ಕಳ್ಳನೇ ಪೊಲೀಸ್ ಆಗಿರುವುದು ದುರಂತ: ಸಿದ್ದರಾಮಯ್ಯ ಲೇವಡಿ
ಬೆಂಗಳೂರು, ಮಾರ್ಚ್ 16: 'ನಾನೂ ಚೌಕಿದಾರ' ಎಂದು ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಟ್ವೀಟ್‌ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯದ ಪ್ರತಿಕ್ರಿಯೆ ನೀಡಿದ್ದಾರೆ.
ಕಳ್ಳನೇ ಪೊಲೀಸ್ ಆಗಿರುವುದು ದೇಶದ ದುರಂತ ಎಂದು ಸಿದ್ದರಾಮಯ್ಯ, ಮೋದಿಯನ್ನು ಟೀಕಿಸಿದ್ದಾರೆ.
"ನಿಮ್ಮ ಚೌಕಿದಾರ ದೇಶ ಸೇವೆಗೆ ಸದೃಢವಾಗಿ ನಿಂತಿದ್ದಾನೆ. ಆದರೆ ನಾನು ಒಬ್ಬಂಟಿಯಲ್ಲ. ಭ್ರಷ್ಟಾಚಾರ, ದುಷ್ಟಶಕ್ತಿಯ ವಿರುದ್ಧ ಹೋರಾಡುವ ಪ್ರತಿಯೊಬ್ಬರೂ ಚೌಕಿದಾರರೇ. ಭಾರತದ ಪ್ರಗತಿಗಾಗಿ ಹೋರಾಡುವ ಪ್ರತಿಯೊಬ್ಬರೂ ಚೌಕಿದಾರರೇ. ಇಂದು ಪ್ರತಿ ಭಾರತೀಯನೂ ಹೇಳುತ್ತಿದ್ದಾನೆ, 'ನಾನೂ ಚೌಕಿದಾರ' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು.

'ಮೇ ಭೀ ಚೌಕಿದಾರ್' ಎಂಬ ಹ್ಯಾಷ್‌ಟ್ಯಾಗ್ ಟ್ವಿಟ್ಟರ್‌ನಲ್ಲಿ ಭಾರಿ ಮಟ್ಟದಲ್ಲಿ ಟ್ರೆಂಡ್ ಆಗಿದೆ. ಮೋದಿ ಅವರ ಹೇಳಿಕೆಯನ್ನು ಅನುಸರಿಸಿ ಅವರ ಬೆಂಬಲಿಗರು ಟ್ವೀಟ್ ಮಾಡುತ್ತಿದ್ದಾರೆ. ಇದು ವಿರೋಧಿಗಳಿಗೆ ಆಹಾರವಾಗಿ ಪರಿಣಮಿಸಿದೆ.
ಕಳ್ಳನೇ ಪೊಲೀಸ್ ಆಗಿ ಪೊಲೀಸರ ಗೌರವ ಕಳೆಯುತ್ತಿರುವುದು
— Siddaramaiah (@siddaramaiah) 16 March 2019
ಈ ದೇಶದ ದುರಂತ.
ಈ ಸೋಂಕು ಊರೆಲ್ಲಾ ಹರಡಿ ದೇಶದ ಕಳ್ಳರೆಲ್ಲಾ ಪೊಲೀಸ್ ಆಗಲು (#MeinBhichowkidar ) ಹೊರಟವ್ರೆ.#chorhichwokidhar @INCKarnataka
ಕಳ್ಳನೇ ಪೊಲೀಸ್ ಆಗಿ ಪೊಲೀಸರ ಗೌರವ ಕಳೆಯುತ್ತಿರುವುದು ಈ ದೇಶದ ದುರಂತ. ಈ ಸೋಂಕು ಊರೆಲ್ಲಾ ಹರಡಿ ದೇಶದ ಕಳ್ಳರೆಲ್ಲಾ ಪೊಲೀಸ್ ಆಗಲು ಹೊರಟವ್ರೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.












Click it and Unblock the Notifications