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ: ಏಪ್ರಿಲ್ 8ಕ್ಕೂ ರಿಸಲ್ಟ್ ಬರೋದು ಡೌಟ್? -
Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ -
Divorce Celebration: ಡಿವೋರ್ಸ್ ಪಡೆದ ಮಗಳಿಗೆ ಸಿಹಿ ತಿನ್ನಿಸಿ ಅದ್ದೂರಿ ಸ್ವಾಗತ: ತಂದೆಯ ಸಂಭ್ರಮಾಚರಣೆ ವಿಡಿಯೋ ವೈರಲ್ -
Gold Rate April 7: ಚಿನ್ನ - ಬೆಳ್ಳಿ ಬೆಲೆ ಸತತ 3ನೇ ದಿನವೂ ಇಳಿಕೆ; ಚಿನ್ನ ಪ್ರಿಯರಿಗೆ ಗುಡ್ನ್ಯೂಸ್ -
Viral Video: ಆರ್ಸಿಬಿ Vs ಸಿಎಸ್ಕೆ ಪಂದ್ಯ; ಕರ್ನಾಟಕ Vs ತಮಿಳುನಾಡು ಮಾಡಬೇಡಿ ಎಂದ ಸಿಎಸ್ಕೆ ಫ್ಯಾನ್ -
Viral Video: ನಾಳೆಯೇ ನಿಮ್ಮ ಕೆಲಸ ಹೋದರೆ ಏನು ಮಾಡುವಿರಿ? ಮಾಜಿ ಗೂಗಲ್ ಉದ್ಯೋಗಿಯ ಪ್ರಶ್ನೆಗೆ ದಂಗಾದ ನೆಟ್ಟಿಗರು -
Karnataka Rain Updates: ಚಂಡಮಾರುತ ಪ್ರಸರಣ ಪ್ರಭಾವ: ಬೆಂಗಳೂರು ಸೇರಿ ಕರ್ನಾಟಕದ 8 ಜಿಲ್ಲೆಗಳಲ್ಲಿ 3ದಿನ ಮಳೆ












Click it and Unblock the Notifications