ಫೋಟೋಗೆ ಸಖತ್ ಪೋಸ್ ಕೊಡುವ ಕಿಲಾಡಿ ಕಿಟ್ಟುಗಳು

Posted By:
Subscribe to Oneindia Kannada

ಬಾಯಿ ಸುತ್ತ ಬೆಣ್ಣೆ ಮೆತ್ತಿಕೊಂಡ ಪುಟ್ಟ ಕಂದ, ತಲೆ ಮೇಲೆ ನವಿಲುಗರಿ ಸಿಕ್ಕಿಸಿಕೊಂದು ನಸುನಗುತ್ತಿರುವ ಮುದ್ದು ಕೃಷ್ಣ, ಕೈಯಲ್ಲಿ ಪಿಳ್ಳಂಗೋವಿ ಹಿಡಿದು ಕಣ್ಣು ಮಿಟುಕಿಸುತ್ತಿರುವ ಚಂದದ ಕೂಸು... ಇವೆಲ್ಲವೂ ನೀವೇ ಕಳಿಸಿದ ಚಿತ್ರಗಳು!

ಶ್ರೀಕೃಷ್ಣ ಜನ್ಮಾಷ್ಟಮಿ(ಆಗಸ್ಟ್ 14)ಯ ಅಂಗವಾಗಿ ನಿಮ್ಮ ಮುದ್ದು ಮಗುವಿಗೆ ಕೃಷ್ಣನ ಉಡುಗೆ ತೊಡಿಸಿದ ಚಿತ್ರವನ್ನು ನಮ್ಮ ಮನವಿಯಂತೆ ಹಲವರು ಕಳಿಸಿಕೊಟ್ಟಿದ್ದಾರೆ.ಅದಕ್ಕಾಗಿ ಅನಂತ ಧನ್ಯವಾದಗಳು.

ಕೃಷ್ಣ ವೇಷಧಾರಿ ಪುಟಾಣಿಗಳ ಚಿತ್ರಸಂಪುಟ

ಪರಿವರ್ತನೆಯೇ ಜಗದ ನಿಯಮ ಎನ್ನುತ್ತ, ಸಾಮಾನ್ಯ ಮನುಷ್ಯನ ನಡುವಲ್ಲಿದ್ದುಕೊಂಡು, ದೈವತ್ವಕ್ಕೇರುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟ ಶ್ರೀಕೃಷ್ಣ ಹಿಂದುಗಳ ಪಾಲಿಗೆ ಆರಾಧ್ಯ ದೈವ. ಅಂಥ ಶ್ರೀಕೃಷ್ಣನ ವೇಷವನ್ನು ತೊಡಿಸಿ, ತಮ್ಮ ಮಗುವನ್ನು ನೋಡುವುದು ಬಹುಶಃ ಎಲ್ಲ ಪಾಲಕರ ಕನಸು.

ಅದಕ್ಕೆಂದೇ ಬಹುಪಾಲು ಎಲ್ಲ ತಂದೆ-ತಾಯಿಯರೂ ತಮ್ಮ ಪುಟ್ಟ ಮಗುವಿಗೆ ಶ್ರೀಕೃಷ್ಣ ವೇಷ ಹಾಕಿಸಿ, ಫೋಟೋ ತೆಗೆಸಿಕೊಳ್ಳುವುದು ಮಾಮೂಲೆನ್ನಿಸಿದೆ. ಆ ಚಿತ್ರ ಮಗುವಿನ ಅಮೂಲ್ಯ ಬಾಲ್ಯದ ಸಂಕೇತವಾಗಿ ಎಲ್ಲ ಮನೆಯ ಶೋಕೇಸಿನಲ್ಲಿ ರಾರಾಜಿಸುತ್ತದೆ.

ಅಂಥ ಕೆಲವು ಚಿತ್ರಗಳು ಇಲ್ಲಿವೆ. ನೀವೇ ಕಳಿಸಿದ ನಿಮ್ಮ ಮುದ್ದು ಕೃಷ್ಣ ನಮ್ಮ ಗ್ಯಾಲರಿಯಲ್ಲಿ ಪ್ರತ್ಯಕ್ಷನಾಗಿದ್ದಾನೆ... ನೋಡಿ...

ಯಾವ ರಾಗ ನುಡಿಸಲಿ ಹೇಳಿ..?

ಯಾವ ರಾಗ ನುಡಿಸಲಿ ಹೇಳಿ..?

ಕೊಳಲು ಹಿಡಿದು ಯಾವ ರಾಗ ನುಡಿಸಲಿ ಎಂದು ಕೇಳುತ್ತಿರುವ ಈ ಪುಟಾಣಿ ಕೃಷ್ಣನ ಹೆಸರು, ಅಂಶುಮಾನ್ ಕೆ. ಊರು: ತುಮಕೂರು
ತಂದೆ: ಕೃಷ್ಣ ಆನಂದ್, ತಾಯಿ: ರಾಧಿಕಾ ಕೃಷ್ಣ ಆನಂದ್

ಬೆಣ್ಣೆಗೆ ಸ್ಕೆಚ್ ಹಾಕ್ತಿದ್ದೀನಿ...

ಬೆಣ್ಣೆಗೆ ಸ್ಕೆಚ್ ಹಾಕ್ತಿದ್ದೀನಿ...

ಬೆಣ್ಣೆ ತಿನ್ನೋಕೆ ಸ್ಕೆಚ್ ಹಾಕ್ತಿದೀನಿ. ಅಮ್ಮ ಯಶೋದೆ ನನ್ನ ನೋಡ್ತಿಲ್ಲ ತಾನೇ..?! ಅಂತಿದ್ದಾನೆ ಸಾಗರದ ಸಮರ್ಥ್ ಪಿ ಪಳನ್ಕರ್.
ತಂದೆ: ಪ್ರಶಾಂತ್ ಪಳನ್ಕರ್, ತಾಯಿ: ಅನಿತಾ

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ!

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ!

ನೋಡಿ, ನಾನು ಬೆಣ್ಣೆ ಕದ್ದಿಲ್ಲ ಅಂತ ದೇವರಾಣೆ ಮಾಡಿ ಹೇಳಿದ್ರೂ ಅಮ್ಮ ನಂಬ್ತಾನೇ ಇಲ್ಲ ಎಂದು ಮೂಲೇಲಿ ನಿಂತಿರೋ ಈ ಮುದ್ದು ಕೃಷ್ಣನ ಹೆಸರು ಕೃಷ್ಣ ಚೈತನ್ಯ.

ಅಯ್ಯೋ ಬಿಡಮ್ಮ, ಪೋಸ್ ಕೊಡೋಕೆ ನಂಗೂ ಗೊತ್ತು!

ಅಯ್ಯೋ ಬಿಡಮ್ಮ, ಪೋಸ್ ಕೊಡೋಕೆ ನಂಗೂ ಗೊತ್ತು!

ಪುಟ್ಟ ಕೃಷ್ಣ ಬಿದ್ದಾನು ಎಂದು ಕೈಹಿಡಿಯುತ್ತಿರುವ ಅಮ್ಮನಿಗೆ, ಅಯ್ಯೋ ಬಿಡಮ್ಮ ನಂಗೂ ಪೋಸ್ ಕೊಡೋಕೆ ಗೊತ್ತು ಅಂತಿರುವ ಚಳ್ಳಕೆರೆಯ ಈ ಪುಟ್ಟ ಕೃಷ್ಣನ ಹೆಸರು ಹಾರ್ದಿಕ್.
ತಾಯಿ: ಸುಷ್ಮಾ ಕೆ.ಆರ್., ತಂದೆ: ವೆಂಕಟೇಶ್ ಬಿ.

ಗಂಭೀರ ಕೃಷ್ಣ

ಗಂಭೀರ ಕೃಷ್ಣ

ಬೆಣ್ಣೆ ಎಲ್ಲ ಖಾಲಿ, ಆಟ ಆಡೋಕೂ ಯಾರೂ ಇಲ್ಲ ಎಂದು ಯೋಚಿಸ್ತಿರೋ ಬೆಂಗಳೂರಿನ ಭುವನೇಶ್ವರಿ ನಗರದ ಈ ಗಂಭೀರ ಮಾಧವನ ಹೆಸರು ಜಿಜಿ.
ತಾಯಿ: ನಂದಿನಿ, ತಂದೆ: ನವೀನ್

ಈ ಬೆಣ್ಣೆಗಿಂತ ರುಚಿ ಯಾವುದು ಹೇಳಿ?

ಈ ಬೆಣ್ಣೆಗಿಂತ ರುಚಿ ಯಾವುದು ಹೇಳಿ?

ಮುಖಕ್ಕೆಲ್ಲ ಬೆಣ್ಣೆ ಮೆತ್ತಿಕೊಂಡು, ಈ ಬೆಣ್ಣೆಗಿಂತ ರುಚಿ ಯಾವುದು ಹೇಳಿ ಎನ್ನುತ್ತಿರುವ ಈ ಮುರಾರಿ ಉಡುಪಿಯ ಕೊಳಂಬೆಯ ವೈಭವ ಪೈ.
ತಂದೆ: ವಿನೋದ್ ಪೈ, ತಾಯಿ: ಸ್ನೇಹ ಪೈ

ಶ್ವೇತ ಕೃಷ್ಣ

ಶ್ವೇತ ಕೃಷ್ಣ

ಶ್ವೇತ ವಸ್ತ್ರ ತೊಟ್ಟು, ನವಿಲುಗರಿ ಹಿಡಿದ ಚಿತ್ರದುರ್ಗ ಜಿಲ್ಲೆಯ ಹೊಳಕೆರೆಯ ಈ ಪುಟ್ಟ ಕೃಷ್ಣನ ಹೆಸರು ಸಾನ್ವಿ ಎಜ್.ಜೆ.ನೆಕರ್.
ತಂದೆ: ಜಗದೀಶ ಎಚ್. ಎ., ತಾಯಿ: ತಾರಾ

ನಂಜೊತೆ ಆಟಕ್ಕೆ ಬರ್ತೀರೋ ಇಲ್ವೋ?

ನಂಜೊತೆ ಆಟಕ್ಕೆ ಬರ್ತೀರೋ ಇಲ್ವೋ?

ನಂಜೊತೆ ಆಟಕ್ಕೆ ಬರ್ತೀರೋ ಇಲ್ವೋ ಎಂದು ತೋರುಬೆರಳು ತೋರಿಸಿ ಮುದ್ದಾಗಿ ಜೋರು ಮಾಡುತ್ತಿರೂ ಈ ಕ್ಯೂಟ್ ಕೃಷ್ಣ ಚಾಮರಾಜನಗರದ ತೇಜಸ್.
ತಾಯಿ: ಗೀತಾ ಆರ್ ಎನ್, ತಂದೆ: ಗಿರೀಶ್ ಬಿ.

ಗೋವರ್ಧನ ಗಿರಿ ನನ್ನ ಕೈಯಲ್ಲಿ..!

ಗೋವರ್ಧನ ಗಿರಿ ನನ್ನ ಕೈಯಲ್ಲಿ..!

ಗೋವರ್ಧನ ಗಿರಿಯನ್ನು ಎತ್ತಿಹಿಡಿದ ಸಾಹಸಿ ಕೃಷ್ಣನ ವೇಷ ತೊಟ್ಟ ಈ ಪುಟ್ಟ ಮಗುವಿನ ಹೆಸರು ಯಜ್ಞಲಕ್ಶ್ಮಿ ಎಸ್.ವಿ.

ಕಣ್ಣುಹಾಕ್ಬೇಡಿ...

ಕಣ್ಣುಹಾಕ್ಬೇಡಿ...

ಬೆಣ್ಣೆ ತಿನ್ನೋದು ನನ್ನ ಜನ್ಮಸಿದ್ಧ ಹಕ್ಕು... ಕಣ್ಣು ಹಾಕ್ಬೇಡಿ ಅಂತಿರೋ ಈ ಮುದ್ದು ಕೃಷ್ಣ ಬೆಳಗಾವಿಯ ಚಿಕ್ಕಮಠದ ವಿನಾಯಕ.
ತಂದೆ: ರುದ್ರಯ್ಯ, ತಾಯಿ: ಜ್ಯೋತಿ

ನಾನಂದ್ರೆ ಎಲ್ಲರಿಗೂ ಇಷ್ಟ

ನಾನಂದ್ರೆ ಎಲ್ಲರಿಗೂ ಇಷ್ಟ

ನಾನು ಯಾವಾಗ್ಲೂ ನಗು ನಗ್ತಾ ಇರ್ತೀನಿ. ಅದ್ಕೇ ನಾನಂದ್ರೆ ಎಲ್ಲರಿಗೂ ಇಷ್ಟ ಎನ್ನುತ್ತಿರುವ ಈ ಹಸನ್ಮುಖಿ ಕೃಷ್ಣ ಪ್ರಥಮ್.

ಇವೆಲ್ಲ ಬೇಕಾ..?

ಇವೆಲ್ಲ ಬೇಕಾ..?

ನನ್ನ ಹಲ್ಲೇ ದಾಳಿಂಬೆ ಬೀಜ, ಕೆನ್ನೇನೇ ಸೇಬು, ಆದ್ರೂ ಇವೆಲ್ಲ ಬೇಕಾ ಅಂತಿದ್ದಾನೆ ರಾಮನಗರದ ಪುನವ್ ಎಂಬ ಮುದ್ದು ಕೃಷ್ಣ.
ತಂದೆ : ಮಂಜುನಾಥ್ ಎಂ, ತಾಯಿ: ಯಶಸ್ವಿನಿ ಎಂ.

ಶಕುಂತಲೆಯಲ್ಲ, ಕೃಷ್ಣ!

ಶಕುಂತಲೆಯಲ್ಲ, ಕೃಷ್ಣ!

ನಾನು ಶಕುಂತಲೆಯಲ್ಲ, ಕನ್ಫ್ಯೂಸ್ ಆಯ್ತಾ? ನಾನು ಶ್ರೀಕ್ರಷ್ಣ ಕಣ್ರೀ... ಎನ್ನುತ್ತಿರೋ ಈ ಮಗು ಬೆಂಗಳೂರಿನ ತನ್ಮಯ್ ಹಿರೇಮಠ್.
ತಂದೆ: ಜಗದೀಶ್, ತಾಯಿ: ಅರುಂಧತಿ

ಅಯ್ಯೋ ದೇವ್ರೆ, ಇದು ನೀರು..!

ಅಯ್ಯೋ ದೇವ್ರೆ, ಇದು ನೀರು..!

ಬಿಂದಿಗೆ ನೋಡಿ, ಬೆಣ್ಣೆ ಅಂದ್ಕೊಂಡೆ... ಇದು ನೀರು ಕಣ್ರಿ, ಅಯ್ಯೋ ದೇವ್ರೆ..! ಅಂತಿದ್ದಾನೆ ಹೊನ್ನಾವರದ ಮಾಕ್ಷಾರ್ಥ್.
ತಂದೆ: ಮಹಾಬಲೇಶ್ವರ, ತಾಯಿ: ಜ್ಯೋತಿ

ಶ್ ಸುಮ್ನಿರಿ, ಅಮ್ಮಂಗೆ ಹೇಳ್ಬೇಡಿ!

ಶ್ ಸುಮ್ನಿರಿ, ಅಮ್ಮಂಗೆ ಹೇಳ್ಬೇಡಿ!

ಆಟ ಆಡೋಕ್ ಹೋಗ್ಬೇಕು, ಅಮ್ಮ ನೋಡಿದ್ರೆ ಬೈತಾಳೆ. ಅಮ್ಮಂಗೆ ಹೇಳ್ಬೇಡಿ ಸುಮ್ನಿರಿ... ಪ್ಲೀಸ್.. ಅಂತಿದ್ದಾಳೆ ಬೆಂಗಳೂರಿನ ವೈಷ್ಣವಿ ಶೇಟ್.
ತಂದೆ: ರಾಘವೇಂದ್ರ, ತಾಯಿ: ದಿವ್ಯಾ ಎಸ್.

ಚತುರ್ವಿ

ಚತುರ್ವಿ

ಕೊಳಲು ನುಡಿಸೋದು ಹೇಗೆ ಅಮಂತ ಕೇಳಿದ್ರೆ ಯಾರೂ ಹೇಳೇ ಕೊಡ್ತಿಲ್ಲ. ನೀವಾದ್ರೂ ಕಲಿಸಿಕೊಡ್ತೀರಾ ಪ್ಲೀಸ್ ಅಂತಿದ್ದಾಳೆ ಬೆಂಗಳೂರಿನ ವಿದ್ಯಾರಣ್ಯಪುರದ ಚತುರ್ವಿ.
ತಂದೆ: ಚಂದ್ರಶೇಖರ್, ತಾಯಿ: ಪಲ್ಲವಿ

ಕೃಷ್ಣ ನನ್ನಷ್ಟೇ ಕ್ಯೂಟ್ ಇದ್ನಾ?

ಕೃಷ್ಣ ನನ್ನಷ್ಟೇ ಕ್ಯೂಟ್ ಇದ್ನಾ?

ಭಗವಾನ್ ಶ್ರೀಕೃಷ್ಣಾನೂ ನನ್ ಥರಾನೇ ಕ್ಯೂಟ್ ಇದ್ನಅ ಎಂದು ಕೇಳುತ್ತಿರೋ ಈ ಕ್ಯೂಟ್ ಪುಟಾಣಿ ಮಂಡ್ಯದ ನಾಗಮಂಗಲದ ಆಯುಷ್.
ತಾಯಿ: ಅಶ್ವಿನಿ, ತಂದೆ: ಮೋಹನ್ ರಾಜ್

ಈ ಪೋಸ್ ಓಕೆನಾ?

ಈ ಪೋಸ್ ಓಕೆನಾ?

ಏನೇನೋ ವೇಷ ಹಾಕಿದಾರೆ ನೋಡಿ... ಚೆನ್ನಾಗಿ ಕಾಣ್ಸಿದೀನಾ? ಈ ಥರ ಪೋಸ್ ಕೊಟ್ರೆ ಓಕೆನಾ ಅಂತಿದ್ದಾಳೆ ಬೆಂಗಳೂರಿನ ಚಿಕ್ಕಬಿದರಕಲ್ಲಿನ ನಯನಿಕಾ ಡಿ. ತಂದೆ: ದೇವರಾಜ್ ಜಿ., ತಾಯಿ: ಸಂಧ್ಯಾ ಜಿ.

ನಾನು ಸಿಂಪಲ್ ಕೃಷ್ಣ ನೋಡಿ!

ನಾನು ಸಿಂಪಲ್ ಕೃಷ್ಣ ನೋಡಿ!

ಕೃಷ್ಣನ ವೇಷ ಹಾಕೋಕೆ ಟೈಮ್ ಇರ್ಲಿಲ್ಲ. ಅದ್ಕೇ ಈ ಸಿಂಪಲ್ ಡ್ರೆಸ್ ನಲ್ಲೇ ಫೊಸ್ ಕೊಟ್ಬಿಟ್ಟೆ. ಬೇಜಾರಾಗ್ಬೇಡಿ ಅಂತಿರೋ ಈ ಮುದ್ದು ಕಂದ ವಿಜಯಪುರದ ಚಿರಾಯು.
ತಂದೆ: ಗುರುರಾಜ್, ತಾಯಿ: ವಿಜಯಲಕ್ಷ್ಮಿ

ಈ ಗೋಪಿಕೆಯರೆಲ್ಲ ಎಲ್ಲಿ ಮಿಸ್ ಆದ್ರು..!

ಈ ಗೋಪಿಕೆಯರೆಲ್ಲ ಎಲ್ಲಿ ಮಿಸ್ ಆದ್ರು..!

ಎಷ್ಟೊತ್ತು ಕೊಳಲು ನುಡಿಸಿದ್ರೂ ಯಾರೂ ಬರ್ತಿಲ್ಲ. ಈ ಗೋಪಿಕೆಯರೆಲ್ಲ ಎಲ್ಲಿ ಮಿಸ್ ಆದ್ರು ಅಂತಿರೋ ಈ ಕೃಷ್ಣನ ಬೆಂಗಳೂರಿನ ಕೋಣನಕುಂಟೆಯ ವಿಷ್ಣು.
ತಂದೆ: ಅರುಣ್ ಕುಮಾರ್, ತಾಯಿ: ಮನುಶ್ರೀ ಅರುಣ್

ಈ ಕೊಳಲೊಂದಿದ್ರೆ ನಂಗೇನೂ ಬೇಕಿಲ್ಲ!

ಈ ಕೊಳಲೊಂದಿದ್ರೆ ನಂಗೇನೂ ಬೇಕಿಲ್ಲ!

ಕೊಳಲು ನುಡಿಸೋದಂದ್ರೆ ನಂಗೆ ತುಂಬಾ ಇಷ್ಟ. ಕೊಳಲಿದ್ರೆ ನಂಗೆ ಬೇರೇನೂ ಬೇಕಿಲ್ಲ ಅಂತಿದ್ದಾನೆ ಮಂಗಳೂರಿನ ಬಂಟ್ವಾಳದ ಸಾಕೇತ್ ಕೃಷ್ಣ
ತಂದೆ: ಸೂರ್ಯಮೂರ್ತಿ ಕೆ. ತಾಯಿ: ಲತಾ ದೇವಿ ಕೆ.

ಕಿಲಾಡಿ ಕಿಟ್ಟು ಕೊಟ್ಟಿರುವ ಪೋಸ್ ನೋಡಿ

ಕಿಲಾಡಿ ಕಿಟ್ಟು ಕೊಟ್ಟಿರುವ ಪೋಸ್ ನೋಡಿ

ಈ ಕಿಲಾಡಿ ಕಿಟ್ಟುವಿನ ಹೆಸರು ಧನ್ವಿನ್. ನೆಲೆಸಿರುವುದು ಬೆಂಗಳೂರಿನ ತಾವರೆಕೆರೆ ಬಳಿಯ ಬಿಟಿಎಂ ಲೇಔಟಿನಲ್ಲಿ. ಅವರಪ್ಪ ಹೇಳುವ ಹಾಗೆ, ಫೋಟೋ ತೆಗೆಯುವುದು ಕಂಡ್ರೆ ಸಾಕು ಚಿಟಿಚಿಟಿ ಚೀರುತ್ತ ಪೋಸ್ ಕೊಟ್ಟೇ ಬಿಡುತ್ತಾನೆ. ಕಿಲಾಡಿ ಕಿಟ್ಟುವಿಗೆ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

ನನ್ನ ಸ್ಮೈಲ್ ಗೆ ಸಾಟಿ ಯಾರು?

ನನ್ನ ಸ್ಮೈಲ್ ಗೆ ಸಾಟಿ ಯಾರು?

'ನಾನ್ ಕಣ್ರಿ ಶ್ರೀಕೃಷ್ಣ, ನನ್ ಸ್ಮೈಲ್ ಗೆ ಯಾರು ಸಾಟಿ ಹೇಳಿ...' ಎನ್ನುತ್ತಿರುವ ಬೆಳಗಾವಿ ಈ ಚೆಂದದ ಕೃಷ್ಣ ಶಾರ್ವಿ ಮುಳಿಮನಿ.

ನನ್ನ ನೋಡಿ ಕ್ಯೂಟ್ ಅನ್ನದೆ ಇರೋರ್ಯಾರು?

ನನ್ನ ನೋಡಿ ಕ್ಯೂಟ್ ಅನ್ನದೆ ಇರೋರ್ಯಾರು?

ನನ್ನ ನೋಡಿ ಕ್ಯೂಟ್ ಅನ್ನದೆ ಇರೋರ್ಯಾರು? ಎಂದು ಸವಾಲು ಹಾಕುತ್ತಿರೋ ಈ ಕ್ಯೂಟ್ ಕಿಟ್ಟಣ್ಣ ಬಾಗಲಕೋಟೆಯ ಹುನಗುಂದದ ಸಂಪತ್.ತಂದೆ: ಶಿವರಾಜ ಮೇಟಿ, ತಾಯಿ: ರೇಖಾ ಶಿವರಾಜ್ ಮೇಟಿ

ಈ ಕೊಳಲ್ಯಾಕೋ ಸರ್ಯಾಗಿ ನುಡ್ಸೋಕೇ ಬರ್ತಿಲ್ಲ

ಈ ಕೊಳಲ್ಯಾಕೋ ಸರ್ಯಾಗಿ ನುಡ್ಸೋಕೇ ಬರ್ತಿಲ್ಲ

ಈ ಕೊಳಲ್ಯಾಕೋ ಸರ್ಯಾಗಿ ನುಡ್ಸೋಕೇ ಬರ್ತಿಲ್ಲ. ಈ ಅಮ್ಮಂಗೆ ಹೇಳಿದ್ರೆ, ನಿಂಗೆ ಕೊಳಲು ಸರ್ಯಾಗಿ ಹಿಡ್ಕೊಳೋಕೇ ಬರಲ್ಲ ಅಂತಾಳೆ! ಎನ್ನಿತ್ತಿರೋ ಈ ಪರ್ಪಲ್ ಕೃಷ್ಣ ಬೆಂಗಳೂರಿನ ತನಿಷ್ಕ್, ತಂದೆ: ಮಾಧು ಟಿ, ತಾಯಿ: ಶ್ವೇತಾ ಬಿ.ವಿ

ಚೆನ್ನಾಗಿ ಪೋಸು ಕೊಡೋಣ ಅಂದ್ರೆ...

ಚೆನ್ನಾಗಿ ಪೋಸು ಕೊಡೋಣ ಅಂದ್ರೆ...

'ಚೆನ್ನಾಗಿ ಪೋಸು ಕೊಡೋಣ ಅಂದ್ರೆ ನಗಸ್ತೀರಲ್ರೋ' ಎನ್ನುತ್ತಿರುವ ಈ ಹಳದಿ ಕೃಷ್ಣ ಬೆಂಗಳೂರಿನ ಚಕ್ರಾಧರ ಎಚ್ ಸುಗುರ್.
ತಂದೆ: ಹರ್ಷ ಜಿ ಸುಗುರ್, ತಾಯಿ: ವಾಣಿ ಎಚ್ ಸುಗುರ್

ಮೊದಲು ಬೆಣ್ಣೆ, ಆಮೇಲೆ ಪೋಸು!

ಮೊದಲು ಬೆಣ್ಣೆ, ಆಮೇಲೆ ಪೋಸು!

ನಾನಿಲ್ಲಿ ಬೆಣ್ಣೆ ತಿನ್ನುವಲ್ಲಿ ಬ್ಯುಸಿ. ಇವ್ರು ನೋಡಿದ್ರೆ ಫೋಟೋಕ್ಕೆ ಪೋಸು ಕೊಡು ಅಂತಾರೆ. ಸ್ವಲ್ಪ ಇರ್ರೀಪ್ಪ. ಮೊದಲು ಬೆಣ್ಣೆ, ಆಮೇಲೆ ಪೋಸು ಅಂತಿದ್ದಾನೆ ಬೆಂಗಳೂರಿನ ವಿದ್ಯಾರಣ್ಯಪುರದ ಈ ಮುದ್ದು ಕೃಷ್ಣ ಅದ್ವಿಕಾ ಜಿ.ಎಲ್. ತಂದೆ: ಲೋಕೇಶ್ ಜಿ.ಆರ್., ತಾಯಿ: ಉಷಾ ಲೋಕೇಶ್ ಜಿ.

ನವಿಲುಗರಿ ಇಲ್ಲ, ಅಡ್ಜಸ್ಟ್ ಮಾಡ್ಕೊಳಿ...

ನವಿಲುಗರಿ ಇಲ್ಲ, ಅಡ್ಜಸ್ಟ್ ಮಾಡ್ಕೊಳಿ...

ಎಷ್ಟು ಕ್ಯೂಟ್ ಕಾಣಿದೀನಿ ಅಲ್ವಾ? ಬಟ್... ನವಿಲು ಗರಿ ಒಂದು ಮಿಸ್ಸಿಂಗು. ಅದ್ನ ತಲೆಗೆ ಸಿಕ್ಕಿಸಿಕೊಳ್ಳೋ ಅಷ್ಟರಲ್ಲಿ ಈ ಫೋಟೋಗ್ರಾಫರ್ ಫೋಟೋ ಕ್ಲಿಕ್ ಮಾಡ್ಬಿಟ್ರು ನೋಡಿ ಎನ್ನುತ್ತಿರುವ ಈ ಕ್ಯೂಟ್ ಕೃಷ್ಣ ಬೆಳಗಾವಿಯ ಸನವಿ ಉಜ್ಜಿನಕೊಪ್ಪ. ತಂದೆ: ದೀಪಕ್, ತಾಯಿ: ರತ್ನಮಾಲಾ

ಥೇಟು ಶ್ರೀಕೃಷ್ಣನ ಹಾಗೇ ಕಾಣ್ತಿದೀನಲ್ವಾ

ಥೇಟು ಶ್ರೀಕೃಷ್ಣನ ಹಾಗೇ ಕಾಣ್ತಿದೀನಲ್ವಾ

ಹೇಗಿದೆ ಮೇಕಪ್, ಥೇಟು ಶ್ರೀಕೃಷ್ಣನ ಹಾಗೇ ಕಾಣ್ತಿದೀನಲ್ವಾ ಎಂದು ಓರೆಗಣ್ಣಲ್ಲೇ ನಗುತ್ತಿರೋ ಈ ಬಾಲಕೃಷ್ಣ ಮಂಗಳೂರಿನ ಪ್ರಂಜೀವ್ ಎಂ.ಜೆ. ‌ತಂದೆ: ಜಗದೀಶ್, ತಾಯಿ ಪುಷ್ಪಲತಾ

Krishna Janmashtami : Do These Things To Improve Your Life | Oneindia Kannada
ದಿಗಂತ್ ಜುಟ್ಟಿನ ಮೇಲೆ ನವಿಲುಗರಿ

ದಿಗಂತ್ ಜುಟ್ಟಿನ ಮೇಲೆ ನವಿಲುಗರಿ

ಜುಟ್ಟಿನ ಮೇಲೆ ನವಿಲುಗರಿ ಸಿಕ್ಕಿಸಿಕೊಂಡು ನಲಿದಾಡುತ್ತಿರುವ ಈ ಪುಟಾಣಿಯ ಹೆಸರು ದಿಗಂತ್. 1 ವರ್ಷ 4 ತಿಂಗಳಿನ ದಿಗಂತ್ ತಂದೆ ಪ್ರವೀಣ್ ಮತ್ತು ತಾಯಿ ಅನು, ನೆಲೆಸಿರುವುದು ಬೆಂಗಳೂರಿನಲ್ಲಿ. ದಿಗಂತ್,ನೀ ನಕ್ಕರೆ ಎಂಥಾ ಚೆನ್ನ, ನೀ ಅತ್ತರೆ ಇನ್ನೂ ಚೆನ್ನ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hindus across the world will be celebrating Shri Krishna Janmashtami on 14th Aug. Oneindia had requested it's readers to send Photos of their child dressed as little Krishna. Many parents have sent their little Krishn's cute pictures. Here are those photos. Happy Krishna Janmashtami in advance.
Please Wait while comments are loading...