ಬಜೆಟ್ ನಲ್ಲಿ ಐಟಿ ಬಿಟಿ ಕ್ಷೇತ್ರಕ್ಕೆ ಭರಪೂರ ಕೊಡುಗೆ

ಬೆಂಗಳೂರು, ಮಾ. 14: ಸತತ ಎರಡು ತಿಂಗಳ ಕಾಲ ಮುಂಗಡ ಪತ್ರದ ಸಿದ್ಧತೆ ನಡೆಸಿ 10ನೇ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ.13ರಂದು ಬಜೆಟ್ ಮಂಡಿಸಿದ್ದಾರೆ. ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಗೆ ಐಟಿ ಬಿಟಿ ಕ್ಷೇತ್ರದಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಹಣಕಾಸು ಸಚಿವರಾಗಿ 7 ಬಾರಿ ಹಾಗೂ ಮುಖ್ಯಮಂತ್ರಿಯಾಗಿ 3 ಬಾರಿ ಸೇರಿದಂತೆ ಒಟ್ಟು 10ನೇ ಬಾರಿಗೆ ಮುಂಗಡಪತ್ರ ಮಂಡಿಸಿದ್ದಾರೆ. ಒಟ್ಟಾರೆ ಐಟಿ -ಬಿಟಿ ಹಾಗೂ ವಿಜ್ಞಾನ ಕ್ಷೇತ್ರಕ್ಕೆ 202 ಕೋಟಿ ಮೀಸಲಿರಿಸಲಾಗಿದೆ.

ಐಟಿ ಬಿಟಿ ಸಚಿವ ಎಸ್ ಆರ್ ಪಾಟೀಲ್ ಅವರ ಊರಾದ ಬಾಗಲಕೋಟೆಗೆ ಐಟಿ ಪಾರ್ಕ್ ಮಂಜೂರಾಗಿದೆ. ನೂತನ ಬಯೋ ಟೆಕ್ನಾಲಜಿ ನೀತಿ ರೂಪಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿರುವುದು ಈ ಬಜೆಟ್ ನ ವಿಶೇಷ.

Karnataka Budget 2015: IT BT sector share

ಐಟಿ ಬಿಟಿ ಕ್ಷೇತ್ರದ ಅಭಿವುದ್ಧಿಗಾಗಿ 202 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ. ಮಾಹಿತಿ ತಂತ್ರಜ್ಞಾನ ಸಚಿವ ಎಸ್‍ಆರ್ ಪಾಟೀಲ್ ತವರು ಪ್ರೇಮ ಮೆರೆದಿದ್ದು ಬಜೆಟ್‍ನಲ್ಲಿ ಸ್ಪಷ್ಟವಾಗಿದ್ದು, ಬಾಗಲಕೋಟೆ ಜಿಲ್ಲೆಗೆ ಮೂರು ಹೊಸ ಯೋಜನೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಐಟಿ-ಬಿಟಿ ಕಂಪನಿಗಳನ್ನು ರಾಜಧಾನಿ ಬೆಂಗಳೂರು ಬಿಟ್ಟು ರಾಜ್ಯದ ಇತರೆಡೆಗೂ ವಿಸ್ತರಿಸುವ ಪ್ರಯತ್ನ ಈ ಬಾರಿಯ ಬಜೆಟ್‌ನಲ್ಲಾಗಿದ್ದರೂ ಎರಡು ಹಾಗೂ ಮೂರನೇ ಸ್ತರದ ನಗರಗಳಿಗೆ ಐಟಿ ಕಂಪನಿಗಳನ್ನು ಕರೆದೊಯ್ಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.

ಐಟಿ ಬಿಟಿ ಹಾಗೂ ವಿಜ್ಞಾನ ಕ್ಷೇತ್ರಕ್ಕೆ ಸಿಕ್ಕಿದ್ದೇನು.. ಮುಂದೆ ಓದಿ:
* ಬಾಗಲಕೋಟೆಯಲ್ಲಿ ಐಟಿ ಪಾರ್ಕ್ ಸ್ಥಾಪನೆ
* ರಾಜ್ಯದಲ್ಲಿ ಸ್ಟಾರ್ಟ್‍ಅಪ್ ನಿಧಿ ಮತ್ತು ಹ್ಯಾಕ್ ಸೆಲೆರೇಟರ್ ಸ್ಥಾಪನೆ
* ಬಯೋ ವೆಂಚರ್ ಫಂಡ್ ಒಳಗೊಂಡಂತೆ ಹೊಸ ಜೈವಿಕ ತಂತ್ರಜ್ಞಾನ ನೀತಿ ರೂಪಿಸಲಾಗುವುದು.
* ವಿಜಯಪುರ, ದಾವಣಗೆರೆ,ತುಮಕೂರು, ಉಡುಪಿ, ಚಿತ್ತಾಪುರ,ಚಿಕ್ಕೋಡಿ ಮತ್ತು ಚಿಕ್ಕಮಗಳೂರಿನಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳಿಗೆ ಮಂಜೂರಾತಿ. - 4 ಕೋಟಿ ಮೀಸಲು.
* ಪ್ರತಿ ಕಂದಾಯ ವಿಭಾಗಕ್ಕೆ ಸಂಚಾರಿ ತಾರಾಲಯ- 5 ಕೋಟಿ ಮೀಸಲು
* ಬಾಗಲಕೋಟೆಯಲ್ಲಿ ಮಿನಿ ತಾರಾಲಯ ಸ್ಥಾಪನೆ.
* ವಿಜಯಪುರದ ಮಹಿಳಾ ವಿವಿಯಲ್ಲಿ ಭಾಸ್ಕರಾಚಾರ್ಯ ಹೆಸರಿನಲ್ಲಿ ಅಧ್ಯಯನ ಪೀಠ- 1 ಕೋಟಿ
*ಉಚಿತ ವೈ-ಫೈ ಸೇವೆಯನ್ನ ಹಂತ ಹಂತವಾಗಿ ಬೆಂಗಳೂರು ನಗರಾದ್ಯಂತ ಹಾಗೂ ಜಿಲ್ಲಾ ಕೇಂದ್ರಗಳಿಗೆ ವಿಸ್ತರಣೆ.
* ಕರ್ನಾಟಕ- ಭೌಗೋಳಿಕ ಮಾಹಿತಿ(ಕೆ-ಜಿಐಎಸ್) ವ್ಯವಸ್ಥೆಗೆ 150 ಕೋಟಿ ವೆಚ್ಚದಲ್ಲಿ ಹಂತ ಹಂತವಾಗಿ ಅನುಷ್ಠಾನ.
* ಸಾರ್ವಜನಿಕ ಕುಂದುಕೊರತೆ ನಿವಾರಿಸಲು ಕಿಯೋನಿಕ್ಸ್ ಸಂಸ್ಥೆಯ ವತಿಯಿಂದ ಬಾಗಲಕೋಟೆಯಲ್ಲಿ ಪ್ರಾಯೋಗಿಕ ಸಹಾಯವಾಣಿ ತೆರೆಯುವ ಉದ್ದೇಶ.
* ಹುಬ್ಬಳ್ಳಿ- ಧಾರವಾಡದಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಸ್ಥಾಪಿಸಲು ರಾಜ್ಯ ಸರ್ಕಾರದಿಂದ 12 ಕೋಟಿ ರೂ. ಅನುದಾನ.

ಒನ್ ಇಂಡಿಯಾ ಸುದ್ದಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+