ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಶ್ವರಪ್ಪ ಅತ್ಯಾಚಾರ ಹೇಳಿಕೆ, ಸಿಎಂ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ನ.7 : "ನಿನ್ನ ಮಗಳ ಮೇಲೆ ಅತ್ಯಾಚಾರ ನಡೆದಿದ್ದರೆ ಸುಮ್ಮನಿರುತ್ತಿದ್ದೆಯಾ ಜಾರ್ಜ್?" ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಅವರಿಗೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಕೇಳಿದ ಪ್ರಶ್ನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸಿಎಂ ಸೇರಿದಂತೆ ಹಲವು ನಾಯಕರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಈಶ್ವರಪ್ಪ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಈಶ್ವರಪ್ಪ ಅವರ ಶಿವಮೊಗ್ಗ ಮತ್ತು ಬೆಂಗಳೂರಿನ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. 'ಇಂತಹ ನೂರು ಪ್ರತಿಭಟನೆಗಳನ್ನು ನಾನು ನೋಡಿದ್ದೇನೆ' ಎಂದು ಹೇಳಿರುವ ಈಶ್ವರಪ್ಪ ನನ್ನ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. [ಈಶ್ವರಪ್ಪ ಹೇಳಿದ್ದೇನು?]

ಸಿಎಂ ಪ್ರತಿಕ್ರಿಯೆ : ಕೆ.ಎಸ್.ಈಶ್ವರಪ್ಪನವರಿಗೆ ನಾಗರಿಕತೆ, ಸಂಸ್ಕೃತಿ ಎಂಬುದು ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈಶ್ವರಪ್ಪ ನೀಡಿದ ಹೇಳಿಕೆ ಅವರ ಸಂಸ್ಕೃತಿಯನ್ನು ತೋರುತ್ತದೆ. ವಿಪಕ್ಷ ನಾಯಕರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಈಶ್ವರಪ್ಪನವರು ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಇಂತಹ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ ಎಂದರು.

ಈಶ್ವರಪ್ಪಗೆ ಸೊರಕೆ ತಿರುಗೇಟು : ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ದಿ ಸಚಿವ ವಿನಯ್‌ ಕುಮಾರ್‌ ಸೊರಕೆ ಸಹ ಈಶ್ವರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಏನು ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಚಿವರೆ ಅತ್ಯಾಚಾರ ನಡೆಸಿದ್ದಾರೆ, ವಿಧಾನಸಭೆಯಲ್ಲಿ ಬ್ಲೂಫಿಲ್ಮ್ ನೋಡಿದ್ದಾರೆ ಎಂದು ಸೊರಕೆ ಹೇಳಿದ್ದಾರೆ.

SORAKE

ಪ್ರಹ್ಲಾದ್ ಜೋಶಿ ವಿಷಾದ : ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಈಶ್ವರಪ್ಪ ಅವರಿಗೆ ತಿಳುವಳಕೆ ಹೇಳುತ್ತೇವೆ ಎಂದು ಅವರ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅತ್ಯಾಚಾರ ಪ್ರಕರಣಗಳು ವಿಕೃತ ಮನಸ್ಸಿನ ಮೃಗಗಳು ನಡೆಸುವ ಹೀನ ಕೃತ್ಯ. ಅದಕ್ಕೆ ಶಿಕ್ಷೆಯಾಗಬೇಕೆಂದು ಈಶ್ವರಪ್ಪ ಅವರಿಗೆ ಪಕ್ಷದ ವೇದಿಕೆಯಲ್ಲಿ ತಿಳುವಳಿಕೆ ಹೇಳುತ್ತೇವೆ ಎಂದು ತಿಳಿಸಿದ್ದಾರೆ.

English summary
Karnataka chief minister Siddaramaiah condemned K.S.Eshwarappa statement about Home minister K.J.George.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X