ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಿದ ಸಿದ್ದಲಿಂಗ ಸ್ವಾಮೀಜಿ
ಬೆಂಗಳೂರು, ಜೂನ್ 08 : ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರನ್ನು ಭೇಟಿ ಮಾಡಿದರು. ಕಾವೇರಿ ನಿವಾಸದಲ್ಲಿರುವ ಗಿರ್ ತಳಿಯ ಹಸುವನ್ನು ವೀಕ್ಷಣೆ ಮಾಡಿದರು.
Recommended Video
ಸೋಮವಾರ ಬೆಂಗಳೂರಿನ 'ಕಾವೇರಿ' ನಿವಾಸದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಸೌಹಾರ್ದಯುತವಾಗಿ ಭೇಟಿ ಮಾಡಿದರು.
'ಕಾವೇರಿ' ನಿವಾಸಕ್ಕೆ ಆಗಮಿಸಿದ ಶ್ರೀಗಳಿಗೆ ಹಾರ ಹಾಕಿ, ಶಾಲು ಹೊದಿಸಿ ಯಡಿಯೂರಪ್ಪ ಆಶೀರ್ವಾದವನ್ನು ಪಡೆದರು. ಕೆಲವು ಹೊತ್ತು ಯಡಿಯೂರಪ್ಪ ಅವರ ಜೊತೆ ಸಿದ್ದಲಿಂಗ ಸ್ವಾಮೀಜಿ ಮಾತುಕತೆ ನಡೆಸಿದರು.

ಬಳಿಕ ಯಡಿಯೂರಪ್ಪ ಮತ್ತು ಸಿದ್ದಲಿಂಗ ಸ್ವಾಮೀಜಿಗಳು 'ಕಾವೇರಿ' ನಿವಾಸದಲ್ಲಿರುವ ಗಿರ್ ತಳಿಯ ಹಸುವನ್ನು ವೀಕ್ಷಣೆ ಮಾಡಿದರು. ಪುಟ್ಟ ಕರುವಿನೊಂದಿಗೆ ಕೆಲವು ಕ್ಷಣಗಳನ್ನು ಕಳೆದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮತ್ತು ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್ ಯಡಿಯೂರಪ್ಪಗೆ ಗಿರಿ ತಳಿಯ ಒಂದು ಹಸು, ಒಂದು ಎತ್ತು ಮತ್ತು ಒಂದು ಕರುವನ್ನು ನೀಡಿದ್ದಾರೆ. 'ಕಾವೇರಿ' ನಿವಾಸದಲ್ಲಿಯೇ ಅದಕ್ಕಾಗಿ ಕೊಟ್ಟಿಗೆಯನ್ನು ಸಿದ್ಧಪಡಿಸಲಾಗಿದೆ.
https://www.facebook.com/plugins/video.php?href=https%3A%2F%2Fwww.facebook.com%2Foneindiakannada%2Fvideos%2F757742865033218%2F&show_text=0&width=560












Click it and Unblock the Notifications