10 ಸಂಸದೀಯ ಕಾರ್ಯದರ್ಶಿಗಳ ನೇಮಕ

ಬೆಂಗಳೂರು, ನವೆಂಬರ್ 06 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 10 ಮಂದಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿದ್ದಾರೆ. ಗುರುವಾರ ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಗಳ ಪಟ್ಟಿಯನ್ನು ಪ್ರಕಟಿಸಿದೆ. ಶನಿವಾರ ಸಿದ್ದರಾಮಯ್ಯ ಅವರು ಇವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿಯೇ ಶಾಸಕರನ್ನು ಸಂಪುಟ ಕಾರ್ಯದರ್ಶಿಗಳಾಗಿ ನೇಮಕ ಮಾಡಿಕೊಳ್ಳುವ ಕುರಿತು ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದರು. ಅದರಂತೆ ರಾಜ್ಯ ಕಾಂಗ್ರೆಸ್ ಸಲ್ಲಿಸಿದ್ದ ಪಟ್ಟಿಗೆ ಹೈಕಮಾಂಡ್ ಅನುಮೋದನೆ ನೀಡಿದ್ದು, ಕಾರ್ಯದರ್ಶಿಗಳ ನೇಮಕವಾಗಿದೆ. [ಸಿದ್ದರಾಮಯ್ಯ ಸಂಪುಟಕ್ಕೆ ನಾಲ್ವರು ಹೊಸ ಸಚಿವರ ಸೇರ್ಪಡೆ]

siddaramaiah

ಸಂಸದೀಯ ಕಾರ್ಯದರ್ಶಿಗಳ ನೇಮಕದಲ್ಲಿಯೂ ಜಾತಿ, ಲಿಂಗ, ಸಮುದಾಯದ ಹಿರಿತನವನ್ನು ಪರಿಗಣಿಸಲಾಗಿದೆ. ಸಂಪುಟ ಕಾರ್ಯದರ್ಶಿಗಳು ಸಂಪುಟ ದರ್ಜೆ ಅಥವಾ ರಾಜ್ಯ ಸಚಿವರ ಸ್ಥಾನಮಾನ ಪಡೆಯಲಿದ್ದಾರೆ. ನೂತನ ಸಂಪುಟ ಕಾರ್ಯದರ್ಶಿಗಳು ಶನಿವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. [ಕೆಪಿಸಿಸಿ ಅಧ್ಯಕ್ಷ ಗಾದಿ: ಜಾತಿ ಲೆಕ್ಕಾಚಾರದಲ್ಲಿ ಲಿಂಗಾಯತರು ಮುಂದೆ]

ಕಾನೂನು ತಜ್ಞರು ಹೇಳುವ ಪ್ರಕಾರ ಸಂಪುಟ ಕಾರ್ಯದರ್ಶಿಗಳ ಹುದ್ದೆಗೆ ಕಾನೂನಿನ ಮಾನ್ಯತೆ ಇಲ್ಲ. ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿಯೂ ಸಂಪುಟ ಕಾರ್ಯದರ್ಶಿಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು.

ಸಂಸದೀಯ ಕಾರ್ಯದರ್ಶಿಗಳು ಸಂಪುಟ ದರ್ಜೆ ಅಥವಾ ರಾಜ್ಯ ಸಚಿವರ ಸ್ಥಾನಮಾನ ಪಡೆಯಲಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳು ತೀರ್ಮಾನವನ್ನು ತೆಗೆದುಕೊಳ್ಳಲಿದ್ದಾರೆ. ಸಚಿವರಿಗೆ ಸಲಹೆ ನೀಡುವ ಕೆಲಸವನ್ನು ಸಂಪುಟ ಕಾರ್ಯದರ್ಶಿಗಳು ಮಾಡಲಿದ್ದಾರೆ.

ಸಂಪುಟ ಕಾರ್ಯದರ್ಶಿಗಳು

ಶಕುಂತಲಾ ಶೆಟ್ಟಿ - ಪುತ್ತೂರು
ಸಿ.ಪುಟ್ಟರಂಗ ಶೆಟ್ಟಿ - ಚಾಮರಾಜನಗರ
ಎ.ಎಸ್.ಶಿವಳ್ಳಿ - ಕುಂದಗೋಳ
ಎಚ್.ಪಿ.ಮಂಜುನಾಥ್ - ಹುಣಸೂರು
ಇ.ತುಕಾರಾಂ - ಸಂಡೂರು
ರಾಜು ಅಲ್ಲೂರು - ನಾಗಠಾಣಾ
ಮಕ್ಬುಲ್ ಭಗವಾನ್ - ವಿಜಯಪುರ ನಗರ
ಉಮೇಶ್ ಜಿ.ಜಾಧವ್ - ಚಿಂಚೋಳಿ
ದೊಡ್ಡಮನಿ ಸಿದ್ದಲಿಂಗಪ್ಪ - ಶಿರಹಟ್ಟಿ
ಕೆ.ಗೋವಿಂದರಾಜು - ಬೆಂಗಳೂರು (ಎಂಎಲ್‌ಸಿ)

parliamentary secretaries
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+